ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಡಾ.ರೇಖಾ ಉದಯ್‌ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ್‌ ಗಜಲ್ ನಿನ್ನೊಳಗಿನ ಸೆಳೆತಕ್ಕೆ ಸೋತಿದ್ದೇನೆ ಕವಿತೆನನ್ನೊಳಗಿನ ಭಾವನೆಗಳ ಹೇಳಿದ್ದೇನೆ ಕವಿತೆ ಸೋತು ಗೆದ್ದು ನನ್ನೊಳಗೆ ನೀನಾಗಿದ್ದೀಯಲ್ಲೇನಿನ್ನಿಂದ ನವೀರಾದ ಭಾವ ತಾಳಿದ್ದೇನೆ ಕವಿತೆ ದುಗುಡ  ದುಮ್ಮಾನಗಳ ಸರಸಿ ಆವರಿಸಿದ್ದಿಯಲ್ಲೇನೀನಿಲ್ಲದ ನಾನು ಶೂನ್ಯಳೆಂದು ಕೇಳಿದ್ದೇನೆ ಕವಿತೆ ಮುದುಡಿದ ಮನಸ್ಸಿಗೆ ಹೊಸ ಸಂಚಲನ ಮೂಡಿಸಿದೆನನ್ನಲ್ಲಿ ತಿಳಿಯದೆ ನೀ ಅವಿತದ್ದು ನೋಡಿದ್ದೇನೆ ಕವಿತೆ ಒಣಗಿದ ಮರದಲ್ಲಿ ಹೊಸ ಚಿಗುರ ಕಂಡಂತಾಗಿದೆರೇಖೂಳ ಮೇಲಿರುವ ಆ ಒಲವಿಗೆ ನಕ್ಕಿದ್ದೇನೆ ಕವಿತೆ ಡಾ.ರೇಖಾ ಉದಯ್

ಡಾ.ರೇಖಾ ಉದಯ್‌ ಅವರ ಗಜಲ್ Read Post »

ನಿಮ್ಮೊಂದಿಗೆ

ಸುನಂದ ಅರುಣ್ ಕುಮಾರ್ ಗೋಸಿ ಅವರಿಂದ”ದೇವರ ದಾಸಿಮಯ್ಯ ಅವರ ವಚನಗಳ ಪ್ರಸಾರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ” ಗೊರೂರು ಅನಂತರಾಜು

