ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ, ಕಾವ್ಯಯಾನ

ಡಾ. ದೇವರಾಜು ಮಹಾರಾಜು ಅವರ ತೆಲುಗು ಕವಿತೆ”ಜಲಭಾಷೆ” ಕನ್ನಡಾನುವಾದ ರಂಗನಾಥ ರಾಮಚಂದ್ರರಾವು

ಅನುವಾದ ಸಂಗಾತಿ “ಜಲಭಾಷೆ” ತೆಲುಗು ಮೂಲ:ಡಾ. ದೇವರಾಜು ಮಹಾರಾಜು ಕನ್ನಡಾನುವಾದ ರಂಗನಾಥ ರಾಮಚಂದ್ರರಾವು ಕವನ ಒಂದು ಪ್ರತ್ಯೇಕ ಪರಿಭಾಷೆಅದು ಎಲ್ಲಾ ಭಾಷೆಗಳಿಗೂ ಬಗ್ಗುತ್ತದೆಎಲ್ಲಾ ಭಾಷೆಗಳನ್ನು ಬಗ್ಗಿಸಿಕೊಳ್ಳುತ್ತದೆತಲೆ ಬಗ್ಗಿಸಿದಂತೆ ಬಗ್ಗಿಸಿ, ಎಲ್ಲಾ ಪ್ರಕಾರಗಳನ್ನುತನ್ನ ರೆಕ್ಕೆಗಳ ಕೆಳಗೆ ಎಳೆದುಕೊಳ್ಳುತ್ತದೆಕಾಲದೊಂದಿಗೆ ಸಾಗುತ್ತಾಒಂದೊಂದು ಸಲ ಕಾಲವನ್ನೂ ದಾಟಿಹೋಗುತ್ತದೆಕವನ ಒಂದು ಜಲ ಭಾಷೆಅದು ಯಾವ ಪಾತ್ರೆಯಲ್ಲಾದರೂ ತುಂಬುತ್ತದೆ –ಒದಗುತ್ತದೆ ಕವನ ಒಂದು IDEOGRAMಅದು ಛಂದಸ್ಸಿನಲ್ಲಿ ಬದುಕುವುದೇಮಾತ್ರಾ ಛಂದಸ್ಸಿನಲ್ಲಿ ಬದುಕುವುದೇವಚನದಲ್ಲಿ ಬದುಕುತ್ತದೆ ಎಂಬ ಚರ್ಚೆಎಷ್ಟು ಅರ್ಥರಹಿತವೆಂದರೆ …ಜೀವವು ಯಾವ ರೀತಿಯ ಜೀವಿಯಾಗಿ ನಿಲ್ಲುತ್ತದೆಪ್ರಾಣಿಗಳು ಹುಟ್ಟುತ್ತವೆ, ಸಾಯುತ್ತವೆ , ಆದರೆ …ನಿರಂತರವಾಗಿ ಮುಂದುವರಿಯುವುದು ಜೀವಶಕ್ತಿ ಮಾತ್ರವೇ!ಪ್ರಕಾರಗಳೂ ಅಷ್ಟೇ !!ಅಂತರ್ಗತವಾಗಿ ಸಾಗುವುದು ಕವನಶಕ್ತಿ ಮಾತ್ರವೇ!ಅದೊಂದೇ ಕಾಲಕ್ಕೂ ಜೀವನಕ್ಕೂ ಮಾನವತೆಗೂತಳಮಟ್ಟದಲ್ಲಿ ಹರಿಯುವುದುಆಧಾರವಾಗಿ ಇರುತ್ತಿರುವುದುಕವನ ಒಂದು ಫ್ರತ್ಯೇಕ ಭಾಷೆಅದು ಎಲ್ಲಾ ಜೀವಿಗಳ ಜೀವ ಭಾಷೆಗಳಲ್ಲಿ ಪ್ರಕಟಗೊಳ್ಳುತ್ತದೆ ! ತೆಲುಗುಮೂಲ: ಡಾ. ದೇವರಾಜು ಮಹಾರಾಜುಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು

ಡಾ. ದೇವರಾಜು ಮಹಾರಾಜು ಅವರ ತೆಲುಗು ಕವಿತೆ”ಜಲಭಾಷೆ” ಕನ್ನಡಾನುವಾದ ರಂಗನಾಥ ರಾಮಚಂದ್ರರಾವು Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ “ಕ್ರಾಂತಿಕಾರ ಸಂತ ಶ್ರೇಷ್ಠ ತತ್ವ ಪದಕಾರ ಶ್ರೀ ತಿಂಥಣಿ ಮೌನೇಶ್ವರರು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ “ಕ್ರಾಂತಿಕಾರ ಸಂತ ಶ್ರೇಷ್ಠ ತತ್ವ ಪದಕಾರ ಶ್ರೀ ತಿಂಥಣಿ ಮೌನೇಶ್ವರರು” ಕರ್ನಾಟಕವು ಹಲವು ಶರಣರ ಸಂತರ ದಾರ್ಶನಿಕರ ನೆಲೆಬೀಡು.  ಸಂಪ್ರದಾಯಸ್ಥ ವಿಶ್ವ ಕರ್ಮರ  ಕುಟುಂಬದಲ್ಲಿ ಜನಿಸಿ ಅತ್ಯಂತ ವೈಚಾರಿಕತೆಯ ವಚನಗಳನ್ನು ರಚಿಸಿ ಸಾಮಾಜಿಕ ಧಾರ್ಮಿಕ ಅಂಕು ಡೊಂಕುಗಳನ್ನು ತಿದ್ದಿ ಟೀಕಿಸುವ ವಿಡಂಬಿಸುವ ತನ್ನ ಹುಟ್ಟು ಕುಲದ ಜನರನ್ನೇ ಟೀಕಿಸಿ ಎಚ್ಚರಿಸುವ ದಿಟ್ಟ ಶರಣ ಸಂಸ್ಕೃತಿಯ ವಾರಸುದಾರ ತಿಂಥಣಿ ಮೌನೇಶ್ವರ ಅಥವಾ ಮೌನಪ್ಪ ಮೌನೋದ್ದಿನ ಎಂಬ ಬೇರೆ ಬೇರೆ ಸಮುದಾಯದ ಪ್ರೀತಿಗೆ ಭಕ್ತಿಗೆ ಪಾತ್ರರಾದವರು ಮೌನೇಶ್ವರರು. ಪೌರಾಣಿಕ ಹಿನ್ನೆಲೆ ಅಂದಿನ ಗುಲಬರ್ಗಾ ಜಿಲ್ಲೆಯ ಇವತ್ತಿನ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ದೇವರಗೋನಾಳ  ಎಂಬ ಗ್ರಾಮದ ಪಂಚಾಳ ಅಥವಾ ವಿಶ್ವಕರ್ಮ ಕುಲದಂಪತಿಗಳಾದ ಶೇಷಪ್ಪ ಆಚಾರ್ಯ ಮತ್ತು ಶೇಷಮ್ಮರೆಂಬ  (ಇವರಿಗೆ ಹಾವಪ್ಪ ಮತ್ತು ಹಾವಕ್ಕ ಎಂದು ಕರೆಯಲಾಗುತ್ತಿತ್ತು) ದಂಪತಿಗಳಿದ್ದರು. ಅವರಿಗೆ ಬಹಳಕಾಲ ಮಕ್ಕಳಾಗಿರಲಿಲ್ಲ. ಶೀಲೆ ಶೇಷಮ್ಮಳು ಆ ಊರಿನ ಆದಿಲಿಂಗೇಶ್ವರ ದೈವಕ್ಕೆ 12 ವರ್ಷಗಳ ಕಾಲ ದಿನನಿತ್ಯವೂ ಬೆಳಗ್ಗೆ ಪೂಜೆಗೈದು ಬರುತ್ತಿದ್ದಳು. ಕೊನೆಗೊಂದುದಿನ ಗಂಡನಿಗೆ ಸಂಶಯ ಬಂದು ಅವಳನ್ನು ಹಿಂಬಾಲಿಸಿದಾಗ ಅವನಿಗೆ ದೃಗ್ಗೋಚರವೇ ಎದುರಾಯಿತು. ಏನೆಂದರೆ ಶೇಷಮ್ಮಳು ಆದಿಲಿಂಗೇಶ್ವರನಿಗೆ ಎಂದಿನಂತೆ ಪೂಜೆಗೈದು ‘ತಂದೆ ಹನ್ನೆರಡು ವರ್ಷಗಳ ಕಾಲ ನಿನ್ನ ಪೂಜೆಗೈದಿರುವೆ ಈಗಲಾದರೂ ಮಕ್ಕಳ ಭಾಗ್ಯವನೀತ್ತು ಸಲಹು ತಂದೆ’ ಎಂದಾಗ ಸಾಕ್ಷಾತ್ ಶಿವನೇ ಪ್ರತ್ಯಕ್ಷವಾಗಿ “ಮಗಳೇ ಶೇಷಮ್ಮ ನೀನು ನನ್ನ ಪನ್ನಂಗಾಭರಣವಾದ್ದರಿಂದ ಆ ಬ್ರಹ್ಮನು ನಿನ್ನ ದೈವದಲ್ಲಿ ಸೃಷ್ಟಿ ಬೆಳೆಸುವ ಸಂತಾನ ಭಾಗ್ಯ ಫಲವನ್ನಿಡುವ ಸಾಹಸ ಮಾಡಲಿಲ್ಲ. ಆದಕಾರಣ ನಾನೇ ನಿನ್ನ ಮಗನಾಗಿ ನಾಳೆಯ ಉಷಾ ಕಾಲದಲ್ಲಿ ನಿನ್ನ ಮಗ್ಗುಲಲ್ಲಿ ಮಲಗಿರುವೆ” ಎಂದು ಹೇಳಿ ಪರಮಾತ್ಮನು ಅಂತರ್ಗತನಾಗುತ್ತಾನೆ. ಇದನ್ನೆಲ್ಲ ಪ್ರತ್ಯಕ್ಷವಾಗಿ ದೇಗುಲದ ಒಂದು ಕಂಬದ ಮರೆಯಲ್ಲಿ ನಿಂತು  ನೋಡುತ್ತಿದ್ದ ಶೇಷಮ್ಮಳ ಗಂಡ ಶೇಷಪ್ಪನ ಸಂಶಯವೆಲ್ಲವೂ ದೂರವಾಗಿ ಭಕ್ತಿಯ ಮಹಾಪೂರವು ಅವನ ಮನದಲ್ಲಿ ನೆಲೆಯಾಗುತ್ತದೆ ಎಂಬ ಐತಿಹ್ಯ ಪೌರಾಣಿಕ ಕಥೆಗಳಿಂದ ಮೌನೇಶ್ವರನ ಚಿತ್ರಣ ವ್ಯಕ್ತವಾಗಿದೆ. ನಂತರ ಪರಶಿವನೇ ಅಯೋನಿಜನಾಗಿ ಮೌನೇಶ್ವರರ ಅವತಾರದಿ ಚೆಲುವಿನ, ಚೆಂದದ, ಮುದ್ದಾದ ಮಗುವಿನ ರೂಪದಲ್ಲಿ ವರಪ್ರಸಾದವಾಗಿ ಧರೆಗಿಳಿದು ಬರುತ್ತಾನೆ ಎನ್ನುವ ಐತಿಹ್ಯವೂ ಇದೆ. ಜಗದ್ಗುರು ಶ್ರೀ ಮೌನೇಶ್ವರರು ಬರೀ ಮಹಿಮಾಪುರುಷರಲ್ಲದೆ ಕಾಲಜ್ಞಾನಿಗಳು, ವಚನಕಾರರು, ಸಮನ್ವತಾವಾದಿಗಳು, ಮಹಾನ್ ಮಾನವತಾವಾದಿಗಳೂ ಆಗಿದ್ದಾರೆ.  16ನೇ ಶತಮಾನದಲ್ಲಿ ಬರುವ ಶರಣರ, ವಚನಕಾರರ, ಸಂತರ ಸಾಲಿನಲ್ಲಿ ಮೌನೇಶ್ವರರು ಪ್ರಮುಖ ವಚನಕಾರರಾಗಿ ಕಂಡುಬರುತ್ತಾರೆ.  ಮೌನೇಶ್ವರರು ಒಟ್ಟು 796ಕ್ಕೂ ಅಧಿಕ ವಚನಗಳನ್ನು ಬರೆದಿದ್ದಾರೆ. ಮೌನೇಶ್ವರರು ತಮ್ಮ ಎಲ್ಲ ವಚನಗಳಲ್ಲಿ 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರ ಹೆಸರನ್ನು ಅಂಕಿತನಾಮವಾಗಿ ಬರೆದಿರುವುದನ್ನು ಕಾಣಬಹುದು. *ಭಾವೈಕ್ಯತೆಯ ಸಂತ* ಮೌನೇಶ್ವರರು ಹಿಂದೂ ಮುಸಲ್ಮಾನ ಧರ್ಮದ ಭಾವೈಕ್ಯತಾ ಸೂಚಕವಾಗಿ ಹೀಗೆ ಹೇಳಿದ್ದಾರೆ: “ಹಿಂದೂ ತುರುಕರಿಗೆ ಚಂದ್ರಮನೊಬ್ಬನೆ ನಿಂದಿಸಿದವನೇ ಅಧಮನು” ಎಂದು ತಮ್ಮ ವಚನವೊಂದರಲ್ಲಿ ಹೇಳಿದ್ದಾರೆ. ಹಿಂದೂ-ಮುಸ್ಲಿಂ ಸಾಮರಸ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತಿಂಥಿಣಿಯ ಮೌನೇಶ್ವರರು ತಮ್ಮ ಸರಳ ಸಜ್ಜನಿಕೆಯ ಆಚಾರ ವಿಚಾರಗಳಿಂದಲೇ ಎಲ್ಲರನ್ನೂ ಆಕರ್ಷಿಸಿದ್ದರು. ಇವರು ಲಕ್ಷ್ಮೇಶ್ವರ, ಉಳವಿ, ಕಲ್ಯಾಣ, ವಿಜಯಪುರ, ಶಾಹಪುರ, ಸುರಪುರ, ದೇವದುರ್ಗ, ಲಿಂಗನಬಂಡಿ, ವರವಿ, ಛಬ್ಬಿ, ರಾಚೋಟಿ, ಶಿರಸಂಗಿ, ತಿರುಪತಿ, ಕಾಶಿ, ಮುಂತಾದೆಡೆ ತಿರುಗಾಡಿ, ಸಾಮಾಜಿಕ ಸುಧಾರಣೆಯನ್ನು  ಮೆರೆದವರೆಂಬುದು ಇತಿಹಾಸ.  ವರವಿ ಮತ್ತು ತಿಂಥಿಣಿ ಸ್ಥಳಗಳಲ್ಲಿ ಇವರ ಹೆಸರಿನ ದೇವಾಲಯಗಳಿವೆ. ಬಿಜಾಪುರದ ಸುತ್ತಮುತ್ತ ಅನೇಕ ಗುಡಿಗಳಿವೆ. ಇವು ಹಿಂದೂ-ಮುಸ್ಲಿಂ ಬೆರೆತ ಶೈಲಿಗಳಲ್ಲಿವೆ. ಮೌನೇಶ್ವರರು ವಿಶ್ವಕರ್ಮ ಸಮಾಜದಿಂದ ಬಂದವರು. ದಕ್ಷಿಣ ಭಾರತದಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಜೀವನದುದ್ದಕ್ಕೂ ಸಾರಿದವರು ಮೌನೇಶ್ವರರೇ. ಅವರ ಒಂದು ಪದ್ಯ ಹೀಗಿದೆ- ‘|| ಓಂ ಏಕಲಾಖ್ ಐಂಸಿ ಹಜಾರ್ ಪಾಂಚೋ ಪೀರ್ ಪೈಗಂಬರ್ ಮೌನಾಧೀನ್ ಜಿತಾಪೀರ್ ಪೈಗಂಬರ್ ಮಾಧೀದೀ ಕಾಶೀಶೀಪತಿ ಗಂಗಾಧರ ಹರ ಹರ ಮಹಾದೇವ||’ ಮಹಮ್ಮದ್ ಪೈಗಂಬರ ಮತ್ತು ಗಂಗಾಧರ ಒಬ್ಬರೇ ಎಂದು ಮೌನೇಶ್ವರರು ಇದರಲ್ಲಿ ಸಾರಿದ್ದಾರೆ. ಈ ಮಾತಿನ ಅಖಂಡಾರ್ಥ ಮೌನೇಶ್ವರರ ಪದ್ಯದಲ್ಲಿದೆ. ಓಂ ಮತ್ತು ಅಲ್ಲಾ ಒಂದೇ ಎಂಬ ಅದ್ವಯಭಾವದ ಸಾಂಸ್ಕೃತಿಕ ಸಿದ್ಧಿಯನ್ನು ಮೊಳಗಿಸಿದ ಮಹಾಮಾನವತಾವಾದಿ, ಸಾಮಾಜಿಕ ಸಂತ ತಿಂಥಿಣಿ ಮೋನಪ್ಪಯ್ಯ! ಜನನ ತಿಂಥಿಣಿ ಮೌನೇಶ್ವರ ಎಂಬ ಹೆಸರಿನಲ್ಲಿ ಪ್ರಸಿದ್ಧಿಪಡೆದ ಇವರು ‘ಬಸವಣ್ಣ’ ಎಂಬ ಅಂಕಿತದಲ್ಲಿ ಹಲವಾರು ವಚನಗಳನ್ನು ಬರೆದಿದ್ದಾರೆ, ಹಂಪೆಯ ಎಮ್ಮೆ ಬಸವಣ್ಣನನ್ನು (ಕ್ರಿ.