ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ದಿವ್ಯ ಎಂ ಅವರ ಕವಿತೆ  “ಒಡೆದ ಕನ್ನಡಿಯೊಳಗಿನ ಮಾತು”

ಕಾವ್ಯ ಸಂಗಾತಿ ದಿವ್ಯ ಎಂ “ಒಡೆದ ಕನ್ನಡಿಯೊಳಗಿನ ಮಾತು” ತಪ್ಪು ನನ್ನದ ಅಥವಾ ನಿನ್ನದಾಇಲ್ಲಿ ನನಗೆ ಉತ್ತರವೇ ಸಿಗಲಿಲ್ಲ !ಹೋದವನು ನೀನಾ ಅಥವಾ ಕಳಿಸಿದವಳು ನಾನಾ..!ಇಲ್ಲಿ ನನಗೆ ಸ್ಪಷ್ಟತೆಯೇ ಸಿಗಲಿಲ್ಲ ! ಬಹುಶಃ ಮತ್ತಾರು ನನ್ನನ್ನುನಿನ್ನಷ್ಟು ಅರ್ಥಮಾಡಿಕೊಳ್ಳಲಾರರುಹಾಗೆ  ಮತ್ಯಾರು ನಿನ್ನನ್ನುನನ್ನಷ್ಟು ಪ್ರೇಮಿಸಲಾರರು..! ಅಳಲಾರದಷ್ಟು ನಗಿಸಿದವನೇಮತ್ತೆಂದೂ ನಗಲಾರದಂತೆ ಅಳಿಸಿಬಿಟ್ಟಅಂಗಲಾಚಿ ಬೇಡಿದೆಕೊನೆಗೆ ಅಸಹಾಯಕತೆಯ ನೋಟದಲ್ಲಿ ನಿನ್ನತ್ತ ತಿರುಗಿದೆ..! ಆದರೆ ನೀನುಅರಿವಿಗೆ ಬಾರದ ಜಾಣನಂತೆ ಮತ್ಯಾರಿಗೋ ಪ್ರೇಮಧಾರೆ ಎರೆಯುತ್ತಾ ಮತ್ಯಾರದೋ ಕೈ ಹಿಡಿದು ನಡೆಯುತ್ತಾ ಸಾಗಿಬಿಟ್ಟೆ..! ನಿನಗೆ ನನ್ನಿಂದ ದೂರವಾಗುವ ಇರಾದೆಯೊಂದು ನಿನ್ನೆದೆಯಲ್ಲಿ ಇದಿದ್ದೆ ಆದರೆನಾವು ಬೇರೇನಾದರೂ ದಾರಿಯೊಂದನ್ನು ಹುಡುಕಬಹುದಿತ್ತೇನೋನಮ್ಮನ್ನು ನಾವು ಉಳಿಸಿಕೊಳ್ಳಬಹುದಿತ್ತೇನೋ,ಬೇರಾಗಿ ನಡೆಯಬೇಕಿರೋ ಈ ಕವಲುದಾರಿಗಳ ಬದಲಾಗಿಏಳು ಬೀಳುಗಳೊಂದಿಗೆಒಬ್ಬರನ್ನೊಬ್ಬರು ಕೈ ಹಿಡಿದು ಸಾಗುವ ಗೆಳೆಯರಾಗಬಹುದಿತ್ತುಕಡೆ ತನಕ ನಮ್ಮನ್ನು ನಾವು ಉಳಿಸಿಕೊಳ್ಳಬಹುದಿತ್ತುಯಾವುದಾದರೂ ಒಂದುಮನುಷ್ಯತ್ವದ ರೂಪದಲ್ಲಿ..! ಆದರೂ ಕಾಲ ಮಿಂಚಿ ಹೋಗಿದೆಪ್ರತಿ ಹನಿಯೂ ಕಣ್ಣಿನಿಂದ ಜಾರುವಾಗ ಸುಮ್ಮನೆ ಯೋಚಿಸುತ್ತೇನೆ!ನನ್ನ ನೆನಪುಗಳು ಸಹ ಕಾಡಬಹುದೇ ನಿನ್ನನ್ನು?ನಿನ್ನ ನೆನಪುಗಳು ನನ್ನನ್ನು ಕಾಡುವಷ್ಟೇ ಕಠೋರವಾಗಿ?