ಕವಿತೆ
ಹೊಣೆ
ಪ್ರೊ ರಾಜನಂದಾ ಘಾರ್ಗಿ
ಕಹಿ ಅನುಭವಗಳ ಬುಟ್ಟಿ
ಹೋತ್ತು ಹೊರಟಾಗ
ಸುಟ್ಟು ಕೊಂಡ ಉರಿ
ನಾಲಿಗೆಯ ಮೇಲೆ ಇರುವಾಗ
ಮಜ್ಜಿಗೆಯನ್ನು ಊದಿ
ಕುಡಿಯುವ ಅಭ್ಯಾಸ
ಘಳಿಗೆಯಲ್ಲಿ ಹುಟ್ಟಿ
ಸಾಯುವ ಸಂಭಂದಗಳು
ಸೊಪಿನ ಗುಳ್ಳೆಗಳಂತೆ
ಮುಟ್ಟಿದರೆ ಒಡೆಯುತ್ತ
ಸುತ್ತ ಮುತ್ತ ಹಾರಾಡುವಾಗ
ಕಡಲಾಮೆಯಂತೆ
ದೊಡ್ಡ ಚಿಪ್ಪನ್ನು ಹೊತ್ತು
ತಿರುಗುವ ಅನಿವಾರ್ಯತೆ
ಮಾತಿಗೆ ಕರಗುವ
ಮಂಗನಂತೆ ಹಾರುವ
ಮೃದು ಮನಸನ್ನು
ಕಾಯುವ ಹೊಣೆ
ಪುಟ್ಟ ಹೆಗಲ ಮೇಲೆ
************