ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಮಹಿಳಾದಿನದ ವಿಶೇಷ, ಶ್ರೀದೇವಿ. ಮ. ಗುಮ್ಮಗೋಳ

ಮಹಿಳಾದಿನದ ವಿಶೇಷ ಶ್ರೀದೇವಿ. ಮ. ಗುಮ್ಮಗೋಳ ಮಾನಿನಿಯ ಮನ ಮಾರಿಯೆಂದರುಮಾಯಾಂಗನಿ ಎಂದು ಮೊದಲಿಸಿದರೂ….ಅರಿವಿಲ್ಲದೆ ಅದೇ ಮಾಯಾಜಾಲದಲಿಬಂದಿಯಾದರೂ ಆ ಚಕ್ರವ್ಯೂಹ ಭೇದಿಸಿದಳು ನೀನು… ಬಾಯಬಡಿಕಿ ಎಂದರುಎಲ್ಲ ತಿಳಿದ ಮಳ್ಳಿ ಎಂದರೂ….ಹೊರ ಪ್ರಪಂಚದಲ್ಲಿದ್ದುಏನೂ ಅರಿದ ಕಪ್ಪೆಯಂತಿದ್ದವಳು….ಸಂಸಾರವೆಂಬ ಬಾವಿಯೊಳಗೆಎಲ್ಲವ ಅರಿತು ಮೌನವಾದವಳು ನೀನು… ಬುದ್ದಿ ಮೊನಕಾಲ ಕೆಳಗೆಂದರುಮತಿಹೀನಳೆಂದರೂ…ದೇಶದ ಚುಕ್ಕಾಣಿ ಹಿಡಿದವಳು ನೀನು…ದೇಶದ ಚಿತ್ತ ಹರಿಸಿ ವಿತ್ತ ಓದಿದವಳು ನೀನು….. ಬಜಾರಿ ಎಂದರೂಹೆಮ್ಮಾರಿ ಎಂದರೂ…..ಕಟ್ಟಳೆಗಳ ಗೆರೆ ಎಳೆದರೂ…ಇನಿಯನ ಬರುವಿಗಾಗಿ ಶಬರಿಯಂತೆ ಕಾದವಳು ನೀನು….ದೇಶಭಕ್ತಿ, ದೈವಭಕ್ತಿ ಪ್ರೇಮಭಕ್ತಿಯ ಮೆರೆದು‌ ಸ್ಪುಟವಾದವಳು ನೀನು….ಆಟ, ಓಟ, ಪಾಠ ಎಲ್ಲಂದರಲ್ಲೂ ಸೈ ಎನಸಿಇತಿಹಾಸ ಪುಟವಾದವಳು ನೀನು… ಮನೆಗೆ ಭಾರವೆಂದರೂ…ಇದಿಯಾದವಳೆಂದರೂ…ಪ್ರೀತಿ ಅಕ್ಕರೆಯ ತೋರಿ ಸಾಕಿ ಸಲುಹಿದಮಗನೇ ಬೆನ್ನು ತಿರುಗಿಸಿದಾಗಹೆತ್ತವರನ್ನೆ ದೂಡಿ ಬಿಸಾಕಿದಾಗಹೆಗಲು ಕೊಟ್ಟವಳು ನೀನು…ಅಕ್ಕರೆಯಿಂದ ಆಸರೆಯಾಗಿ ಸಲುಹಿದವಳು ನೀನು..ಕಡೆಗೆ ಸತ್ತಾಗ ಅದೇ ಜೀವಗಳಿಗೆ ಅಳುತಹಿಡಿ ಮಣ್ಣು ಹಾಕಿದವಳು ನೀನು.. ಅಬಲೆಯೆಂದರೂ‌‌….ಮೂಲ ಹುಡಕಬೇಡವೆಂದರೂ…ಮಾನಿನಿ ನಿನ್ನ ಬಾಳಲ್ಲಿಮಾಗಿ ಹಣ್ಣಾದವಳು ನೀನು…ಬಾಗಿ ಸಣ್ಣಾದವಳು ನೀನು…ತೂಗಿ ಹೊನ್ನಾದವಳು ನೀನು…ತನ್ನತನವ ತೊರೆದುಇತರರಿಗಾಗಿ ಬಾಳಿದವಳು ನೀನು…ಕೊನೆಗೆ ನಿನ್ನ ಅಸ್ತಿತ್ವ ನೀನೆ ಹುಡುಕುತಮಣ್ಣಾದವಳು ನೀನು…. ಶ್ರೀದೇವಿ. ಮ. ಗುಮ್ಮಗೋಳ   ಶ್ರೀದೇವಿ. ಮ. ಗುಮ್ಮಗೋಳ

ಮಹಿಳಾದಿನದ ವಿಶೇಷ, ಶ್ರೀದೇವಿ. ಮ. ಗುಮ್ಮಗೋಳ Read Post »

ಇತರೆ

ಮಹಿಳಾದಿನದ ವಿಶೇಷ,ಕಲ್ಪನಾ ಎಸ್ ಪಾಟೀಲ

ಮಹಿಳಾ ದಿನದ ವಿಶೇಷ ಕಲ್ಪನಾ ಎಸ್ ಪಾಟೀಲ ನಾವೇಕೆ ಹೀಗೆ.!? ಸಂಬಂಧಗಳನೆಲ್ಲ ಅಳೆದುತೂಗುವದಿಲ್ಲ, ಎಲ್ಲರೂನನ್ನವರೇ ಎನ್ನುವೆವಲ್ಲ, ನಾವೇಕೆ ಹೀಗೆ.?! ವೈಯಕ್ತಿಕ ಆಸೆ, ಕನಸುಗಳನೆಲ್ಲಹತ್ತಿಕ್ಕಿ ಬದುಕ ನಡೆಸಿದೆವಲ್ಲತಮಗಾಗಿ ಬದುಕಲಿಲ್ಲ, ನಾವೇಕೆ ಹೀಗೆ.!? ತವರುಮನೆಯ ತೊರೆಯಬೇಕುಗಂಡನಮನೆಯಲಿ ಬೆರೆಯಬೇಕುಇಲ್ಲಿಯೂ ನಮಗಾಗಿ ಅಲ್ಲ, ನಾವೇಕೆ ಹೀಗೆ.!? ಸಣ್ಣ ಸಣ್ಣ ಕ್ಷಣಗಳ ಆನಂದಿಸುವಳುಅಡುಗೆ ಮನೆಯೇ ತನ್ನದೆನ್ನುವಳುನಮಗೆಲ್ಲಾ‌ ಅದ್ಯಾಕ ಎನ್ನುವಳು ಅವಳೇಕೆ ಹೀಗೆ.?! ಮಾತಿಗೆ ಮೊದಲೇ ಸಹನಾಮೂರ್ತಿಯಾಗಿಹಳುಸಿಟ್ಟು ಕೋಪವ ಒಳಗೊಳಗೆ ನುಂಗುವಳುತನ್ನ ರಕ್ತವ ಸುಟ್ಟುಕೊಳ್ಳುವಳು ಇವಳೇಕೆ ಹೋಗೆ.?! ಗಂಡ ಗದರಿದರೂ ಮರಳಿ ಗದರಿಸದವಳುಮಕ್ಕಳು ಹೆದರಿಸಿದರೂ ಹೆದರುವಳುಮನಕೆ ಘಾಸಿಯಾದರೂ ಸಹಿಸುವಳು ಇವಳೇಕೆ ಹೀಗೆ.!? ಇಂದು ಮಹಿಳಾ ದಿನಾಚರಣೆಯಂತೆಒಂದಿನಕೆ ಆಚರಣೆಗಾದರೆನಿತ್ಯಕೆ ಅದಾವ/ರ ಆಚರಣೆ.!? ಕಲ್ಪನಾ ಎಸ್ ಪಾಟೀಲ

ಮಹಿಳಾದಿನದ ವಿಶೇಷ,ಕಲ್ಪನಾ ಎಸ್ ಪಾಟೀಲ Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-31 ಈ ಮನೆಯ ಬಾಲ್ಕನಿಯಲ್ಲಿ ನಿಂತರೆ ಇಡೀ ಸಂತೆಯೇ ಕಾಣುತ್ತಿತ್ತು ಗುರುವಾರದ ದಿನ ಬಂತು ಬೆಳಗ್ಗೆ 6 ಗಂಟೆಯಿಂದಲೇ ಜನಗಳ ಗಾಡಿಗಳ ಓಡಾಟ ಮತ್ತೆ ಸಂಜೆಯವರೆಗೂ ಇದೇ ರೀತಿ ರಸ್ತೆ ಬ್ಯುಸಿ ಇರುತ್ತಿತ್ತು. ಸಂಜೆ ಸಂತೆ ಕೆ ಬಂದ ಕೆಲವು ಸಹೋದ್ಯೋಗಿಗಳು ಮನೆಗೆ ಬರುತ್ತಿದ್ದರು ಹಳೆಯ ಮನೆಯ ಬಳಿಯಿದ್ದ ಪರಿಚಿತರು ಬರುತ್ತಿದ್ದರು ಹಾಗಾಗಿ ಗುರುವಾರ ನಾವು ಸಂಜೆ ತುಂಬಾ ಬ್ಯುಸಿ ಆಗಿಬಿಡುತ್ತಿದ್ದೆವು. ಅದೇ ರಸ್ತೆಯ ಕೊನೆಯಲ್ಲಿ ಬಸ್ ಡಿಪೋ ಇದುದರಿಂದ ಬಹಳಷ್ಟು ಬಸ್ ಓಡಾಟ ಸದಾ ಇರುತ್ತಿತ್ತು .ಹೀಗಾಗಿ ಬಾಲ್ಕನಿ ಸದಾ ಧೂಳಾಗಿಯೇ ಇರುತ್ತಿತ್ತು . ಆಗ ಪುಟ್ಟ ಮಗುವಾಗಿದ್ದ ನನ್ನ ತಂಗಿಯ ಮಗ ನಿಶ್ಚಯ್ ಗಂತೂ ಓಡಾಡುತ್ತಿದ್ದ ಆ ಕೆಂಪು ಬಸ್ ಗಳನ್ನು ನೋಡುವುದೇ ಒಂದು ಖುಷಿ.ಈ ಮನೆಯಲ್ಲಿ ಇದ್ದಾಗಲೇ ನಮ್ಮ ಅತ್ತೆ ಮಾವ ಸಹ ಬಂದು ಒಂದು ವಾರ ಇದ್ದರು ನಮ್ಮ ಅತ್ತೆಯ ತಾಯಿಯ ಮನೆ ಸಕಲೇಶಪುರದ ಹತ್ತಿರದ ಊರೇ ಆದ್ದರಿಂದ ಅಲ್ಲಿಗೂ ಒಮ್ಮೆ ಹೋಗಿ ಬಂದರು. ನನ್ನ ಮೈದುನ ಹಾಗೂ ಓರಗಿತ್ತಿ ಸಹ ಒಮ್ಮೆ ಇಲ್ಲಿಗೆ ಬಂದಿದ್ದರು. ಅವರೊಂದಿಗೆ ನಾವು ಹೊರನಾಡು ಹೋಗಿ ದೇವಿ ದರ್ಶನ ಮಾಡಿ ಬಂದೆವು ದಿನವೇ ಐ ಆರ್ ಡಿ ಎ ಬಿಲ್ ಸಹ ಮಂಡಿಸಲ್ಪಟ್ಟು ಇದ್ದಕ್ಕಿದ್ದಂತೆ ಆ ದಿನ ಸ್ಟ್ರೈಕ್ ಕೊಟ್ಟಿದ್ದರು ಹಾಗಾಗಿ ರಜೆಯ ಬದಲು ಸ್ಟ್ರೈಕ್ ನಲ್ಲಿ ಭಾಗವಹಿಸುವ ಹಾಗೆ ಆಯಿತು. ಏನಿದು ಐಆರ್‌ಡಿಎ ಬಿಲ್? ಇದುವರೆಗೆ ಏಕಸ್ವಾಮ್ಯವಾಗಿ ಇದ್ದ ಭಾರತೀಯ ಜೀವವೀಮನಿಗಮ ಮತ್ತು ವಿಮಾ ವಲಯ ಈಗ ಒಂದು ಪ್ರಾಧಿಕಾರದ ಮಿತಿಗೆ ಒಳಪಟ್ಟು ಹೊರಗಿನ ಸಂಸ್ಥೆಗಳು ಸಹ ಜೀವವಿಮ ವಹಿವಾಟು ನಡೆಸಲು ಅರ್ಹವಾಗುತ್ತಿದ್ದವು. ಭಾರತೀಯ ಜೀವ ವಿಮಾ ನಿಗಮದ ಸಾರ್ವಭೌಮತ್ವಕ್ಕೆ ಉಂಟಾಯಿತು. IRDAI ಎನ್ನುವುದು ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ಸ್ವಾಯತ್ತ ಮತ್ತು ಶಾಸನಬದ್ಧ ಸಂಸ್ಥೆಯಾಗಿದೆ. ಇದು ಭಾರತದಲ್ಲಿ ವಿಮಾ ಕ್ಷೇತ್ರವನ್ನು (Insurance Sector) ನಿಯಂತ್ರಿಸುವ ಮತ್ತು ಅಭಿವೃದ್ಧಿಪಡಿಸುವ ಸರ್ವೋಚ್ಚ ಸಂಸ್ಥೆಯಾಗಿದೆ.​ಇದನ್ನು 1999 ರಲ್ಲಿ ‘IRDA ಕಾಯ್ದೆ’ಯ ಅಡಿಯಲ್ಲಿ ರಚಿಸಲಾಯಿತು.ಮಲ್ಹೋತ್ರಾ ಸಮಿತಿಯ ಶಿಫಾರಸಿನ ಮೇರೆಗೆ IRDAI ಅಸ್ತಿತ್ವಕ್ಕೆ ಬಂದಿತು.​ಕೇಂದ್ರ ಕಚೇರಿ ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿದೆ. ​IRDAI ಸ್ಥಾಪನೆಯ ಹಿಂದೆ ಪ್ರಮುಖವಾಗಿ ಮೂರು ಉದ್ದೇಶಗಳಿವೆ:​ವಿಮಾದಾರರ ಹಿತರಕ್ಷಣೆ: ವಿಮೆ ಮಾಡಿಸಿದ ಗ್ರಾಹಕರಿಗೆ ಯಾವುದೇ ಅನ್ಯಾಯವಾಗದಂತೆ ನೋಡುವುದು.​ಕ್ಷೇತ್ರದ ನಿಯಂತ್ರಣ: ವಿಮಾ ಕಂಪನಿಗಳು ಸರಿಯಾದ ನಿಯಮಗಳನ್ನು ಪಾಲಿಸುತ್ತಿವೆಯೇ ಎಂದು ಮೇಲ್ವಿಚಾರಣೆ ಮಾಡುವುದು.​ಅಭಿವೃದ್ಧಿ: ವಿಮಾ ಕ್ಷೇತ್ರವು ವ್ಯವಸ್ಥಿತವಾಗಿ ಬೆಳೆಯಲು ಪೂರಕವಾದ ವಾತಾವರಣ ನಿರ್ಮಿಸುವುದು.​IRDAI ಈ ಕೆಳಗಿನ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ:​ಪರವಾನಗಿ ನೀಡುವುದು: ಹೊಸ ವಿಮಾ ಕಂಪನಿಗಳಿಗೆ ವ್ಯವಹಾರ ನಡೆಸಲು ಪರವಾನಗಿ (License) ನೀಡುವುದು ಮತ್ತು ಅದನ್ನು ನವೀಕರಿಸುವುದು.​ನಿಯಮಗಳ ರೂಪಣೆ: ವಿಮಾ ಪಾಲಿಸಿಗಳು ಹೇಗೆ ಇರಬೇಕು, ಪ್ರೀಮಿಯಂ ದರಗಳು ಮತ್ತು ಕ್ಲೈಮ್ (Claim) ಇತ್ಯರ್ಥದ ಬಗ್ಗೆ ನಿಯಮಗಳನ್ನು ರೂಪಿಸುವುದು.​ದೂರುಗಳ ಪರಿಹಾರ: ವಿಮಾ ಕಂಪನಿ ಮತ್ತು ಗ್ರಾಹಕರ ನಡುವೆ ವಿವಾದ ಉಂಟಾದಾಗ ಅದನ್ನು ಬಗೆಹರಿಸಲು ವೇದಿಕೆ ಕಲ್ಪಿಸುವುದು.​ಬಂಡವಾಳದ ಮೇಲ್ವಿಚಾರಣೆ: ವಿಮಾ ಕಂಪನಿಗಳು ಗ್ರಾಹಕರ ಹಣವನ್ನು ಹಿಂತಿರುಗಿಸಲು ಬೇಕಾದಷ್ಟು ಆರ್ಥಿಕ ಸಾಮರ್ಥ್ಯ ಹೊಂದಿವೆಯೇ ಎಂದು ಪರಿಶೀಲಿಸುವುದು.​ತರಬೇತಿ ಮತ್ತು ಶಿಕ್ಷಣ: ವಿಮಾ ಏಜೆಂಟ್‌ಗಳಿಗೆ ಬೇಕಾದ ಅರ್ಹತೆ ಮತ್ತು ತರಬೇತಿಯ ಮಾನದಂಡಗಳನ್ನು ನಿಗದಿಪಡಿಸುವುದು. ಅಂದಿನ ದಿನಗಳಲ್ಲಿ ಈ ವಿದ್ಯಮಾನಗಳು ತುಂಬಾ ಆತಂಕವನ್ನು ಹುಟ್ಟಿಸಿದ್ದು ಮುಂದಿನ ದಿನಗಳು ಹೇಗೋ ಏನೋ ಎಂಬ ದಿಗಿಲು ಸಹ ಉಂಟಾಗಿತ್ತು. ಆದರೆ ಜೀವ ವಿಮಾನ ನಿಗಮ ತನ್ನ ಸಮರ್ಥ ಆರ್ಥಿಕ ನೀತಿ ಹಾಗೂ ದಕ್ಷ ಆಡಳಿತ ವಿಧಾನಗಳಿಂದ ಈ ಹೊರಗಿನ ಸ್ಪರ್ಧೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಾ ಬಂದಿದೆ ಎಂದು ಹೆಮ್ಮೆಯಿಂದ ಹೇಳಬಹುದು. ಜೂನ್ 1999ರಲ್ಲಿ ನನ್ನ ತಂಗಿ ಪ್ರಯಾಣ ವಿವಾಹ ಆಯಿತು. 15 ದಿನಗಳ ಕಾಲ ರಜೆ ತೆಗೆದುಕೊಂಡು ಹೋಗಿ ಮದುವೆ ಮುಗಿಸಿ ಬಂದಾಯಿತು. ಮದುವೆ ತಿಂಡಿಗಳನ್ನು ಇಟ್ಟಿದ್ದ ಬ್ಯಾಗ್ ಸಕಲೇಶಪುರಕ್ಕೆ ಬರುವಾಗ ಮರೆತು ಬಂದಿದ್ದೆವು. ರವೀಶ್ ಸಹ ಅಂದು ನನ್ನ ಜೊತೆಗೆ ಬಂದುಬಿಟ್ಟಿದ್ದರು ಇನ್ನು ತಿಂಡಿಗಳು ಮಿಸ್ ಆಗುತ್ತದೆ ಎಂದು ಅಷ್ಟು ಆಯಾಸವಾಗಿದ್ದರು ಸಹ ಮಧ್ಯಾಹ್ನವೇ ನಮ್ಮ ತಂದೆ ಅದನ್ನೆಲ್ಲ ತೆಗೆದುಕೊಂಡು ಸಕಲೇಶಪುರಕ್ಕೆ ಬಂದಿದ್ದರು. ಅದನ್ನು ನೆನೆಸಿಕೊಂಡರೆ ಈಗಲೂ ಕಣ್ಣು ತುಂಬಿ ಬರುತ್ತದೆ ಆ ಪ್ರೀತಿಗೆ ಯಾವುದು ತಾನೇ ಸಾಟಿಯಾದೀತು?ಅಣ್ಣ ಅಲ್ಲಿದ್ದಾಗಲೇ ನವ ವಿವಾಹಿತ ಜೋಡಿಯು ಸಹ ಸಕಲೇಶಪುರಕ್ಕೆ ಬಂದಿದ್ದರು ಅಲ್ಲಿ ಸುತ್ತ ಮುತ್ತಲಿನ ಹಾರ್ಲೆ ಎಸ್ಟೇಟ್ ಟೀ ಫ್ಯಾಕ್ಟರಿ ಅವೆಲ್ಲವನ್ನು ಆಗ ಹೋಗಿ ನೋಡಿಕೊಂಡು ಬಂದೆವು. ಸುಲೋಚನಾ ಸಹ ನಮ್ಮೊಂದಿಗೆ ಆಗ ಬಂದಿದ್ದರು.ಮದ್ದೂರಿನಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಇದ್ದ ನನ್ನ ತಂಗಿ ಔಅಯಳಿಗೆ ಮದುವೆಯ ನಂತರ ಹುಣಸೂರಿಗೆ ವರ್ಗ ಆಯಿತು. ಅವಳ ಪತಿ ಪ್ರಸನ್ನ ಅವರು ಸಹ ಜೀವವಿಮನಿಗಮದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕೆಆರ್ ನಗರಕ್ಕೆ ಸೇರಿದಂತಿದ್ದ ಬೆಟ್ಟದ ಪುರದಲ್ಲಿ ಇದ್ದರು. ಅವರು ನಮಗೆ ಬ್ಯಾಚ್ ನ ಹಿಂದಿನ ಮೊದಲ ಲಿಸ್ಟ್ ನಲ್ಲಿ ಆಯ್ಕೆಯಾದ ಅಭ್ಯರ್ಥಿ ಸಹಾಯಕರಾಗಿ ಆಯ್ಕೆಯಾದವರು ನಂತರ ಅಭಿವೃದ್ಧಿ ಅಧಿಕಾರಿಯಾಗಿ ಬದಲಾವಣೆ ತೆಗೆದುಕೊಂಡಿದ್ದರು .