ಕವಿತೆ
ಹೆಜ್ಜೆಗಳ ಸದ್ದು
ವೀಣಾ ರಮೇಶ್
ನೀ
ಬರುವ ದಾರಿಯಲಿ ಹೆಜ್ಜೆಗಳ ಸದ್ದು
ನನ್ನೆದೆಯ ರಂಗಮಂದಿರದಲ್ಲಿ
ಗೆಜ್ಜೆ ಕಾಲ್ಗಳ ಸದ್ದು
ಕುಣಿದು ಬಿಡು ಇನ್ನಷ್ಟು
ನನ್ನ ಭಾವನೆಗಳು
ಹುಚ್ಚೆದ್ದು ಕುಣಿಯಲಿ
ಸಾಲು ಸಾಲು ಗೆಜ್ಜೆಗಳಲಿ
ಸಾಲು ಸಾಲು ನೆನಪುಗಳು
ನೀ ಇಡುವ ಗಗ್ಗರದಲಿ
ಗಿರಕಿಯಾಡುವ ನನ್ನ ಕನಸುಗಳು
ಗುಂಗುರುಗಳ ನಡುವೆ
ಉಂಗುರ ಅಪ್ಪಿದ
ತುಂಟ ಬೆರಳುಗಳು,
ತಪ್ಪಿದ ತಾಳಗಳು
ನನ್ನೆದೆಯ ರಂಗ ವೇದಿಕೆಯಲಿ
ನೀ ಬರೆದು ಗೀಚಿದ ಸರಸದ
ಪಿಸುಮಾತುಗಳು
ತಪ್ಪು ಹೆಜ್ಜೆಗಳಲಿ
ಕುಣಿಯುತ್ತಿದೆ
ಉನ್ಮಾದ,ಉದ್ವೇಗಗಳು
ನಾದ, ನೀನಾದಗಳು
ನೂಪುರದ
ಗಲ್ ಗಲ್ ತಾಳದಲಿ
ನೀ ತರುವ ಹೆಜ್ಜೆಗಳು
****************