ಎಲ್ಲಾದರೂ ಕಂಡಿರಾ?

ಕಾವ್ಯಯಾನ

ಎಲ್ಲಾದರೂ ಕಂಡಿರಾ?

ಸೊಂಪು ನಿದ್ರೆಯೊಳನುಸುಳಿ
ಸದ್ದಿಲ್ಲದೆ ಮೆಲ್ಲಿ ಬಂದವಳ
ಮಗ್ಗುಲ ಬದಲಿಸುವ ಮುನ್ನವೇ
ಸುಗ್ಗಿಯ ಹರಿಸಿದವಳ ಕಂಡಿರಾ?
ನನ್ನ ಗೆಳತಿಯ ಎಲ್ಲಾದರೂ ಕಂಡಿರಾ?

ಮುಂಜಾವ ಭಾಸ್ಕರ ಇಣುಕುವ ಸಮಯದಿ
ಮಂಜಿನ ಹನಿ ಹನಿಗಳ ನಡುವೆ
ಹೊನ್ನ ಬೆಳಕನ್ನು ಬೀರುವಂತೆ ಕಂಡು
ನೋಡುನೋಡುತ್ತಲೇ ಮಾಯವಾದವಳ ಕಂಡಿರಾ?
ನನ್ನರಸಿಯ ಎಲ್ಲಾದರೂ ಕಂಡಿರಾ?

ಹಕ್ಕಿಗಳ ಚಿಲಿಪಿಲಿ ಕಲರವದಲ್ಲಿ
ನನ್ನ ಮನವ ತುಂಬಿ ಕಲಕಿ
ಸೊಂಪು ನಾದವ ಕೇಳುವಂತೆ ಭಾಸವಾಗಿ
ಇಂಪಾಗಿ ಗಾಳಿಯಾಗಿ ಬೀಸಿ ಸಾಗಿದವಳ ಕಂಡಿರಾ?
ನನ್ನೊಡತಿಯ ಎಲ್ಲಾದರೂ ಕಂಡಿರಾ?

ಅರಳುವ ವನಸುಮಗಳು ನಡುವಲಿ ನಗಿಸಿ
ಚೆಲುವಿನ ರಂಗುರಂಗಿನ ಚಿತ್ತಾರದಲ್ಲಿ ಮೆರೆಸಿ
ಸೌರಭ ತಾ ಸೂಸಿ ಸೆಳೆದು ಆಸೆ ತುಂಬಿ
ನನ್ನದೆಯಲ್ಲಿ ದುಂಬಿಯ ಝೇಂಕಾರ ನುಡಿಸಿದ
ನನ್ನೆದೆ ರಾಣಿಯ ಎಲ್ಲಾದರೂ ಕಂಡಿರಾ?


ಚಂದ್ರು ಪಿ ಹಾಸನ್

CHANDRU HASSAN

4 thoughts on “ಎಲ್ಲಾದರೂ ಕಂಡಿರಾ?

Leave a Reply

Back To Top