ವಚನ ಸಂಗಾತಿ ಗೊರೂರು ಅನಂತರಾಜು ಸುನಂದ ಅರುಣ್ ಕುಮಾರ್ ಗೋಸಿ  “ದೇವರ ದಾಸಿಮಯ್ಯ ಅವರ ವಚನಗಳ ಪ್ರಸಾರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ” ಶ್ರೀಮತಿ ಸುನಂದ ಅರುಣ್ ಕುಮಾರ್ ಗೋಸಿ ಅವರು ಆದ್ಯ ವಚನಕಾರ ದೇವರ ದಾಸಿಮಯ್ಯನವರ ಎಲ್ಲಾ 176 ವಚನಗಳನ್ನು ಪ್ರಸಿದ್ಧ ಗಾಯಕ ಗಾಯಕಿಯರಿಂದ ಹಾಡಿಸಿ ಭಾವಾಥ೯ ಸಹಿತ ದೃಶ್ಯಿಕರಿಸಿ ಯೂ ಟ್ಯೂಬ್ ನಲ್ಲಿ ಹಾಕಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದಾರೆ. ಶ್ರೀಮತಿ ಸುನಂದ ಅರುಣ್ ಕುಮಾರ್ ಗೋಸಿಯವರ ತಂದೆ ಶೇಷಾದ್ರಿ ಮತ್ತು ತಾಯಿ ಕಮಲಮ್ಮನವರು. ಇವರು ಬೆಂಗಳೂರಿನ ನಿವಾಸಿಗಳಾಗಿದ್ದು, ಪತಿ ಅರುಣ್ ಕುಮಾರ್ ರವರು ಇಂಜಿನಿಯರಿಂಗ್ ವೃತ್ತಿಯಲ್ಲಿ ಸೇವೆ ಸಲ್ಲಿಸಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಮಕ್ಕಳಾದ ಆಕಾಶ್, ಮಹೇಶ್, ಸೊಸೆ ಐಶ್ವರ್ಯ, ಸ್ನಾತಕೋತ್ತರ ಪದವಿ ಮುಗಿಸಿ, ಮೊಮ್ಮಗ ಆವಿಯನ್ ಅಮೇರಿಕದಲ್ಲಿ ನೆಲಿಸಿದ್ದಾರೆ. ಇವರು ಸಮಾಜದ ಕಳಕಳಿಯುಳ್ಳವರಾಗಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜದ ಏಳಿಗೆಯ ಸದುದ್ದೇಶದಿಂದ ದೇವಾಂಗ ಇತಿಹಾಸವನ್ನು ಸಂಗ್ರಹಿಸಿ, ತಾವೇ ನಿರ್ಮಿಸಿದ ಗೋಸಿ ಯೂನಿವರ್ಸ ( Gosi Universe ) ಎಂಬ ಅಂತರ್ಜಾಲ ತಾಣದಿಂದ (Website) ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತು ದೇವಲ ಮಹರ್ಷಿ ಹಾಗು ದಾಸಿಮಯ್ಯನವರ ಜೀವನ ಚರಿತ್ರೆಯನ್ನು ವಿಕಿಪೀಡಿಯದಲ್ಲಿ ದಾಖಲಿಸಿದ್ದಾರೆ.