ಇಬ್ಬರಿಗೂ ಮಧ್ಯದ ಜಾಗವಾದ ಪಿರಿಯಾಪಟ್ಟಣದಲ್ಲಿ ಮನೆ ಮಾಡಿದ್ದರು.ಅಲ್ಲಿ ಕಚೇರಿ ಸೇವಾ ವಿಭಾಗಕ್ಕೆ ನನಗೆ ಬದಲಾವಣೆ ಸಿಕ್ಕಿತು ಆಗ ಹಿಂದಿ ದಿನಾಚರಣೆಯ ಸಂದರ್ಭ ಬಂದಿತ್ತು. ಆಗ ಸುಮಾರು ಸ್ಪರ್ಧೆಗಳನ್ನು ಏರ್ಪಡಿಸಿ ಎಲ್ಲರೂ ಭಾಗವಹಿಸಲು ಅನುಕೂಲವಾಗುವ ಹಾಗೆ ಒಂದು ಅಂತ್ಯಾಕ್ಷರಿ ಸ್ಪರ್ಧೆಯನ್ನು ಸಹ ಏರ್ಪಡಿಸಿದೆವು ನಾನು ಮತ್ತು ಸುಲೋಚನಾ ಸೇರಿ ಅದನ್ನು ನಡೆಸಿಕೊಟ್ಟವು ಅಲ್ಲಿ ಎಲ್ಲರಿಗೂ ಅದು ತುಂಬಾ ಇಷ್ಟವಾಗಿತ್ತು. ಹೀಗೆ ಒಂದು ಕನ್ನಡದ ಅಂತ್ಯಾಕ್ಷರಿ ಮಾಡಿ ಎಂದು ಹೇಳಿ ಅಲ್ಲಿನ ಅಭಿವೃದ್ಧಿ ಅಧಿಕಾರಿಗಳು ಬಹುಮಾನದ ಪ್ರಾಯೋಜಕತ್ವ ವಹಿಸಿಕೊಂಡರು. ಆಗೊಮ್ಮೆ ಕನ್ನಡ ಅಂತ್ಯಾಕ್ಷರಿಯನ್ನು ಸಹ ನಡೆಸಿಕೊಟ್ಟಿದ್ದೆವು. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು ಅವುಗಳಿಗೆ ಬಹುಮಾನಗಳನ್ನು ಆರಿಸಿ ತರುವುದು ಇವೆಲ್ಲವೂ ತುಂಬಾ ಖುಷಿ ಕೊಟ್ಟ ಕೆಲಸ. ನನಗೆ ಸಹಾಯಕ ಆಗಿದ್ದ ರಘು ಅವರು ಅಲ್ಲಿನ ಅಂಗಡಿಗಳ ಮಾಲೀಕರನ್ನು ಚೆನ್ನಾಗಿ ಬಲ್ಲವರಾದ್ದರಿಂದ ಒಳ್ಳೆಯ ಚೌಕಾಸಿ ನಡೆಸಿ ಗುಣಮಟ್ಟದ ಸಾಮಾನುಗಳನ್ನು ಆದಷ್ಟು ರಿಯಾಯಿತಿಯಲ್ಲಿ ಕೊಂಡು ಬರುತ್ತಿದ್ದೆವು.ನಾವು ಹೋಗಿದ್ದಾಗ ಉಮೇಶ್ ಭಟ್ ಎನ್ನುವವರು ಅಲ್ಲಿನ ಉಪ ಶಾಖಾಧಿಕಾರಿಗಳಾಗಿದ್ದವು ಅವರು ನಟಿ ವಿನಯ ಭಟ್ ಅವರ ಕುಟುಂಬ ಸ್ನೇಹಿತರು ಒಮ್ಮೆ ಸಕಲೇಶಪುರದ ಬಳಿ ಶೂಟಿಂಗ್ ಗೆ ಬಂದಿದ್ದ ವಿನಯ ಭಟ್ ಅವರು ಅವರ ಮನೆಗೆ ಬಂದಿದ್ದರಂತೆ. ಆಗ ನಮ್ಮ ಶಾಖೆಯ ಎಲ್ಲರೂ ಅವರ ಮನೆಗೆ ಹೋಗಿ ಆಕೆಯನ್ನು ಮಾತನಾಡಿಸಿಕೊಂಡು ಬಂದರಂತೆ ನಾನು ಸುಲೋಚನಾ ಆಗ ರಜೆ ಹಾಕಿ ಮೈಸೂರಿಗೆ ಬಂದು ಬಿಟ್ಟಿದ್ದೆವು. ಹಾಗಾಗಿ ನಮಗೆ ಆ ಭೇಟಿ ಸಾಧ್ಯವಾಗಲಿಲ್ಲ ನಮಗೆ ಪುಸ್ತಕದ ಮೇಲಿನ ಪ್ರೀತಿ ನೋಡಿ ಉಮೇಶ್ ಭಟ್ ಅವರು ಹಸ್ತ ಸಾಮುದ್ರಿಕೆಯ ಬಗ್ಗೆ ಇದ್ದ ಒಂದು ಇಂಗ್ಲಿಷ್ ಪುಸ್ತಕವನ್ನು ನಮಗೆ ಅವರು ವರ್ಗವಾಗಿ ಹೋಗುವಾಗ ಉಡುಗೊರೆಯಾಗಿ ಕೊಟ್ಟಿದ್ದರು. ಅವರು ಹೋದ ನಂತರ ಮೈಸೂರಿನ ಬ್ರಾಂಚ್ ಒಂದರಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದ ರಾಜೇಂದ್ರ ಪ್ರಸಾದ್ ಎನ್ನುವವರು ಉಪಶಾಖಾಧಿಕಾರಿಗಳಾಗಿ ಬಂದಿದ್ದರು. ನಾವು ವಾಪಸ್ ಮನೆ ಶಿಫ್ಟ್ ಮಾಡುವ ಸಂದರ್ಭದಲ್ಲಿ ರವೀಶ್ ಅವರನ್ನು ಕರೆದುಕೊಂಡು ಹೋಗಿ ಸಕಲೇಶಪುರದ ವಿಶೇಷವಾದ ಕಾಫಿ ಬೊಡ್ಡೆಯ ಅಲಂಕಾರಿಕ ಸಾಮಗ್ರಿಗಳನ್ನು ಕೊಳ್ಳಲು ಸಹಾಯ ಮಾಡಿದ್ದರು. ಅವುಗಳಲ್ಲಿ ಒಂದು ಈಗಲೂ ನಮ್ಮ ಮನೆಯಲ್ಲಿ ಇದೆ ಸಕಲೇಶಪುರದಲ್ಲಿ ಕೆಲಸ ಮಾಡಿದ ದಿನಗಳ ನೆನಪಿನ ಕುರುಹಾಗಿ. ಛಾಯಾ ಮತ್ತು ಪ್ರಸನ್ನ ನಿರ್ಮಲ ಟ್ರಾವೆಲ್ಸ್ ನ ಮಧ್ಯ ಇಂಡಿಯಾ ಪ್ರವಾಸಕ್ಕೆ ಹೋಗಲು ಯೋಜನೆ ಮಾಡಿದರು. ನಮ್ಮ ತಂದೆ ತಾಯಿ ಹಾಗೂ ಪ್ರಸನ್ನ ಅವರ ತಂದೆ ತಾಯಿ ಅವರುಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಉದ್ದೇಶ ಇತ್ತು ನಮಗೂ ಹೇಗೂ ಎಲ್ ಟಿ ಸಿ ದೊರೆಯುತ್ತಿದ್ದರಿಂದ ನಾನು ಮತ್ತು ರವೀಶ್ ಸಹ ಹೊರಡಲು ನಿಶ್ಚಯಿಸಿದೆವು. ಭಾರತೀಯ ಜೀವವಿಮಾನ ನಿಗಮದಲ್ಲೇ ಅಭಿವೃದ್ಧಿ ಅಧಿಕಾರಿಯಾಗಿರುವ ಪ್ರಸನ್ನ ಅವರ ಅಣ್ಣ ಪ್ರಭಾಕರ್ ಹಾಗೂ ಅವರ ಪತ್ನಿ ಶಾಮಲಾ ಮತ್ತು ಮಗಳು ಪ್ರೇರಣಾ ಸಹ ನಮ್ಮ ಜೊತೆಗೆ ಸೇರಿಕೊಂಡರು. ಹೀಗೆ ಹನ್ನೆರಡು ಜನಗಳ ನಮ್ಮ ಗುಂಪು ಮಂಗಳೂರಿನಿಂದ ಹೊರಟ ಆ ಪ್ರವಾಸದಲ್ಲಿ ಸೇರಿದೆವು ತುಂಬಾ ಚೆನ್ನಾಗಿ ನಡೆದ ಪ್ರವಾಸ ಈಗಲೂ ಒಂದು ಸವಿ ನೆನಪು. ನಾವು ಸಕಲೇಶಪುರದಿಂದಲೇ ಮಂಗಳೂರಿಗೆ ಹೋಗಿದ್ದೆವು ಮತ್ತು ಮಂಗಳೂರಿನಿಂದಲೇ ಮತ್ತೆ ವಾಪಸ್ಸಾದೆವು. ಅವರೆಲ್ಲ ಹೊರಡುವಾಗ ಮಂಗಳೂರಿಗೆ ಬಂದಿದ್ದರು. ವಾಪಸ್ ಆಗುವಾಗ ಹುಬ್ಬಳ್ಳಿಯಿಂದಲೇ ಮೈಸೂರಿಗೆ ವಾಪಸ್ ಹೋದರು. ನನ್ನ ಕಡೆಯ ತಂಗಿ ವೈಶಾಲಿ ಮತ್ತು ಮುರಳಿ ಮಗು ಚಿಕ್ಕವನಿದ್ದುದರಿಂದ ಬರಿ ಮಂಗಳೂರು ಪ್ರವಾಸಕ್ಕೆ ಮಾತ್ರ ಜೊತೆಯಾಗಿ ನಂತರ ಮೈಸೂರಿಗೆ ವಾಪಸ್ ಆದರು. ಹಾಗೆ ಹೀಗೆ ಎನ್ನುವಂತೆ ದಿನಗಳು ಕಳೆದು ಮುಂದಿನ ಪದೋನ್ನತಿಗಳ ಸಮಯ ಬಂದೇ ಬಿಟ್ಟಿತು. ಆ ಬಾರಿ ಅದು ತಡವಾಗಿ ಮಾರ್ಚ್ ತಿಂಗಳ ತನಕ ಎಳೆದುಕೊಂಡು ಹೋಗಿದ್ದು. ಬಹಳ ಕಾಲದಿಂದ ನಿರೀಕ್ಷೆ ಇದ್ದ ವರ್ಗಾವಣೆ ಪಟ್ಟಿ ಪ್ರಕಟವಾಗಿತ್ತು ನನಗೆ ನಂಜನಗೂಡಿಗೆ ಸಿಕ್ಕಿತ್ತು ಸ್ವಲ್ಪವೇ ಅಂತರದಿಂದ ಸುಲೋಚನಾ ಅವರಿಗೆ ನಂಜನಗೂಡು ತಪ್ಪಿ ಹೋಗಿ ಚಾಮರಾಜನಗರಕ್ಕೆ ವರ್ಗಾವಣೆ ಸಿಕ್ಕಿತು. ಓಡಾಡಬಹುದಾಗಿತ್ತು ಅವರ ಮನೆ ನಂಜನಗೂಡಿನಲ್ಲಿ ಇದ್ದುದರಿಂದ. ಸ್ವಲ್ಪ ಸಮಾಧಾನ ಅಷ್ಟೇ. ಆದರೆ ಮತ್ತೊಂದು ಸಮಸ್ಯೆ ಎದುರಾಗಿತ್ತು.ನಾವಿದ್ದ ಮನೆಯ ಮಾಲೀಕ ತುಂಬಾ ಸಾಲದ ಸುಳಿಗಳಿಗೆ ಸಿಕ್ಕಿಕೊಂಡು ಮನೆ ಕೋರ್ಟ್ ಆದೇಶದಲ್ಲಿ ಇತ್ತು. ನಾವು ಕೊಟ್ಟಿದ್ದ ಮುಂಗಡ ಹಣ 15000 ವಾಪಸ್ ಮಾಡುವ ಸ್ಥಿತಿಯಲ್ಲಿ ಆತ ಇರಲಿಲ್ಲ .ಆದರೆ ನಾವು ಮನೆಯನ್ನು ಬಿಡಲೇಬೇಕಿತ್ತು.‌ ಕೆಲವರು ಕೊಟ್ಟ ಸಲಹೆಯಂತೆ ಒಂದೆರಡು ಹಳೆಯ ಸಾಮಾನುಗಳನ್ನು ಅಲ್ಲಿಯೇ ಬಿಟ್ಟು ಮನೆಯ ಬೀಗವನ್ನು ಸಕಲೇಶಪುರದಲ್ಲೇ ಇದ್ದ ರವೀಶ್ ಅವರ ಊರಿನವರೇ ಆದ ಸತ್ಯ ಮತ್ತು ಮೋಹನ್ ಅವರಿಗೆ ಕೊಟ್ಟು ಬಂದೆವು. ಆ ಕಾಲಕ್ಕೆ ೧೫೦೦೦ ಸಣ್ಣ ಮೊತ್ತವೇನಲ್ಲ. ವಾಪಸ್ಸು ಬಾರದಿದ್ದರೆ ಹೇಗಪ್ಪಾ ಅಂತಲೂ ಚಿಂತೆ. ಆದರೆ ನಮ್ಮ ತಂದೆ ಮಾತ್ರ ಭರವಸೆ ಇಟ್ಟುಕೊಂಡು ಹೇಳುತ್ತಿದ್ದರು ಕಷ್ಟಪಟ್ಟು ದುಡಿದ ಹಣ ಖಂಡಿತ ವಾಪಸ್ ಬಂದೆ ಬರುತ್ತದೆ ಎಂದು ಅವರ ಆಶೀರ್ವಾದದಂತೆ ಒಂದೆರಡು ತಿಂಗಳ ಬಳಿಕ ಆ ಮನೆಯನ್ನು ಬೇರೊಬ್ಬರು ಕೊಂಡುಕೊಂಡು ಮುಂಗಡ ಹಣ ವಾಪಸ್ ಕೊಟ್ಟು ಕೀ ಪಡೆದುಕೊಂಡರಂತೆ. ಫೋನ್ ಮಾಡಿ ತಿಳಿಸಿದ ಮೇಲೆ ರವೀಶ್ ಅವರು ಹೋಗಿ ಹಣ ತೆಗೆದುಕೊಂಡು ಬಂದರು ಮನಸ್ಸಿಗೆ ಸ್ವಲ್ಪ ನಿರಾಳವಾಯಿತು. ಮೊದಲು ನಾವಿದ್ದ ಮನೆ ಕಟ್ಟಿದ್ದಾಗ ವಾರ್ಡ್ರೋಬ್ ಕೆಲಸಗಳನ್ನು ಮಾಡಿರಲಿಲ್ಲ ಹೀಗಾಗಿ ನಾವು ವಾಪಸ್ ಬರುವಾಗ ಮತ್ತೆ ಮನೆಗೆ ಪೇಂಟ್ ಮಾಡಿಸಿ ವಾರ್ಡ್ರೋಬ್ ಗಳನ್ನು ಮಾಡಿಸಿಕೊಂಡು ಬಂದೆವು..(ಮುಂದಿನವಾರಕ್ಕೆ) ಸುಜಾತಾ ರವೀಶ್

