ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಮುತ್ತಿನಂತೆ ಮಿನುಗುವ ನಗು ನಿನ್ನದು ಗೆಳೆಯ
ಮನದಾಳದಿ ಮೂಡಿದ ಸೌಂದರ್ಯ ನೀ ಗೆಳೆಯ

ಸಾಗರದ ಗರ್ಭದಿ ಹುಟ್ಟಿದ ಅಮೂಲ್ಯ ರತ್ನ ನೀನು
ನನ್ನ ಹೃದಯದೊಳಗಿನ ಪ್ರೀತಿಯಂತೆ ಶುದ್ಧ ನೀನು

ಕನಸಿನ ಕಿರಣದಲ್ಲಿ ಹೊಳೆಯುವ ಮುತ್ತಿನ ಹೊಳೆ
ನಿನ್ನ ಕಂಗಳಲ್ಲಿ ಕಾಣುವ ಪ್ರೀತಿಯ ಮುತ್ತಿನ ಮಳೆ

ನಿಶ್ಶಬ್ದದ ಮಾತುಗಳಲ್ಲಿ ಮೂಡುವ ಸೊಗಸಿದು
ಮುತ್ತಿನ ಲೆಕ್ಕ ಬಾಕಿ ಇಟ್ಟಿಹುದೇನು ನಿನ್ನ ಮನಸದು

ಜೀವನ ಸಾಗರದಿ ನೀನೇ ನನ್ನ ಮೊದಲ ಮುತ್ತು
ನಿನ್ನ ಜೊತೆಗಿದ್ದರದೆ ಕಾವ್ಯಧರೆಗೆ ಸತ್ಯ ಸುಖವು


About The Author

1 thought on ““ನೀನೊಂದು ಮುತ್ತು” ಕಲ್ಪನಾ ಎಸ್‌ ಪಾಟೀಲ ಕವಿತೆ”

Leave a Reply

You cannot copy content of this page

Scroll to Top