ಗಜಲ್

ಗಜಲ್

ಯ.ಮಾ.ಯಾಕೊಳ್ಳಿ

Woman picking chamomiles in green meadow

ನಾ ನೆನಪಿಸದೆ ‌ಹೇಗಿರಲಿ ಅಂದೊಮ್ಮೆ‌ ನೀನಾಡಿದ ಮಾತುಗಳನ್ನು
ಜೊತೆಗೂಡಿ ಆಡಿದ ಹಾಡಿದ ಮಾತುಗಳನು

ಅವುಗಳ ನೆನಪಿನಲೆ ಬಾಳಿರುವ ಬಡಜೀವ ಇದು
ನೆನಪಿಸದೆ ಹೇಗಿದ್ದೀತು ಪ್ರಸಾದವಾದ ಮಾತುಗಳನು

ಕೈ ಕೈ ಹಿಡಿದು ಊರ ತುಂಬೆಲ್ಲಾ ಆಡಿದ್ದೆವು ಗೆಳತಿ
ಮನದಂಗಳದಲಿ ಮಲ್ಲಿಗೆ ಅರಳಿಸಿದ ಮಾತುಗಳನು

ನನ್ನ‌ ದನಿಗೆ ದನಿಯಾಗಿದ್ದೆ ನೀನು ದೇವತೆಯಂತೆ
ಅನುಮೋದಿಸಿದ್ದೆ ನೀನಂದು ಹೊಂಬಣ್ಣದ ಮಾತುಗಳನು

ನೀನು‌ಮರೆತು ಹೋದೆ‌ ಏನೂ ಅಲ್ಲದವಳಂತೆ
ಎದೆಯೊಳಗೆ ಹೂವರಳಿಸಿದ ಮಾತುಗಳನು

*******************************

Leave a Reply

Back To Top