Read Post »

ಇತರೆ

ಮಹಿಳಾದಿನದ ವಿಶೇಷ, ವಿಮಲಾರುಣ ಪಡ್ಡoಬೈಲು

ಮಹಿಳಾ ದಿನದ ವಿಶೇಷ ವಿಮಲಾರುಣ ಪಡ್ಡoಬೈಲು ಅವಳದೇ ಧ್ಯಾನ ಅವಳ ನೆನಪುಗಳೇ ಹಾಗೆಎಳೆದಷ್ಟು ತುದಿ ದಕ್ಕುವುದಿಲ್ಲಅಳೆದಷ್ಟು ತಾಳ್ಮೆ ಬರಿದಾಗುತ್ತಿರಲಿಲ್ಲಮೌನದಲ್ಲಿ ಬದುಕಿನ ಸೂತ್ರ ಹೆಣೆದಿದ್ದಳು. ಕೋಪ ತಾಪದ ಧಗೆ ಎಂದೂ ಹಚ್ಚಲಿಲ್ಲನಾಜೂಕಲ್ಲಿ ತಯಾರಿಸುತ್ತಿದ್ದಳುಸೌದೆ ಒಲೆಯಲಿ ರುಚಿಯಾದ ಅಡುಗೆಆ ಪರಿಮಳವೆಂದೂ ಅಳಿಯದಂತೆಇರಿಸಿ ಹೋದಳು ಮೂಗಿನೊರಳಲಿ. ಕರುಳ ಬಳ್ಳಿಗಳ ಕುಳ್ಳಿರಿಸಿಬಿಸಿ ಆರುವ ಮುನ್ನ ನಲ್ಮೆಯಿಂದತುತ್ತು  ಬಡಿಸಿಕಥೆ ಹೆಣೆಯುತಿದ್ದಳುಮಾಸಲಿಲ್ಲ ಇಂದಿಗೂ ಆ ಧ್ಯಾನ. ಚಿಮಿಣಿ ದೀಪ ಮನೆ ಮನದ ಆಶ್ರಯಸಹಭಾಗಿತ್ವದ  ಪಾಠ ಕಲಿಸಿದ್ದಳುತನ್ನ ತಾನೇ ಸುಟ್ಟುಕೊಂಡ  ಸೊಡರುಹಣೆಬರಹವ ತಿದ್ದಿ ತೀಡುತಾಬದುಕಿನ ಸಾರ್ಥಕತೆ  ಸಾರಿತು. ಆದರಿಂದು ಅದೆಲ್ಲ  ಮರೆಯಾದವುಅವಿಶ್ರಾಂತದ  ಹಿಂದಿನ ಬದುಕಿನಆ ಶಕ್ತಿ ಆ ಪ್ರೀತಿ  ಬಹು ದೂರ ಸಾಗಿದವೇಹಳೆಯ ಜೀವನಾಡಿಗಳೆಲ್ಲ ಮೂಲೆ ಸೇರಿದವೇಆಧುನಿಕತೆಯ ಅಬ್ಬರದಲ್ಲಿ ಒಲವು ಕೂಡ  ಕಲಬೆರಕೆಯಾಯಿತೇ… ? ವಿಮಲಾರುಣ ಪಡ್ಡoಬೈಲು         

ಮಹಿಳಾದಿನದ ವಿಶೇಷ, ವಿಮಲಾರುಣ ಪಡ್ಡoಬೈಲು Read Post »

ಇತರೆ

ಮಹಿಳಾ ದಿನದ ವಿಶೇಷ, ಹೆಚ್. ಎಸ್. ಪ್ರತಿಮಾ ಹಾಸನ್

ಮಹಿಳಾದಿನದ ವಿಶೇಷ ಹೆಚ್. ಎಸ್. ಪ್ರತಿಮಾ ಹಾಸನ್ ನಾರಿಗಾಗಿ ಒಂದು ದಿನ “ಮಹಿಳಾ ದಿನಾಚರಣೆ ಅತಿಮುಖ್ಯ ಜಗದಲ್ಲಿಸಹನೆ ತುಂಬಿರುವ ಮಮತಾಮಯಿ ಹೆಣ್ಣುಕಹಿಯನುಂಡರು ಕೂಡ ನಗುಚೆಲ್ಲಿ ಜೀವಿಸುತಸಿಹಿಯ ಹಂಚುತ ಜಗಕೆ ಲಕ್ಷ್ಮಿದೇವಿ”….ಈ ಮೇಲಿನ ಮುಕ್ತಕದಂತೆ ಮಹಿಳಾ ದಿನಾಚರಣೆಯನ್ನು ಆಚರಿಸುವುದು ಮಹಿಳೆಗೆ ನೀಡುವಂತಹ ಒಂದು  ಗೌರವ. ಆ ಗೌರವಕ್ಕೆ ಮಹಿಳೆ ಪಾತ್ರಳಾಗಿದ್ದಾಳೆ. ನಾವು ಸ್ತ್ರೀಯನ್ನು  ನಾರಿ ಮಣಿ, ಮಹಿಳೆ, ಹೆಂಗಸು, ಹಲವಾರು ಹೆಸರುಗಳಲ್ಲಿ ಕರೆಯುವುದು ಎಲ್ಲರಿಗೂ ತಿಳಿದಂತ ವಿಷಯ. ನಾರಿಯು  ಸಹನೆಯನ್ನು  ತುಂಬಿರುವಂತಹ  ಮಮತಾ ಮಯಿಯಾಗಿರುವ ಹೆಣ್ಣನ್ನು ಎಷ್ಟು ಗೌರವಿಸಿ ಸನ್ಮಾನಿಸಿದರು ಕಡಿಮೆಯೇ. ಅವಳಿಗೂ ಒಂದು ದಿನ ಸೀಮಿತವಾಗಿಟ್ಟಿರುವುದು ಸಂತಸದ ಸುದ್ದಿ. ಆಕೆಯ ಪ್ರತಿದಿನವೂ  ಮಹಿಳಾ ದಿನಾಚರಣೆಯ ಆಗಿರುತ್ತದೆ. ಎಷ್ಟೇ ನೋವುಗಳು ಬಂದರೂ ಸಹ ಅದನ್ನೆಲ್ಲ ನುಂಗುತ್ತಾ ಇತರರಿಗೆ  ಸಂತೋಷವನ್ನು ನೀಡುವವಳು ಹೆಣ್ಣು.  ಎಷ್ಟೇ ನೋವಿದ್ದರೂ ನಗು ಮುಖವನ್ನು ತೋರಿಸಿಕೊಂಡು  ಕಹಿಯನ್ನು ತನ್ನಲ್ಲಿ ಇರಿಸಿಕೊಂಡು ಇತರರಿಗೆ ಸಿಹಿಯನ್ನು ಉಣಿಸುವವಳು ಹೆಣ್ಣು. ಎಲ್ಲೆಡೆಯು  ನಗು ನಗುತ ಪಾಲಿಗೆ ಬಂದದ್ದೇ ಪಂಚಾಮೃತ ಎನ್ನುತ್ತಾ   ತನ್ನ ಪಾಡಿಗೆ ತಾನು ಜೀವನವನ್ನು ಮಾಡಿಕೊಂಡು ಹೋಗುತ್ತಾಳೆ. ಅವಳು ತ್ಯಾಗಮಯಿ ಎನ್ನುವುದಕ್ಕೆ  ಎಷ್ಟು ಪದಗಳು ಹೇಳಿದರು ಕಡಿಮೆ . ಹೇಳಬೇಕೆಂದರೆ ಬಹಳಷ್ಟು   ಉದಾಹರಣೆಗಳ ಮಾಲೆಯೇ ಇವೆ.    ಪ್ರಸ್ತುತ ಜಗತ್ತಿನಲ್ಲಿ  ಮಹಿಳಾ ದಿನಾಚರಣೆ ಬರ್ತಿದ್ದರೆ ಸಾಕು. ಮಹಿಳೆಯರನ್ನು ಹೊಗಳುವುದು ಎಷ್ಟು? ಆಕೆಯನ್ನು ಅಟ್ಟದ ಮೇಲೆ ಕೂರಿಸುವುದೆಷ್ಟು? ಮಹಿಳೆಯರ ಹೆಸರಿನಲ್ಲಿ ಮಾಡುವಂತಹ ಕಾರ್ಯಕ್ರಮಗಳೆಷ್ಟು? ಲೆಕ್ಕವೇ ಇಲ್ಲ. ಒಮ್ಮೆ ಯೋಚಿಸಿ ನೋಡಿ. ದಿನಾಚರಣೆಯಂದು ನೀಡುತ್ತಿರುವ ಗೌರವವನ್ನು ಅವರಿಗೆ ಮನೆಯಲ್ಲಿ ನೀಡುತ್ತಿದ್ದೇವೆಯೆ? ಅವರ ಜೀವನದಲ್ಲಿ ನಾವು ಉತ್ತಮ ಸ್ಥಾನಕ್ಕೆ ಹೋಗಲು ಅವಕಾಶ ನೀಡುತ್ತಿದ್ದೇವೆಯೆ? ಇಂದಿಗೂ ಸಹ  ಮಹಿಳೆಯರ ಕಷ್ಟಗಳು ಹೇಳತೀರದು.ಮನೆಯ ಜವಾಬ್ದಾರಿಗಳನ್ನೆಲ್ಲ  ಆ ಮಹಿಳೆ ತೆಗೆದುಕೊಂಡು ಗಂಡಿನಂತೆ ದುಡಿಯುತ್ತಿರುವ ಎಷ್ಟು ಕೋಟಿ ಉದಾಹರಣೆಗಳಿವೆ. ನಾರಿ ನಿನಗೆ ಯಾರು ಸಮ. ನಿನ್ನನ್ನು ಯಾರಿಗೂ ಹೋಲಿಸಲು ಸಾಧ್ಯವಿಲ್ಲ ಹೀಯಾಳಿಸುವ,ಹಿಂಜರಿಯುವ  ಪ್ರಪಂಚದಲ್ಲಿ ನಿನ್ನ ಸ್ಥಾನ ಅಪಾರವಾದದ್ದು. ಯಾರು ಸಹ ನಿನ್ನ ಸ್ಥಾನವನ್ನು ತೆಗೆದುಕೊಳ್ಳುವುದಕ್ಕಾಗುವುದಿಲ್ಲ. ನಾರಿ ನೀನು  ಅಬಲೆಯಲ್ಲ ಸಬಲೆ.ಇಂದು ಹಲವಾರು ಸಮಸ್ಯೆಗಳ ಮಧ್ಯೆಯೂ ಸಹ ನೀನು ಕೆಲಸಗಳಲ್ಲಿ  ತೊಡಗಿ ಹಲವಾರು ಜವಾಬ್ದಾರಿಗಳನ್ನು  ನಿಭಾಯಿಸುತ್ತಿರುವ ತ್ಯಾಗ ಮೂರ್ತಿ ನೀನು. ನಿನ್ನಲ್ಲಿರುವ ನೋವೆಷ್ಟು, ಹುಟ್ಟಿದಾಗಲಿಂದಲೇ  ಕಷ್ಟ ಎಂಬುದು ನಿನ್ನ ಬೆನ್ನೇರಿದೆ. ನೋವು ನಲಿವುಗಳು ಎಷ್ಟೇ ಇದ್ದರೂ. ಜವಾಬ್ದಾರಿಯುತ ಜೀವನ ಮಾಡುವವಳು ನೀನೊಬ್ಬಳೇ. ಯಾವುದೇ ಮನೆಯಲ್ಲಿನ  ಸಮಸ್ಯೆ ಆಗಿರಬಹುದು. ಮನೆಯ ಒಳಗಿನ ಕೆಲಸವಾಗಿರಬಹುದು. ಗಮನವಿಟ್ಟು ಮಾಡುವಂತಹ ವ್ಯಕ್ತಿ ನೀನೊಬ್ಬಳೇ. ಅರಿಯದ ಎಷ್ಟೋ ಜನರು  ಹೆಣ್ಣು ಮಗುವಾಯಿತೆಂದರೆ  ಹೆಂಡತಿ ಮಕ್ಕಳನ್ನೇ ಬಿಟ್ಟು ಹೋಗುತ್ತಾರೆ.ಅಂತಹ ಉದಾಹರಣೆಗಳು ಬಹಳಷ್ಟಿದೆ. ಅಂತಹ ಕ್ರೂರ ಮೃಗಗಳು  ಗಂಡಿನ ಹೆಸರಿನಲ್ಲಿದ್ದಾರೆ. ಎಲ್ಲರೂ ಈ ಪ್ರಪಂಚದಲ್ಲಿ ಹಾಗೆ ಇದ್ದಾರೆ ಎಂದು ಹೇಳುತ್ತಿಲ್ಲ. ಗಂಡು ಹೆಣ್ಣು ಎಂಬ ಭೇದ ಭಾವದಲ್ಲಿ ಜೀವನ ಮಾಡುತ್ತಿರುವುದು ಇಂದಿಗೂ ಪ್ರಸ್ತುತ ಜಗತ್ತಿನಲ್ಲಿ ಇದೆ. ಅದರ ಅನುಭವವನ್ನು  ಪ್ರತಿಯೊಬ್ಬರೂ  ನೋಡುತ್ತಿರುತ್ತಾರೆ. ಮನೆಗೆ ಒಂದು  ಹೆಣ್ಣು ಇಲ್ಲ ಎಂದರೆ  ಅದು ಮನೆಯಾಗುವುದಿಲ್ಲ. ನರಕದ ಕೂಪವಾಗುತ್ತದೆ. ದಯಮಾಡಿ ನೋಡಿ  ಹೆಣ್ಣು ಇಲ್ಲದ  ಮನೆ ಮನೆಯಲ್ಲ. ಎಷ್ಟೋ ಗಂಡು ಮಕ್ಕಳಿರುವಂತಹ ಮನೆಗಳಲ್ಲಿ ನಾನು ನೋಡಿದ್ದೇನೆ. ಸೊಸೆ ಎಂದಿಗೂ ಮಗಳಾಗುವುದಿಲ್ಲ ಎಂದುಹೇಳುತ್ತಾರೆ ಮಗಳು ಎಂದು ಸೊಸೆಯಾಗುವುದಿಲ್ಲ.  ಎನ್ನುವ ಭ್ರಮೆಯಲ್ಲಿ ಇರುತ್ತಾರೆ. ಆದರೂ ಹೆಣ್ಣು,ಹೆಣ್ಣೆ. ಆಕೆ ಎಂದಿಗೂ  ತನಗಾಗಿ ಏನನ್ನು ಬಯಸುವುದಿಲ್ಲ  ಇತರರ ಸೇವೆಗಾಗಿ ಜೀವನವಿಡೀ ಮುಡುಪಾಗಿರುತ್ತಾಳೆ.ಮಹಿಳೆ ತನ್ನ ಜೀವನದಲ್ಲಿ  ಮನೆಯ ನಿರ್ವಹಣೆಗಾಗಿ  ಮನೆಯಲ್ಲೂ ಕೆಲಸವನ್ನು ಮಾಡುತ್ತಾ, ಹೊರಗಡೆಯೂ ದುಡಿಯುತ್ತಾ, ತನ್ನದೇ ಆದಂತಹ ಸೇವೆಯನ್ನು ನಿಷ್ಕಲ್ಮಶವಾಗಿ ಎಲ್ಲಾ ಕಡೆಯಲ್ಲೂ  ಮಾಡುತ್ತಾಳೆ. ಅವಳ ಹುಟ್ಟು ಸೇವೆಗಾಗಿ ಎಂಬುದನ್ನು ತೋರಿಸುತ್ತಾಳೆ. ಜಗದ ನಿಯಮದಲ್ಲಿ ಜೀವನದ ಕಷ್ಟ ಸುಖಗಳನ್ನು ಎದುರಿಸುತ್ತ  ಬಾಳುವವಳು ಹೆಣ್ಣು . ಎಷ್ಟೆಂದು ಹೇಳುವುದು ಅವಳ  ಕಾರ್ಯದ ಉದಾಹರಣೆಯನ್ನು  ಮನೆಯ ನಿರ್ವಹಣೆಗಾಗಿ  ಮನೆಯಲ್ಲಿಯೇ ಎಷ್ಟು ವಿದ್ಯಾವಂತ ಮಹಿಳೆಯರು  ಹೊರಗೂ ದುಡಿದು, ಮನೆಯಲ್ಲೂ ಸಹ ದುಡಿಯುತ್ತಾರೆ. ಮನೆಯಲ್ಲಿ ಇರುವಂತಹ  ಅವಿದ್ಯಾವಂತ ಮಹಿಳೆಯರು ಸಹ ತಮ್ಮ ಕೈಯಲ್ಲಿ ಆಗುವ ಕರಕುಶಲ ಕೆಲಸಗಳನ್ನು ಮಾಡಿ ದುಡಿಯುತ್ತಿದ್ದಾರೆ . ಬಟ್ಟೆ ಹೊಲಿಯುವುದಾಗಿರಬಹುದು, ತೋರಣಗಳನ್ನು ಹಾಕುವುದಾಗಿರಬಹುದು, ಮೇಣಗಳನ್ನು ಮಾಡುವುದಾಗಿರಬಹುದು, ವಸ್ತುಗಳನ್ನು ಕಟ್ಟಿಕೊಡುವುದಾಗಿರಬಹುದು,  ಊಟದ ಎಲೆಗಳನ್ನು  ತಯಾರು ಮಾಡುವುದು  ಹೀಗೆ ಹಲವಾರು ವಿಧದಲ್ಲಿ ಅವಿದ್ಯಾವಂತ ಮಹಿಳೆಯರು  ಸಹ ದುಡಿಯುತ್ತಾರೆ. ವಿದ್ಯಾವಂತ ಮಹಿಳೆಯರು  ತಮ್ಮ ಕೈಲಾದಷ್ಟು ಅವರು ದುಡಿಯುತ್ತಾ ಕಾರ್ಖಾನೆಗಳಿಗೆ ಹೋಗುತ್ತಾರೆ. ಎಷ್ಟೇ ಮುಜುಗರದ ಪರಿಸ್ಥಿತಿ ಇದ್ದರೂ. ಯಾವುದಕ್ಕೂ ಹೆದರದೆ ಅಂಜದೆ ಕೆಲಸವನ್ನು ಮಾಡುತ್ತಾರೆ.  ಒಟ್ಟಾರೆ ಹೆಣ್ಣಿಗೆ ಎಷ್ಟು ವಿಮರ್ಶೆಮಾಡಿ ಪಟ್ಟಿ ಮಾಡಿ ವಿಶೇಷತೆಗಳನ್ನು  ಹೇಳಿದರು ಕಡಿಮೆಯೇ. ನಾರಿ ನಿನಗೆ ಯಾರು ಸಮ  ನಿನ್ನ ತ್ಯಾಗಕ್ಕೆ ಬೆಲೆಯೇ ಇಲ್ಲ ಎಂಬ ಮಾತಿಗೆ  ಸರಿಯಾದ ಅರ್ಥವನ್ನು ನೀಡುವವಳು ನಾರಿಯೆ .ಒಟ್ಟಾರೆ ನಮ್ಮ “ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್. ಕರ್ನಾಟಕ ವು ಮಹಿಳೆಯರ ಪ್ರತಿಭೆ ನೋವು ಸಂತೋಷಕ್ಕೆ ಸ್ಪಂದಿಸಿ ಕರಕುಶಲ ತರಬೇತಿ ನೀಡಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಂತಸದ ವಿಷಯವಾಗಿದೆ. ಮಹಿಳೆಯರ ತ್ಯಾಗಕ್ಕೆ ಅವರ ಕೆಲಸಕ್ಕೆ  ನಿಮಗೊಂದು ನನ್ನ ನಮಸ್ಕಾರ. ಹೆಣ್ಣಿನ ಬಗ್ಗೆ ಹೇಳುತ್ತಾ ಹೋದರೆ  ಎಷ್ಟು ಹೇಳಿದರು ಕಡಿಮೆಯೆ ಎಂದು ಹೇಳುಬಹುದು. ಧನ್ಯವಾದಗಳು ಜೈ ಹಿಂದ್ ಜೈ ಭಾರತ  ಮಾತೆ.

