ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಊರ ಬಿಟ್ಟು ದೂರಾಚೆ ಹಾಳು ಸುಡುಗಾಡಂತೆ
ಅದ್ಯಾಕೋ ಯಾರಿಗೂ ಇಷ್ಟವಲ್ಲದ ಜಾಗವಂತೆ
ಇಲ್ಲ್ಯಾರಿಗೂ ಯಾವುದೇ ಭೇದವಿಲ್ಲವಂತೆ
ಹಾಸಿ ಹೊದ್ದಿಕೊಳ್ಳಲಿರುವುದೊಂದೆ ಮಣ್ಣಿನ ಮುದ್ದೆಯಂತೆ

ಮನುಷ್ಯನ ಎಲ್ಲದಕ್ಕೂ ಪೂರ್ಣವಿರಾಮ ಇಲ್ಲಿ
ಇದ್ದಾಗ ನಾನೇ ಎನ್ನುವ ಭರದಲ್ಲಿ
ಬೀದಿಯು ನಮ್ಮದಲ್ಲ ಎನ್ನುತ ಉಗಿಯುವನಲ್ಲಿ
ನಾನು ನನ್ನದೆನ್ನುವ ಸ್ವಾರ್ಥದ ವ್ಯಾಮೋಹದಲ್ಲಿ.

ನಶ್ವರ ಕಾಯವ ಕಾಯಕಕ್ಕಾಗಿ ಮೀಸಲಿಡು
ಪರೋಪಕಾರಾರ್ಥಂ ಇದಂ ಶರೀರಂ ಮರೆಯದಿರು
ಸಮಾಜದ ಉಪಯೋಗಕ್ಕಾಗಿ ಜೀವಿಸಿ ನೋಡು
ಕಾಯಕದಲ್ಲೇ ಕೈಲಾಸವ ಕಾಣುತಿರು.

ಪ್ರತಿಫಲ‌ ಬಯಸದೆ ಸೇವೆಯ ಮಾಡುತಿರು
ಕಂಗಳ ಕೊಡದಿದ್ದರೂ ಅನ್ಯರ ಕಣ್ಗಳ‌ ಕೀಳದಿರು
ನಡೆಸಲಾಗದಿದ್ದರೂ ಬೆಳಕಿನ‌ ಮಾರ್ಗ ತೋರಿಸು
ಜೊತೆ ನಡೆಯಲಾಗದಿದ್ದರೂ ಎಡರು ತೊಡರಾಗದಿರು.

ದೇಹವ ನಂಬಿ ಬದುಕು ನಡೆಸುವ ಮನುಜನು
ಮಣ್ಣಲಿ ಮಣ್ಣಾಗುವ ಮುನ್ನ ನಾಲ್ವರ ಬಾಯಲ್ಲಿರು ನೀನು
ಅಳಿಯದೆ ಉಳಿಯುವವು ಮಾನವೀಯ ಮೌಲ್ಯಗಳಲ್ಲವೇನು!
ಸತ್ಯದ ಮಾರ್ಗದೊಳು ನಡೆ ಅರಿತು ನೈಜತೆಯನು.


About The Author

2 thoughts on “ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಮಣ್ಣಿಗೆ ಭೇದವಿಲ್ಲ””

Leave a Reply

You cannot copy content of this page

Scroll to Top