ಅನ್ನ ನೀರು ನಿದ್ರೆಗಳ ತೊರೆಸಿ, ಹಗಲು ಇರುಳುಗಳ ವ್ಯತ್ಯಾಸವಿರದಂತೆನಿನ್ನ ನೆನಪುಗಳು ನನ್ನನ್ನು ಆವರಿಸಿರುವಷ್ಟೇ ಕ್ರೂರವಾಗಿ ?ಕಾಡಬಹುದೇ ನಿನ್ನನ್ನು ಆ ನನ್ನ ನೆನಪುಗಳು ? ಬಹುಶಃ ನನ್ನ ತಿಳಿಯಾದ ಪ್ರೇಮನಿನ್ನೆದೆಯಲ್ಲಿ ಆಳವಾದ ನೆನಪುಗಳನ್ನು ನೆಟ್ಟಿರಲಿಕ್ಕಿಲ್ಲಆದರೆ ನನ್ನ ಪಾಡು ಹಾಗಿಲ್ಲ ನೋಡು.! ಈ ಅತಿಯಾದ ಪ್ರೇಮ ನನ್ನೊಳಗೊಂದು ಆಲದಮರವನ್ನೇ ಬಿತ್ತಿ ನೀರೆರೆದಿದೆಅಲ್ಲಿ ಮತ್ಯಾರದೋ ಅಪ್ಪುಗೆಯೊಂದರಲ್ಲಿ ನೀನು ಬೆಚ್ಚಗಿರಬಹುದುಆದರೆ ನಿತ್ಯ ನನಗಿಲ್ಲಿ ನಿನ್ನ ನೆನಪುಗಳದ್ದೇ ಧ್ಯಾನ ! ಬಿಡುವಾದರೆನೀನೊಮ್ಮೆ ಇಲ್ಲಿ ಬಂದು ನೋಡಬಾರದೇಕೆ?ನನ್ನನೊಮ್ಮೆ ಚುಂಬಿಸಿ ಚಿವುಟಬಾರದೇಕೆ?ನನ್ನನೊಮ್ಮೆ ಆಲಂಗಿಸಿ ಪೂರ್ತಿಯಾಗಿ ಅಳಿಸಬಾರದೇಕೆ?ನನ್ನನೊಮ್ಮೆ ಸುತ್ತಿಸಿ ಸಂತೈಸಬಾರದೇಕೆ?ಮತ್ತೆಂದೂ ಕಾಡದಂತೆಈ ನೋವನು ಕೊನೆಯಾಗಿಸಬಾರದೇಕೆ?ನಿನ್ನೆಲ್ಲಾ ನೆನಪುಗಳನ್ನು ನೀನೇ ಹೊತ್ತಿ ಹೋಗಬಾರದೇಕೆ ?ಬಿಡಿಸಲಾಗದ ಒಗಟಿನ ಪ್ರಶ್ನೆಗಳು ಬಿಡು..! ನಿನ್ನನ್ನು ಪ್ರೇಮಿಸುವುದನ್ನಷ್ಟೇ ಕಲಿತ ನಾನುದ್ವೇಷಿಸುವುದನ್ನು,ದೂಷಿಸುವುದನ್ನೂಕೊನೆ ಪಕ್ಷ ಮರೆಯುವುದನ್ನು ಕೂಡ ಕಲಿಯಲಾಗಲೇ ಇಲ್ಲ..! ಹೋಗಲಿ ನಿನ್ನ ತೊರೆಯುವುದನ್ನಾದರೂ ಕಲಿಯಬೇಕಿತ್ತು ಎಂದುಕೊಂಡೆ..!ನಿನ್ನ ಪ್ರೇಮ ಪಂಜರದಲ್ಲಿರೆಕ್ಕೆ ಮುರಿದುಕೊಂಡುವೇದನೆಯಲ್ಲಿ ನರಳುತ್ತಿರುವಹಕ್ಕಿಯಂತಾದ ನನಗೆನಿನ್ನ ನೆನಪುಗಳ ಗರಿ ಬಿಚ್ಚದೆಹಾರುವ ಬಲವೊಂದುಈ ಕ್ಷಣಕ್ಕೂನನ್ನೊಳಗೆ ಮೊಳೆಯಲಿಲ್ಲವೆಂಬುದೇಬದುಕಿನ ಒಂದು ದುರಂತ..!  ದಿವ್ಯ ಎಂ