ಮಹಿಳಾ ದಿನದ ವಿಶೇಷ, ಹೆಚ್. ಎಸ್. ಪ್ರತಿಮಾ ಹಾಸನ್ Read Post »

ಇತರೆ

ಮಹಿಳಾ ವಿಶೇಷ ದಿನ, ಡಾ.ಭಾರತಿ ಅಶೋಕ್

ಮಹಿಳಾ ವಿಶೇಷ ದಿನ ಡಾ.ಭಾರತಿ ಅಶೋಕ್ ಅವಳ ದಿನಕ್ಕೆ ಹೆಣ್ಣು ತಾನೆಷ್ಟೇ ಬುದ್ಧಿವಂತಳಾದರೂ, ಹೊರಗೆ ತಾನೆಷ್ಟೇ ಮುಂದುವರಿದರೂ, ಮನೆಯೊಳಗೆ ಬಂದೊಡನೆ ತನ್ನ ಜವಾಬ್ಧಾರಿ ಯನ್ನು ಮರೆಯುವುದಿಲ್ಲ. ಹೆಚ್ಚು ಶಿಕ್ಷಣ ಪಡೆದ ಮಾತ್ರಕ್ಕೆ ಅವಳಿಗೆ ಜವಾಬ್ದಾರಿಗಳಿಲ್ಲ ಎನ್ನುವುದಲ್ಲ.  ಇತ್ತೀಚಿನ ದಿನಗಳಲ್ಲಿ  ಅನಕ್ಷರಸ್ಥ ಮಹಿಳೆಯರಿಗಿಂತ ವಿದ್ಯಾವಂತ ಮಹಿಳೆಯರೇ ಹೆಚ್ಚು ನೋವನ್ನು, ಕೌಟುಂಬಿಕ ಹಿಂಸೆಯನ್ನು ಅನುಭವಿಸುತ್ತಾರೆ. ಇದಕ್ಕೆಲ್ಲಾ ಅವಳ ಜವಾಬ್ದಾರಿಯ ವಿಸ್ತಾರ ಮತ್ತು ಸೈರಿಣಿಯೇ ಕಾರಣ. ಹಿಂದೆ ಅವಳು ಕೇವಲ ಕುಟುಂಬಕ್ಕೆ ಸೀಮಿತವಾಗಿದ್ದ ಕಾಲವೊಂದಿತ್ತು. ಒಮ್ಮೆ ತಾಳಿಗೆ ಕೊರಳನ್ನು ಒಡ್ಡಿದಳೆಂದರೆ ಅವಳ ಬದುಕಲ್ಲಿ ಎಂಥ ಬದಲಾವಣೆ ಆಗುತ್ತಿತ್ತು  ಮತ್ತು ಆಕೆಯ ಸಂಪೂರ್ಣ ಬದುಕು ಯಾರು ನಿಯಂತ್ರಿಸುತ್ತಿದ್ದರು ಎನ್ನುವುದನ್ನು ಬೆಳೆಗೆರೆ ಜಾನಕಮ್ಮನವರ ಕವಿತೆಯ ಸಾಲಗಳನ್ನು ಅವಲೋಕಿಸುವ ಮೂಲಕ ಗ್ರಹಿಸಬಹುದು “ಗಂಡನೆಂದರೆ ಪ್ರಾಣಗಂಡ ಹೆಣ್ಣೆ ನೀ ಗಂಡನ ಕೂಡಿಕೊಂಡ್ಯಾನೋಡು ಮಂಡೂಕ ಸರ್ಪದ ನೆಳಲಿಗೆ ಹೋದಂತೆಬಾಡೀಗೆ ಬಸವನು ಶಿರಬಾಗಿಕೊಂಡಂತೆಅಧಿಕಾರಿ ನಿನಗವನೊಬ್ಬ ನಿರುತ ದುಡಿದರೆ ಆಶನದ ಹಬ್ಬತಪ್ಪಿ ಬೇನೆ ಬೇಸರವಾಗಿ ಉಸ್ಸೆನ್ನಲಬ್ಬಬ್ಬಏನಾಯ್ತು ಎಂದು ಗಂಟ್ಹಾಕುವ ಹುಬ್ಬ”  ಇದು ಹೆಣ್ಣಿಗೆ ಮದುವೆ ಎಂಬುದು ಒಂದು ನೆರಳು ಸಿಕ್ಕಂತೆ ಎಂಬ ನಿಲುವನ್ನೇ ಬಡುಮೇಲು ಮಾಡುತ್ತದೆ. ಇದು ನೆರಳು ನಿಜ ಆದರೆ ಮಂಡೂಕದ ಹೆಡೆಯ ಕೆಳಗಿನ ನೆರಳು ಎಂಬುದಂತು ಸತ್ಯ ಅವಳು ಸದಾ ದುಡಿಯುತ್ತಿರಬೇಕು ಅಪ್ಪಿ ತಪ್ಪಿ ಅವಳು ಬೇಸರಿಕೆ ಬೇನೆ ಎಂದರೆ ಗಂಡನು ಅವಳನ್ನು ಸಹಿಸದಾಗುವನು. ಆದರೆ ಅವಳು ಇಂದು ಇದನ್ನು ದಾಟಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದಾಳೆ. ಮನೆಗೆ ಸೀಮಿತವಾಗಿದ್ದ ಅವಳ ಬದುಕು ಈಗ ತನ್ನ ಮನೆಯ ನಿರ್ವಹಣೆಗಾಗಿ ಹೊರಗೂ ದುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ್ಯಾ ನಂತರದಲ್ಲಿ ಆದ ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆಯು ಅವಳ ಬದುಕನ್ನು ಹೀಗೆ ಬದಲಿಸಿತು ಅಷ್ಟೇ ಅಲ್ಲದೇ ಅವಳ ಕಾರ್ಯ ಕ್ಷೇತ್ರವನ್ನೂ ವಿಸ್ತರಿಸಿತು. ಪುರುಷನಿಗೆ ಸರಿ ಸಮನವಾಗಿ ಜ್ಞಾನ, ಶಿಕ್ಷಣ ಸಾಮರ್ಥ್ಯ ಎಲ್ಲವೂ ಇರುವ ಆಕೆ ಕೇವಲ ಮನೆಗೆ ಮಾತ್ರ ಸೀಮಿತವಾಗದೇ ಜ್ಞಾನ, ಕಾರ್ಯಕ್ಷೇತ್ರವು ವಿಸ್ತಾರಗೊಂಡಿದ್ದರೂ  ಮನೆಯನ್ನು ಮೊದಲಿಗಿಂತಲೂ  ಚನ್ನಾಗಿ ನಿಭಾಯಿಸುವ ಕಲೆ ಕರಗತವಾಗಿದ ಮಹಿಳೆ ಮಾಡುವಷ್ಟು ಕೆಲಸವನ್ನು ಪುರುಷ ಮಾಡಲಾರ. ಮಾಡಲಾರ ಅಂದರೆ, ಅವನಿಗೆ ಶಕ್ತಿ ಸಾಮರ್ಥ್ಯ ಇಲ್ಲ ಎಂದಲ್ಲ ಗಂಡಸು ಹೊರಗೆ ದುಡಿದು ಬಂದನೆಂದರೆ ಆತ ಮನೆಯ ಕಡೆಗೆ ಜವಾಬ್ದಾರಿಯಿಂದ ನುಸಿಳಿಕೊಳ್ಳುವುದೇ ಹೆಚ್ಚು.  ನಮ್ಮಲ್ಲಿ ಇದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಕೆಲವು ಕುಟುಂಬಗಳಲ್ಲಿ  ಹೊರಗು ದುಡಿಯದ ಗಂಡಸರು ಇರುವುದನ್ನು ಕಾಣುತ್ತೇವೆ. ಆದರೆ ಹೆಣ್ಣು ಇಂದು ಒಳ ಹೊರಗೂ ದುಡಿಯುವ ಯಂತ್ರವಾಗುತ್ತಿದ್ದಾಳೆ. ಆದರೂ ಕುಟುಂಬದಲ್ಲಿ ಅವಳಿಗೆ ಹತ್ತು ಹಲವು ತಾಪತ್ರಯಗಳು, ಅದೆಲ್ಲವನ್ನು ಮೀರಿ ತನ್ನ ಸ್ಥಾನ ಮಾನಗಳನ್ನು ಭದ್ರಪಡಿಸಿಕೊಳ್ಳುವ ಅಗತ್ಯವಿದೆ ಇದೆಲ್ಲದರ ಜೊತೆಗೆ  ಮಕ್ಕಳ ಲಾಲನೆ-ಪಾಲನೆ ಮಾಡುವುದು ಮುಖ್ಯ ಕೆಲಸಗಳಲ್ಲಿ ಒಂದು, ಹಿಂದೆ ಅವಳು ಕೇವಲ ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾಗ ಪುರುಷ ಕೊನೆಯ ಪಕ್ಷ ಹೊರಗೆ ದುಡಿದು ತರುತ್ತಿದ್ದ ಮನೆಯ ಸಂಪೂರ್ಣ ಜವಾಬ್ದಾರಿ ಅವಳು ನಿರ್ವಹಿಸುತ್ತಿದ್ದಳು ಆದರೆ ಬದಲಾದ ಸಂದರ್ಭದಲ್ಲಿ ಅವಳಿಗೆ ಇದೆಲ್ಲಾ ಹೊರೆ ಆಗುತ್ತಿದೆ.ಆದರೂ ದೈರ್ಯಗೆಡದೇ ಗಂಡಸಿನ ಸಮನಾಗಿ ಎಲ್ಲಾ ರಂಗಕ್ಕೂ ಪಾದಾರ್ಪಣೆ ಮಾಡಿ ಈಗ ರಾಷ್ಟ್ರ ಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲೂ ಸಾಧನೆಗೈದ ಅವಳಿಗಾಗಿ ಒಂದು ದಿನವನ್ನು ಅವಳ ಸಾಧನೆಯನ್ನು ಮೆರೆಸುವ ದಿನವನ್ನಾಗಿ ಆಚರಿಸಲಾಗುತ್ತಿದೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕಳೆದ ಒಂದು ಶತಮಾನದಿಂದ ಆಚರಿಸುತ್ತಾ ಬರಲಾಗುತ್ತಿದೆ. ೧೯೧೧ ರಲ್ಲಿ ಡೆನ್ಮಾರ್ಕ್, ಆಸ್ಟ್ರೀಯಾ,ಜರ್ಮನಿ,ಸ್ವಿಟ್ಜರ್ಲ್ಯಾಂಡ್ ದೇಶಗಳಲ್ಲಿ ದಶಲಕ್ಷಗಟ್ಟಲೇ ಜನ ಸೇರಿ ಈ ದಿನವನ್ನು ಆಚರಿಸುತ್ತಿದ್ದರು. ಪ್ರಾರಂಭದಲ್ಲಿ ಅಂತರಾಷ್ಟ್ರೀಯ ಮಹಿಳೆಯರ ದಿನವನ್ನು ಮೊದಲ ಬಾರಿಗೆ “ಕೂಲಿ ಚಳವಳಿ”ಯ ಮೂಲಕ(ಲೇಬರ್ ಮೂವ್‌ಮೆಂಟ್) ಉತ್ತರ ಅಮೇರಿಕಾ  ಮತ್ತು ಯುರೋಪ್ ನಲ್ಲಿ ಆಚರಿಸಲಾಯಿತು. ಈ ದಿನವನ್ನು ಆಚರಿಸುವ ಮೂಲಕ “ಲಿಂಗ ಸಮಾನತೆ”ಯನ್ನು ರೂಪಿಸುವುದಾಗಿತ್ತು.ಮಹಿಳೆಯ ಬಹುಮುಖ ಸಾಧನೆಯನ್ನು, ಆಕೆಯ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಈ ದಿನವನ್ನು ಮೀಸಲಾಗಿರಿಸಿದೆ. ಇಷ್ಟಾದರೂ ಗಂಡು ಹೊರಗೆ, ಹೆಣ್ಣು ಒಳಗೆ ದುಡಿಯುತ್ತಿದ್ದ ಕಾಲದಲ್ಲಿ ಅದನ್ನು “ಶ್ರಮ ವಿಭಜನೆ”ಎಂದು  ಹೇಳಬಹುದು. ಆದರೆ ಇಲ್ಲೊಂದು ವಿಷಯ ಮರೆಯುವಂತಿಲ್ಲ ಗಂಡಸೇ ಯಾಕೆ ಹೊರಗಿನ ಕೆಲಸವನ್ನು ನಿರ್ವಹಿಸುತ್ತಿದ್ದ ಎನ್ನುವುದಿಲ್ಲಿ ನಿಜಕ್ಕೂ ಚರ್ಚಿಸುವ ವಿಚಾರ. ಇಂದು ಎಲ್ಲಾ ರಂಗದಲ್ಲೂ ಪುರುಷನಿಗೆ  ಸಮಾನವಾಗಿ ದುಡಿಯುತ್ತಿರುವ ಅವಳಿಗೆ  ವ್ಯವಹಾರ ಜ್ಞಾನ ಇರಲಿಲ್ಲವೇ? ಆದರೂ ಅವಳನ್ನು ನಾಲ್ಕು ಗೋಡೆಯ ನಡುವೆ ಹೊರಗಿನ ವ್ಯಹಾರಗಳಿಂದ ದೂರ ಇರಿಸಿದ್ದು ಮಾತ್ರ ಪುರುಷನ ವ್ಯವಹಾರ ಚತುರತೆಯೇ ಸರಿ ಲೇಖಕಿ ಡಯೇನ್ ಮೇರಿ ಚೈಲ್ಡ`ರ “ಮಹಿಳೆಯರಲ್ಲಿ ಸೃಷ್ಟಿಸುವ, ಪೋಷಿಸುವ, ಮತ್ತು ರೂಪಾಂತರಿಸುವ ಶಕ್ತಿ ಇದೆ” ಎನ್ನುವ ಮಾತು ಅತಿಶಯೋಕ್ತಿ ಎನಿಸದು. ಇತಿಹಾಸದುದ್ದಕ್ಕೂ ಅವಳ ಸಾದನೆಯನ್ನು ಕಾಣುತ್ತೇವೆ. ಮಹಿಳೆ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿರದೇ, ಇಂದು ಆರ್ಥಿಕ. ಸಾಮಾಜಿಕ, ರಾಜಕೀಯ ಮತ್ತು ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಇಂಥಹ ಇವಳನ್ನು ಲಿಂಗ ಅಸಮಾತೆಯಂತಹ ಸಮಸ್ಯೆಯಿಂದ ದೂರ ಇಡಲು ಆಗದಿರುವ ದುರಂತ ಸಂದರ್ಭವನ್ನು ಎದುರಿಸುತ್ತಿದೆ-ಪ್ರಪಂಚ.ಆದ್ದರಿಂದ  ೧೮/೧೯ನೇ ಶತಮಾದಲ್ಲಿ ಹಲವು ಮಹಿಳೆಯರು ಲಿಂಗ ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ. ಇದು ಮತದಾನಕ್ಕೆ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಸರಕಾರಿ ವಲಯದಲ್ಲಿಯೂ `ಜಂಡರ್ ಪೇ ಗ್ಯಾಪ್` ಬಗ್ಗೆ ಧ್ವನಿ ಎತ್ತಲಾಗಿದೆ. ಸಮಾನತೆಗಾಗಿ ಹಲವು ಮಹಿಳಾವಾದಿಗಳು ೧೯೭೦/೮೦ ರ ದಶಕದಲ್ಲೂ ಹೆಚ್ಚು ಹೋರಾಟ ನಡೆಸಿದ್ದಾರೆ. ಅವಳು ಹೋರಾಡುತ್ತಲೇ ಇದ್ದಾಳೆ ಅವಳ ದೈಹಿಕ, ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸಲು ಆಗದಂತೆ. “ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಪ್ರತಿ ಐದು ಮಹಿಳೆಯರಲ್ಲಿ ಒಬ್ಬ ಮಹಿಳೆ ಕೆಲವು ರೀತಿಯ ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸುತ್ತಾಳೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ,ಧಾರ್ಮಿಕ ರಂಗಗಳಲ್ಲಿ ಲಿಂಗ ತಾರತಮ್ಯ, ಕೌಟುಂಬಿಕ ಹಿಂಸೆ,ಇತರ ಅಂಶಗಳಿಂದಾಗಿ ಮಹಿಳೆಯರು ಮಾನಸಿಕ ಆರೋಗ್ಯದಂತಹ ಸಮಸ್ಯೆಗಳಿಂದಾಗಿ ಹೆಚ್ಚು ದುರ್ಬಲರಾಗಿದ್ದಾರೆ. ದೈಹಿಕ, ಮಾನಸಿಕ ಆರೋಗ್ಯದ ಸಮಸ್ಯೆಗಳು ಸಮಾಜಿಕ ಒತ್ತಡಗಳು, ಅವುಗಳ ವಿವರಣೆಯಿಂದ ಅಪಹಾಸ್ಯ ಮಾಡುವ ಮೂಲಕ ತರ್ಕಬದ್ಧಗೊಳಿಸಲಾಗುತ್ತಿದೆ  ಮಹಿಳೆ ಎಂಬ ಕಾರಣದಿಂದ ಹೆಚ್ಚು ಋಣಾತ್ಮಕವಾಗಿದೆ. ಎಂದು ಕ್ಲಿನಿಕಲ್ ಸೈಕಾಲಜಿಷ್ಟ್ ರುಚಿ ಶರ್ಮ ಹೇಳುತ್ತಾರೆ. ಡಾ. ಭಾರತಿ ಅಶೋಕ್

ಮಹಿಳಾ ವಿಶೇಷ ದಿನ, ಡಾ.ಭಾರತಿ ಅಶೋಕ್ Read Post »

