ಎಚ್ಚರ!

ಕವಿತೆ

ಎಚ್ಚರ!

ಚಂದನ ಜಿ. ಪಿ

multicolored abstract painting

ಎಚ್ಚರ!
ಅಂದೊಂದು ಸ್ವಭಾವದಲ್ಲಿ
ಕಪ್ಪು ರಂಧ್ರದಂತ ನಿರ್ಮಿತಿಯಂತೆ
ಸೆಳೆತಕ್ಕೆ ಸಿಕ್ಕವರನ್ನೆಲ್ಲಾ
ಗಾಢ ಅಂಧಕಾರದಲ್ಲಿ ಮುಳುಗಿಸಿ
ತೀವ್ರ ಗುರುತ್ವದಲ್ಲಿ ತೇಲಿಸಿ
ಭಕ್ಷಿಸುವುದಂತೆ
ಕಿವಿಗೊಡಲು ಯಾರಿಲ್ಲದ
ನೋವಂತೂ ಪರಮ ಭೀಕರವಂತೆ
ಹೊಸಲು ದಾಟಿದೊಡೆ
ಹಿರಿಯರಿಗೆ ಸ್ನೇಹ ವಾತ್ಸಲ್ಯದಿಂದ
ದುಡಿವರಿಗೆ ದುಡಿತದಿಂದ
ಮಕ್ಕಳಿಗೆ ಕಿಂದರಜೋಗಿಯಿಂದ
ನಾನಾ ವೇಷಧರಿಸಿ ಕಂಕಟ್ಟಿ
ಬರುವುದಂತೆ
ಅಲೆಯಾಗಿ ಮರುಕಳಿಸಿ
ಬಿಟ್ಟವರನ್ನು ಬಿಡದಂತೆ
ಕೊಂಡುಯ್ಯುವುದಂತೆ
ನೆನಪಿರಲಿ
ಯಾರ ಶಾಪವು ಕೂಡ
ತಟ್ಟುವುದಿಲ್ಲವಂತೆ


One thought on “ಎಚ್ಚರ!

Leave a Reply

Back To Top