ವಚನ ಸಾಹಿತ್ಯಕ್ಕೆ ಭದ್ರಬುನಾದಿಯನ್ನು ಹಾಕಿ ಬಸವಾದಿ ಪ್ರಮಥರಿಗೆ ಮಾರ್ಗದರ್ಶನ ಮಾಡಿದ ಆದ್ಯ ವಚನಕಾರ, ವಚನ ಬ್ರಹ್ಮ , ಶ್ರೀ ದೇವರ ದಾಸಿಮಯ್ಯನವರು ರಚಿಸಿರುವ ಎಲ್ಲಾ 176 ವಚನಗಳನ್ನು ರಾಗ ಸಂಯೋಜನೆ ಮಾಡಿಸಿ, ಮೊಟ್ಟಮೊದಲ ಬಾರಿಗೆ “ವಚನ ಬ್ರಹ್ಮನ ವಚನಾಮೃತ” ಎಂಬ ನಾಮದಿಂದ, ವಚನ, ಗಾಯನ, ಮತ್ತು ಭಾವಾರ್ಥ ಸಹಿತ ದೃಶ್ಯೀಕರಿಸಿ, ಸಾಹಿತ್ಯ ಲೋಕ ಹಾಗೂ ಸಮಾಜಕ್ಕೆ ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಲೋಕ ಕಲ್ಯಾಣಾರ್ಥಕ್ಕಾಗಿ ನಿರ್ಮಿಸಿದ ಈ ಮಹತ್ಕಾರ್ಯವನ್ನು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅವರು ದಾಖಲಿಸಿ ಸನ್ಮಾನಿಸಿದ್ದಾರೆ.ಇದರ ಸಂಪೂರ್ಣ ನಿರ್ದೇಶನ ಹಾಗೂ ನಿರ್ಮಾಣವನ್ನು, ಅವರ ಕುಟುಂಬದ ಸಹಕಾರದೊಂದಿಗೆ ಲೋಕಾರ್ಪಣೆ ಮಾಡಿ.ಈ ಎಲ್ಲಾ ವಚನಗಳನ್ನು ನಿರಂತರವಾಗಿ ವೀಕ್ಷಿಸಲು, Gosi Universe, You tube Channel ನಲ್ಲಿ ಪ್ರಸಾರ ಮಾಡಿರುತ್ತಾರೆ. ಹಾಗು ಮೊಟ್ಟ ಮೊದಲ ಬಾರಿಗೆ ದಾಸಿಮಯ್ಯ ವಚನಗಳನ್ನು, ದೂರದರ್ಶನ ಚಂದನ ವಾಹಿನಿಯಲ್ಲಿ ಕೂಡ ಪ್ರಸಾರ ಮಾಡಿಸಿರುತ್ತಾರೆ. ಇವರ ಈ ಮಹತ್ಕಾರ್ಯವನ್ನು ಗುರುತಿಸಿ ಹಲವಾರು ಸಂಘ – ಸಂಸ್ಥೆಗಳು ಪ್ರಶಸ್ತಿ ಸನ್ಮಾನಗಳನ್ನು ನೀಡಿ ಗೌರವಿಸಿವೆ. ಮೇಡಂ ಕುಟುಂಬದ ಈ ಮಹತ್ಕಾರ್ಯ ಸಮಾಜ ಮೆಚ್ಚುವಂತಹದ್ದಾಗಿದೆ. ಗೊರೂರು ಅನಂತರಾಜು, ಹಾಸನ9449462879ವಿಳಾಸ: ಹುಣಸಿನಕೆರೆ ಬಡಾವಣೆ,29ನೇ ವಾರ್ಡ್, 3 ನೇ ಕ್ರಾಸ್,ಹಾಸನ – 573 201