ಇತರೆ

ಮಹಿಳಾ ದಿನದ ವಿಶೇಷ,ವನಜ ಮಹಾಲಿಂಗಯ್ಯ

ಮಹಿಳಾ ದಿನದ ವಿಶೇಷ ವನಜ ಮಹಾಲಿಂಗಯ್ಯ ಹೆಣ್ಣೆಂದರೆ ಹೆಣ್ಣೆಂದರೆ ಏನೆಂದು ತಿಳಿಯಬೇಕಾ?ಅವಳೇ ಮಮತೆಯ ಮಡಿಲು,ತಾಯಿಯೇ ಪ್ರೀತಿಯ ಗಣಿ,ಆಕೆಯೇ ತಾಳ್ಮೆಯ ಮೂರುತಿ. ಹೃದಯಾಂತರಾಳದ್ದು ಅವಳ ಪ್ರೀತಿ,ಅವಳ ತಾಳ್ಮೆ ಬೇರಾರಿಗೂ ಬಾರದು,ಅವಳೇ ತನ್ನ ಗಂಡನಿಗೆ ಸರ್ವಸ್ವ,ತನ್ನ ಮುದ್ದು ಮಕ್ಕಳಿಗೆ ಮಹಾತಾಯಿ. ತಾಯಿಯೇ ಮಕ್ಕಳಿಗೆ ಮೊದಲ ಗುರು,ಅಕೆಯಿಂದ ಪಾಠ ಕಲಿತ ಮಕ್ಕಳೇ ಧನ್ಯರು,ಅಕೆ ಕಲಿಸುವ ಪಾಠ ಬದುಕಿಗೆ ದಾರಿದೀಪ,ಆ ಮಕ್ಕಳು ಸದಾ ತಾಯಿಯನ್ನು ಸ್ಮರಿಸಬೇಕು. ಆಕೆಯಿಂದ ಪಾಠಕಲಿತವರು ಜಗವ ನೋಡಬೇಕು,ಆಕೆಯ ಪ್ರೀತಿ ಮಕ್ಕಳ ಯಶಸ್ಸಿಗೆ ಕಾರಣವಾಗಬೇಕು,ಅವಳ ಸ್ಪರ್ಶ ಮಕ್ಕಳಿಗೆ ಶಕ್ತಿ ತುಂಬಬೇಕು,ಅವಳ ಸಹನೆ ಮಕ್ಕಳ ಹೃದಯದಲ್ಲಿ ನೆಲೆಸಬೇಕು. ತಾಯಿ ಆಶೀರ್ವಾದ ಮಕ್ಕಳ ಅಭಿವೃದ್ಧಿಯಾಗಬೇಕು,ಅವಳ ವಾತ್ಸಲ್ಯದಿಂದ ಮಕ್ಕಳು ಗುರಿ ಮುಟ್ಟಬೇಕು,ಅವಳ ತಾಳ್ಮೆ ಅಪ್ರತಿಮವಾದುದಾಗಿರಬೇಕು,ತಾಯಿ ಮಮತೆ ದೀರ್ಘ ತಮ್ಮ ಬದುಕಾಗಬೇಕು. ವನಜ ಮಹಾಲಿಂಗಯ್ಯ

ಮಹಿಳಾ ದಿನದ ವಿಶೇಷ,ವನಜ ಮಹಾಲಿಂಗಯ್ಯ Read Post »

ಕಾವ್ಯಯಾನ

ಮಹಿಳಾ ವಿಶೇಷ ದಿನ,ರಶ್ಮಿ ಶಮಂತ್

ಮಹಿಳಾ ವಿಶೇಷ ದಿನ ರಶ್ಮಿ ಶಮಂತ್ ಪ್ರೇಮಕುಸುಮ ಅಲೆವಳು ಅವಳುಜವಾಬ್ದಾರಿಗಳ ಸಂತೆಯಲಿಕನಸಿನ ಅಂಗಡಿಯ ಹುಡುಕುತಪರಿಚಿತರ ಮುಖವಾಡದೊಳಗೆತನ್ನವರೆಂಬುವರ ಅರಸುತ ಹೊರುವಳು ಆಕೆಹೊಣೆಯ ಮೂಟೆಗಳದೊರಕದವಳಿಗೆ ಸನ್ಮಾನಅಲಂಕರಿಸುವುದುಕೊಂಕು ಬಿರುದುಗಳ ತಾತ್ಸಾರ ಮನದ ಬಯಲಿನಲಿಸುಂಟರಗಾಳಿ ತಾಂಡವವಾಡುತಿರಲುತಾಳ್ಮೆ ಸಹನೆಗಳ ಕಡಿವಾಣವದಕೆಬೆನ್ನೆಲುಬಾಗಿಹಳುತನ್ನದಲ್ಲದ ಕನಸುಗಳ ಸಾಕಾರಕೆ ನಗುನಗುತಲೇ ಬದುಕುವಳುತನ್ನದಲ್ಲದ ಜೀವನದಲಿಪ್ರವಾಹಗಳನೇ ಎದುರಿಸುವಳುಸಂಸಾರದ ಹೊನಲಿನಲಿಸುಗಂಧವ ಬೀರುವ ಪ್ರೇಮಕುಸುಮವಾಕೆ…. ರಶ್ಮಿ ಶಮಂತ್

ಮಹಿಳಾ ವಿಶೇಷ ದಿನ,ರಶ್ಮಿ ಶಮಂತ್ Read Post »