ಶ. 1510-1570) ವಚನದಲ್ಲಿ ನೆನೆದಿದ್ದಾರೆ. ವಿಜಯಪುರ ಜಿಲ್ಲೆಯ ಗೋಲಗೇರಿ ಎಂಬಲ್ಲಿದ್ದ 16ನೇ ಶತಮಾನದ ಕುರುಬಗೊಲ್ಲಾಳ ನನ್ನು ಮತ್ತೊಂದು ವಚನದಲ್ಲಿ ಸ್ಮರಿಸಿದ್ದಾರೆ. ಇವರೊಂದು ವಚನದಲ್ಲಿ, ಬಿಜಾಪುರದ ಮೊದಲನೆಯ ಆದಿಲ್​ಶಾಹನಿಗೆ (ಕ್ರಿ.ಶ. 1557-1580) ಪಟ್ಟಕಟ್ಟಿದ ಪ್ರಸಂಗವನ್ನು ಉಲ್ಲೇಖಿಸಿದ್ದಾರೆ. ಕ್ರಿ.ಶ. 1612ರಲ್ಲಿ ಬಿಜಾಪುರದ ಸುಲ್ತಾನರ ಸುಬೇದಾರ್ ಆಗಿದ್ದ ಅಂಕುಶ ಖಾನನು ಬಾವಿಯೊಂದನ್ನು ಕಟ್ಟಿಸಲು ಯತ್ನಿಸುತ್ತಾನಷ್ಟೆ. ಆದರೆ ಅಲ್ಲಿ ಜಲ ಬರುವುದಿಲ್ಲ. ಆಗ ಮೌನೇಶ್ವರರು ಬಾವಿಗಿಳಿದು ಜಲ ತಂದುದರ ವಿವರಣೆ ಅವರ ವಚನವೊಂದರಲ್ಲಿ ಬರುತ್ತದೆ. ಇವೆಲ್ಲದರ ಆಧಾರದ ಮೇಲೆ ಇವರು 16ನೇ ಶತಮಾನದ ಮಧ್ಯಭಾಗದಿಂದ 17ನೇ ಶತಮಾನದ ಉತ್ತರಾರ್ಧದವರೆಗೆ ಇದ್ದರೆಂಬುದು ರುಜುವಾತು ಆಗುತ್ತದೆ! *ಜೀವನ ಮತ್ತು ಬಾಲ್ಯ ಮೌನೇಶ್ವರರ ತಂದೆ-ತಾಯಿ ಶೇಷಪ್ಪ (ಹಾವಪ್ಪ), ಶೇಷಕ್ಕ (ಹಾವಕ್ಕ) ಎಂಬ ಉಲ್ಲೇಖ ಐತಿಹ್ಯವಾಗಿ ದೊರಕುತ್ತದೆ. ಜಾನಪದದಲ್ಲೂ ಮೌನೇಶ್ವರರ ಬಾಲ್ಯದ ವಿವರಗಳು ತುಂಬಾ ಕಡಿಮೆ. ಅವರ ಬಗ್ಗೆ    ಕಥೆ ಐತಿಹ್ಯ ಏನೇ ಇದ್ದರೂ  ಮೌನೇಶ್ವರರು- ‘ಇಂದ್ರಿ ಸೂತಕದಿಂದ ಅಂದೆ ನಾನು ಜನಿಸಿದೆನು /ಇಂದು ನಾನು ಕೊಳೆಯಲೆ ಪ್ರಭುದೇವ ನಾ/ ಬಂದಂಥ ಭವಕೆ ಮಿತಿಯಿಲ್ಲ ಪ್ರಭುದೇವರ ನಾ/ ಹಿಂದಿಗಿಂತ ಕಡಿಮೆಯಯ್ಯ ಬಸವಣ್ಣ’/ -ಎಂದು ವಚನವೊಂದರಲ್ಲಿ ಹೇಳಿಕೊಂಡಿದ್ದಾರೆ.  ಜಾನಪದ-ಪುರಾಣ ಮುಂತಾದುವು ಅಯೋನಿಜರೆಂದರೆ, ಮೌನೇಶ್ವರರ ವಚನವು ‘ಯೋನಿಜ’ರೆಂದು ಸಾರುತ್ತದೆ. ಎಲ್ಲ ಶರಣರು ಹೊಲೆಯೊಳಗಿಂದಲೇ ಜನ್ಮಿಸಿದರೆಂದು ಹೇಳುವ ಮೌನೇಶ್ವರರು ‘ಕುಲವನೆಲ್ಲಿ ಅರಸುವುದು?’ ಎಂಬ ಪ್ರಶ್ನೆಯನ್ನು ನಮಗೆ ಹಾಕುತ್ತಾರೆ ಶರಣರೇ ನಿಜವಾದ ತಾಯ್ತಂದೆಗಳೆಂಬುದು ಇಲ್ಲಿ ಪ್ರಸಿದ್ಧಾರ್ಥ. ಸಾಹಿತ್ಯ ಸಂಪದ ಮೌನೇಶ್ವರರು ವಚನವೊಂದರಲ್ಲಿ ತನ್ನ ಗುರುಮನೆ ಗೋಗಿನ ಎಂದೂ, ಗುಂಡಿ ಬಸವಯ್ಯ ತಮ್ಮ ಗುರುವೆಂದೂ ಹೇಳಿಕೊಂಡಿದ್ದಾರೆ. ಇಲ್ಲಿಯ ಸೂಚಿತಾರ್ಥಗಳನ್ನು ಗ್ರಹಿಸಿದರೆ ಮೌನೇಶ್ವರರು ಕೆಲವು ಗುರುಗಳ ಬಳಿ ಸಾಧನೆ ಮಾಡಿರಬೇಕು. ಗುರುವಿನ ಮಾರ್ಗದರ್ಶನ ಇಲ್ಲದೆ, ಯಾವೊಬ್ಬ ಶಿಷ್ಯನೂ ಸಾಧಕನಾಗಲಾರನಷ್ಟೆ. ಆದರೆ, ಅಲ್ಲಮಪ್ರಭುದೇವ ಮಾತ್ರ ಇದಕ್ಕೆ ಅಪವಾದ. ಮೌನೇಶ್ವರರು ಅನೇಕ ವಚನಗಳಲ್ಲಿ ಅಲ್ಲಮಪ್ರಭುವಿನ ಹೆಸರನ್ನು ಪದೇಪದೆ ಬಳಸುತ್ತಾರೆ. ಅಲ್ಲಮನು ಯಾವ ಮಾಯೆಗೂ ಸಿಗದೆ, ಎಲ್ಲರೊಳಗಿನ ಮಾಯೆಯನ್ನು ಕಿತ್ತೆಸೆದವನು. ಮೌನೇಶ್ವರರು ಇಂಥ ಅಲ್ಲಮನ ದಾರಿಯಲ್ಲಿ ನಡೆದಿದ್ದಾರೆ. ಒಂದಂತೂ ನಿಜ. ಮೌನೇಶ್ವರರು ಕಠೋರ ತಪಸ್ಸಾಧನೆ ಮಾಡಿ ಅಪೂರ್ವ ಸಿದ್ಧಿಗಳನ್ನು ಪಡೆದಿರಬೇಕು. ಅವುಗಳ ಮೂಲಕ ಪವಾಡಗಳನ್ನೂ ಮಾಡಿರಬೇಕು. ಈಗಲೂ ಜನರ ಬಾಯಲ್ಲಿ ಅವರ ಪವಾಡ, ಮಹಿಮೆಗಳು ರೂಢಿಯಲ್ಲಿವೆ. ಆ ಕಾಲದ ಜನರನ್ನೋ ಸುಲ್ತಾನರನ್ನೋ ಸುಬೇದಾರರನ್ನೋ ಪ್ರಭಾವ ಗೊಳಿಸಬೇಕಾದರೆ ಇಂಥ ಪವಾಡಗಳನ್ನು ಮಾಡಿಯೇ ಸೆಳೆಯಬೇಕಿತ್ತು. ಜನಹಿತಕಾರ್ಯಕ್ಕೆ ಇದೊಂದು ಪೂರ್ವ ಮೀಮಾಂಸೆಯೇ. ಮೌನೇಶ್ವರರಿಗೆ ಅಲೌಕಿಕ ಸಿದ್ಧಿಗಳಿದ್ದಂತೆ ಅಸಾಮಾನ್ಯ ಅನುಭಾವೀ ಜೀವನವೂ ಇತ್ತು. ಅವೆರಡು ಇವರಲ್ಲಿ ಹಾಳತವಾಗಿ ಸೇರಿದ್ದಕ್ಕೆ ಅವರ ಬರಹಗಳೇ ಸಾಕ್ಷಿ. *ಉಪನಯನ ವೈದಿಕ ಸಂಸ್ಕಾರ ಬಾಲ್ಯಾವಸ್ತೆಯಲ್ಲಿ ಜಗದ್ಗುರು ಮೌನೇಶ್ವರರಿಗೆ 8 ವರ್ಷ ತುಂಬಿದಾಗ ವಿಶ್ವಕರ್ಮ ಧರ್ಮದ ವೈದಿಕ ಪರಂಪರೆಯ ಅನುಸಾರ ಗಾಯತ್ರಿ ಮಂತ್ರೋಪದೇಶದೊಂದಿಗೆ ಉಪನಯನವಾಯಿತು. ಗಾಯತ್ರಿ ಮಂತ್ರೋಪದೇಶವಾಗಿ ಅದರ ರಹಸ್ಯಾರ್ಥಗಳು ದೃಗ್ಗೋಚರವಾದುವು. ನಂತರ ಮೌನೇಶ್ವರರು ಸುರಪುರದ ಗುರುಕುಲದಲ್ಲಿ ಶಿವಸ್ವಾಮಿ ಗುರುಗಳ ಬಳಿ 4 ವರ್ಷ, ಸಂಸ್ಕೃತ, ಉರ್ದು, ಕನ್ನಡ ಕಲಿತು ಹಲವಾರು ಶಾಸ್ತ್ರಗಳ ಪರಿಚಯ ಮಾಡಿಕೊಂಡರು. ಜತೆಗೆ ಸದಾನಂದ ಗುರುಗಳ ಸಂಪೂರ್ಣ ಅನುಗ್ರಹವೂ ಮೌನೇಶ್ವರರ ಮೇಲಿತ್ತು. ಈ ನಡುವೆ ಕಾಶೀಯಾತ್ರೆ ಮುಗಿಸಿಬಂದರು. ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ರಾಚೋಟಿಗೆ ಹೋಗಿ ವೀರಭದ್ರದೇವರ ಆರಾಧನೆ ಮಾಡಿದ್ದು ವಿಶೇಷ. ನಂತರ ವರವಿ, ಲಿಂಗನಬಂಡಿಗಳಲ್ಲಿ ಅನೇಕ ಪವಾಡಗಳನ್ನು ಮಾಡಿದರೆಂದು ಪುರಾಣಗಳು ನಿರೂಪಿಸುತ್ತವೆ. ತಂದೆ-ತಾಯಿ ವೃದ್ಧರಾಗಿ ತೀರಿಕೊಂಡ ಮೇಲೆ ಮೌನೇಶ್ವರರು ದೇಶಸಂಚಾರ ಮಾಡುತ್ತ, ಎಲ್ಲ ಸಮುದಾಯದವರ ಕಷ್ಟ-ಕಾರ್ಪಣ್ಯ ನೀಗಿಸುತ್ತ ಸಮಾಜದ ಕೀಲಕಸ್ಥಾನದಲ್ಲಿ ಉಳಿದುಬಿಟ್ಟರು. *ಸಾಹಿತ್ಯ ಮೌನೇಶ್ವರರು ಶತಕಗಳನ್ನೂ ಕಾಲಜ್ಞಾನವನ್ನೂ ಬರೆದಿದ್ದಾರೆ. ದಂಡಕ, ಸುವ್ವಿಹಾಡು, ಜೋಗುಳಪದ, ಆರತಿಪದ, ಮೊಹರಂಗೀತೆ, ಕೋಲುಪದ, ಭಜನೆಹಾಡುಗಳನ್ನ್ನೂ ರಚಿಸಿದ್ದಾರೆ. ಇವರ ಪದಗಳಲ್ಲಿ ಉರ್ದು, ಪರ್ಷಿಯನ್ ಪದಗಳು ವಿಪುಲವಾಗಿವೆ. ಕನ್ನಡ, ಉರ್ದು ಕೂಡುನುಡಿಗಳಂತೂ ಬಹಳಷ್ಟಿವೆ- ಮೌನದೀನ ಪೀರ | ಸದ್ಗುರು ಜಿತಾ ಪೈಗಂಬರ ||ಪ|| ಹಿಂದೂ ಮುಸಲ್ಮೆ ಮನದ ಪ್ರಕಾರ/ ಬಲ್ಲಂಥ ಜ್ಞಾನಿಗೆ ನೀನೊಬ್ಬ ದೇವರ ಆಕಾರ ನಿರಾಕಾರ ಎರಡಕ್ಕೆ ನೀನೆ ಗಂಭೀರ/ ಶೇಕ್ ಸಯ್ಯದ ಮೊಗಲ ಪಠಾಣ ನಾಲ್ಕು ಅವತಾರ ತಾಳಿ ಮಾಡಿದಿ ಉದ್ಧಾರ ||2|| ಈ ಪದ್ಯವು ಮೌನೇಶ್ವರರ ರಚನೆಯ ಬಗೆಯನ್ನು ತಿಳಿಸುತ್ತದೆ. ಅವರು ಹಿಂದೂ-ಮುಸ್ಲಿಂ ಬಂಧುತ್ವವನ್ನು ಒಂದೆಡೆ ಸೇರಿಸಿದವರಷ್ಟೆ. ಹೀಗೆ ಭಾವೈಕ್ಯತೆ ಮತ್ತು ಮತೈಕ್ಯತೆಗಳ ಸಂಕೇತವಾಗಿ ಇವರು ಕಾಣಿಸಿಕೊಂಡರೆಂಬುದು ವಿಶೇಷ. ಮೌನೇಶ್ವರರು 17ನೇ ಶತಮಾನದ ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಸಾಹಿತ್ಯದಲ್ಲಿ ಬಳಸಿಕೊಂಡರು. ಇವರ ಪದ್ಯಗಳಲ್ಲಿ ಉರ್ದುಭಾಷೆ, ಅಭಿವ್ಯಕ್ತಿಗೆ ಅನುಗುಣವಾಗಿ ಕಾಣಿಸಿಕೊಂಡಿದೆ. ಆಡುಮಾತಿನ ಪಲುಕು ಉದ್ದಕ್ಕೂ ಕಾಣಿಸುತ್ತದೆ. ಭಾಷೆಯ ದೃಷ್ಟಿಯಿಂದ ನೋಡಿದರೆ, ಎಷ್ಟೋ ಅಪಪ್ರಯೋಗಗಳು ಇವೆ. ಆದರೆ, ಮೌನೇಶ್ವರರು ಜನಸಾಮಾನ್ಯರಂತೆ ವಚನಗಳನ್ನು ಕಟ್ಟಿದ್ದಾರೆ. ಹಳ್ಳಿಗರು ಬಳಸುತ್ತಿದ್ದ ಹಾಡಿನ ಮಟ್ಟುಗಳ ಜಾಡುಹಿಡಿದು ಅನುಭವಗಳನ್ನು ಸಾರಿದ್ದಾರೆ. ಮೌನೇಶ್ವರರ ವಚನಗಳು ಬಹುತೇಕವಾಗಿ ಕನ್ನಡದ ಅಂಶಗಣಕ್ಕೆ ಹೆಚ್ಚು ಹೊಂದುತ್ತವೆ. ಇವು ಬರಹರೂಪದ ವಚನಗಳಲ್ಲ; ಅವರು ಹಾಡುತ್ತ, ಹೇಳುತ್ತ ಹೋದಂತೆ ಶಿಷ್ಯರು ಸಂಗ್ರಹಿಸಿ ಬರೆದಿಟ್ಟದ್ದೆಂದು ತೋರುತ್ತದೆ! ಮೌನೇಶ್ವರರು ತಮ್ಮ ಬಗೆಗೆ ಹೆಚ್ಚಿಗೇನೂ ಹೇಳಿಕೊಂಡಿಲ್ಲ. ತಾನು ಅಕ್ಕನಾಗಮ್ಮನ ಮಗ ಚೆನ್ನಬಸವಣ್ಣನ ಅವತಾರವೆಂದು ಮಾತ್ರ ವಚನಗಳಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಜನ್ಮ ಯಾವುದೋ ಮುಖ್ಯ ಉದ್ದೇಶಕ್ಕಾಗಿ ಆಗಿದೆಯೆಂದು