ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲೇಖಕರು  ಶ್ರೀ ಹರಿಹರ ಶಿವಕುಮಾರ
ಪ್ರಕಾಶಕರು ಹರಿವು ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು
ಬೆಲೆ 180 ರೂಪಾಯಿ
ವರ್ಷ 2026

ನಾಡಿನ ಹಿರಿಯ ಅನುಭಾವಿ ಚಿಂತಕರು ಸಾಹಿತಿಗಳೂ ಆದ ಶ್ರೀ ಹರಿಹರ ಶಿವಕುಮಾರ ಬೆಂಗಳೂರು ಇವರು ಹರಿವು ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಪ್ರಕಾಶಕರ ಮೂಲಕ ಅನನ್ಯ ಅಲ್ಲಮ ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿದ್ದು ವಚನ ಸಾಹಿತ್ಯದ ಮೌಲ್ಯವನ್ನು ಪಸರಿಸುವ ವೈಚಾರಿಕ ನೆಲೆಯಲ್ಲಿ ರೂಪಗೊಂಡ ಸಿದ್ಧಾಂತಗಳ ಚರ್ಚೆಗೆ ಅವಕಾಶ ಮಾಡಿಕೊಡುವ ಸಂಗ್ರಹಕ್ಕೆ ಯೋಗ್ಯವಾದ ಒಂದು ಸುಂದರ ಆಕರ ಗ್ರಂಥ.

ಶ್ರೀ ಹರಿಹರ ಶಿವಕುಮಾರ ಬೆಂಗಳೂರು ಇವರು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನವರು.
ವಚನ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಅಪರೂಪದ ಪ್ರಬುದ್ಧ ಪ್ರಾಮಾಣಿಕ ವ್ಯಕ್ತಿ.
ಅನನ್ಯ ಅಲ್ಲಮ ಎಂಬ ಕೃತಿಯಲ್ಲಿ ಇವರು ಅಲ್ಲಮ ಪ್ರಭುಗಳ 75 ಸರಳ ಸ್ಥಲ ಕಟ್ಟಿನ ವಚನಗಳನ್ನು ಆಯ್ಕೆ ಮಾಡಿದ್ದಾರೆ.

ಅಲ್ಲಮರ ವಚನ ವಿಶ್ಲೇಷಣೆ ಚಿಂತನೆ ನಿಜಕ್ಕೂ ಕಬ್ಬಿಣದ ಕಡಲೆ ಇದ್ದ ಹಾಗೆ. ಲೇಖಕರಿಗೂ ಅಲ್ಲಮರ ವಚನ ವಿಶ್ಲೇಷಣೆ ಒಂದು ಕಠಿಣ ಪರಿಶ್ರಮವೆಂದು ತಿಳಿದುಕೊಂಡು ತಮ್ಮದೇ ಆದ ಅನುಭವವನ್ನು ಸಂಕಲನದಲ್ಲಿ
ಪದ ಅರ್ಥ ,ವಚನಾರ್ಥ, ಪದಪ್ರಯೋಗಾರ್ಥ ಎಂಬ ಮೂರು ಭಾಗಗಳಲ್ಲಿ ಮಾಡಿದ್ದು ವಾಚಾರ್ಥ ಗೂಢಾರ್ಥ ಲಕ್ಷಾರ್ಥಗಳ ಕಡೆಗೆ ಗಮನ ಕೊಟ್ಟಿದ್ದಾರೆ. ಅಲ್ಲಮರ ಬೆಡಗಿನ ವಚನಗಳು ಮತ್ತು ಅವುಗಳಲ್ಲಿರುವ ಪದಗಳಿಗೆ ಸಮಾನವಾದ ಅರ್ಥ ಹುಡುಕುವ ಪ್ರಯತ್ನ ಇವರದ್ದಾಗಿದೆ. ನಂತರ ಸಾಂದರ್ಭಿಕವಾಗಿ ಆ ಬೆಡಗಿನ ಪದಗಳ ಅರ್ಥವನ್ನು ಇಂದಿನ ಜಗತ್ತಿಗೆ ಅನುಗುಣವಾಗಿ ಸಮಯೋಚಿತವಾಗಿ ಅರ್ಥೈಸುವ ಇವರ ಶೈಲಿ ತುಂಬಾ ಚೆನ್ನಾಗಿದೆ.

ಇವರ ನಿರಂತರ ಪರಿಶ್ರಮ ಹಾಗೂ ಶೃದ್ಧೆ ಅಲ್ಲಮರ ಬೆಡಗಿನ ವಚನಗಳನ್ನು ಸರಳವಾಗಿ ಅರ್ಥೈಸಲು ಒಂದು ಸುಂದರ ಆಕರ ಪುಸ್ತಕ ಕೃತಿಯನ್ನು ಲೋಕಾರ್ಪಣೆ ಮಾಡಿದ್ದು ಅತ್ಯಂತ ಅಪರೂಪದ ಪ್ರಬುದ್ಧ ಕಾರ್ಯವೆಂದೆನಿಸುತ್ತದೆ.
ವಚನಗಳ ಅರ್ಥಗಳ ವಿವರಣೆ ಇನ್ನಷ್ಟು ವಿಸ್ತರಣೆಗೊಂಡಿದ್ದರೆ ಇನ್ನೂ ಹೆಚ್ಚಿನ ಸೊಗಡು ಎದ್ದು ಕಾಣುತಿತ್ತು. ಇದು ಶ್ರೀ ಶಿವಕುಮಾರ ಅವರ ಪ್ರಥಮ ಕೃತಿಯಾಗಿದೆ.

ಮುಂದಿನ ದಿನಗಳಲ್ಲಿ ಅವರಿಂದ ಇನ್ನೂ ಹೆಚ್ಚು ಹೆಚ್ಚು ಕೃತಿಗಳು ಲೋಕಾರ್ಪಣೆಯಾಗಲಿ ಎಂದು ಹಾರೈಸುತ್ತೇನೆ.


About The Author

2 thoughts on “ಶ್ರೀ ಹರಿಹರ ಶಿವಕುಮಾರ್‌ ಅವರ “ಅನನ್ಯ ಅಲ್ಲಮ” ಅವಲೋಕನ ಡಾ.ಶಶಿಕಾಂತ್‌ ಪಟ್ಟಣ”

  1. ಶ್ರೀ ಹರಿಹರ ಶಿವಕುಮಾರ ಅವರು ಬರೆದ ಅನನ್ಯ ಅಲ್ಲಮ ಪುಸ್ತಕದ ಬಗೆಗೆ ಡಾ. ಶಶಿಕಾಂತ ಪಟ್ಟಣ ಸರ್ ಅವರ ಅವಲೋಕನ ಅತ್ಯುತ್ತಮವಾಗಿ ಮೂಡಿ ಬಂದಿದೆ

    ಸುತೇಜ

Leave a Reply

You cannot copy content of this page

Scroll to Top