ಸುನಂದ ಅರುಣ್ ಕುಮಾರ್ ಗೋಸಿ ಅವರಿಂದ”ದೇವರ ದಾಸಿಮಯ್ಯ ಅವರ ವಚನಗಳ ಪ್ರಸಾರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ” ಗೊರೂರು ಅನಂತರಾಜು Read Post »

ಕಾವ್ಯಯಾನ

ಮೂಗಪ್ಪ ಗಾಳೇರ ಅವರ ಕವಿತೆ “ಗೆದ್ದಿದ್ದು ನನ್ನ ಬುದ್ಧನಲ್ಲದೇ ಮತ್ತಿನ್ಯಾರು….?”

ಕಾವ್ಯ ಸಂಗಾತಿ ಮೂಗಪ್ಪ ಗಾಳೇರ “ಗೆದ್ದಿದ್ದು ನನ್ನ ಬುದ್ಧನಲ್ಲದೇ ಮತ್ತಿನ್ಯಾರು….?” ಬಿದ್ದ ವೈರಿಗಳನ್ನಷ್ಟೇ ಅಲ್ಲಬದ್ಧ ವೈರಿಗಳಿಗೂ ಬೆಚ್ಚಿ ಬೀಳಿಸಿದ್ದ ಬುದ್ಧಮಾಡಿದ್ದು ರಕ್ತ ಹರಿಸುವ ಯುದ್ಧವನಲ್ಲಪ್ರೀತಿ ತುಂಬಿ ಸ್ನೇಹ ಬೆಳೆಸುವ ಧರ್ಮದ ನಡಿಗೆ ಬುದ್ಧ ನಡೆದ ಹಾದಿ ಉದ್ದಗಲಕ್ಕೂ ಜನಸಸಾಗರವೋ ಜನಸಾಗರನಿಮ್ಮ ಯುದ್ಧದ ಪಿರಿಂಗಿಗಳುಆಕಾಶದೆತ್ತರಕ್ಕೆ ಚಿಮ್ಮುತ್ತ ಬೆಂಕಿಯ ಕೆಂಡವನ್ನು ಉಗುಳುತಿದ್ದರೆಬುಧ್ದನ ಉಪದೇಶಗಳುಆ ಬೆಂಕಿಯ ಕೆಂಡದಲ್ಲಿ ಶಾಂತಿಯ ತೋಟವನ್ನು ಸೃಷ್ಟಿಸುತ್ತಿವೆ ಯುದ್ಧ ಗೆದ್ದಿತು ಎನ್ನುವುದಕ್ಕೆನಿಮ್ಮ ಪಿರಿಂಗಿಯ ಮದ್ದು ಗುಂಡುಗಳು ಹರಿಸಿದ ರಕ್ತದ ಚರಿತ್ರೆಗೆಸಡ್ಡು ಹೊಡೆದು ನಿಂತಿದ್ದುಮುಗಿಲೆತ್ತರಕ್ಕೂ ಚಿಮ್ಮಿ ಶಾಂತಿ ಮಳೆ ಸುರಿಸಿದ್ದುನನ್ನ ಬುದ್ಧನ ಮೌನ ಮತ್ತು ಅಹಿಂಸೆ ಅಗೋ ಅಲ್ಲೋಡಿನನ್ನ ಬುದ್ಧನ ಮೌನದ ಮಳೆಗೆನಿಮ್ಮ ಪಿರಂಗಿಯ ಅವಶೇಷಗಳುಸುಟ್ಟ ಇಟ್ಟಿಗೆಗಳಾಗಿವೆಹೆದರ ಬೇಡಿ ಅವುಗಳಿಗೆ ಒಂದಿಷ್ಟುಬುದ್ಧನ ನಾಲ್ಕು ಆರ್ಯ ಸತ್ಯಗಳನ್ನ ಲೇಪಿಸಿದರೆಮತ್ತೆ ಆಕಾಶದೆತ್ತರಕ್ಕೆ ನಿಮ್ಮ ಪಿರಿಂಗಿಗಳು ಸಿಡಿಯಬಹುದುಆಗ ಸಿಡಿಯುವ ಪಿರಿಂಗಿಗಳಿಂದ ಸುರಿಯುವುದು ಬೆಂಕಿ ಉಂಡೆಯಲ್ಲನನ್ನ ಬುದ್ಧನ ಶಾಂತಿ ಮತ್ತು ಅಹಿಂಸೆಯ ಮಳೆಆಗ ಯುದ್ಧದಲ್ಲಿ ಗೆದ್ದಿದ್ದು ನನ್ನ ಬುದ್ಧನಲ್ಲದೇ ಮತ್ತಿನ್ಯಾರು….? ಮೂಗಪ್ಪ ಗಾಳೇರ