ಇತರೆ

ಮಹಿಳಾ ವಿಶೇಷ ದಿನ, ವೀಣಾ ಹೇಮಂತ್‌ ಗೌಡ ಪಾಟೀಲ್

ಮಹಿಳಾ ದಿನದ ವಿಶೇಷ ವೀಣಾ ಹೇಮಂತ್‌ ಗೌಡ ಪಾಟೀಲ್ ಮಹಿಳಾ ದಿನಾಚರಣೆ… ಹೊತ್ತವರಿಗಷ್ಟೇ ಗೊತ್ತು ಕಿರೀಟದ ಭಾರ. ಹೆಣ್ಣು ಸಂಸಾರದ ಕಣ್ಣು, ಹೆಣ್ಣು ಮಮತಾಮಯಿ, ತ್ಯಾಗಮಯಿ, ಕ್ಷಮಯಾಧರಿತ್ರಿ,ತಾನು ಅರೆಹೊಟ್ಟೆ ಉಂಡರೂ ಮನೆ ಜನರ ಹೊಟ್ಟೆ ತುಂಬಿಸುವ ಅನ್ನಪೂರ್ಣೆ, ಒಡಹುಟ್ಟಿದವರನ್ನು ಪೊರೆವ ಸಹೋದರಿ, ಕುಟುಂಬಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾತಾಯಿ ಹೆಣ್ಣಿಂದಲೇ ಇಹ ಪರಗಳು ಅಬ್ಬಬ್ಬ ಅದೆಷ್ಟು ಪ್ರಿಫಿಕ್ಸುಗಳು, ಸಫೀಕ್ಸುಗಳು…. ಕೇಳಲು ಅದೆಂಥ ಮಧುರ, ಆದರೆ ನಿಭಾಯಿಸಲು…. ಹೊತ್ತವರಿಗಷ್ಟೇ ಗೊತ್ತು ಕಿರೀಟದ ಭಾರ!! ಹೆಚ್ಚು ಮಾತಾಡಿದರೆ ವಾಚಾಳಿ,ಬಾಯ್ಬಡಕಿ, ಮಾತನಾಡದಿದ್ದರೆ ಗುಮ್ಮನಗುಸುಗಿ, ಚಟುವಟಿಕೆಯಿಂದಿದ್ದರೆ ನಿಂತಲ್ಲಿ ಕಾಲು ನಿಲ್ಲುವುದಿಲ್ಲ, ಸುಮ್ಮನೆ ಕುಳಿತರೆ ಸೋಂಬೇರಿ, ಚೆನ್ನಾಗಿ ತಯಾರಾಗಿ ನಿಂತರೆ ತಯಾರಬಸಲಿಂಗಿ, ಸರಳವಾಗಿದ್ದರೆ ಮುಶಂಡಿ….ಹೇಗೆ ಆಕೆಯ ಸ್ವಭಾವವನ್ನು ಅಳೆಯುವರು. ಪುರಾಣ ಕಾಲದಿಂದಲೂ ಹೆಣ್ಣು ಮಕ್ಕಳನ್ನು ತಾಯಿಯಾಗಿ, ಸೋದರಿಯಾಗಿ,ಪತ್ನಿಯಾಗಿ, ಪ್ರೇಯಸಿಯಾಗಿ, ಮಗಳಾಗಿ, ಸಹಪಾಠಿಯಾಗಿ ಸ್ನೇಹಿತೆಯಾಗಿ ಹೀಗೆ ಹತ್ತು ಹಲವು ವಿಧಗಳಲ್ಲಿ ನೋಡಿದ್ದಾರೆ… ಎಲ್ಲವೂ ನಿಜ ಆದರೆ ಇವೆಲ್ಲವೂ ಅರ್ಧ ಸತ್ಯಗಳು!! ಒಪ್ಪಿದರೂ ಒಪ್ಪದಂತಹ ಕಟು ಸತ್ಯಗಳು. ಹೆಣ್ಣನ್ನು ಆಕೆಯ ಎಲ್ಲಾ ರೂಪಗಳಲ್ಲಿ, ಜೀವನದ ವಿವಿಧ ಹಂತಗಳಲ್ಲಿ ನೋಡುವ ಜನ … ಹೆಣ್ಣು ಕೂಡ ಓರ್ವ ವ್ಯಕ್ತಿ… ಆಕೆಗೂ ಒಂದು ವ್ಯಕ್ತಿತ್ವವಿದೆ, ಮನಸ್ಸಿದೆ, ಭಾವನೆಗಳಿವೆ, ಇಷ್ಟಾನಿಷ್ಟಗಳಿವೆ. ಆಕೆಯದ್ದೇ ಆದ ವೈಯುಕ್ತಿಕ ಜೀವನವಿದೆ ಎಂಬುದನ್ನು ಮರೆತಿದ್ದಾರೆ. ಸ್ವತಃ ಹೆಣ್ಣು ಮಕ್ಕಳು ಕೂಡ ತಮ್ಮ ಕುಟುಂಬದ ಜವಾಬ್ದಾರಿ ನಿರ್ವಹಿಸಬೇಕಿರುವ ಅನಿವಾರ್ಯತೆಯನ್ನು ಅಪ್ಪಿ ಒಪ್ಪಿಕೊಂಡು ಬಾಳುತ್ತಾರೆ. ಇದಕ್ಕೆ ಹತ್ತು ಹಲವಾರು ಕಾರಣಗಳು. ಮೊದಲನೆಯದಾಗಿ ತಮಗೆ ಹೆಣ್ಣು ಹುಟ್ಟಿರುವುದು ಪರರ ಮನೆ ಬೆಳಗಲು ಎಂಬುದು ಹೆಣ್ಣಿನ ಹೆತ್ತವರ ಭಾವವಾಗಿದ್ದು ಅವರು ಆಡುವ ಪ್ರತಿ ಮಾತಿನಲ್ಲಿಯೂ ಆಕೆ ತಾನು ಹೆರವರ ಸ್ವತ್ತು ಎಂದು ಪರಕೀಯ ಪ್ರಜ್ಞೆಯನ್ನು ಅನುಭವಿಸುತ್ತಾಳೆ. ಯಾವುದನ್ನು ಕಟುವಾಗಿ ವಿರೋಧಿಸದ ಹೆಣ್ಣು ಮಕ್ಕಳು ಇದನ್ನು ಒಪ್ಪಿ ಬಾಳುತ್ತಾರೆ. ಇನ್ನು ಆಕೆ ಮದುವೆಯಾಗಿ ಬಂದ ಗಂಡನ ಮನೆಯವರು ಆಕೆಯನ್ನು ಹೊರಗಿನಿಂದ ಬಂದವಳು, ತಮ್ಮ ಮನೆಯ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಮನೆಯೊಡತಿ!!? ಎಂದು ನಡೆಸಿಕೊಳ್ಳುತ್ತಾರೆ. ಆದರೆ ಇದು ಕೂಡ ಅರ್ಧ ಸತ್ಯವೇ. ಹುಟ್ಟಿದ ತವರು ಮನೆಗೆ ಹೊರಗಿನವಳು ಗಂಡನ ಮನೆಗೆ ಹೊರಗಿಂದ ಬಂದವಳು… ಎಂಬ ಅಡ್ಡಗೋಡೆಯ ಮೇಲಿನ ದೀಪದ ಹಾಗೆ ಜೀವನ. ಎಲ್ಲ ಕಡೆ ಇದ್ದರು ಎಲ್ಲೂ ಸಲ್ಲದವಳು ಎಂಬ ನೋವಿನ ಭಾವ ಜೀವಿತದ ಕಡೆಯವರೆಗೂ ಆಕೆಯನ್ನು ಅನಾಥ ಪ್ರಜ್ಞೆಯಲ್ಲಿ ಬಳಲುವಂತೆ ಮಾಡುತ್ತದೆ. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಯಾವತ್ತೂ ಪುರುಷನ ಅಡಿಯಾಳಾಗಿರುವುದು ಇದಕ್ಕೆ ಕಾರಣ. ಇನ್ನು ಸಮಾಜದಲ್ಲಿ ತನ್ನ ಮೇಲಾಗುವ ದೌರ್ಜನ್ಯಗಳಿಗೆ ಗಂಡಸನ್ನು ವಿರೋಧಿಸುವ ಹೆಣ್ಣುಮಕ್ಕಳು ಎಷ್ಟೋ ಬಾರಿ ಬಜಾರಿ, ಗಂಡು ಬೀರಿ, ಸಂಸಾರಒಡೆಯುವವಳು ಎಂದು ಕರೆಯಲ್ಪಡುತ್ತಾಳೆ. ಕೌಟುಂಬಿಕ ಕಲಹಗಳಲ್ಲಿ ತಪ್ಪು ಯಾರದ್ದೇ ಇರಲಿ ಹೊಂದಿಕೊಂಡು, ಅನುಸರಿಸಿಕೊಂಡು ಹೋಗಲು ಹೇಳುವುದು ಹೆಣ್ಣು ಮಕ್ಕಳಿಗೆ ಮಾತ್ರ. ಒಟ್ಟಿನಲ್ಲಿ ಹೆಣ್ಣು ಮಕ್ಕಳು ತಗ್ಗಿ ಬಗ್ಗಿ ನಡೆಯಬೇಕು.