ಬಹು ಕಾಫಿಯಾ ಗಜಲ್

ಬಹು ಕಾಫಿಯಾ ಗಜಲ್

ಶಶಿಕಾಂತೆ

ಹೃದಯದ ನೋವು ಕೊನೆಗಾಣುವುದು ನೀ ಬಳಿಯಿದ್ದರೆ ಮೋಹನ
ಮನದ ದುಃಖವು ಮರೆಯಾಗುವುದು ನೀ ಬಳಿಯಿದ್ದರೆ ಮೋಹನ

ಬಾಡಿಹೋದ ಮನವು ಚಿಗುರುವುದು ನೀ ಬಳಿಯಿದ್ದರೆ ಮೋಹನ
ಕಣ್ಮರೆಯಾದ ಸ್ವಪ್ನವು ಕಾಣಿಸುವುದು ನೀ ಬಳಿಯಿದ್ದರೆ ಮೋಹನ

ಎದೆಹಿಂಡಿದ ವಿರಹವು ನೀಗುವುದು ನೀ ಬಳಿಯಿದ್ದರೆ ಮೋಹನ
ನಾಕಾಣದ ಸುಖವು ನನ್ನನ್ನಪ್ಪುವುದು ನೀ ಬಳಿಯಿದ್ದರೆ ಮೋಹನ

ಮರೆಯಾದ ಪ್ರೇಮವು ಜಿನುಗುವುದು ನೀ ಬಳಿಯಿದ್ದರೆ ಮೋಹನ
ಸತ್ತುಹೋದ ಭಾವವು ಉಸಿರಾಡುವುದು ನೀ ಬಳಿಯಿದ್ದರೆ ಮೋಹನ

ಬಿಟ್ಟುಹೋದ ಗೆಲುವು ಶರಣಾಗುವುದು ನೀ ಬಳಿಯಿದ್ದರೆ ಮೋಹನ
ಸೊರಗಿದ ಶಶಿಮೊಗವು ಅರಳುವುದು ನೀ ಬಳಿಯಿದ್ದರೆ ಮೋಹನ

**************************

Leave a Reply

Back To Top