ನಿನ್ನ ಸ್ಪರ್ಶ ಹಸಿರಾಗಿರಲಿ

ಕಾವ್ಯಸಂಗಾತಿ

ನಿನ್ನ ಸ್ಪರ್ಶ ಹಸಿರಾಗಿರಲಿ

ಶಾಲಿನಿ ಕೆಮ್ಮಣ್ಣು

ನಾ ಯೋಚಿಸಿದಂತೆ ಯಾವ್ದೂ ಇರಲ್ಲ
ನಾ ಬಯಸಿದ್ದು ಎಲ್ಲ ಸಿಗಲ್ಲ
ಅದು ನನ್ನ ಹಣೆಬರಹ ಪರವಾಗಿಲ್ಲ

ನೀ ಬಳಿ ಇರುವ ಭರವಸೆಯ ಭಾಸವಿರಲಿ
ನಿನ್ನ ಮಧುರ ಸ್ವರ ಕಿವಿಗೆ ಕೇಳಿಸುತ್ತಿರಲಿ
ಅದು ನನ್ನ ನಿತ್ಯ ಸ್ವರ್ಗ ಭಾಗ್ಯವಾಗಲಿ

ನೀ ಇಲ್ಲದಿರುವ ಯೋಚನೆಯ ಸಹಿಸಲಾಗುತ್ತಿಲ್ಲ
ನಿನ್ನ ಗಂಧ ಇರದ ಗಾಳಿಯಲ್ಲಿ ಉಸಿರಿಲ್ಲ
ನನ್ನ ಮುದ್ದು ಬಂಗಾರ
ನಿನ್ನ ಮರೆಯುವ ಪರಿ ನನಗೆ ತಿಳಿಯಲ್ಲ
ನಿನ್ನ ಸ್ಪರ್ಶ ಸವಿ ಸದಾ ಹಸಿರಾಗಿರಲಿ ನನ್ನ ಬಾಳೆಲ್ಲ.


Leave a Reply

Back To Top