ಕಾವ್ಯ ಸಂಗಾತಿ
ಬೇಕು
ಮಾಜಾನ್ ಮಸ್ಕಿ
ಭರವಸೆಗಳು ಬೇಕು
ಹೊಂಚು ಹಾಕಿ
ಮೋಸ ಮಾಡುವವರ
ಮುಂದೆ
ಎದೆಗಾರಿಕೆಯಿಂದ ನಿಲ್ಲಲು
ಮಿಂಚು ಗುಡುಗುಗಳಂತೆ
ನೋವು
ಅನುಭವಿಸಬೇಕು
ತಾಳ್ಮೆಯಿಂದ
ತಂಪೆರಗುವ ಮಳೆ
ಪಡೆಯಲು
ಅನುಭವಗಳ ಸಾರದಲ್ಲಿ
ಬದುಕಿನ ಅಮೃತತ್ವ
ಪಡೆಯಬೇಕಿದೆ
ಬದುಕು ಹಸನುಗೊಳಿಸಿ
ಹಚ್ಚ ಹಸುರಿನ
ನಂದನವನದಲ್ಲಿ
ನಗುತ್ತಿರಬೇಕು
ಬಾಳಿನ ಸೋಲುಗಳನ್ನು
ಗೆದ್ದು