ಅನುವಾದ ಸಂಗಾತಿ
“ಜಲಭಾಷೆ”
ತೆಲುಗು ಮೂಲ:ಡಾ. ದೇವರಾಜು ಮಹಾರಾಜು
ಕನ್ನಡಾನುವಾದ ರಂಗನಾಥ ರಾಮಚಂದ್ರರಾವು


ಕವನ ಒಂದು ಪ್ರತ್ಯೇಕ ಪರಿಭಾಷೆ
ಅದು ಎಲ್ಲಾ ಭಾಷೆಗಳಿಗೂ ಬಗ್ಗುತ್ತದೆ
ಎಲ್ಲಾ ಭಾಷೆಗಳನ್ನು ಬಗ್ಗಿಸಿಕೊಳ್ಳುತ್ತದೆ
ತಲೆ ಬಗ್ಗಿಸಿದಂತೆ ಬಗ್ಗಿಸಿ, ಎಲ್ಲಾ ಪ್ರಕಾರಗಳನ್ನು
ತನ್ನ ರೆಕ್ಕೆಗಳ ಕೆಳಗೆ ಎಳೆದುಕೊಳ್ಳುತ್ತದೆ
ಕಾಲದೊಂದಿಗೆ ಸಾಗುತ್ತಾ
ಒಂದೊಂದು ಸಲ ಕಾಲವನ್ನೂ ದಾಟಿಹೋಗುತ್ತದೆ
ಕವನ ಒಂದು ಜಲ ಭಾಷೆ
ಅದು ಯಾವ ಪಾತ್ರೆಯಲ್ಲಾದರೂ ತುಂಬುತ್ತದೆ –ಒದಗುತ್ತದೆ
ಕವನ ಒಂದು IDEOGRAM
ಅದು ಛಂದಸ್ಸಿನಲ್ಲಿ ಬದುಕುವುದೇ
ಮಾತ್ರಾ ಛಂದಸ್ಸಿನಲ್ಲಿ ಬದುಕುವುದೇ
ವಚನದಲ್ಲಿ ಬದುಕುತ್ತದೆ ಎಂಬ ಚರ್ಚೆ
ಎಷ್ಟು ಅರ್ಥರಹಿತವೆಂದರೆ …
ಜೀವವು ಯಾವ ರೀತಿಯ ಜೀವಿಯಾಗಿ ನಿಲ್ಲುತ್ತದೆ
ಪ್ರಾಣಿಗಳು ಹುಟ್ಟುತ್ತವೆ, ಸಾಯುತ್ತವೆ , ಆದರೆ …
ನಿರಂತರವಾಗಿ ಮುಂದುವರಿಯುವುದು ಜೀವಶಕ್ತಿ ಮಾತ್ರವೇ!
ಪ್ರಕಾರಗಳೂ ಅಷ್ಟೇ !!
ಅಂತರ್ಗತವಾಗಿ ಸಾಗುವುದು ಕವನಶಕ್ತಿ ಮಾತ್ರವೇ!
ಅದೊಂದೇ ಕಾಲಕ್ಕೂ ಜೀವನಕ್ಕೂ ಮಾನವತೆಗೂ
ತಳಮಟ್ಟದಲ್ಲಿ ಹರಿಯುವುದು
ಆಧಾರವಾಗಿ ಇರುತ್ತಿರುವುದು
ಕವನ ಒಂದು ಫ್ರತ್ಯೇಕ ಭಾಷೆ
ಅದು ಎಲ್ಲಾ ಜೀವಿಗಳ ಜೀವ ಭಾಷೆಗಳಲ್ಲಿ ಪ್ರಕಟಗೊಳ್ಳುತ್ತದೆ !
ತೆಲುಗುಮೂಲ: ಡಾ. ದೇವರಾಜು ಮಹಾರಾಜು
ಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು



