ಗಜಲ್
ನಯನ . ಜಿ . ಎಸ್
ಅಜ್ಞಾನದ ಅಂಧಕಾರವು ನಶಿಸುವುದಾದರೆ ಹಣತೆಯ ಬೆಳಗು
ಮೂಢರು ಮಬ್ಬಿನಿಂದ ಹೊರಬರುವುದಾದರೆ ಹಣತೆಯ
ಬೆಳಗು !
ವ್ಯಕ್ತಿ ವ್ಯಕ್ತಿಯ ಮನದಲೂ ಆಶೆಗಳಿವೆ ಬದುಕಿನ ಗಂಜಿಗೆ
ಅವರವರ ಕನಸು ನನಸಾಗುವುದಾದರೆ ಹಣತೆಯ ಬೆಳಗು !
ಅನ್ಯಾಯವು ಮಾರ್ದನಿಸಿ ನ್ಯಾಯವ ನುಂಗಿ ನಗುತಿದೆ ಅಟ್ಟಹಾಸದಿ
ಕರ್ತವ್ಯ ಪ್ರಜ್ಞೆ ಮತ್ತೆ ಮೂಡುವುದಾದರೆ ಹಣತೆಯ ಬೆಳಗು !
ನ್ಯಾಯ ದೇವತೆಯವಳ ಕಂಗಳಿಗೆ ಬಟ್ಟೆಯನು ಕಟ್ಟಿ ವಂಚಿಸುತಿಹರು
ಕಾಪಟ್ಯವ ಬಯಲಿಗೆಳೆದು ಸಾಬೀತು ಪಡಿಸುವುದಾದರೆ ಹಣತೆಯ ಬೆಳಗು !
ಸತ್ಯವನೇ ನುಡಿದು ತನ್ತನವ ಉಳಿಸಿಕೊಳ್ಳಲು ಹೋರಾಡುತಿಹಳು ‘ನಯನ’
ಮಾನವತ್ವದ ಸತ್ವಕೆ ಜಯ ದೊರಕುವುದಾದರೆ ಹಣತೆಯ ಬೆಳಗು !!
***************
ಗಜಲ್ ಚನ್ನಾಗಿದೆ