ಅವರು ತಿಳಿದುಕೊಂಡಿದ್ದರು. ಆ ನಂಬುಗೆ ಅವರಲ್ಲಿ ಪ್ರಬಲವಾಗಿದ್ದುದು ಕಂಡುಬರುತ್ತದೆ. ಅವರ ಮಾತಿದು. ಅಕ್ಕ ನಾಗಲಿಯ ಮಗ ಚಿಕ್ಕ ಚನ್ನಬಸವಣ್ಣ/ ಅಕ್ಕಸಾಲೆಯರ ಒಡಲೊಳಗೆ ಜನಿಸಿ ನಿಂತು/ ರೆಕ್ಕ ಲೆಕ್ಕಕ್ಕೆ ಝುಡತಿಯ ಕೇಳಬೇಕೆಂದು/ ತಕ್ಕಡಿಯ ತ್ರಾಸು ಪಿಡಿದುಕೊಂಡು ನಿಂತಾತನ ಕೂಡ -ಈ ವಚನದಲ್ಲಿ ತಾನು ‘ಅಕ್ಕಸಾಲಿಗ’ ಎಂಬುದನ್ನು ಖಚಿತಪಡಿಸಿದ್ದಾರೆ. ‘ವಿಶ್ವಕರ್ಮ’ ಎಂದು ಪ್ರಸಿದ್ಧಿ ಪಡೆದ ಇವರು ಸಮಾಜದ ಕೀಲಕ ಸ್ಥಾನದಲ್ಲಿದ್ದವರೇ. ಮರದ ಕೆಲಸ ಮಾಡುವವರು ‘ಬಡಗಿ’ಯಾದರೆ ಕಬ್ಬಿಣದ ಕೆಲಸ ಮಾಡುವವರು ‘ಕಮ್ಮಾರ’ರು; ಕಂಚಿನ ಕೆಲಸ ಮಾಡುವವರು ‘ಕಂಚುಗಾರ’ರಾದರೆ, ಶಿಲೆಯ ಕೆಲಸ ಮಾಡುವವರು ‘ಶಿಲ್ಪಿಗರು’. ಇಷ್ಟು ಜನರನ್ನು ವಿಶ್ವಕರ್ಮರೆಂದೇ ಗ್ರಾಮ ಸಮುದಾಯ ಕರೆಯುತ್ತಿತ್ತು. ಸಮುದಾಯದಲ್ಲಿ ಇವರ ಸ್ಥಾನ ಮೇಲ್ಮಟ್ಟದ್ದಾಗಿತ್ತೆಂಬುದನ್ನು ಸಮಸ್ತರೂ ಗುರುತಿಸಿದ್ದಾರೆ. ಇವರ ವೃತ್ತಿಯು ಕೌಶಲಪ್ರಧಾನವಾದುದು. ಪಟ್ಟಣ, ಖೇಡ, ಖರ್ವಡ, ದ್ರೋಣಾಮುಖ ಎಂಬ ವಿವಿಧ ಬಗೆಯ ನಗರ ನಿರ್ವಣದಲ್ಲಿ ಇವರದು ಎತ್ತಿದ ಕೈ. ಅದಕ್ಕನುಗುಣವಾಗಿ ಬಡಿಗೇರ, ಕಮ್ಮಾರರು ಬಳಸುವ ಉಪಕರಣಗಳನ್ನು ವಚನದಲ್ಲಿ ಅಧ್ಯಾತ್ಮದ ಸಂಕೇತವಾಗಿಯೂ ಬಳಸಿ ಕೊಂಡಿದ್ದಾರೆ. ಗ್ರಾಮಜೀವನದ ಕಾಯಕವರ್ಗಕ್ಕೆ ಅನುಗುಣವಾದ ಅಡಿಗಲ್ಲು, ತ್ರಾಸು, ಮೂಸೆ, ಸುತ್ತಿಗೆಯಂಥ ಪರಿಕರಗಳನ್ನು ವಚನಗಳಲ್ಲಿ ಬಳಸಿದ್ದಾರೆ. ‘ಬಡಿಗ, ಕಮ್ಮಾರರು ಪೊಡವಿಗಕರ್ತರು’ ಎಂಬ ಮಾತು ಇದಕ್ಕೆ ಸಾಕ್ಷಿ. ಗುರು ಮೌನೇಶ್ವರ *ಬದುಕೆ ಅನುಭವ ಪಾಠ ಶಾಲೆ* ________________________ ನಮ್ಮ ಬಾಳು ಹೇಗಿರಬೇಕೆಂಬುದನ್ನು ಹಲವಾರು ವಚನಗಳಲ್ಲಿ ಮೌನೇಶ್ವರರು ಹೇಳುತ್ತಾರೆ. ಅವರ ವಚನಗಳು ಶರಣರ ಮಾರ್ಗವನ್ನು ಮುಂದುವರಿಸುತ್ತವೆ. ಅವರು ಹೆಜ್ಜೆಹೆಜ್ಜೆಗೂ ಹಿಂದಿನ ಶರಣರ ನುಡಿಗಡಣವನ್ನು ಮುಂದಿರಿಸಿಕೊಂಡು ಮಾತಾಡುತ್ತಾರೆ. ಅರಿವಿಲ್ಲದೆ ಬಾಳುವೆ ಮಾಡುವುದು ವ್ಯರ್ಥ. ಅಂಥವರಿಗೆ ಎಲ್ಲಿಯ ಗುರು, ಎಲ್ಲಿಯ ದೈವ? ಎಂದು ಒಂದೆಡೆ ಪ್ರಶ್ನಿಸುತ್ತಾರೆ. ಮೌನೇಶ್ವರರಿಗೆ ಹಳ್ಳಿಯ

ಸಾವಿಲ್ಲದ ಶರಣರು ಮಾಲಿಕೆ “ಕ್ರಾಂತಿಕಾರ ಸಂತ ಶ್ರೇಷ್ಠ ತತ್ವ ಪದಕಾರ ಶ್ರೀ ತಿಂಥಣಿ ಮೌನೇಶ್ವರರು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-14 ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾಚೇತನ ಲೇ: ಸವಿತಾ ದೇಶಮುಖ ಹರಿಜನ ಕೇರಿಯ ಉದ್ಧಾರಕ್ಕಾಗಿ ಸತತವಾಗಿ ಕೇರಿಗಳಿಗೆ ಭೇಟಿ ಕೊಡುತ್ತಿದ್ದ ಜಯದೇವಿ ತಾಯಿಯವರು ಹೇಳಿತಾರೆ….. ನುಡಿಯಿರಿ ಸತ್ಯವನು ನಡೆಯಿರಿ ಆಚಾರದಿ ದುಡಿಯಿರಿ ಮೈ ಉಳಿಸದೆ ಯಾರಿಗೂ ದುಡಿಕಿ ಮನ ನೋಯಿಸಬೇಡಿ… ಜಯದೇವಿ ತಾಯಿಯವರು ಅಸ್ಪೃಶ್ಯತೆಯನ್ನು ಮಾತ್ರ ವಿರೋಧಿಸಿದವರಲ್ಲ,ಅವರು ಸಂಪೂರ್ಣ ಸಮಾಜದಲ್ಲಿ ಇರುವ ಜಾತಿ-ಮತ ಭೇದಭಾವವನ್ನು ಬೇರು ಸಮೇತ ತೆಗೆದುಹಾಕಬೇಕೆಂದು ಸಂಕಲ್ಪ ಮಾಡಿದ ಮಹಾನ್ ಸಮಾಜಸೇವಕಿ.ಅವರ ಜೀವನವೇ ಈ ಸಂದೇಶದ ಪ್ರತಿಬಿಂಬವಾಗಿತ್ತು. ಇದನ್ನು ವಿಸ್ತಾರವಾಗಿ ನೋಡಿದರೆಅಅವರ ಹಲವು ಘಟನೆಗಳು ಅವರ ಮನೋಭಾವವನ್ನು ಸ್ಪಷ್ಟಪಡಿಸುತ್ತವೆ… ಕೆಲವು ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ಈ ಅನ್ಯಾಯದ ವಿರುದ್ಧ ಅವರು ಧೈರ್ಯವಾಗಿ ನಿಂತರು.ಒಮ್ಮೆ ದಲಿತರನ್ನು ಕರೆದುಕೊಂಡು ದೇವಸ್ಥಾನದೊಳಗೆ ಪ್ರವೇಶ ಮಾಡಿಸಿದರು. ಇದರಿಂದ ಹಲವಾರು ವಿರೋಧಗಳು ಎದುರಾದರೂ, ಅವರು ಹಿಂದೆ ಸರಿಯಲಿಲ್ಲ.