ಹಾಯ್ಕುಗಳು

ಕಾವ್ಯಯಾನ

ಹಾಯ್ಕುಗಳು

ಎ. ಹೇಮಗಂಗಾ

White Daisy Flower on Pink Background

ನೋವ ಕಾರ್ಮೋಡ
ಎದೆ ಬಾನಲಿ ನಿತ್ಯ
ದುಃಖದ ಮಳೆ

ಪ್ರೀತಿಸುವುದು
ಸುಲಭ ಅಗಲಿಕೆ
ಅಸಹನೀಯ

ಕೂಗುತ್ತಿರುವ
ಕೋಗಿಲೆ ದನಿಯಲ್ಲಿ
ವಿರಹವಿದೆ

ಸುರಿಯುತ್ತಿದೆ
ನಿನ್ನ ನೆನಪ ಮಳೆ
ಎಡೆಬಿಡದೇ

ಘಾಸಿಗೊಂಡರೂ
ಹೃದಯ ನೆನೆವುದು
ನಿನ್ನನ್ನು ಮಾತ್ರ

ಹಿಂಬಾಲಿಸಿವೆ
ಕಹಿ ನೆನಪುಗಳು
ಬೇತಾಳನಂತೆ

ಮುತ್ತೆಂದುಕೊಂಡೆ
ನಿನ್ನ ಸವಿ ಮಾತನು
ಮೃತ್ಯುವಾಯಿತು

ಬಂದಿತು ಮಳೆ
ಹೊಸ ಕಳೆ ಇಳೆಗೆ
ಮಣ್ಣ ಘಮಲು

ದಾರಿಯ ತುಂಬ
ಹೂಗಳ ಚಾದರ ನೀ
ನಡೆಯಲೆಂದು

ಆಗಬೇಕಿತ್ತು
ನಾ ಮುಂಗುರುಳು ನಿನ್ನ
ಕೆನ್ನೆ ಸೋಕಲು

*********************

Leave a Reply

Back To Top