ಪ್ರೊ.ರಾಜನಂದಾ ಘಾರ್ಗಿಯವರ ಕವಿತೆಗಳು

ಪ್ರೊ.ರಾಜನಂದಾ ಘಾರ್ಗಿಯವರ ಕವಿತೆಗಳು

ಕಾವ್ಯ ಪ್ರಸವ

geometric abstract art 5-affordable art online india

ಕವಿತೆಗಳೇ ಹೀಗೆ

ಹುಟ್ಟುತ್ತವೆ ಹಾಗೇ

ನಿದ್ದೆಯ ಮಂಪರಿನಲ್ಲಿ

ತೆಲೆದಿಂಬಿನಡಿಯಲ್ಲಿ

ಮುಂಜಾವಿನ ನವಿರಿನಲಿ

ಗೊಧೂಳಿಯ ಕೆಂಪಿನಲಿ

ಬೆಳದಿಂಗಳ ರಾತ್ರಿಯಲಿ

ಬಿಡದೇ ಸುರಿವ ಮಳೆಯಲಿ

ಪ್ರೇಮದ ಉತ್ಖಟತೆಯಲ್ಲಿ

ಹತಾಶೆಯ ಬಿಕ್ಕುಗಳಲ್ಲಿ

ಎಲ್ಲಿಯೋ ಹುಟ್ಟುತ್ತ

ಪ್ರಸವ ವೇದನೆ ನೀಡುತ್ತ

ಹೊರ ಬರಲು ತಿಣುಕುತ್ತವೆ

 ನೋಟದಲ್ಲಿ ಹುಟ್ಟಿ

ಭಾವದಲ್ಲಿ ಬೆಳೆಯುತ್ತ

ಶಬ್ದಗಳ ತಡಕಾಟದಲ್ಲಿ

ಮಿಸುಕಾಡುತ್ತವೆ

ಜಾರುತ್ತವೆ ಕೆಲವು

 ಬಿಟ್ಟರೆ ಒಡದು ಚೂರು

ಮೆತ್ತಗೇ ಎತ್ತಿಕೊಂಡು

ಒಲೈಸಿ ನೇವರಿಸಿ

ಮಡಿಲಿಗೆತ್ತಿಕೊಂಡಾಗ

ಅರಳುತ್ತ ಬೆಳೆಯುತ್ತ

 ಮುಗುಳ್ನಗೆಯೊಂದಿಗೆ

ಮಡಿಲ ತುಂಬುತ್ತವೆ.

—————

ನೀ ಬರುವ ದಾರಿ

Your Guide to Understanding Abstract Art - Collectors Corner

ಆರಡಿ ದೇಹದಲ್ಲಿ

ಅಡಗಿದ ನನ್ನಕೂಸು

ತುಂಟಾಟ ಹುಸಿ ಮುನಿಸು

ನೋಟ ಬಲು ಚಂದ

ಪ್ರೀತಿಯಲ್ಲಿ ತೋರುತ

ಸಾಗರದ ಆಳ

ಒಲವ  ಸಿಂಪಡಿಸುವ

ನುಡಿ ಮುತ್ತಿನ ಹಾರ

ಜಗವೆಲ್ಲ ಆಳುವ ದೊರೆ

ಕಠಿಣ ಶಿಸ್ತಿನ ತೆರೆ

ಹಿಂದಿರುವ ಮೃದು ಮನ

ಯಾರೂ ಕಾಣದ ಮರೆ

ನೋಟದಲಿ ಪ್ರೀತಿ

ಮಾತಿನಲಿ ಮೋಡಿ

ಹೃದಯವ ತುಂಬಿದ

ಮೋಹಕ ಮಮಕಾರ

ಶೂರ ವೀರ ಸರದಾರ

ಮೌಲ್ಯಗಳ ಹರಿಕಾರ

ನೀ ಬರುವ ದಾರಿಗೆ

ನೆಟ್ಟಿರುವೆ ಕಣ್ಣ ಬಹು ದೂರ


ಜೀವಂತಿಕೆ

Abstract art speaks to your brain, evokes abstract and far away feelings

ತಂಗಿಯ ಮುಖದಿ

ಅಜ್ಜಿಯ ನಗು ಕಂಡೆ

ತಮ್ಮನ ನಡೆಯಲಿ

ಅಜ್ಜನ ಬೀಸುಗಾಲು

ಅಮ್ಮನ ಮುಗುಳ್ನಗೆ

ಅಜ್ಜಿಯ ಪ್ರತಿರೂಪ

ಅಪ್ಪನ ಗತ್ತಿನಲಿ

ಅಜ್ಜನ ಗತ್ತಿನ ನೆರಳು

ಪ್ರತಿ ಕ್ಷಣ ನೆನಪಿಸುತ

ಅಗಲಿದ ಹಿರಿಯರ

ತವರಿನ ನೆನಪಲಿ

ಅಮ್ಮನ ನೆನೆಯುತ

ಮಗಳ ಹುಬ್ಬಿನಡಿ

ಅಮ್ಮನ ಕಣ್ಣಿನ ಮಿಂಚು

ಮಗನ ವಿಶಾಲ ಬಾಹು

ಅಪ್ಪನ ವಂಶದ ಬಳುವಳಿ

ಎಲ್ಲರೂ ನೆಲೆಸಿಹರು

ನಮ್ಮ ಮನದ ಅಂಗಳದಲ್ಲಿ

ಸಾವು ಬರಿ ಬೌತಿಕ ಪರಿಕಲ್ಪನೆ

ಜೀವಂತಿಕೆ ಕಾಣುವ ಭಾವಗಳಲ್ಲಿ


:ಛಲ

Acrylic Modern Abstract Painting, Colorax The Art | ID: 18947664597


ಪ್ರೀತಿಸ ಬೇಡ ಅತಿಯಾಗಿ
ಹರಿಯುತಿರುವೆ ಶಾಂತವಾಗಿ
ನನ್ನಲ್ಲೆ ನಾನು ಸ್ತಬ್ಧತೆಯಲಿ
ದಡಗಳ ಮೀರದ ಮಿತಿಯಲಿ

ಚಲಿಸುತಿರುವೆ ಹದವಾಗಿ
ಸುತ್ತಿ ಬಳಸದೇ ನೇರವಾಗಿ
ಸುಪ್ತವಾದ ಚೇತನವನ್ನೆಲ್ಲ
ಅಡಗಿಸಿ ತೊಡಗಿಸಿ ಮಡಿಲಲಿ

ಸುತ್ತಲಿನ ಜೀವ ಚೈತನ್ಯ
ನನ್ನ ಪಾಲಿಗೆ ಅನನ್ಯ
ಪೋಷಿಸುತ್ತ ಜೀವ ಕುಲ
ಮರೆತಿರುವೆ ನನ್ನ ನೆಲ

ಸುರಿಸುತ ಪ್ರೀತಿ ವೃಷ್ಟಿ
ಮಾಡದಿರು ಪ್ರಳಯ ಸೃಷ್ಟಿ
ಭಾವಗಳ ಸುರಿಮಳೆಯಲ್ಲಿ
ಕೊಚ್ಚಿಹೊಗಬಹುದು ಎಲ್ಲೆ

ಅಮೀಷಗಳು ನೂರು
ಪಥದಿ ಅಡೆ ತಡೆ ಇನ್ನೂರು
ಸಾಗರವಾಗುವ ಛಲ
ಮನಕೆ ನೀಡಿದೆ ಬೆಂಬಲ


ಪ್ರೊ.ರಾಜನಂದಾ ಘಾರ್ಗಿ

———————

3 thoughts on “ಪ್ರೊ.ರಾಜನಂದಾ ಘಾರ್ಗಿಯವರ ಕವಿತೆಗಳು

  1. ನಿಮ್ಮ ಮೊದಲ ಕವನ ನನ್ನ ಕಾವ್ಯ ಪ್ರಸವವನ್ನು ನೆನಪಿಸಿತು.
    ನೀ ಬರುವ ದಾರಿಯ….ಕಾಯುವಿಕೆಯ ಅಂತರ್ಗತ
    ನಿಮ್ಮದೇ ಆದ ಶೈಲಿಯಲ್ಲಿ ಚೆನ್ನಾಗಿ ಮೂಡಿಬಂದಿದೆ.
    ತವರುಮನೆಯ ಜೀವಂತಿಕೆಯನ್ನು ಯಾವಾಗಲೂ ಎಲ್ಲ ಹೆಣ್ಣುಮಕ್ಕಳು ಲಾಲಿಸಿ ಪೋಷಿಸುತ್ತಾರೆ. ನನಗೆ ಬಹಳ ಇಷ್ಟವಾಯಿತು.
    ಮನಸ್ಸಿನ ಛಲ… ಕವಿತೆಯಾಗಿ ಹರಿದಿದೆ.

  2. ಪ್ರೊ. ರಾಜನಂದಾ ಗಾರ್ಗಿಯವರ ನಾಲ್ಕು ಕವನಗಳು ಸುಂದರವಾದ ಭಾವಾಭಿವ್ಯಕ್ತಿ ಯು ರಚನೆ. ಕವಿಯ ಭಾವದಲಿ ಎಲ್ಲೆಲ್ಲಿಯೊ ಮೊಳಕೆಯೊಡೆದು ಕವಿಯ ಮಡಿಲು ತುಂಬುವ ಕವಿತೆಯೇ ಚೆಂದ . ದಾರಿ ಕಾಯುವ ಮಮತೆಯ ತವಕ ಚೆಂದ.
    ವಂಶವಾಹಿಗಳು ಪ್ರವಹಿಸುವ ದಾರಿಯ ತದ್ರೂಪಗಳು ಸಾವನ್ನು ಮೀರಿ ನಿಲ್ಲುವದು, ಸತ್ತವರು ಮತ್ತೆ ಮತ್ತೆ ಜೀವಂತಿಕೆ ಪಡೆದು ನಿಲ್ಲುತ್ತದೆ. ಎಲ್ಲ ಎಲ್ಲೇಗಳ ಮೀರಿ ಸಾಗರವಾಗುವ ಛಲ
    ಮನದ ಬಲವಾಗಿಸುವ ಕವಿತೆಗಳು ಸೆಳೆಯುತ್ತವೆ

  3. ಅಭಿಪ್ರಾಯಕ್ಕಾಗಿ ಧನ್ಯವಾದಗಳು ಸುಧಾ ,ಡಾ ನಿರ್ಮಲಾ

Leave a Reply

Back To Top