ಮೂಗಪ್ಪ ಗಾಳೇರ ಅವರ ಕವಿತೆ “ಗೆದ್ದಿದ್ದು ನನ್ನ ಬುದ್ಧನಲ್ಲದೇ ಮತ್ತಿನ್ಯಾರು….?” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಮಣ್ಣಿಗೆ ಭೇದವಿಲ್ಲ”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಮಣ್ಣಿಗೆ ಭೇದವಿಲ್ಲ” ಊರ ಬಿಟ್ಟು ದೂರಾಚೆ ಹಾಳು ಸುಡುಗಾಡಂತೆಅದ್ಯಾಕೋ ಯಾರಿಗೂ ಇಷ್ಟವಲ್ಲದ ಜಾಗವಂತೆಇಲ್ಲ್ಯಾರಿಗೂ ಯಾವುದೇ ಭೇದವಿಲ್ಲವಂತೆಹಾಸಿ ಹೊದ್ದಿಕೊಳ್ಳಲಿರುವುದೊಂದೆ ಮಣ್ಣಿನ ಮುದ್ದೆಯಂತೆ ಮನುಷ್ಯನ ಎಲ್ಲದಕ್ಕೂ ಪೂರ್ಣವಿರಾಮ ಇಲ್ಲಿಇದ್ದಾಗ ನಾನೇ ಎನ್ನುವ ಭರದಲ್ಲಿಬೀದಿಯು ನಮ್ಮದಲ್ಲ ಎನ್ನುತ ಉಗಿಯುವನಲ್ಲಿನಾನು ನನ್ನದೆನ್ನುವ ಸ್ವಾರ್ಥದ ವ್ಯಾಮೋಹದಲ್ಲಿ. ನಶ್ವರ ಕಾಯವ ಕಾಯಕಕ್ಕಾಗಿ ಮೀಸಲಿಡುಪರೋಪಕಾರಾರ್ಥಂ ಇದಂ ಶರೀರಂ ಮರೆಯದಿರುಸಮಾಜದ ಉಪಯೋಗಕ್ಕಾಗಿ ಜೀವಿಸಿ ನೋಡುಕಾಯಕದಲ್ಲೇ ಕೈಲಾಸವ ಕಾಣುತಿರು. ಪ್ರತಿಫಲ‌ ಬಯಸದೆ ಸೇವೆಯ ಮಾಡುತಿರುಕಂಗಳ ಕೊಡದಿದ್ದರೂ ಅನ್ಯರ ಕಣ್ಗಳ‌ ಕೀಳದಿರುನಡೆಸಲಾಗದಿದ್ದರೂ ಬೆಳಕಿನ‌ ಮಾರ್ಗ ತೋರಿಸುಜೊತೆ ನಡೆಯಲಾಗದಿದ್ದರೂ ಎಡರು ತೊಡರಾಗದಿರು. ದೇಹವ ನಂಬಿ ಬದುಕು ನಡೆಸುವ ಮನುಜನುಮಣ್ಣಲಿ ಮಣ್ಣಾಗುವ ಮುನ್ನ ನಾಲ್ವರ ಬಾಯಲ್ಲಿರು ನೀನುಅಳಿಯದೆ ಉಳಿಯುವವು ಮಾನವೀಯ ಮೌಲ್ಯಗಳಲ್ಲವೇನು!ಸತ್ಯದ ಮಾರ್ಗದೊಳು ನಡೆ ಅರಿತು ನೈಜತೆಯನು. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಮಣ್ಣಿಗೆ ಭೇದವಿಲ್ಲ” Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಎದೆಗಡಲನು ಮಥಿಸಿ ಪಡೆದಿಹ ಅಮೃತವದು ಪ್ರೀತಿಭಾವದಲೆಯು ದಡವ ಸೇರಿದ ಸಂಗಮವದು ಪ್ರೀತಿ ತೋರಿಕೆಗೆ ತಳೆದ ಹೂ ಹೇರಿಕೆಗೆ ಹಬ್ಬಿದ ಬಳ್ಳಿಯಲ್ಲನೆಲ ಮುಗಿಲುಗಳ ನೆಚ್ಚಿ ಬಿರಿದ ಕುಸುಮವದು ಪ್ರೀತಿ ಅಹಮಿಕೆಯ ಅರಿವಿಲ್ಲ ಸಂಶಯಗಳ ಸುಳಿವೆನಿತಿಲ್ಲಗುಡಿಸಲನೇ ಗುಡಿಯ ಮಾಡಿದ ಪವಾಡವದು ಪ್ರೀತಿ ಹೆಚ್ಚು ಕಡಿಮೆ ಎಂಬ ಗಡಿಗಳಿಲ್ಲ ಗಡಿಬಿಡಿಯೂ ಇಲ್ಲಆಡಂಬರಕಾತುಕೊಳ್ಳದ ಸುಗ್ಗಿ ಸಂಭ್ರಮವದು ಪ್ರೀತಿ ಈ ಒಲವ ಜನನಕೆ ಮಹೂರ್ತ ಘಳಿಗೆಗಳು ಬೇಕಿಲ್ಲಬೆಸೆದ ಮನಗಳಂಗಳದ ನಿತ್ಯದ ಉತ್ಸವವದು ಪ್ರೀತಿ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

You cannot copy content of this page

Scroll to Top