ಒಂದೊಂದೇ ಹೆಜ್ಜೆ

ಕಾವ್ಯಯಾನ

ಒಂದೊಂದೇ ಹೆಜ್ಜೆ

ಶ್ರೇಯಸ್ ಪರಿಚರಣ್

Love, Painting by Hasmik Chakhmakhchyan | Artmajeur

ಹೆದರ್ಬೇಡ, ಇಬ್ಬರೂ ಹಾಕೋಣ ಒಂದೊಂದೇ ಹೆಜ್ಜೆ
…ಪಾಪ, ಮೊದಲ್ಸರ್ತಿ ಅಲ್ವಾ, ನಿನ್ನ ಜೊತೇಲಿದೆ ಲಜ್ಜೆ
…ಖಂಡಿತಾ ಈಗಂತೂ ಅನಾವಶ್ಯಕ ಯಾವುದೇ ಗೆಜ್ಜೆ 

…ಹೇಳ್ತಿದಾರೆಲ್ಲಾ, ಹತ್ತಿರದಲ್ಲೇ ಅಂತೆ ನಮ್ಮದ್ವೆ 
…ಅರ್ಥ ಮಾಡ್ಕೋ, ಹೀಗೇ, ಬದ್ಕಂದ್ರೆ ಇದುವೆ
…ಇನ್ನು ನಮಗಿರದಿರಲಿ  ಯಾವನ್ಯರ ಗೊಡವೆ 

…ಈ ಇದುವೆ ನಮ್ಗೆ ನಮ್ಹಿರಿಯರ್ಕೊಟ್ಟ ಹರಯದೊಡವೆ 
…ಯೋಚಿಸ್ಲೇಬೇಡ ನಿನ್ನ ಜೊತೇಲೇ ನಾ-ನಿರುವೆ 
…ನೀ ಇಷ್ಟ ಪಡೋ ಹಾಗೆ ನಿನ್ನ ದಾರೀಲೆ ಸದಾ ಬರುವೆ 

…ಹೀಗೇ ನಾವ್ಹಿಂಗೇ ಈ ದಾರೀಲೆ ಸಾಗ್ತಿರೋಣ
..‌.ಒಂದಿನಿತೂ ಬೇಡ  ಖಂಡಿತಾ ಯಾವುದೇ ತಲ್ಲಣ 
…ನೋಡು, ಕಾಣ್ಸತ್ತ ? ಅಲ್ಲಿ ಮರಗಳ್ಸಾಲು- ದಡ ಅಲ್ಲೀಕ್ಷಣ 

…ಇಲ್ನೋಡಿದ್ಯಾ  ಈ ಪುಟ್ಟ  ಸಣ್ಪುಟಾಣಿ ಹಳದೀಮೀನ
…ಬಿಟ್ಬಿಡದನ್ನ ನೀರಿಗೆ, ಪಕ್ದಲ್ಲೇ ಹಿಡ್ದಿದ್ದೀನಲ್ಲಾ ದೊಡ್ಮೀನ
…ಇನ್- ಈ ಮುಂದೆ, ನಂ-ಬದುಕು ಸದಾ ನಿತ್ಯ ನೂತನ 

…ಕನ್ನಡಿಯಂಗೆ  ದಿಟವು ಈ ತೆಳು-ತಿಳಿ-ತಾರುಣ್ಯದ-ನೀರು
…ಅದರಲ್ಲಿ ಈಗ ಕಂಡೆ ಇದೀಗ ಬಿದ್ ಒಂದ್ಹನಿ ನಿನ್ಕಣ್ಣೀರು
…ಓಹ್, ನೆನಪಾಗಿರಬೇಕು ಅಮ್ಮಾವ್ರಿಗೆ, ಅಮ್ಮ ತಂಗೀರು 

…ಅಪ್ಪ-ಅಣ್ಣ-ತಮ್ಮಂದ್ರು, ಪ್ರೀತ್ಸೋ ಕರು,  ನಿನ್ನಿಡೀ ತವರು
…ನಂಬು,  ನಮ್ಮವ್ನಾಣೆ,  ನಿನ್ನ ಕಣ್ಣೀರಿಗೆ ಅಡ್ಡ ಬರೋಲ್ಲಾ
…ನಾಳೆ, ನಂಜೊತೆ ನಿಮ್ಮೂರ್ಗೆ ನಿನ್ತವರಿಗೆ ನೀ ಬರೋಲ್ವಾ 

…ಏನೇಬರ್ಲಿ, ಇರ್ಲಿ, ಎಂದೆಂದೂ ನಾವಿಬ್ರೂ ಒಂದೇ ಸಮ
…ಇರತ್ತೆ ನಿರಂತರ, ಎಂದೆಂದೂ ಎಲ್ಲಾ ಸರಿಗಮ, ಸಂಭ್ರಮ
…ಆಗೋಣ ಖಂಡಿತಾ ನಾವಿಬ್ರೂ ಅಪ್ರತಿಮ, ಅನುಪಮ 

…ಇದು ನಿಜವಿರ್ಲೇಬೇಕು, ನೀನ್ ಎನ್ನ ಬಿಡಿಸ್ಲಾಗದ ಬಂಧ
…ಇಡೀ ಜಗವೇ ಒಪ್ಕಂಡ್ಹರಸಿದ ಸಂಬಂಧ, ಅನುಬಂಧ
…ನಮ್ಮಿಂದ್ ಈ ಮುಂದೆ ಹರಡಲೀ ಪೂರ್ಣ-ಜಗದಾನಂದ 


One thought on “ಒಂದೊಂದೇ ಹೆಜ್ಜೆ

Leave a Reply

Back To Top