ಭರವಸೆ
ನಾಗಶ್ರೀ
ಸಾವಿರ ಬಾರಿ ಸೋತರು
ಭರವಸೆಯೊಂದಿದೆ
ಕಾಯುವ ಕನವರಿಕೆಯಲು
ನಿನ್ನದು ಬರೀ ಹುಂಬತನ
ಅರಿವಾಗುವುದು
ಅಂತರ ಕಾಯ್ದುಕೊಳ್ಳಲು
ಅದೆಷ್ಟು ಚಡಪಡಿಕೆಯೆಂದು
ಅರಿಯಬೇಕಿತ್ತು ಅಂತರಾತ್ಮವ
ಕಾದು ಕಾದು ಬೆಂಡಾದ
ಭಾವನೆಗಳಿಗೆ
ಸಮಯವೂ ಸೊಪ್ಪಾಕುತಿದೆ
ನನ್ನ ನಾ ಅರಿಯದ ಇರಾದೆಗೆ
ಅರ್ಥೈಸಲು
ನೂರು ಬಾರಿ ಹೇಳುವ
ಅವಶ್ಯಕತೆಯಾದರೂ ಇಲ್ಲವಲ್ಲ
ಅರ್ಥಮಾಡಿಕೊಳ್ಳಲು
ಒಂದು ಘಳಿಗೆ ಸಾಕಲ್ಲ
ನಂಬಿಕೆಯ ಕವಲೊಳಗೆ
ಅಪನಂಬಿಕೆಯ ಟಿಸಿಲುಗಳು
ಮತ್ತೆದೆ ಹುಸಿಯ ನಂಬುವ
ಹಂಬಲದತ್ತ ವಾಲುವ ಮನ
ಕರುಳಿನ ನೋವು
ಕಣ್ಣವರೆಗೂ ತಲುಪಿ
ಕಣ್ಣರೆಪ್ಪೆಗೂ ನೋವಂತೆ
ಕಣ್ತೆರೆಯಲಾಗದ ಮೋಸದ
ಪ್ರಪಂಚಾವ ನೋಡಲು…..
*******