ನಿನ್ನೊಲವು

ಕವಿತೆ

ನಿನ್ನೊಲವು

ಭಾರತಿ ರವೀಂದ್ರ

Heart Shaped Cutouts on Pink Background

ಒಂದೇ ಒಂದು ಸಾರಿ
ನೀ ತಿರುಗಿ ನೋಡಬಾರದೇ……

ದೂರ ನೀ ಹೋದರೂನು ಕಾಯುತಿಹೆ ನಾ ನಿನಗಾಗಿಯೇ
ದೇಹ ನಾನಾದ್ರೂ ಪ್ರಾಣ ನೀನು
ಎಂದೆಂದೂ ಪ್ರಾಣಸಖ ನೀನು

ಕತ್ತಲೆ ತುಂಬಿದ ನನ್ನ ಬದುಕಿಗೆ ನಿನ್ನೊಲವೇ ತಂಬೆಳಕಾಗಿದೆ
ಆ ಹುಣ್ಣಿಮೆಯ ಚಂದಿರನು ನೀನು
ನಿನಗಾಗಿ ಅರಳೋ ತಾವರೆಯು ನಾನು

ಈ ಬಾಳ ಏಕಾಂಗಿ ಪಯಣದಿ
ಕೈಯ ಹಿಡಿದು ಜೊತೆಯಾದೆ
ಜನುಮ ಜನುಮದಿ ಜೊತೆಯು
ನೀನು
ನಿನ್ನನಗಲಿದರೆ ಉಳಿಯೇನು ನಾನು

ನನ್ನ ನಿನ್ನೆ ಇಂದು ನಾಳೆಗಳಲ್ಲೂ
ಬರೀ ನಿನದೇ ನೆನಪ ಹಾವಳಿ
ನೆಪ ಮಾಡಿ ಬರುವ ನೆನಪು ನೀನು
ನೆನಪಿಗೋಸ್ಕರವಿರೋ ನೆಪವು ನಾನು

*************************************

One thought on “ನಿನ್ನೊಲವು”

Leave a Reply