ಗಜಲ್..
ಬೆಳಕಿನ ದೀಪ ಹಚ್ಚುವ ಅವಳ ಕಣ್ಣುಗಳ ಸಿದಿಗೆಯ ಮೇಲೆ ನೋಡಲಾಗದೆ ಸೋಲುತ್ತಿದ್ದೇನೆ…
ಅವಳಿಲ್ಲದ ನನ್ನ ಮನದ ಕೀಲುಗಳಿಗೆ ಹಚ್ಚುವ ದವಾ ಯಾಕಾಗಿಬೇಕು ನನಗೂ ಕಫನ್ ತೊಡಿಸಿಬಿಡು ಸಾಕಿ…
ಗಜಲ್ ರತ್ನರಾಯಮಲ್ಲ ನಿನ್ನಯ ಬಾಹುಗಳಲ್ಲಿ ಇರುಳನ್ನು ಕಳೆಯುತಿರುವೆ ಹಗಲು ಕಾವಲಿಗಿದೆಮಧುಬನದ ರಸಮಂಚವನು ಜೋಡಿಸುತಿರುವೆ ಹಗಲು ಕಾವಲಿಗಿದೆ ಸಂಪ್ರದಾಯದ ಜೋಳಿಗೆಯಲ್ಲಿ ಪ್ರೇಮವನ್ನು ಬಂಧಿಸಿಡಬೇಡ ಚೆಲುವೆನಿನ್ನ ಮಡಿಲಲಿ ಚಂದದ ಚುಕ್ಕಿಗಳನು ಎಣಿಸುತಿರುವೆ ಹಗಲು ಕಾವಲಿಗಿದೆ ಪ್ರೀತಿಯ ರಸಸ್ವಾದ ಮುಗಿಯದ ಪಾಕ ಮಧುಶಾಲೆ ಅಡಗಿದೆ ನಿನ್ನೊಳಗೆನಿನ್ನಯ ಒಲವಿನ ಕೊಳದಲಿ ಈಜು ಕಲಿಯುತಿರುವೆ ಹಗಲು ಕಾವಲಿಗಿದೆ ನಿನ್ನ ಕೈ ಬಳೆಯ ಝೇಂಕಾರಕೆ ಮನದ ಕತ್ತಲ ಕೋಣೆಯು ಹೊಳೆಯುತಿದೆನಿನ್ನಯ ಸಾಂಗತ್ಯದಲಿ ರಸಸವಿ ಅನುಭವಿಸುತಿರುವೆ ಹಗಲು ಕಾವಲಿಗಿದೆ ಅನುರಾಗದ ಕಡಲಲಿ ಮುತ್ತುಗಳನ್ನು ಅರಸುತಿರುವನು ‘ಮಲ್ಲಿ’ ಹುಚ್ಚನಂತೆಮಿದುವಾದ ಶುಚಿ ಗರ್ಭಗುಡಿಯನು ಪ್ರವೇಶಿಸುತಿರುವೆ ಹಗಲು ಕಾವಲಿಗಿದೆ **************************************
ಗಜ಼ಲ್ ಅಮರೇಶ ಎಂಕೆ ಎನ್ನೆದೆಯ ಮರುಭೂಮಿಯಲ್ಲಿ ನಿನ್ನೊಲವಿನ ಓಯಾಸಿಸ್ ಕೇಳುತ್ತಿದ್ದೆನೀ ಮರೆತಿದ್ದರೆ ಮರಳಾಗಿ ಬಿಸಿಲಿಗೆ ಸವೆದು ಹುಡಿಯಾಗಿ ಹೋಗುತ್ತಿದ್ದೆ ಎನ್ನ ಬದುಕಿನಲ್ಲಿ ಎತ್ತರದ ಸ್ಥಾನ ಖಾಲಿ ಇಲ್ಲ ನೀನು ಆವರಿಸಿರುವಾಗನಡೆದ ಹೆಜ್ಜೆ ಗುರುತನು ಅಳಿಸಿ ಹೋಗಿದ್ದರೆ ನೆನಪಾಗಿ ಉಳಿಯುತ್ತಿದ್ದೆ ಬಣ್ಣ ಬಣ್ಣದ ಚಿಟ್ಟೆಯ ಚಿಕ್ಕ ಚಿಕ್ಕ ರೆಕ್ಕೆ ಬಡಿತ ಹೃದಯದ ಬಡಿತವಾಗಿದೆಸಹಿಸದೆ ಕಪ್ಪು ಚುಕ್ಕಿ ಜೀವನದಲ್ಲಿ ಜಾಗ ಕೇಳಿದ್ದರೆ ಕುರೂಪಿ ಆಗುತ್ತಿದ್ದೆ ಆ ಮುಗುಳುನಗುವು ಅಳಿಯದೆ ಉಳಿದುಬಿಟ್ಟಿದೆ ಕಣ್ಣರೆಪ್ಪೆಯ ಒಳಗೆಕನಸಾಗಿ ಕ್ಷಣಮಾತ್ರದಲ್ಲಿ ಕಾಣೆಯಾಗಿದ್ದರೆ ಅಪಜಯ ಹೊಂದುತ್ತಿದ್ದೆ ‘ಅಮರ’ಪ್ರೇಮಕ್ಕೆ ನಿನ್ನೆಸರನ್ನೇ ಮರುನಾಮಕರಣ ಮಾಡಬೇಕೆನಿಸಿದೆನಡೆವ ದಾರಿಗೆ ದೀಪವಾಗದಿದ್ದರೆ ಕತ್ತಲೆಯಲ್ಲಿ ಗುರಿ ಸೇರದೆ ಕೊರಗುತ್ತಿದ್ದೆ ****************************************
ಗಜಲ್ ಪ್ರಭಾವತಿ ಎಸ್ ದೇಸಾಯಿ ಮಾದಕ ಕಣ್ಣ ನೋಟ ಕಂಡು ಚಂದಿರ ಜೋಲಿ ಹೊಡೆಯುತಿದೆಈ ಸೆರಗಿನ ಚೆಲ್ಲಾಟ ನೋಡಿ ಮೋಡವು ತೇಲಾಡುತಿದೆ ಅವಳ ದೇಹ ಮಾಟ ಅರಿತು ಶಿಲ್ಪಿ ಶಿಲೆಯಲಿ ಕಲೆ ಅರಳಿಸಿದಮೈ ತುಂಬಿದ ಮದದ ರಂಗಿಗೆ ಮದರಂಗಿ ಕೆಂಪು ನಾಚಿತಿದೆ ಒಂದಾಗಿ ಬೆಸೆದ ಮಧುರ ಗಳಿಗೆಯು ಜೊತೆಯಾಗಿದೆ ಸದಾವಿಧಿಯ ಆಟ ಬಲ್ಲವರಾರು ಅಳಿಯದ ನೆನಪು ಕಾಡುತಿದೆ ಹರೆಯದ ವಯಸ್ಸು ಅವಳ ಪಡೆಯುವ ಕನಸು ಕಾಣುತ ಕಳೆದೆಆ ಯೌವನದ ದಿನಗಳನ್ನು ಮುಸ್ಸಂಜೆ ಮೆಲುಕು ಹಾಕುತಿದೆ “ಪ್ರಭೆ”ಯನು ಮರೆಯದ ಹೃದಯ ದಹಿಸುತಿದೆ ವಿರಹ ಜ್ವಾಲೆಯಲಿಮನ ಚಕೋರವಾಗಿ ಬೆಳದಿಂಗಳ ಹನಿ ಕುಡಿಯ ಬಯಸುತಿದೆ ******************************
ಕಾಫಿಯಾನ ಗಜಲ್ ಅಮೃತ ಎಂ ಡಿ ಅಪ್ಯಾಯಮಾನ ಒಲವ ಹಂಚುವ ಸರದಿ ನನ್ನದುಅಭೂತಪೂರ್ವ ಸಾನಿಧ್ಯ ನೀಡುವ ಗುಣ ನಿನ್ನದು ತುಸು ತುಂಟಾಟವ ಮರೆಮಾಚು ಲಜ್ಜೆ ಆವರಿಸುತ್ತದೆನಡುವಿನ ಒನಪಿನಲ್ಲಿ ಕಾಡಿಸುವುದ ಯಾರು ಕಲಿಸಿದ್ದು.? ಅಧರದಲ್ಲಿ ಏನು ಮಧು ಬಟ್ಟಲು ಅಡಗಿ ಕುಳಿತಿದ್ಯ..?ಚುಂಬಿಸುವ ಪರಿಗೆ ಮೊಗವೆಲ್ಲ ಕೆಂಪೇರಿ ನಲಿಯುವುದು ಶರಾಬಿನ ರಸವ ಹೀರಿದಂತೆ ಒಷ್ಠದಲ್ಲಿಯೂ ಇರುವುದ..?ಪಾಪ ಮೊಗ್ಗಿನಂತೆ ಮೃದು ಆಕೆ, ಸೊರಗಿ ಬಿಟ್ಟಾದು. ಅಮ್ಮು ಈ ಹೈದನ್ಯಾಕೋ ಬಿಡುಗಡೆ ನೀಡುವಂತಿಲ್ಲಮನವು ಅವನ ಆಲಿಂಗನದಲ್ಲಿ ನಕ್ಕು ಕುಣಿಯುವುದು.. ****************************************************
You cannot copy content of this page
Notifications