ಕಾರಣ ಆಕೆ ಭೂಮಿ ತಾಯಿಯಷ್ಟೇ ತಾಳ್ಮೆಯನ್ನು ಹೊಂದಿರುವ ವ್ಯಕ್ತಿ ಎಂಬ ಬಣ್ಣದ ಹೋಲಿಕೆ!!. ಆದರೂ ನಮ್ಮ ಸಮಾಜ ಮತ್ತು ಜನರು ಇನ್ನೂ ತಮ್ಮ ಪುರಾತನ ಧೋರಣೆಗಳಿಂದ ಕಿಂಚಿತ್ತು ಬದಲಾಗಿಲ್ಲ. ಎಷ್ಟೋ ಬಾರಿ ದುಡಿಯುವ ಹೆಣ್ಣು ಮಕ್ಕಳ ವೇತನವನ್ನು ಕೂಡ ಗಂಡಸರೇ ಬಳಸುತ್ತಾರೆ ಅಕಸ್ಮಾತಾಗಿ ಈ ಕುರಿತು ಆಕೆ ಏನಾದರೂ ಪ್ರಶ್ನಿಸಿದರೆ ದುಡಿಯುತ್ತಿನಿ ಎಂಬ ಹಮ್ಮುಜೊತೆಗೆ ನಿನ್ನ ಉದ್ಯೋಗದ ಅವಶ್ಯಕತೆ ನಮ್ಮನೆಗೆ ಇಲ್ಲ ಕೆಲಸವನ್ನು ಬಿಟ್ಟು ಬಿಡು ಎಂಬ ರೋಪು ಬೇರೆ. ಉದ್ಯೋಗ ತನ್ನ ವೈಯುಕ್ತಿಕ, ಆರ್ಥಿಕ ಬೆಳವಣಿಗೆಯ ಮತ್ತು ತನ್ನ ಸ್ವಾವಲಂಬಿ ಜೀವನದ ಅವಿಭಾಜ್ಯ ಅಂಗವಾಗಿದೆ ಎಂಬ ಅರಿವನ್ನು ಹೊಂದಿರುವ ಹೆಣ್ಣುಮಕ್ಕಳು ಅನಿವಾರ್ಯವಾಗಿ ತಗ್ಗಿ ಬಗ್ಗಿ ನಡೆಯುತ್ತಾರೆ. ಹೆಣ್ಣು ಮಕ್ಕಳು ಉಡುವ ಬಟ್ಟೆಗಳು ಅವರ ಚಾರಿತ್ರ್ಯವನ್ನು ಹೇಳುತ್ತವೆ ಎಂಬುದು ಸಮಾಜದ ಅಂಬೋಣ. ಇದು ಎಷ್ಟರ ಮಟ್ಟಿಗೆ ಸರಿ. ತನ್ನಇಷ್ಠದಂತೆ ಬಟ್ಟೆ ತೊಡುವ,ಕಲಿಯುವ, ಬದುಕುವ ಅವಕಾಶಗಳು ಆಕೆಗೆ ಮರೀಚಿಕೆ ಎಂಬುದು ವಿಷಾದನೀಯ. ನಿನ್ನ ಜೀವನ ನಿನ್ನ ಬದುಕು… ನಿನ್ನಿಷ್ಟದಂತೆ ಬದುಕು ಕಟ್ಟಿಕೋ ಎಂದು ಎಂದಾದರೂ ನಿಮ್ಮ ತಾಯಿಗೆ, ಸಹೋದರಿಗೆ, ಪತ್ನಿಗೆ,ಸ್ನೇಹಿತೆಗೆ ಹೇಳಿದ್ದೀರಾ?? ನಿನ್ನ ಹವ್ಯಾಸಗಳನ್ನು ಮುಂದುವರೆಸು, ನಿನಗಾಗಿ ಸಮಯವನ್ನು ಮೀಸಲಿಡು ಎಂದು ಹೇಳಿದ್ದೀರ? ಆಕೆ ಕೆಲಸ ಮಾಡುವಾಗ ಒಂದು ಕಪ್ಪು ಚಹಾ ಮಾಡಿ ಕೊಟ್ಟಿದ್ದೀರಾ?? ಇತ್ತೀಚೆಗೆ ಬಹಳಷ್ಟು ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮತ್ತು ವೈಯಕ್ತಿಕ ಬೆಳವಣಿಗೆಗೆ ಹೆಚ್ಚು ಮಹತ್ವ ನೀಡುತ್ತಿದ್ದು ತತ್ಪರಿಣಾಮವಾಗಿ ಹೆಣ್ಣು ಮಕ್ಕಳು ಔದ್ಯೋಗಿಕವಾಗಿ, ಸಾಮಾಜಿಕವಾಗಿ ಮುಖ್ಯವಾಗಿ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಮಕ್ಕಳೆಡೆಗಿನ ತಂದೆ ತಾಯಿಗಳ ಈ ಬಗೆಯ ಪ್ರೀತಿ, ಕಾಳಜಿ ಮತ್ತು ಮಕ್ಕಳ ಭವಿಷ್ಯದ ಕುರಿತಾದ ಅವರ ಹಿತಾಸಕ್ತಿಗಳು ಮಕ್ಕಳ ಭದ್ರ ಭವಿಷ್ಯಕ್ಕೆ ಬುನಾದಿಯಾಗುತ್ತಿವೆ. ಇದು ಸ್ವಾಗತಾರ್ಹ ವಿಷಯ. ಹೆಣ್ಣು ಮಕ್ಕಳು ಯಾರೇ ಇರಲಿ, ಹೇಗೆ ಇರಲಿ ಏನೇ ಇರಲಿ ಅವರನ್ನು ಗೌರವಿಸಿ, ಅವರ ವ್ಯಕ್ತಿತ್ವದ ಒಂದು ಮುಖವನ್ನು ಮಾತ್ರ ನೋಡಿ ಜಡ್ಜ್ ಮಾಡಬೇಡಿ. ಅದಾಗದಿದ್ದರೆ ಅವರ ಚಾರಿತ್ರ್ಯವಧೆ ಮಾಡದೆ, ನಿಮ್ಮ ಪಾಡಿಗೆ ನೀವಿರಿ. ಶತಮಾನಗಳಿಂದ ನೀವು ಸಿರುವ ಕಿರೀಟದ ಭಾರವನ್ನು ಹೊತ್ತು ಹೆಣ್ಣು ನಡೆದಿದ್ದಾಳೆ…. ಮುಂದೆಯೂ ನಡೆಯುತ್ತಾಳೆ ಕೂಡ. ಆದರೆ ಆಕೆಗೆ ಆಕೆಯದ್ದೇ ಜೀವನವನ್ನು ರೂಪುಗೊಳಿಸಿಕೊಳ್ಳಲು ಕೊಂಚ ಸ್ಪೇಸ್ ಕೊಡಿ….. ಅದುವೇ ನಿಜವಾದ ಮಹಿಳಾ ದಿನಾಚರಣೆಯ ಸಾರ್ಥಕತೆ. ವೀಣಾ ಹೇಮಂತ್ ಗೌಡ ಪಾಟೀಲ್ 

ಮಹಿಳಾ ವಿಶೇಷ ದಿನ, ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ

ಮಹಿಳಾ ದಿನದ ವಿಶೇಷ,ಡಾ.ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿ ಬಾಗಲಕೋಟ ಡಾ.ಗೀತಾ ದಾನಶೆಟ್ಟಿ ಬಾಗಲಕೋಟೆ ಅವಳೆಂದರೆ ಅವಳೆಂದರೆಜೀವದ ಒಡಲುಮಮತೆಯ ಮಡಿಲುಕರುಣೆಯ ಕಡಲುಪ್ರೀತಿಗೆ ಮಿಗಿಲು ಅವಳೆಂದರೆಮಧುರ ಭಾವಗಳ ಸಾಗರಸದಾ ಸಂತಸದ ಆಗರತ್ಯಾಗ, ಸಹನೆಯ ಶಿಖರಜ್ಞಾನಧಾರೆಯ ಭಂಡಾರ ಅವಳೆಂದರೆಬದುಕಿಗೆ ಬಣ್ಣ ತುಂಬುವ ಕಲಾವಿದೆಕವಿ ಕಾವ್ಯದ ವಸುಂಧರೆಅಕ್ಕರೆಯ ಅಮೃತಧಾರೆಸೃಷ್ಟಿಯ ಸೌಂದರ್ಯ ಅವಳೆಂದರೆಅಬಲೆಯಲ್ಲ ಆದರ್ಶಆತ್ಮಾಭಿಮಾನದ ಅನರ್ಘ್ಯಆಧ್ಯಾತ್ಮದ ಅನುಭೂತಿಗಳತಿ,ಸಂಗಾತಿ ಸಂಪ್ರೀತಿ ಅವಳೆಂದರೆಮಿಡಿಯುವ ಮೌನಗಾನಮನ ಮಂದಿರದ ತಾಣಬದುಕಿನ ಉಯ್ಯಾಲೆಜ್ಞಾನದ ಸ್ಪೂರ್ತಿಸೆಲೆ ಅವಳೆಂದರೆಕುಟುಂಬದ ಹೊಣೆಗಾರಿಕೆದಡ ಸೇರಿಸುವ ನೌಕೆಎಲ್ಲರನು ಸಲಹುವ ಸೇವಕಿಸಕಲ ರಂಗದಲಿ ಸಾಧಕಿ ಅವಳೆಂದರೆಸೀಡಿದೇಳುವ ಶಕ್ತಿ ಸ್ವರೂಪಿಣಿದಣಿವರಿಯದ ಧರಣಿಜಗದ ಜೀವನಾಡಿಬಾಳ ಪುಟದ ಮುನ್ನುಡಿ ಅವಳೆಂದರೆಬರೀ ಹೆಸರು ಮಾತ್ರವಲ್ಲತಪ್ಪನ್ನು ತಿದ್ದಿ ಬುದ್ದಿ ಹೇಳುವವಳುಅತ್ತಾಗ ಅಪ್ಪಿ ಮುದ್ದಿಸುವವಳುಹಸಿದಾಗ ಕೈತುತ್ತು ಕೊಡುವವಳು ಅವಳೆಂದರೆಆಲದ ಮರದ ನೆರಳುನೋವು ನುಂಗಿ ನಲಿವಳುಭೂಮಿ ತೂಕದವಳುಹೃದಯ ತುಂಬಿ ಹರಿಸುವವಳು ಅವಳಿದ್ದರೆ ದಿನವೂ ನಿತ್ಯೋತ್ಸವಮತ್ಯಾಕೆ ಕುಣಿದು,ಕುಪ್ಪಳಿಸಿಮಾಡಿ ಮುಗಿಸುವಿರಿ ಅವಳಿಗೊಂದು ಉತ್ಸವಪ್ರೇರಣೆ,ಸಾಧನೆಗಿರಲಿ ಸಂಭ್ರಮೋತ್ಸವ ಡಾ.ಗೀತಾ ದಾನಶೆಟ್ಟಿ ಬಾಗಲಕೋಟ

ಮಹಿಳಾ ದಿನದ ವಿಶೇಷ,ಡಾ.ಗೀತಾ ದಾನಶೆಟ್ಟಿ Read Post »

You cannot copy content of this page

Scroll to Top