ಸಾವಿನಂಚಿನ ಕನಸು

ಕವಿತೆ

ಸಾವಿನಂಚಿನ ಕನಸು

ಅಬ್ಳಿ,ಹೆಗಡೆ

ಯಾಕೋ ಇಂದು,
ಇದ್ದಕ್ಕಿದ್ದಂತೇ…..
‘ಸಾವಿನಂಚಿನ ಕನಸು’-
ಗಾಢ,ನಿಶ್ಚಿಂತ ಬೆಳಗಿನ-
ಜಾವದ,ಸವಿ,ಸವಿ
ಸಕ್ಕರೆ ನಿದ್ದೆಯಲ್ಲೂ.
……………………
ಅಂಗಾತ ಮಲಗಿದ ನನ್ನ-
ಕತ್ತಿಗೊಂದು ಯಮಪಾಶ
ಕುಣಿಕೆ,ಸಿಕ್ಕಿಸಿ ವಿಕ್ರತ ನಗು-
ನಗುತ್ತಾ,ನಿಂತಿದ್ದಳೊಬ್ಬ
ಹೆಮ್ಮಾರಿ ನನ್ನೆದುರು.
ಗುಡಾಣದಂತ ಹೊಟ್ಟೆ,
ನಗ್ನ ದೇಹಕ್ಕೆಅರೆ-ಬರೆ
ಮುಚ್ಚಿದ ಜಡೆಗಟ್ಟಿದ
ಕೂದಲೇ ಬಟ್ಟೆ.
ಮುಖವೋ ಮ್ರತ್ಯುಕೂಪ.
ಕಣ್ಣು ಕೆಂಡದುಂಡೆ.
ಬಾಯಲ್ಲಿ,ಉದ್ದದ
ಕೋರೆ ದಾಡೆಗಳ ಮದ್ಯೆ
ಹೊರಚಾಚಿರುವ
ನಾಲ್ಕಿಂಚಗಲದ,
ಜೊಲ್ಲು ಸುರಿಸುವ
ಕೆನ್ನಾಲಗೆಗೆ..ರಕ್ತದ
ದಾಹ.ಬಾಯಿಂದ-
ಗೊರ,ಗೊರ ಶಬ್ಧ.
ನಿಗುರಿದುಗುರ ಮುಷ್ಟಿ-
ಯಲ್ಲಿ ಯಮಪಾಶ.
ಕುಣಿಕೆ ಬಿಗಿಗೊಳಿಸುವ
ಆತುರ ಮುಖದಲ್ಲಿ….
ಅಬ್ಬಾ…ಇದೆಂಥ ಬಿಬತ್ಸ
ಕನಸಲ್ಲಿ………!
ಇಷ್ಟು ಸಾಕು ವರ್ಣನೆ-
ಕ಼ಣದ ಕಣ್ಣು ಕಂಡಿದ್ದು
‘ಥೇಟ್’ಅಜ್ಜಿ ಹೇಳಿದ
‘ಚೌಡಿ’ಯೋ…’ಹಬ್ಸಿ’ಯೋ..
ಅಲ್ಲಲ್ಲ…ಯಕ಼ಗಾನದ
ರಾಕ಼ಸಿ..
……………………….


