ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೋಳಿ ವಿಶೇಷ

ವೈಷ್ಣವಿ ವಿನಯ್

Multicolored Powder Photo

ರಂಗು ರಂಗಿನ ಚಿತ್ತಾರ
ಪ್ರತಿ ರಂಗಿನೊಳಗೂ ಒಲವಿನ ಚಿತ್ತಾರ.!!

ಆಚರಿಸೋಣ ಬಣ್ಣ ಬಣ್ಣದ ಹೋಳಿ
ಬಣ್ಣ ಬಣ್ಣಗಳ ನಡುವೆ
ನಗುವು ತುಂಬಿ ತುಳುಕುತಿರಲಿ.!!

ಬಣ್ಣ ಬಣ್ಣದ ಆಟದಲ್ಲಿ
ಜೀವನ ಸಾಗುವ ಹಾದಿಯಲ್ಲಿ
ಬದುಕು ಬಣ್ಣಗಳಂತೆ ಸುಂದರವಾಗಿರಲಿ.!!

ಬಣ್ಣ ಬಣ್ಣಗಳ ನಡುವೆ
ನಿಮ್ಮ ಜೀವನವಿರಲಿ ಬಣ್ಣ ಬಣ್ಣವಾಗಿ
ಬಣ್ಣ ಬಣ್ಣಗಳಂತೆ ನಿಮ್ಮ ಬದುಕು ಸದಾ ನಗುತಿರಲಿ.!!

ಬಣ್ಣ ಬಣ್ಣಗಳ ನಡುವೆ
ಸಾಧನೆಗಿರಲಿ ಛಲದ ಬಣ್ಣ
ಬಣ್ಣ ಬಣ್ಣಗಳಂತೆ ನಿಮ್ಮ ಬದುಕಿರಲಿ.!!

ಬಣ್ಣಗಳೇ ತುಂಬಿರುವ ಈ ಪ್ರಪಂಚದಲ್ಲಿ
ಸಂತಸವೆಂಬುದು ಎಂದಿಗೂ ಮಾಸದಿರಲಿ
ಜಯದ ಹೊಲಿಕೆಗೆ ರಂಗು ರಂಗಿನ ಬಣ್ಣ
ಸದಾ ಶಾಂತಿಯೊಂದಿಗೆ ನೆಲೆಸಲಿ…

************************

About The Author

10 thoughts on “ಹೋಳಿ”

Leave a Reply

You cannot copy content of this page

Scroll to Top