ಕಾವ್ಯ ಸಂಗಾತಿ
ಡಾ ತಾರಾ ಬಿ ಎನ್ ಧಾರವಾಡ
“ರಕ್ತದ ಮಳೆ”


ಮಳೆ ಸುರಿಯಬೇಕಾದ
ಆಕಾಶದಿಂದ ಇಂದು
ಸುರಿಯುತ್ತದೆ ರಕ್ತದ ಹನಿ,
ಮಕ್ಕಳ ನಗು ಕೇಳಬೇಕಾದ
ಬೀದಿಯಲ್ಲಿ, ಗುಂಡಿನ ಸದ್ದು ಧ್ವನಿ.
ಅಮ್ಮನ ಮಡಿಲು ಇರಬೇಕಾದ
ಜಾಗದಲ್ಲಿ ಬೂದಿಯಾಗಿದೆ
ಕನಸಿನ ಮನೆ,
ಬಾಲಕನ ಕೈಯಲ್ಲಿ ಪುಸ್ತಕ
ಹಿಡಿದಿದೆ ಭಯದ ಕರಿ ನೆರಳು
ಯಾವ ಧರ್ಮ? ಯಾವ ದೇಶ?
ಯಾರಿಗಾಗಿ ಈ ಹೊತ್ತಿ
ಉರಿಯುವ ಉರಿ ಬೆಂಕಿ?
ಹೆಸರಿಲ್ಲದ ಶವಗಳ ಸಾಲಿನಲ್ಲಿ
ಮಾನವೀಯತೆ ನಿಂತಿದೆ ಮಂಕಾಗಿ ಇಲ್ಲಿ
ಗಾಳಿಯೇ ಕೇಳುತ್ತದೆ ಮೌನವಾಗಿ
ಸಹೋದರತೆ ಸತ್ತು ಹೋಗಿದೆ
ಭೂಮಿಯೇ ಅಳುತ್ತದೆ ಕಣ್ಣೀರಾಗಿ,
“ನಿನ್ನ ಹೆಜ್ಜೆಗೆ ಕೆಂಪಾದ ಗಾಯ ಇದು?”
ನಕ್ಷತ್ರಗಳು ಕೂಡ ಮಾಯವಾಗಿವೆ,
ಅವುಗಳ ಹೊಳಪು ಕಣ್ಣೀರಿಗೆ ಕರಗಿದೆ,
ಶಾಂತಿಯ ಹಕ್ಕಿ ಹಾರಲು ಹೆದರುತ್ತಿದೆ
ಹಕ್ಕಿಯ ರೆಕ್ಕೆಗೂ ಹೊಗೆ ತಗಲಿದೆ.
ಬೂದಿಯಿಂದ ನೋವು ಕೂಗುತ್ತಿದೆ
ಕತ್ತಲಿನ ನಡುವೆ ಬೆಂಕಿ ಚಿಮ್ಮುತ್ತಿದೆ
ರಕ್ತದ ಮಳೆಯನ್ನೇ ಹೊಳೆಯಂತೆ ಮಳೆಯಾಗಿ ಹರಿಯುತ್ತಿದೆ
ಕೈ ಹಿಡಿದು ಕಣ್ಣೀರ ಒರೆಸಲೂ
ಯಾರಿಲ್ಲ ಇಲ್ಲಿ
ಮಾನವೀಯತೆಯನ್ನು ಮತ್ತೊಮ್ಮೆ ಜೀವಂತಗೊಳಿಸಲು ಸಾಧ್ಯವೇ???????
ಮಮತೆ ಕರುಣೆ ಕರಗಿ
ಸತ್ತುಹೋಗಿದೆ.
ಅಮಾಯಕ ಜೀವಗಳ
ಬಲಿ ಏರುತ್ತಿದೆ
ಯುದ್ಧ ಬೇಕಿತ್ತಾ??
ಪರಿಣಾಮ ಘನಘೋರ ,,
ಮರಗುತ್ತದೆ ಮನ
ಕೊರಗುತ್ತದೆ ಜೀವ….
ಡಾ ತಾರಾ ಬಿ ಎನ್ ಧಾರವಾಡ



