ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
Pahalgam in Winters – Kashmir Valley

ಹಿಮಾಲಯ ಮಡಿಲಲ್ಲಿ
ಸ್ವರ್ಗ ಮಲಗಿತ್ತು,
ಬೆಳ್ಳಿಯ ಹಿಮದ ಹಾಸಿಗೆಯಲ್ಲಿ
ಮೌನ ಮುತ್ತು ಹೊಳೆಯಿತು.

ದಾಲ್ ಸರೋವರ
ಸ್ಫಟಿಕ ಕಣ್ಣಾಗಿ,
ಆಕಾಶ ತನ್ನ ಮುಖ ನೋಡಿತು;
ಶಿಕಾರಾಗಳ ಕನಸು ತೇಲಿತು
ನೀರಿನ ಎದೆ ಮೇಲೆ, ಮೃದುವಾಗಿ.

ಗುಲ್ಮಾರ್ಗ್ ಹಿಮ
ಮಕ್ಕಳ ನಗುವಿನಂತೆ,
ಪಹಲ್ಗಾಮ್ ಹುಲ್ಲು
ತಾಯಿಯ ಮಡಿಲಂತೆ,
ಚಿನ್ನಾರ್ ಎಲೆಗಳು
ಕಾಲದ ಬಣ್ಣ ಹೊತ್ತವು.

ಒಂದು ಕ್ಷಣದಲ್ಲಿ
ಸ್ವರ್ಗ ನಡುಗಿತು,
ಗುಂಡಿನ ಶಬ್ದ
ಪರ್ವತ ಹೃದಯ ತೂರಿತು,
ಹಿಮದ ಬಿಳುಪು
ರಕ್ತದ ಕೆಂಪು ಕುಡಿದು
ನೀರಾಗಿ ಹರಿಯಿತು.

ಹೂವಲ್ಲ, ಟುಲಿಪ್ ಅಲ್ಲ,
ನೆಲ ಮೇಲೆ ಬಿದ್ದ
ಮಾನವ ಉಸಿರಿನ ಗುರುತು.

ಪ್ರವಾಸದ ನಗು
ಮರಣದ ಅಳುವಾಯಿತು,
ಗಾಳಿ ಮಾತು ನಿಶ್ಶಬ್ದವಾಗಿ ಕರಗಿತು,
ಹೃದಯದ ನೋವು
ಹಿಮದಲ್ಲಿ ಮಿಶ್ರಿತ.

ಕಾಡು ಮೌನವಾಗಿ ತಿಳಿದುಕೊಂಡಿತು,
ರಕ್ತದ ಪ್ರತಿಜ್ಞೆ
ಮಣ್ಣಿಗೆ ನೆನೆಸಿತು;
ಹೆಜ್ಜೆಗಳ ಶಬ್ದ ಮೌನದಲ್ಲಿ ಹಾರಿತು,
ಹೃದಯದ ನೋವು ನದಿಯಲ್ಲಿ ಹರಿಯಿತು.

ನದಿಗಳು ಹರಿಯುತ್ತಿವೆ,
ಆದರೆ ಹಾಡುತ್ತಿಲ್ಲ,
ಹಿಮದ ಶ್ವೇತದಲ್ಲಿ ಕೆಂಪು ನೀರು ಹರಿದು,
ಮರುಳು ಹೊಳೆಯುತ್ತದೆ,
ನೋವು ಕುಸಿದು,
ಆಕ್ರಂದನ ತೇಲಿ.

ಕಾಶ್ಮೀರಾ,
ನೀನು ಸುಂದರ,
ಆದರೆ ನಿನ್ನ ಸೌಂದರ್ಯ
ಸಾವು ನೆರಳಿನಿಂದ ಮಿಶ್ರಿತ.

ನಿಲ್ಲಲಿ ಉಗ್ರವಾದ,
ಗುಂಡಿಗೆ ಜಾಗ ಬೇಡ;
ಹಿಮ ಮತ್ತೆ ಬಿಳಿಯಾಗಲಿ,
ನದಿಗಳು ಹಾಡಾಗಲಿ,
ಹೃದಯಗಳಲ್ಲಿ ಮರಳಿ
ಮಾನವೀಯತೆ ಆರಾಧನೆಯಾಗಲಿ.

ಕೆಂಪು ಅಧ್ಯಾಯ
ಕಣ್ಣೀರಾಗಿ ಒಣಗಿ,
ಮಾನವೀಯತೆ
ಇಲ್ಲಿ ಮತ್ತೆ
ಸ್ವರ್ಗವಾಗಲಿ.


About The Author

6 thoughts on “ಡಾ. ಹೆಚ್. ನಟರಾಜ್ ಆರ್ಯ ಅವರ “ಕೆಂಪು ಕಾಶ್ಮೀರ””

  1. ಅದ್ಬುತವಾದ ರಚನೆ ಸರ್ ತಮ್ಮ ಆಶಯದಂತೆ ಸ್ವರ್ಗವಾಗಲಿ ಸರ್

  2. ಪದ್ಮ ಆನಂದ್. …. . . ಕೆಂಪು ಕಾಶ್ಮೀರ ನೀವು ಬರೆದಿರುವ ಲೇಖನದ ಸಾಲುಗಳು ತುಂಬಾ ಅದ್ಭುತವಾಗಿದೆ ಮನಸ್ಸಿಗೆ ತುಂಬಾ ನೋವು ಉಂಟಾಗುತ್ತಿದೆ ನಿಮ್ಮ ಆಸೆಯಂತೆ ಎಲ್ಲಾ ಯುದ್ಧಗಳು ಮುಗಿದು ಕೆಂಪು ಕಾಶ್ಮೀರ ಹೋಗಿ ಪ್ರೇಮ ಕಾಶ್ಮೀರ ವಾಗಲಿ ನಿಮ್ಮ ಕವನಕ್ಕೆ ಅಭಿನಂದನೆ ಗಳು ಡಾಕ್ಟರ್ ನಟರಾಜ್ ಆರ್ಯ ಸರ್

  3. Beautiful picture and concern about Kashmir. Sir let your dream become true and we all wish Kempu Kashmir become Prema Kshmir .

Leave a Reply

You cannot copy content of this page

Scroll to Top