ದೇವರು ಎಲ್ಲರಿಗೂ ಒಂದೇ ಎಂಬ ನಂಬಿಕೆಯನ್ನು ಸಮಾಜಕ್ಕೆ ಬೋಧಿಸಿದರು. ಅಂಜಿಕೆ ನನಗಿಲ್ಲ| ಹಿಂಜರಿಯಲಾರೆ ನಾ ಪಂಜು ಹಿಡಿದು ನಿಜತತ್ವವ- ಸಾರುವೇ ಕೆಂಜಡೆಯವನ ಕೃಪೆಯಿಂದ!! ಕೆಂಜಡಿಯವನು- ಶಿವನ ಕೃಪೆಯಿಂದ ನಾನು ಯಾವ ಸತ್ಕಾರ್ಯಕ್ಕೂ ಹಿಂಜರಿಯಲಾರೆ ಅಂತ ಹೋರಾಡುತ್ತಿದ್ದರು. ತಾಯಿ ಸಂಗವ್ವ ಅದೆಷ್ಟೇ ಆಧುನಿಕ ವಿಚಾರವಂತೆ ಯಾಗಿದ್ದರು ಮನೆಯಲ್ಲಿ ಒಳ ಪಂಗಡದ ಬೇರೆ ಜನರೇ ಆದರೂ ಯಾರಾದರೂ ಒಳಗೆ ಬಂದು ನೀರಿನ ಕೊಡಗಳನ್ನು ಮುಟ್ಟಿದ್ದರೆ ಅವುಗಳನ್ನು ತೊಳೆದು ಮತ್ತೆ ಸ್ವಚ್ಛ ಮಾಡುವ ರೂಢಿಯನ್ನು ಇಟ್ಟುಕೊಂಡಿದ್ದರು.ಇದನ್ನೆಲ್ಲಾ ಗಮನಿಸುತ್ತಿದ್ದ ಜಯದೇವಿ ತಾಯಿಯವರು ಶರಣರು ಉತ್ತಿಬಿತ್ತಿ ಬೆಳೆದಂಥ ವಚನವನ್ನು ನೆನಪಿಸಿ ಕೊಡುತ್ತಿದ್ದರಂತೆ.“ಇವನ ಇವನಾರವ ಇವನಾರವ ಎಂದೇನಿಸದಿರಯ್ಯ ಇವನ ಮಾವ ಇವನ ಮಾವ ಎಂದೆನಿಸಯ್ಯ…..” ಅನ್ನುವ ವಚನ ತಾಯಿಗೆ ಮೇಲಿಂದ ಮೇಲೆ ಹೇಳಿ ಅವರ ಮನವನ್ನು ಬದಲಾಯಿಸಿದರು ಅಂತ ತಾಯಿಯವರೇ ಸ್ವಂತ ಹೇಳುತ್ತಿದ್ದರು. ಜಾತಿ ಮೀರಿ ವಿವಾಹಗಳಿಗೆ ಬೆಂಬಲ ನೀಡುತ್ತಿದ್ದರು.ಜಾತಿ ಭೇದವನ್ನು ಕಡಿಮೆ ಮಾಡಲು ಅವರು ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಿದರು.“ಪ್ರೇಮಕ್ಕೆ ಜಾತಿ ಬೇಧವಿಲ್ಲ” ಎಂಬುದನ್ನು ಅವರು ಸಮರ್ಥಿಸಿದರು.ಇಂತಹ ವಿವಾಹಗಳಿಗೆ ಸಾಮಾಜಿಕ ಒಪ್ಪಿಗೆ ಸಿಗುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು.“ಮಾನವೀಯತೆ ಧರ್ಮಕ್ಕಿಂತ ದೊಡ್ಡದು” ಎಂಬುದು ಅವರ ಸಂದೇಶ. ವೈಯಕ್ತಿಕ ಜೀವನದಲ್ಲಿಯೂ ಅನುಸರಿಸಿದ್ದರು .ತಮ್ಮ ಮನೆ ಬಾಗಿಲು ಎಲ್ಲರಿಗೂ ತೆರೆಯಲ್ಪಟ್ಟಿತ್ತು.ಯಾರೇ ಬಂದರೂ ಅವರ ಜಾತಿ-ಮತ ಕೇಳದೆ ಸಹಾಯ ಮಾಡುತ್ತಿದ್ದರು. ಆದರಾತಿಥ್ಯವನ್ನು ಕೊಟ್ಟು ಕಳಿಸುತ್ತಿದ್ದರು. ಸಜೀವ ಘಟನೆಗಳನ್ನು ಉಲ್ಲೇಖ ಮಾಡಬೇಕೆಂದರೆಸೊಲ್ಲಾಪುರದ ಆ ಕಾಲ…ಸಮಾಜದ ಮನಸ್ಸುಗಳಲ್ಲಿ ಇನ್ನೂ ಕೀಳರಿಮೆ ಮತ್ತು ಭೇದದ ನೆರಳಿನಲ್ಲಿ ನರಳುತ್ತಿತ್ತು…ಜಯದೇವಿ ತಾಯಿಯವರು … ನೂರಾರು ಎಕರೆ ಭೂಮಿಯ ಒಡೆಯರಾಗಿದ್ದರೂ, ಅವರ ಹೃದಯ ಮಾತ್ರ ಮಣ್ಣಿನಂತೇ ಮೃದು….ಆ ಪ್ರದೇಶದಲ್ಲಿ “ಪಾರದೇರು” ಎನ್ನುವ ಒಂದು ಜಾತಿಯ ಜನರ ಬಗ್ಗೆ ಜನರಲ್ಲಿ ಭಯ ಇತ್ತು.“ಅವರು ಕಳ್ಳರು… ಮೋಸಗಾರರು…” ಎಂದು ಸಮಾಜವೇ ಅವರಿಗೆ ಒಂದು ಗುರುತು ಹಾಕಿತ್ತು.ಯಾರೂ ಅವರಿಗೆ ಕೆಲಸ ಕೊಡುತ್ತಿರಲಿಲ್ಲ.ಅವರಿಗೆ ತಪ್ಪು ದಾರಿಗೆ ಹೋಗುವುದೇ ಅವರ ಬದುಕಿನ ಮಾರ್ಗವಾಗಿಬಿಟ್ಟಿತ್ತು….. ಒಂದು ದಿನ, ಆ ಸಮುದಾಯದ ಒಬ್ಬ ಮುಖಂಡನು ಜಯದೇವಿ ತಾಯಿಯವರ ಸಮಾಜಮುಖಿ ಉದ್ದಾರ ಕೆಲಸಗಳನ್ನು ನೋಡಿ ಭೇಟಿ ಮಾಡಲು ಬಂದನು.ಅವನ ಕಣ್ಣುಗಳಲ್ಲಿ ಹತಾಶೆ… ಮನಸ್ಸಿನಲ್ಲಿ ನೋವು ಹೊತ್ತು ಬಂದಿದ್ದಾ…“ತಾಯಿ… ನಾವು ತಪ್ಪು ಮಾಡಿದ್ದೇವೆ… ಆದರೆ ನಮಗೆ ಯಾರು ಕೆಲಸ ಕೊಡಲ್ಲ… ನಾವು ಸುಳ್ಳು ತನ ಕಳ್ಳತನ ಮಾಡದೆ ಇದ್ದರು ನಮ್ಮ ಜನಾಂಗದವರು ಬದುಕೋದು ಹೇಗೆ?” ಎಂದು ಕೇಳಿದನು.ಆ ಮಾತು ಕೇಳಿ ತಾಯಿಯವರ ಹೃದಯ ಕದಲಿತು. ತಾಯಿಯವರ ನಂತರ ನಿಧಾನವಾಗಿ ಹೇಳಿದರು…“ನೀವು ತಪ್ಪು ಮಾಡಿರಬಹುದು… ತಪ್ಪುಗಳನ್ನು ಮಾಡುತ್ತಾ ಬರುತ್ತಲೇ ಇದ್ದೀರಿ..ಆದರೆ ನೀವು ಮನುಷ್ಯರು…ನಿಮಗೆ ಅವಕಾಶ ಕೊಟ್ಟರೆ. ಬದಲಾಗ ಬಹುದೇನೋ…ನೋಡೋಣ ಹಾಗಿದ್ದರೆ“ನೀವು ನನ್ನ ಹೊಲಕ್ಕೆ ಬನ್ನಿ… ಕೆಲಸ ಮಾಡಿ…” ಎಂದು ಆಹ್ವಾನಿಸಿದರು.