ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೋಡಗಳ ಮೋಹದ ಜಡಿ

ನೇತ್ರಾ ನಾಯ್ಕ

Clouds set isolated on black background. White cloudiness, mist or smog background.

ಮೋಡಗಳ ಮೋಹದ ಜಡಿಯಲಿ
ಅದೆಷ್ಟು ಒಲವಿದೆಯೋ
ವಸುಧೆಯ ಮೋಹಕ ನಗೆಯಲಿ
ಅದೆಂತ ಆಕರ್ಷಣೆಯ ಸೆಳತವಿದೆಯೋ

ಅಬ್ಬರಿಸಿ ಬೊಬ್ಬಿರಿವ ಸದ್ದಿನಲಿ
ಅದೆಷ್ಟು ಆತುರದ ಕಾತರವಿದೆಯೋ
ಸಂಚಿನಲಿ ಮಿಂಚುವ ಹೊಳಪಿನಲಿ
ಅದೆಷ್ಟು ಕನಸುಗಳ ಚಿತ್ತಾರ ಚಲ್ಲಿದೆಯೋ

ದೊ ಎಂದು ಸುರಿವ ಸದ್ದಿನಲಿ
ಅದೆಷ್ಟು ರಸಿಕತನವಿದೆಯೋ
ಒಲವಲಿ ತೊಯ್ದ ವಸುಧೆಯ ಮಡಿಲಲಿ
ಅದೆಷ್ಟು ಚಿಗುರು ಪ್ರೇಮ ಪ್ರಣಯಕೆ ಸಾಕ್ಷಿಯಾಗಿದೆಯೋ
*********************

About The Author

2 thoughts on “ಕಾವ್ಯಯಾನ”

  1. ಚೆನ್ನಾಗಿದೆ ನೇತ್ರಕ್ಕ. ಖುಷಿ ಮತ್ತೂ ಅಭಿನಂದನೆಗಳು ನಿನಗೆ.

Leave a Reply

You cannot copy content of this page

Scroll to Top