ಯಶಸ್ಸು ಮತ್ತು ಸಾಧನೆ

ಲೇಖನ

ಯಶಸ್ಸು ಮತ್ತು ಸಾಧನೆ

ಮಾಲಾ ಕಮಲಾಪುರ್

1000+ Great Victory Photos · Pexels · Free Stock Photos

ಪ್ರತಿಯೊಬ್ಬ ಮನುಷ್ಯನು ಯಶಸ್ಸನ್ನು ಬಯಸುತ್ತಾನೆ. ಅತ್ತ್ಯುತ್ತಮ ಗುಣ ಮಟ್ಟದ ಜೀವನ ವನ್ನು ಅನುಭವಿಸಲು ಹಂಬಲಿಸುತ್ತಾನೆ. ಆದರೆ ಅದನ್ನು ಸಾಧಿಸಿ ಅಂಥ ಜೀವನ ನಡೆಸುವವರು ಕೆಲವರು ಮಾತ್ರ ಬಲವಾದ ನಂಬಿಕೆ ವಿಶ್ವಾಸ ಇದ್ದವರು ಹಿಡಿದ ಕಾರ್ಯ ವನ್ನು ಸಾಧಿಸಿಯೇ ತೀರುತ್ತಾರೆ. ಇಂಥವರಿಗೆ ಕಾಲು ಎಳೆಯುವವರು ಸಾವಿರಾರು.
ಎಲ್ಲಿ ಸಾಧನೆ ಮಟ್ಟ ಇರುತ್ತದೆಯೋ ಅಲ್ಲಿ ಟೀಕಿಸುವವರು ನಮ್ಮ ಹಿಂದೆಯೇ ಇರುವರು . ನಾವುಹಿಂದೆ ನೋಡದೆ ಮುಂದೆ ಸಾಗುತ್ತ ಹೋಗಬೇಕು ಹಿತೈಷಿಗಳ ಮಾರ್ಗ ದರ್ಶನಇದ್ದರೆ ಸಾಕು ನಾವು ಗುರಿ ಮುಟ್ಟುವುದರಲ್ಲಿ ಸಂಶಯವೇ ಇಲ್ಲಾ.
ಅಬ್ರಹಾಂಲಿಂಕನ್ ಜೀವನದಲ್ಲಿ ಸಾಕಷ್ಟು ನೋವು ಸಂಕಟ ಜನರ ಅಸೂಹೆ ಇವೆಲ್ಲದರ ನಡುವೆ ದೃತಿ ಗೆಡದೆ ಸಂಪೂರ್ಣ ಆತ್ಮ ವಿಶ್ವಾಸ ದಿಂದ ತಮ್ಮ ಗುರಿ ತಲುಪಿದರು.
ಮುಖ್ಯ ವಾಗಿ ನಮ್ಮಲ್ಲಿ ಪ್ರಾಮಾಣಿಕತೆ ಇದ್ದು ಸರಳ ಭಾವನೆ ಇದ್ದಾಗ ನಮಗೆ ದೇವರಲ್ಲಿ ಅಚಲವಾದ ಭಕ್ತಿ ವಿಶ್ವಾಸ ಇದ್ದರೆ ನಾವು ನಮ್ಮ ಗುರಿ ಮುಟ್ಟುತ್ತೇವೆ.
ವಿನಯ ಮತ್ತು ಸೌಜನ್ಯ ಸ್ವಭಾವ ನಮ್ಮ ಮನಸಿನ ಕನ್ನಡಿ ನಾವು ಮತ್ತೊಬ್ಬರಾಗುವದು ಬೇಡ ನಾವು ನಾವಾದರೆ ಸಾಕು ನಮ್ಮ ಜೀವನ ದಲ್ಲಿ ಅದೆಷ್ಟೋ ಆನಂದ ಅನುಭವಿಸುತ್ತವೆ. ಇದನ್ನು ನೋಡಿ ಕೆಲವರು ಅಸೂಹೆ ಮಾಡಿ ಕುಹಕ ನಗು ತೋರಿಸಿದರು ನಾವು ನಿರ್ಲಕ್ಷಿಸಬೇಕು ಅದೊಂದೇ ದಾರಿ. ಮುಖ್ಯವಾಗಿ ನಾವು ಮಾಡುವ ಕೆಲಸ ಕಾರ್ಯ ಮತ್ತು ಯಾವುದೇ ವಿದ್ಯೆ ಯಲ್ಲಿ ವಿಚಾರದಲ್ಲಿ ನಿಖರ ಮತ್ತು ದಿಟ್ಟ ವಿಚಾರವೇ ನಮಗೆ ಇದ್ದರೆ ಸಾಕು. ನಮ್ಮಲ್ಲಿ ಆತ್ಮ ವಿಶ್ವಾಸವೇ ನಮ್ಮನ್ನು ಎತ್ತಿ ಹಿಡಿಯುತ್ತದೆ.


