ಅಂಕಣ

ಗಜಲ್

ಜಯಶ್ರೀ.ಭ. ಭಂಡಾರಿ.

woman wearing black dress

ಸರಿದು ಹೋಯ್ತು ಮತ್ತೊಂದು ಪ್ರೇಮಿಗಳ ದಿನ
ಮರೆಯಲಾರೆ ನಾವಿಬ್ಬರೂ ಸಂಧಿಸಿದ ಆ ಸುದಿನ ಸಖನೇ

ಜೋರಾದ ಮಳೆ ಅಬ್ಬರಕ್ಕೆ ನಡುಗಿ ನಿಂತಿದ್ದೆ ಮರದ ಕೆಳಗೆ
ಸರಿ ಸಮಯಕೆ ಹಿತವಾಗಿ ಬಂದು ತುಂಬಿ ನಿಂತೆ ಮೈಮನ ಸಖನೇ

ಪ್ರೀತಿ ದೇವನಿಟ್ಟ ವರ ಅದಕೆ ನೀ ನನಗೆ ದಕ್ಕಿದೆ 
ನೀ ನಿಟ್ಟೆ ಹಣೆಗೆ ಚುಕ್ಕಿ ಅದಕೆ ಸಲ್ಲಿಸುವೆ ದೇವಗೆ ನಮನ ಸಖನೇ

ಪ್ರತಿ ಬಾರಿ ಈ ದಿನ ನಮ್ಮದೆ ಗುಲಾಬಿಯಲಿ ರಂಗಾಗಲು
ಹೊಸ ಚೈತನ್ಯ ತುಂಬಿ ಬರುತಿರಲು ಒಲವ ಗಾನ ಸಖನೇ.

ನೋವು ನಲಿವುಗಳನ್ನು ಸಮನಾಗಿ ಸ್ವೀಕರಿಸುವ ನಾವು
ಬದುಕು ಬಂಡಿಯಲಿ ಅಪರಂಜಿಗಳಾಗಿ ಮಾದರಿಯಾಗೋಣ ಸಖನೇ

ಪ್ರೇಮಿಗಳು ನಾವು ಪ್ರತಿದಿನ ಪ್ರತಿಕ್ಷಣ ಸಾಂಗತ್ಯದಲ್ಲಿ
ಒಂದೆ ದಿನದ ಆಚರಣೆ ಬೇಕಿಲ್ಲ ಈ ಜಯಳಿಗೆ ಸದಾ ನಿನ್ನದೇ ಧ್ಯಾನ ನಿಶಾಪಾನ ಸಖನೇ


man sitting on mountain peak

ನೀನಗೇಕೆ  ಅರಿವಾಗುತ್ತಿಲ್ಲ ನನ್ನ ಒಲವು ಮೌನವೇ
ನೀ ಹೀಗೆ ಮರೆತು ಕುಳಿತರೆ ಹೇಗೆ ಮೌನವೇ.

ಮನಸಿನಾಳಕಿಳಿದ ಈ ಪ್ರೀತಿ ಕೇವಲ ನೆಪವೇ
ನೋಡಿದಾಗಲೆಲ್ಲ ಹತ್ತಿರ ಬರ್ತಿದ್ದೆ ಮೌನವೇ.

ನೀ ಮೀಟಿದೆ ಹೃದಯದಿ ಹಿತವಾದ ನೆನಪೇ
ಅಳುಕಿಸಲಾರದು ಯಾವ ಶಾಯಿ ಮೌನವೇ

ಪ್ರೇಮಿಗಳು ನಾವು ಮರೆಯದಿರು ಜೀವವೇ.
ಅನುರಾಗವಿದು ದುಡುಕಿ ದೂರಾಗದಿರು ಮೌನವೇ.

ನೀನಿರದ ಸಂಭ್ರಮ ಯಾತಕೆ ಮನವೇ
ಎಂದಿಗಾದರೂ ಬಾ ಒಪ್ಪಿಕೊಳ್ಳುವೆ ಮೌನವೇ..

ಮೌನ ಮಾತಾಗಿ ಬಾ ಪ್ರೇಮ ಬೊಕ್ಕಸವೇ
ನೋವು ಮರೆತು ಮುತ್ತಾಗೋಣ ಮೌನವೇ.

ಜೀವನವೆಂಬ ಜೋಕಾಲಿ ಜೀಕೋಣ ಸಖನೇ
ಸುಖವೆನೆಂದು ಅರಿತು ಬೆರೆತು ಬಾಳೋಣ ಮೌನವೇ

ನೆಪವೆಂದು ಹೇಳಿ ತಲ್ಲಣಿಸದಿರು ದೊರೆಯೇ
ದೊರೆಸಾನಿ ಜಯಳಿಗೆ ನಿನ್ನೊಲುಮೆ ನೀಡು ಮೌನವೇ.

******************************

Leave a Reply

Back To Top