ಹೀಗೆ ಹೊಸ ಜೀವನದ ಆರಂಭ ಪಾರದೇರು ಜನಾಂಗದ ಅನೇಕ ಜನರಿಗೆ ಅವರು ಕೇವಲ ಕೆಲಸ ಕೊಟ್ಟರಲ್ಲದೇ…ಅವರಿಗೆ ವಾಸಿಸಲು ಹೊಲಗಳಲ್ಲಿ ಜಾಗ ಕೊಟ್ಟರು…ನಿನ್ನೆಯವರೆಗೆ ಕಳ್ಳತನ ಮಾಡುತ್ತಿದ್ದ ಕೈಗಳು,ಇಂದು ಮಣ್ಣನ್ನು ಅಗೆದು ಬೆಳೆ ಬೆಳೆಸತೊಡಗಿದವು. ಇದನ್ನು ನೋಡಿದ ಅನೇಕ ಜನರು ಆಶ್ಚರ್ಯದಿಂದ“ಇವರು ಬದಲಾಗ್ತಾರಾ?” ಎಂಬ ಸಂಶಯಪಟ್ಟರು.ಆದರೆ ತಾಯಿಯವರ ನಂಬಿಕೆ ಗೆದ್ದಿತು.ಆ ಜನರು ತಮ್ಮ ಜೀವನವನ್ನು ಸತ್ಯದ ದಾರಿಯಲ್ಲಿ ಸಾಗಿಸಲು ಆರಂಭಿಸಿದರು. ಮುಂದೆ ಭಾರತದಲ್ಲಿ ಲ್ಯಾಂಡ್ ರಿಫಾರ್ಮ್ ಕಾಯಿದೆ ಜಾರಿಯಾದಾಗ, ಹಲವಾರು ಜಮೀನುಗಳು ರೈತರ ಹೆಸರಿಗೆ ಬರೆಯ ಆರಂಭವಾಯಿತು.ಆ ಸಮಯದಲ್ಲಿ ಜಯದೇವಿ ತಾಯಿಯವರು ದೊಡ್ಡ ನಿರ್ಧಾರ ಕೈಗೊಂಡರು.“ಈ ಭೂಮಿಯನ್ನು ಯಾರು ನಿಜವಾಗಿ ಬೆಳೆದಿದ್ದಾರೆ…ಅವರಿಗೆ ಒಪ್ಪಿಸುವಂತೆ…ಪಾದರೆಯ ಜನರು ಕೆಳ ಜಾತಿಯ ಜನರ ಹೆಸರನ್ನು ನೋಂದಾಯಿಸಿದರು.ಹೀಗೆ,ಒಮ್ಮೆ ಸಮಾಜದಿಂದ ತಳ್ಳಲ್ಪಟ್ಟ “ಪಾರದೆರು” ಜನರು,ತಾಯಿಯವರ ಕೃಪೆಯಿಂದ ತಮ್ಮದೇ ಭೂಮಿಯ ಒಡೆಯರಾಗಿದರು. ಶತಶತಮಾನಗಳಿಂದ ಆಳಾಗಿ ದುಡಿತ ಬಂದವರಿಗೆಆ ದಿನ, ಅವರ ಕಣ್ಣುಗಳಲ್ಲಿ ಕಣ್ಣೀರು…ಹರಿದವುಆದರೆ ಅದು ನೋವಿನಲ್ಲ ಕಣ್ಣಿರಲ್ಲ… ಗೌರವದದು…“ನಮಗೆ ಜೀವನ ಕೊಟ್ಟವರು ತಾಯಿ…” ಎಂದು ಇನ್ನು ಆದರೂ ನೆನೆಯುತ್ತಾರೆ.“ಜಯದೇವಿ ತಾಯಿಯವರು ಕೇವಲ ಭೂಮಿಯನ್ನು ಕೊಟ್ಟವರಲ್ಲ ಅವರ ಜೀವನಕ್ಕೆ ದಿಕ್ಕು ತೋರಿಸಿದ ತಾಯಿಯಾದರು…” ಸಮಾಜ ಏಕತೆ, ಸಮಾನತೆ ಮತ್ತು ಚೇತನ ಶಕ್ತಿಯನ್ನು ಸಜೀವವಾಗಿ ಕಟ್ಟಲು…ಶರಣ ಸಮಾಜಎನ್ನು ಸಂಘವನ್ನು ಕಟ್ಟಿದರು‌. ಗಾಂಧೀಜಿಯವರು ಕೀಳ ಜಾತಿಯವರಿಗೆ ಹರಿಜನರೆಂದು ಹೆಸರು ಕೊಟ್ಟಸಮಯ .. ಗಾಂಧೀಜಿಯವರ ಧ್ಯೇಯ- ಸದುದ್ದೇಶಕ್ಕಾಗಿ ಶರಣ ಸಮಾಜ ನಿರ್ಮಾಣಗೊಂಡಿತ್ತು. *ದೀನದಲಿತರಿಗೆ | ಹೀನ ಪಾಮರರಿಗೆತನ್ನ ಬಳಿ ಸೆಳೆದುಕೊಂಡ- ಪುಣ್ಯಜೀವಿಹರಿಜನರೆಂಬ ಹೆಸರ ಕೊಟ್ಟಗಾಂಧೀಜಿ *ಎಂದು ಹಾಡಿ ಹೊಗಳಿದರು. “ಎಲ್ಲರೂ ಒಂದೇ ಕುಟುಂಬದವರಂತೆ ಬದುಕಬೇಕು ಜಾತಿ-ಮತ ಭೇದಗಳು ಗಟ್ಟಿಗಳ ಬೇರುಸಹಿತ ಕಿತ್ತೆಸೆಯಲು.ಭೇದಗಳ ಒಡೆಯಬೇಕೆಂದು ಜಯದೇವಿ ತಾಯಿಯವರ ಒಂದು ದೊಡ್ಡ ಕನಸು .ಈ ಆಲೋಚನೆಯಿಂದಲೇ ಅವರು “ಶರಣ ಸಮಾಜ” ಎನ್ನುವ ಸಂಘವನ್ನು ಸ್ಥಾಪಿಸಿದರು.ಸಂಘ ಕೇವಲ ಒಂದು ಸಂಸ್ಥೆಯಂತಲ್ಲ…ಇದು ಒಂದು ಚಳವಳಿ…ಸಂಘದ ಉದ್ದೇಶವೆಂದರೆಜಾತಿ, ಮತ, ವರ್ಗ ಎಂಬ ಗೋಡೆಗಳನ್ನು ಒಡೆಯುವ ಪ್ರಯತ್ನ.ಇಲ್ಲಿ ಎಲ್ಲ ಸಮಾಜದ ಜನರು‌…ಬಡವರು, ಶ್ರೀಮಂತರು, ದಲಿತರು, ಮೇಲ್ಜಾತಿಯವರುಎಲ್ಲರೂ ಒಂದೇ ವೇದಿಕೆಯಲ್ಲಿ ಕೂತುಕೊಳ್ಳುತ್ತಿದ್ದರು. ಮುಂದೆ ಈ ಮಹತ್ವದ ಕಾರ್ಯಕ್ಕೆ ಗೌರವ ನೀಡಲು,ತಾಯಿಯವರು ದೇಶದ ಪ್ರಮುಖ ನಾಯಕನಾದ*ಬಾಬು ಜಗಜೀವನ್ ರಾಮರನ್ನು *ಮನೆಗೆ ಆಹ್ವಾನಿಸಿ ಬೆಳ್ಳಿಯ ತಟ್ಟೆಯಲ್ಲಿ ಊಟಕ್ಕೆ ಇರಿಸಿದ್ದರು.ಆ ದಿನದ ವಾತಾವರಣ ಅತ್ಯಂತ ಉತ್ಸಾಹಭರಿತರಾದ ಜನರು, ವಿವಿಧ ಸಮುದಾಯದವರೆಲ್ಲರೂಒಂದೇ ಸ್ಥಳದಲ್ಲಿ ಸೇರಿ ಒಂದು ಹೊಸ ಇತಿಹಾಸಕ್ಕೆ ಸಾಕ್ಷಿಯಾದರು. ಜಯದೇವಿ ತಾಯಿಯವರನು ಉದ್ದೇಶಿಸಿಬಾಬು ಜಗಜೀವನ್ ರಾಮ್ ಅವರು ಮಾತನಾಡುತ್ತಾ ಹೇಳಿದರು:“ಸಮಾನತೆ ಎನ್ನುವುದು ಕೇವಲ ಮಾತಲ್ಲ…ಅದನ್ನು ಜೀವನದಲ್ಲಿ ಅನುಸರಿಸುವವರೇ ನಿಜವಾದ ನಾಯಕರಾಗಲು ಸಾಧ್ಯ… ಜಯದೇವಿ ತಾಯಿಯವರೊಂದು ಆಧ್ಯಾತ್ಮಿಕ ಜೀವಿಯು ಕೂಡಾ ಇಂಥವರು ನಿಮ್ಮ ಮಧ್ಯದಲ್ಲಿ ಇದ್ದಿದ್ದು ನಿಮ್ಮಲ್ಲರ ಪುಣ್ಯವೇ ಸರಿ”ಎನ್ನುತಅವರು ತಾಯಿಯವರ ಕಾರ್ಯವನ್ನು ಹೊಗಳಿದರು.