ಸ್ವರ್ಣ ಲಂಕೆಯ ಮೌನ ಪುತ್ತಳಿ (ಮಂಡೋಧರಿ)

ಕಾವ್ಯಯಾನ

ಭಾರ್ಗವಿ.ಮುಡಿಯನೂರು

ಸ್ವರ್ಣ ಲಂಕೆಯ ಮೌನ ಪುತ್ತಳಿ

(ಮಂಡೋಧರಿ)

The Portrayal of Mandodari in Manini J. Anandani's Mandodari| Based upon  Sanghadasa's Jaina Version of Ramayana

ನಡು ರಾತ್ರಿಯೊಳು ಅಂತರಿಕ್ಷ ದಲಿ ನೆಟ್ಟ ದೃಷ್ಟಿ
ಗಾಡಾ0ಧಕಾರದೊಳು ಬಿಟ್ಟ ಕಣ್ಣು ಬಿಟ್ಟ ಹಾಗೆ..!
ಹರಿಯದೆ ತಡೆದ ಕಣ್ಣೀರು…..ಕಣ್ – ಕಟ್ಟೆಗಳ ನೋವು…! ಕಾದು
ಕರಗುತಿದೆ ಕಣ್ಣೆದುರೆ ಸ್ವರ್ಣ ಲಂಕೆ….

ಹರಕು ಭಾವಗಳ ಹೊತ್ತ ಮುರುಕು ದೋಣಿಯ ಪಯಣ…
ಕ್ರೂರದಿ ನಿರ್ಮಿಸಿದೆ ಲಂಕೆಯಲಿ ಹೊನ್ನ ಮಸಣ
ಅಂದೇಕೋ, ನಿನ್ನೆದೆಯ ಹಾಸಿನಲಿ ಮುಖವಿರಿಸಿ ನಿರ್ಲಿಪ್ತಳಾಗುವ ಭಾವ ಮನದಲಿ…

ಮೊದಲ ಭಾರಿ ಕಂಡದ್ದು ನಿನ್ನ ಹೀಗೆ…
ನಕ್ಕು ,ಮೀಸೆ ತಿರುವಿ, ಕೆನ್ನೆ ಸವರಿ, ಹಣೆಗೊಂದು ಮುತ್ತಿರಿಸಲಿಲ್ಲ…ಬಿಗಿದಪ್ಪಿಲಿಲ್ಲ… ಮೂಡಿದೆ..!
ನಿರಾಸೆಯ ಹಣೆಯಮೇಲೆ ದೌರ್ಬಾಗ್ಯದ ಗೆರೆಗಳು!….

ಮೊಳಕೆ ಒಡೆಯಿತಂದೇ ಸಂದೇಹವೊಂದು..! ಪಸರಿಸುತಿದೆ,ವನದಲ್ಲಿ ಹೊಸ ಹೂವ ಘಮಲು…!
ಚಂಡಮಾರುತವೊಂದು ಬಂದೆರಗಿದಾ ರೀತಿ…
ದ್ವೇಷದಲಿಯೋ, ಮೋಹದಲಿಯೋ, ಸ್ತ್ರೀ ರೂಪದಾ ಸುಳಿಯಲಿ,…!

ಚಿತ್ತ ವಿಕಾರಗಳ ಹಿಡಿದಿಡದ ನಿನ್ನ…..
ಚಿತ್ತದಲಿಂದು ನಾನಿಲ್ಲ ವೆಂಬುದೇ ನನ್ನ ಮರಣ…!
ಎಲ್ಲೆ ಇಲ್ಲದ ಪ್ರೀತಿಯು ಕಮರಿಹೋಗಿದೆಯಿಂದು..
ಎಲ್ಲೆ ಮೀರಿ ಹರಡುತಿದೆ ನನ್ನ ಬಸಿರ ಸುಟ್ಟ ಕಮಟು..!.

ಹೃದಯ ಭಾರವಾದಂತೆ ,ಗರ್ಭ ಹಗುರವಾಗಿದೆ
ಮಗನ ಅಚಾತುರ್ಯಾಕ್ಕಿಂದು…. ತುಟಿಕಚ್ಚಿ ತಡೆದರು…
ಕಾಣುತಿದೆ ಲಂಕಾಮಾತೆಯ ಕಂಗಳಲಿ ಧಿಕ್ಕಾರದ ಛಾಯೆ…!

ಮಿಂಚಿ ಹೋಗಿದೆ ಕಾಲ…
ಕಾಲಿನಲಿ ಬಲವಿಲ್ಲ ಕಾಳಗಕೆ ನಿಲ್ಲಲು..!
ಕೇಳಬೇಕಾದ ಪ್ರೆಶ್ನೆ ಗಳೆಷ್ಟೋ ಮಡುಗಟ್ಟಿದೆ ಮೌನದಲಿ !
ಪೂಜೆಗಾಗಿ ಹಿಡಿದ ಪುಷ್ಪ ಕೈ ಜಾರಿದೆ….
ಜಾರಿದ ಹೃದಯದಲಿ ಸದ್ದಿಲ್ಲ, ಸ್ಮಶಾನ ಮೌನ….!

ಮರಣ ಶಯ್ಯಯಲ್ಲಿರುವ ಚರಣಗಳಿಗಿದೋ…
ಚರಣ ದಾಸಿಯ ಮನದಾಳದ ಪ್ರಶ್ನೆ ಮಾಲಿಕೆ..?
ಸುಳಿವಿಲ್ಲದೆ ನನ್ನ ಸ್ಥಾನ ಬರಿದಾಯಿತೇ..?
ಅರ್ಪಿಸಿದ ಹೃದಯವಿಂದು ..?ಅನಾಥವಾಯಿತೇ?
ಬುದ್ದಿಗಿಂದು ಮತಿಗೆಟ್ಟು ನಿನ್ನ ದೂರಿದರೂ….
ಭಾರದಲಿ ಮಿಡಿಯುತಿದೆ ಹೃದಯವಿಂದು..!

ಉರಿದ ಲಂಕೆ ಕಂಡರೂ, ಕಂಡಿತೇ?
ಬರಿದಾದ ಈ ಹೃದಯ?
ಗೆದ್ದು ತರದೇ, ಕದ್ದು ತಂದಾಗಲೇ
ಅಧರ್ಮದ ಭಾಗ ನಾನು.
ಮಯ ಸುತೆಯಿಂದು ಮರಣ ಶಯನದಲಿಲ್ಲ ಎದೆಯೇರಿಳಿತದಲಿ ಮಾತ್ರ ಸಜೀವ.

********************

2 thoughts on “ಸ್ವರ್ಣ ಲಂಕೆಯ ಮೌನ ಪುತ್ತಳಿ (ಮಂಡೋಧರಿ)

  1. ಬಹಳ ಅದ್ಭುತವಾದ ಕಾವ್ಯ ರಚನೆ ನಿಮ್ಮ ಕಾವ್ಯ ರಚನಾ ಕೌಶಲ್ಯಕ್ಕೆ ನನ್ನ ನಮನ

Leave a Reply

Back To Top