ಹೇಗೆ ಪ್ರೀತಿಸಲಿ?
ಬೆಂಶ್ರೀ ರವೀಂದ್ರ
ಹುಡುಗಿ ಕೇಳಿದಳು
ಹೂವು ಬಿರಿಯುವ ಸದ್ದು
ನಿನಗೆ ಕೇಳಿಸಿತೇನು ಹುಡುಗ
‘ಇಲ್ಲವಲ್ಲ ಹುಡುಗಿ’
ಹಾಗಾದರೆ ಹೇಳು
ಹೇಗೆ ಪ್ರೀತಿಸಲಿ ನಿನ್ನ!
ತುಂಬು ಹುಣ್ಣಿಮೆಯಲಿ
ನೀರವದ ರಾತ್ರಿಯಲಿ
ಗಾಳಿ ಚಲಿಸದ ಗಳಿಗೆಯಲಿ
ನಕ್ಷತ್ರದ ನಗೆಯ
ಕಂಡೆಯಾ ಹುಡುಗ
ಓಹ್ ಇಲ್ಲವೆಂದರೆ ಹೇಳು
ಹೇಗೆ ಪ್ರೀತಿಸಲಿ ನಿನ್ನ !
ತಿಳಿನೀರ ಕೊಳದಲ್ಲಿ
ಒಂದರ ಹಿಂದೊಂದು
ಸುಳಿವ ಜೋಡಿ ಮೀನುಗಳ
ಹೆಜ್ಜೆಯ ಗುರುತಿಸಿದೆಯಾ
ಹುಡುಗ
ಇಲ್ಲವಾದರೆ ಹೇಳು
ಹೇಗೆ ಪ್ರೀತಿಸಲಿ ನಿನ್ನ !
ಸಾಕು ಸಾಕೆಲೆ ಹುಡುಗಿ
ಕೇಳುವೆನೊಂದೇ ಪ್ರಶ್ನೆ
ನಿನ್ನ ಕಂಡೊಡನೆ ಮಿನುಗಿದ
ನನ್ನ ಕಣ್ಣ ಕಾಂತಿಯ ಕಂಡೆಯಾ!
ಕಂಡೆನಲ್ಲ ಹುಡುಗ !
ಅದಕ್ಕಲ್ಲವೇ
ಇಷ್ಟೊಂದು ಪ್ರಶ್ನೆಗಳು.
ಹುಡುಗಿ !
ನೋಡು ನೀನೆನ್ನ ಕಂಡಾಗ
ನಿನ್ನ ಕಣ್ಣಲಿ ನಾ ಕಂಡಿದ್ದು
ಮಿನುಗಲ್ಲ ಕೋಲ್ಮಿಂಚು
ಅದು ಸುಟ್ಟಿದೆ ನನ್ನೆದೆಯನು
ಗಾಯ ಮಾಗಬೇಕಿದೆ
ಹ್ಞು..ಅನ್ನು
ಪ್ರೀತಿಗೇಕೆ ಇಷ್ಟೊಂದು ಪ್ರಶ್ನೆಗಳ ಕಾಟ !
*********************************
ತುಂಬಾ ನವಿರು. ತುಂಬಾ ಚಂದ
ಒಂದು ನವಿರಾದ ಸುಂದರ ಪ್ರೀತಿಯ ಕವನ
Simple it took me to the end very interestingly.
Beautiful Kavsna; eventhough I am not very conversant with the language.Very interestig.
Ramamurthy.
ಹೌದು, ಪ್ರೀತಿಗೇಕೆ ಇಷ್ಟೊಂದು ಪ್ರಶ್ನೆಗಳ ಕಾಟ
ಎರಡು ಹೃದಯಗಳ ಬೆಸುಗೆಯ ನಡುವಿನ ಸುಂದರವಾದ ಸಂಭಾಷಣೆ ಬಿಂಬಿಸಿರುವ ಕವನ.
ಬೆಂಶ್ರೀರವೀಂದ್ರ ರವರಿಗೆ ಅಭಿನಂದನೆ.
ಸೊಗಸಾಗಿದೆ ರವಿ.
Yaru aa hudugi? Enu samachaara?