ಗಹ,ಗಹಿಸಿ ನಗುವಾಗ
ಹಾಕಿದ್ದ ಚಡ್ಡಿ ಒದ್ದೆ-
ಯಾಗುವದೊಂದೇ ಬಾಕಿ.
ಅಂಗಾತ ಮಲಗಿದಲ್ಲೇ
ಬೆವರ ಮುದ್ದೆ.
ಥರಗುಡುವ ಚಳಿ
ನಡುಕದಲ್ಲೂ ನಿದ್ದೆ-
ಯಲ್ಲೂ ಬಿಟ್ಟಕಣ್ಣು-
ಬಿಟ್ಟ ಹಾಗೆ,ವಿಭ್ರಾಂತ
ಸ್ತಿತಿಯಲ್ಲಿ ನಾನು..
……………………..
ನನ್ನ ಕೇಳುತ್ತಿದ್ದಳಾಕೆ
‘ಕೊನೆಯಾಸೆ’ಏನೆಂದು.
ಕ್ರೌರ್ಯಕ್ಕೂ ಕನಿಕರ.
ನನ್ನ ಮನಕೀಗ
ಖಚಿತವಾಯ್ತು,
ಇಂದೆನ್ನ ದೊಂಬರಾಟದ
ಬದುಕಿನ ಕೊನೆ-
ಕ಼ಣ.ನೋವು,ನಲಿವು,
ಮೋಹ,ಕಾಮ,ಆಸೆ-
ನಿರಾಸೆ,ಸಿಟ್ಟು,ಸೆಡವು,
ತಟವಟ,’ದಗಲ್ಬಾಜಿ’ಗಳ
ತೀರ್ಮಾನ ಇಂದೆಂದು.
ಬದುಕಿ,ಬದುಕ-
ಸಾಯಿಸುವದಕ್ಕಿಂತ,
ಸತ್ತು,ಬದುಕಬೇಕೆ-
೦ದುಕೊಂಡೆ….
…………………….


ಸ್ಮತಿಪಟಲದಲ್ಲಿ,
ಬಾಲ್ಯದಲ್ಲಿ ‘ಆಯಿ’,
ರಾತ್ರಿ,ನಕ಼ತ್ರಪುಂಜ
ತುಂಬಿದ ಸುಂದರ
ಆಕಾಶದತ್ತ ಕೈ
ತೋರಿಸುತ್ತಾ,
ಸತ್ತಮೇಲೆಲ್ಲರೂ ಅಲ್ಲಿ
ಅವುಗಳೊಟ್ಟಿಗೆ
ಯಾವಾಗಲೂ
ಮಿನುಗುತ್ತಿರುತ್ತಾರೆ.
ಎಂದದ್ದು ನೆನಪಾಗಿ,
ಇದ್ದುದರಲ್ಲೇ ಸ್ವಲ್ಪ
ಧೈರ್ಯ,ಅವುಗಳೊಟ್ಟಿಗೆ
ಯಾವಾಗಲೂ
ಅಜರಾಮರವಾಗಿ
ಮಿನುಗು-
ತ್ತಿರಬಹುದೆಂದು.
ಒಣಗಿದ ತುಟಿಯ
ನಾಲಗೆಯಿಂದ
ತೇವಗೊಳಿಸುತ್ತಾ…
‘ನನ್ನ ಕೊನೆಯಾಸೆ
ಸಾವು,’ನೀನಾರು?
ತಾಯೆ?’ಎಂದೆ.
ಅದಕ್ಕವಳು-
ವಿಖಾರವಾಗಿ ನಗುತ್ತಾ-
‘ನಾ..ಯಮರಾಜನ
ಹೊಸ ನೇಮಕ,
ನನ್ನ ಹೆಸರು’ಕೊರೋನಾ’
ವಿದೇಶದಿಂದ-
ಬಂದವಳು’ ಎನ್ನುತ್ತಾ
ಕೊರಳ ಕುಣಿಕೆ
ಸಡಿಲಿಸಿ,”ಮತ್ತೂ..-
ಬದುಕಿ ಸಾಯಿ.ನೀ
ಮಾಡಿದ ತಪ್ಪಿಗದೇ
ಶಿಕ್ಷೆ”ಎನ್ನುತ್ತಾ,ಇದ್ದಲ್ಲೇ
ಕ಼ಣದಲ್ಲಿ ಮಾಯ”
‘ದಢಕ್ಕ್’ನೆ ಎದ್ದುಕುಳಿತು
ಬೆವರೊರೆಸಿ-
ಕೊಂಡು,ಕಣ್ಣುಜ್ಜಿ,
ಹೊರ ನೋಡಿದಾಗ…
ಬೆಳಕಾಗಿತ್ತು….
ಬೆಳಗೂ ಆಗಿತ್ತು.

*******************************

Leave a Reply

Back To Top