ನಾವು ಯಾವುದೇ ಸನ್ಮಾರ್ಗದಲ್ಲಿ ಇದ್ದಾಗ ನಮ್ಮ ಮನಸು ಯಾರಿಗೂ ಬಗ್ಗುವುದಿಲ್ಲ ನಾವು ಯಾವುದೇ ಕಲೆ ಮತ್ತು ವಿದ್ಯೆ ಕಲಿಯಬೇಕಾದರೆ ವಯಸ್ಸು ಬೇಕಾಗಿಲ್ಲ ನಮ್ಮ ದೇಹಕ್ಕೆ ವಯಸ್ಸಾದರೂ ನಮ್ಮ ಮನಸ್ಸಿಗೆ ಆಗಿರುವುದಿಲ್ಲ. ನಮ್ಮಲ್ಲಿ ಸದ್ರಡ ಮನಸ್ಸು ವಿವೇಚನಾ ಶಕ್ತಿ, ಸಾಧಿಸುವ ಸಂಕಲ್ಪವೇ ನಮ್ಮ ಯಶಸ್ಸಿನ ಮೆಟ್ಟಲುಗಳು.
ಇದಕ್ಕೆ ಉದಾಹರಣೆ ಯಾಗಿ ನೋಡಬೇಕೆಂದರೆ ಅಕ್ಷರ ಕಲಿಯದೆ ನಿಸ್ವಾರ್ಥ ಮನಸ್ಸಿನಿಂದ ಸೇವೆ ಮಾಡಿದ ಸಾಲು ಮರದ ತಿಮ್ಮಕ್ಕ ಅದೆಷ್ಟು ಗಿಡ ಮರಗಳನ್ನು ಮಕ್ಕಳಂತೆ ಪ್ರೀತಿಸಿ ಬೆಳೆಸಿದವರು ಮುಪ್ಪು ವಯಸ್ಸಿನಲ್ಲೂ ಹುರುಪು ಅವರಿಗೆ.
ಅವರ ಸೇವೆ ಇಡೀ ಜಗತ್ತು ಬೆರಗಾಗುವಂತೆ ನೋಡುತ್ತಿದೆ. ಹಿಂದೆ ನಮ್ಮೆಲ್ಲರ ಪೂರ್ವಜರು ಯಾವುದೇ ಪೈಪೋಟಿ ಮಾಡದೇ ಅಚಲ ನಿರ್ಧಾರ ಮತ್ತು ನಿಷ್ಕಲ್ಮಶ ಮನಸ್ಸು, ನಿಸ್ವಾರ್ಥ ಸೇವಾ ಮನೋಭಾವದಿಂದ, ಯಾರಿಗೂ ಮನಸ್ಸನ್ನು ನೋಯಿಸದೆ ಬದುಕಿನಲ್ಲಿ ತನ್ನದೇ ಛಾಪು ಮೂಡಿಸಿದವರು.
ನಾವು ಸಮಯಕ್ಕೆ ಮತ್ತು ನಮಗೆ ದಾರಿತೋರಿಸುವ ಗುರುಗಳಿಗೆ ಬೆಲೆ ಕೊಟ್ಟಾಗ ನಮ್ಮ ಜೀವನ ಸ್ವಲ್ಪ ಮಟ್ಟಿಗಾದರೂ ಸಾರ್ಥಕವಾದಿತು.
ನಾವು ಒಂದಿಷ್ಟು ಅವರ ಮಾರ್ಗ ದಲ್ಲಿ ಸಾಗೋಣ. ಇದ್ದುದರಲ್ಲಿ ನೈಜ ಸುಖ, ಶಾಂತಿ ಪಡೆಯೋಣ.
ಸಾತ್ವಿಕ ವಿಚಾರ, ಸಂತೃಪ್ತಿ ಮತ್ತು ಸಕಾರಾತ್ಮ ವಿಚಾರ ಇವು ನಮ್ಮ ಯಶಸ್ಸಿಗೆ ಬೆಳಕು ತೋರಿಸುವ ದಾರಿ ದೀಪಗಳೆಂದರೆ ತಪ್ಪಾಗದು.

********************************

One thought on “ಯಶಸ್ಸು ಮತ್ತು ಸಾಧನೆ

Leave a Reply

Back To Top