ಆ ಮಾತುಗಳು ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿದವು . “ಶರಣ ಸಮಾಜ”ದ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು..ಎಲ್ಲ ಜಾತಿಯವರಿಗೂ ಸಹಭೋಜನಶಿಕ್ಷಣ ಮತ್ತು ಜಾಗೃತಿ ಶಿಬಿರಗಳುಮಹಿಳಾ ಸಬಲೀಕರಣ ಕಾರ್ಯಕ್ರಮಗಳುದಲಿತ ಮತ್ತು ಹಿಂದುಳಿದ ವರ್ಗಗಳಿಗೆ ನೆರವು…ಇಲ್ಲಿ “ನಾನು–ನೀನು” ಎನ್ನುವ ಭೇದವಿಲ್ಲ…“ನಾವು” ಎನ್ನುವ ಭಾವನೆ ಮಾತ್ರ ಇತ್ತು. ಇಂಥ ಸಂಘಗಳ ಸಂಘಟನೆಗಳಿಂದಾಗಿ ನಿಧಾನವಾಗಿ ಬದಲಾವಣೆ ಆರಂಭವಾಯಿತು ಅಂತ ಹೇಳಬಹುದುಜನರು ಪರಸ್ಪರ ಗೌರವದಿಂದ ನೋಡಲು ಆರಂಭಿಸಿದರು.ಒಮ್ಮೆ ದೂರ ದೂರ ಇದ್ದ ಹೃದಯಗಳು,ಸ್ವಲ್ಪಮಟ್ಟಿಗಾದರೂ ಹತ್ತಿರವಾಗತೊಡಗಿದವು.ಈ ಚಳುವಳಿಯಲ್ಲಿ ಶರಣ “ಕಂಬಳಿ ಬಾಬ” ಅವರ ಕಾರ್ಯ ಮಹತ್ವದ್ದು ಎಂದು ನೆನೆಯಬೇಕಾಗುತ್ತದೆ. ಜಯದೇವಿ ತಾಯಿಯವರು ಹೇಳ್ತಾರೆ ….ಎಲ್ಲರೂ ತೋರಿರುವ| ಹೆದ್ದಾರಿ ಒಂದಿರಲು ತಿದ್ದದಲೇ ಮನ ಬುದ್ಧಿಗಳು- ಲೋಕದಿ ಒದ್ದಾಡುವರು ಕೀಳು ಮೇಲೆಂದು ಶರಣ ಸಮಾಜವು ಕೇವಲ ಒಂದು ಸಂಘವಲ್ಲ…ಅದು ಸಮಾನತೆಯ ಬೀಜ ಬಿತ್ತಿದ ಸಾಹಸದ ಚಳುವಳಿಯಾಗಿತ್ತು. ಹುಟ್ಟಿಗೆ ಕುಲವಿಲ್ಲ | ಬಟ್ಟೆಗೆ ಬೆಲೆ ಇಲ್ಲಮಟ್ಟ ಅರಿಬೇಕು ಆಚಾರದ- ಶಿವನಲ್ಲಿದಿಟ್ಟಿ ಇಡಬೇಕ ನಿಶ್ಚಯದಿ!! ಮನುಷ್ಯನಾಗಿ ಹುಟ್ಟಿದ ಮೇಲೆ ಯಾವುದೇ ವ್ಯಕ್ತಿ ಇರಲಿ ಅವನು ಹುಟ್ಟಿ ಬರುವಾಗ ಆ ಜಾತಿ ಈ ಜಾತಿ ಸೇರಿದವನಲ್ಲ …. ಹಣೆಗೆ ಪಟ್ಟಿ ಹಂಚಿಕೊಂಡು ಹುಟ್ಟಿದವನಲ್ಲ ಜನ್ಮ ತಳಿದ ಶಿಶುವಿಗೆ ಯಾವ ಜಾತಿ ಇದೆ ಹೇಳಿ ಯಾವ ಕುಲವಿದೆ ಗೋತ್ರವಿದೆ ?!…ಎಂದು ತಾಯಿಯವರು ಕೇಳುತ್ತಿದ್ದರು‌.ಅದೇ ರೀತಿ ಬಟ್ಟೆಗೆ ಬೆಲೆ ಇಲ್ಲ ಅಂದ್ರೆ ಬದುಕು ಮಾಡಲು ಪ್ರತಿ ಜೀವಿಯು ಕಾಯಕವನ್ನು ಮಾಡಿ ಬದುಕಬೇಕಾಗುತ್ತದೆ.ಕಾಯಕಕ್ಕೆ ಮೇಲು ಕೀಳು ಎಂಬ ತಾರತಮ್ಯ ಸಲ್ಲದು ಯಾವ ಕಾಯಕವೂ ಮಾಡಿದರೂ ಅದು ಶ್ರೇಷ್ಠವಾದದ್ದೇ ಅಂತ ಅಂದರೆ “Dignity of Labour ” ಅನ್ನು ಎತ್ತಿ ಹೇಳುತ್ತದೆ. ಕಾಯಕ ಶ್ರೇಷ್ಠತೆಯಿಂದ ಮನುಷ್ಯ ಶ್ರೇಷ್ಠನಾಗಲು ಸಾಧ್ಯ ಎನ್ನುತ್ತಾ ಸಾಮಾಜಿಕ ಕ್ರಾಂತಿಯಗೆ ತಿರುಗುಕೊಟ್ಟ ಕೀರ್ತಿ ನಮ್ಮ ಶರಣ ಸಮಾಜಕ್ಕೆ ಸಲ್ಲುವುದು ಅನ್ನುತ್ತಿದ್ದರು. ವಿಶ್ವ ಇತಿಹಾಸದಲ್ಲಿ ಕಾಯಕವೇ ಕೈಲಾಸವೆಂದು ಸಾರಿದ ಬಸವಣ್ಣನ ಹೆಸರು ಮೊದಲಾಗುವುದು…. ಸತ್ಯ ಶುದ್ಧ ಕಾಯಕದ ಅನುಷ್ಠಾನ ಮನುಜನ ಆದ್ಯ ಕರ್ತವ್ಯ … ಕೈಗೊತ್ತಿಕೊಂಡ ಕಾಯಕದಲ್ಲಿ ಭಕ್ತಿ ಶ್ರದ್ಧೆ ಇರಬೇಕು ಅದಕ್ಕೆ ಮೇಲು ಕೀಳ ಎಂಬ ಸೂತಕ ತಟ್ಟಬಾರದು ಅನ್ನುತ್ತಿದ್ದರು ತಾಯಿಯವರು… ವೈಚಾರಿಕ ಆಚಾರವೆಂದರೆ ದುಡಿಮೆ ದಾನ ಏನೇ ಇದ್ದರೂ ಎಷ್ಟೇ ಇದ್ದರು ಆಚಾರ ರಹಿತ ವರ್ತನೆಯಲ್ಲಿ ಅದು ಸಂಪೂರ್ಣ ನಿರರ್ಥಕ , ಆದ್ದರಿಂದ ಆಚಾರ ಸಂಪನ್ನನಾಗಿರಬೇಕು ಮನುಷ್ಯ ಅನ್ನುತ್ತಾರೆ ಇದು ಕಾಯದಿಂದ ಬಂದ ಹಣ ಯೋಗ್ಯವಾದ ಕರ್ಮ ಕ್ರಿಯೆಗಳಾದ ಜಂಗಮ ದಾಸೋಹಕ್ಕೆ ಗುರು ಸೇವೆಗೆ ಲಿಂಗದ ಆರಾಧನೆಯೇ ಅಂತಹ ಕೆಲಸಕ್ಕೆ ಸಲ್ಲಬೇಕು. ಸದಾಚಾರ ಕಾಯಕಕ್ಕೆ ಹೆಚ್ಚು ಮಹತ್ವ ನೀಡುತ್ತದೆ ಅನ್ನುತ್ತಿದ್ದರು .ಪರಶಿವನ ಸೇವೆಯಲ್ಲಿ ಸದಾ ತೊಡಗುವುದೇ ಶಿವಾಚಾರ ನಡೆ-ನುಡಿಗಳಲ್ಲಿ ಮಡಿಯಾದವರು ಶಿವಾಚಾರ ಸಂಪನ್ನರು ಅಂತ ಹೇಳ್ತ… ಜಾತಿ ಮತ ರಹಿತ‌ಸಮಾಜ ನಿರ್ಮಿಸಲು ತಾಯಿಯವರು ಒತ್ತುಕೊಟ್ಟವರು.(ಮುಂದುವರೆಯುವುದು) ಸವಿತಾ ದೇಶಮುಖ

Read Post »

You cannot copy content of this page

Scroll to Top