ಕಾವ್ಯಯಾನ
ಮನೋಕಾಮನೆ
ಶಂಕರಾನಂದ ಹೆಬ್ಬಾಳ
ಭಿತ್ತಿಯಲ್ಲಿನ ಚಿತ್ರಕ್ಕೆ
ಮಣೆಹಾಕಿದೆ
ರೆಕ್ಕೆ ಬಿಚ್ಚಿ
ಗಗನದಲಿ ಕೈಚಾಚಿ
ಕರೆಯುತ್ತಿದೆ….!
ಮಳೆಬಿಲ್ಲ ದಾಟಿ
ನರ್ತಿಸುತ್ತಿದೆ..!
ಒಮ್ಮೆ ನರ್ತಕಿಯಂತೆ,
ಮತ್ತೊಮ್ಮೆ ಅಪ್ಸರೆಯಂತೆ,
ಭಾವಮಾತ್ರ,
ನಿಗೂಢದಂತೆ..!
ಹತ್ತಿರ ಕರೆದು
ಚುಂಬವವೀವ ಸಮಯ,
ಆಹಾ..! ಎಂಥ ಮಧುರ
ಸವಿಭಾವ,
ನಾನೋರ್ವ
ಅನನುಭವಿ
ಓ ಭಾವಕವಿ..!
ಈ ಚಿತ್ರವು
ಚಿತ್ರವಿಚಿತ್ರ ಭಾವ
ಸೃಷ್ಠಿಸಿ ಚಿತ್ತವ
ಸೆಳೆದಿದೆ,
ಶೃಂಖಲೆ ತೊಡಿಸಿ
ಮಗ್ನಗೈದ
ನೀನೇ ಚತುರೆ..!