ಕವಿತೆ
ತಲೆದಂಡ
ಪ್ರೊ. ಚಂದ್ರಶೇಖರ ಹೆಗಡೆ
0
ವಿರಮಿಸುತ್ತಿದೆ ರಣರಂಗವೀಗ
ಕೆಚ್ಚೆದೆಯ ವೀರರೆದೆಗಳನು ಹರಿದು ಕೊಂದು
ಎಲ್ಲಿದೆಯೋ ಹೋರಾಟದ ಕೇಂದ್ರಬಿಂದು
ಪರಿತ್ಯಾಗದ ಪರಿಧಿಯಲ್ಲಿ ಎಲ್ಲರೂ ಮುಂದು
ಮೈಯ್ಯಾರಿಸಿಕೊಳ್ಳುತಿದೆ ಚಿತೆಯ ಕೆಂಡ
ಸುಡಲೇನು ಉಳಿದಿದೆ ಬೂದಿಯಾದ ಒಡಲೊಳಗೆ
ಯಾತ್ರೆ ಹೊರಟಿದ್ದಾರೆ ತಂಡೋಪತಂಡ
ಯಾರದೋ ತಪ್ಪಿಗೆ ಇನ್ನಾರದೋ ತಲೆದಂಡ
ಹೊಗೆಯೊಂದು ಮಾಡಿದೆ ಭೂಮವ್ಯೂಮಾದಿಗಳ ಬಿಗಿದಪ್ಪಿ
ಹೊರಟ ಜೀವಕೆ ಸೇತುವೆಯಂತೆ
ಜಗದ ಹೆಜ್ಜೆಗಳು ಲಯ ತಪ್ಪಿ
ಉರುಳುತಿವೆ ಮೇಲಿಂದ ಕಾರ್ಮೋಡವಿಳಿದಂತೆ
ಬೆಳಕಿನ ರಥವೇರಿ ಬಂದ ದಿನಕರ ಪಾತಾಳಕ್ಕಿಳಿದಂತೆ
ಕುಂಭದೊಳಗಿನಿಂದ ಜಿಗಿದ ಕಾರಂಜಿ
ಹೆದರಿಸುತಿದೆ ಪ್ರಾಣಪ್ರಳಯ ತೋರಿ
ಭರವಸೆಯೂ ಕಣ್ತೆರೆಯುತಿದೆ ಅಂಜಿ
ಇಷ್ಟು ಬೇಗವೆದುರಾಯಿತಲ್ಲ ಬದುಕಿನ ಇಳಿಸಂಜಿ
ಮುಕ್ತ ಜಲದೊಳಗೆ ಅಖಂಡ ವಿಶ್ವವೇ ಬಂಧಿ
*********
Sir super sir. Edralli tumba artavada vishaya adagide sir . e kavite enda yellaru tiliyuvadu tumba ede sir.