ದಿವ್ಯ ಎಂ ಅವರ ಕವಿತೆ  “ಒಡೆದ ಕನ್ನಡಿಯೊಳಗಿನ ಮಾತು” Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ “ಕೆಂಪು ಕಾಶ್ಮೀರ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಕೆಂಪು ಕಾಶ್ಮೀರ” ಹಿಮಾಲಯ ಮಡಿಲಲ್ಲಿಸ್ವರ್ಗ ಮಲಗಿತ್ತು,ಬೆಳ್ಳಿಯ ಹಿಮದ ಹಾಸಿಗೆಯಲ್ಲಿಮೌನ ಮುತ್ತು ಹೊಳೆಯಿತು. ದಾಲ್ ಸರೋವರಸ್ಫಟಿಕ ಕಣ್ಣಾಗಿ,ಆಕಾಶ ತನ್ನ ಮುಖ ನೋಡಿತು;ಶಿಕಾರಾಗಳ ಕನಸು ತೇಲಿತುನೀರಿನ ಎದೆ ಮೇಲೆ, ಮೃದುವಾಗಿ. ಗುಲ್ಮಾರ್ಗ್ ಹಿಮಮಕ್ಕಳ ನಗುವಿನಂತೆ,ಪಹಲ್ಗಾಮ್ ಹುಲ್ಲುತಾಯಿಯ ಮಡಿಲಂತೆ,ಚಿನ್ನಾರ್ ಎಲೆಗಳುಕಾಲದ ಬಣ್ಣ ಹೊತ್ತವು. ಒಂದು ಕ್ಷಣದಲ್ಲಿಸ್ವರ್ಗ ನಡುಗಿತು,ಗುಂಡಿನ ಶಬ್ದಪರ್ವತ ಹೃದಯ ತೂರಿತು,ಹಿಮದ ಬಿಳುಪುರಕ್ತದ ಕೆಂಪು ಕುಡಿದುನೀರಾಗಿ ಹರಿಯಿತು. ಹೂವಲ್ಲ, ಟುಲಿಪ್ ಅಲ್ಲ,ನೆಲ ಮೇಲೆ ಬಿದ್ದಮಾನವ ಉಸಿರಿನ ಗುರುತು. ಪ್ರವಾಸದ ನಗುಮರಣದ ಅಳುವಾಯಿತು,ಗಾಳಿ ಮಾತು ನಿಶ್ಶಬ್ದವಾಗಿ ಕರಗಿತು,ಹೃದಯದ ನೋವುಹಿಮದಲ್ಲಿ ಮಿಶ್ರಿತ. ಕಾಡು ಮೌನವಾಗಿ ತಿಳಿದುಕೊಂಡಿತು,ರಕ್ತದ ಪ್ರತಿಜ್ಞೆಮಣ್ಣಿಗೆ ನೆನೆಸಿತು;ಹೆಜ್ಜೆಗಳ ಶಬ್ದ ಮೌನದಲ್ಲಿ ಹಾರಿತು,ಹೃದಯದ ನೋವು ನದಿಯಲ್ಲಿ ಹರಿಯಿತು. ನದಿಗಳು ಹರಿಯುತ್ತಿವೆ,ಆದರೆ ಹಾಡುತ್ತಿಲ್ಲ,ಹಿಮದ ಶ್ವೇತದಲ್ಲಿ ಕೆಂಪು ನೀರು ಹರಿದು,ಮರುಳು ಹೊಳೆಯುತ್ತದೆ,ನೋವು ಕುಸಿದು,ಆಕ್ರಂದನ ತೇಲಿ. ಕಾಶ್ಮೀರಾ,ನೀನು ಸುಂದರ,ಆದರೆ ನಿನ್ನ ಸೌಂದರ್ಯಸಾವು ನೆರಳಿನಿಂದ ಮಿಶ್ರಿತ. ನಿಲ್ಲಲಿ ಉಗ್ರವಾದ,ಗುಂಡಿಗೆ ಜಾಗ ಬೇಡ;ಹಿಮ ಮತ್ತೆ ಬಿಳಿಯಾಗಲಿ,ನದಿಗಳು ಹಾಡಾಗಲಿ,ಹೃದಯಗಳಲ್ಲಿ ಮರಳಿಮಾನವೀಯತೆ ಆರಾಧನೆಯಾಗಲಿ. ಕೆಂಪು ಅಧ್ಯಾಯಕಣ್ಣೀರಾಗಿ ಒಣಗಿ,ಮಾನವೀಯತೆಇಲ್ಲಿ ಮತ್ತೆಸ್ವರ್ಗವಾಗಲಿ. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರ “ಕೆಂಪು ಕಾಶ್ಮೀರ” Read Post »

ಇತರೆ

“ಹೆಣ್ತನ ಎಂಬ ಚೌಕಟ್ಟು ಹಾಗೂ ಮಿತಿಯಾಚೆಗಿನ ಬದುಕು”ವೀಣಾ ಹೇಮಂತ್ ಗೌಡ ಪಾಟೀಲ್

ಮಹಿಳಾ ಸಂಗಾತಿ “ವೀಣಾ ಹೇಮಂತ್ ಗೌಡ ಪಾಟೀಲ್ “ಹೆಣ್ತನ ಎಂಬ ಚೌಕಟ್ಟು ಹಾಗೂ ಮಿತಿಯಾಚೆಗಿನ ಬದುಕು ಹೆಣ್ತನ ಎಂಬ ಚೌಕಟ್ಟು ಹಾಗೂ ಮಿತಿಯಾಚೆಗಿನ ಬದುಕು ಹೆಣ್ಣಿಗೆ ಎಲ್ಲರೂ ಪರಿಚಿತರು ಆದರೆ ಆಕೆಯ ಪರಿಚಯ ಯಾರಿಗೆ ಇದೆ ಅಂತ ಕೇಳಿದರೆ ಬಹುಶಹ ಒಬ್ಬೊಬ್ಬರು ಒಂದೊಂದು ರೀತಿ ಆಕೆಯ ಪರಿಚಯವನ್ನು ಮಾಡಿಕೊಡಬಹುದು. ಸಾಮಾನ್ಯವಾಗಿ ಹೆಣ್ಣು ಎಂದರೆ ತಾಯಿ, ಸಹೋದರಿ, ಪತ್ನಿ, ಮಗಳು ಈ ನಾಲ್ಕು ಹೆಣ್ಣು ಮಕ್ಕಳ ಜೊತೆಗಿನ ನಮ್ಮ ಸಂಬಂಧಗಳು. ಈ ಸಂಬಂಧದ ಹೊರತಾಗಿ ಆಕೆ ಓರ್ವ ಸ್ನೇಹಿತೆಯೂ ಆಗಬಹುದು. ಒಂದು ಹಂತದವರೆಗೆ ಆಕೆಯೊಂದಿಗೆ ನಮ್ಮ ಮನ ಬಿಚ್ಚಿ ನಾವು ಮಾತನಾಡಲು ಸಾಧ್ಯವಾಗುತ್ತದೆ. ಅವರವರು ಕಂಡುಕೊಂಡಂತೆ ಹೆಣ್ಣನ್ನು ಎಲ್ಲರೂ ವರ್ಣಿಸುತ್ತಾರೆ ಹೊರತು ಆಕೆಯ ನಿಜವಾದ ಅಸಲಿಯತ್ತು ಯಾರಿಗೂ ಗೊತ್ತಿಲ್ಲ… ಕೆಲವರಿಗೆ ಹೆಣ್ಣು ಮಾಯೆಯಾದರೆ ಮತ್ತೆ ಕೆಲವರಿಗೆ ಆಕೆ ಮೋಹಿನಿ ಮತ್ತೆ ಕೆಲವರಿಗೆ ಆಕೆ ದೇವತಾ ಸ್ವರೂಪಿಣಿ ಮತ್ತೆ ಕೆಲವರಿಗೆ ಆಕೆ ಜಾರಿಣಿಯು ಆಗಬಹುದು, ಇನ್ನು ಕೆಲವರಿಗೆ ಆಕೆಯ ರಕ್ಕಸಿಯು ಆಗಬಹುದು…. ಅವರವರ ಭಾವಕ್ಕೆ ತಕ್ಕಂತೆ ಅವರು ಹೆಣ್ಣಿನ ಕುರಿತು ಮಾತನಾಡುತ್ತಾರೆಯೇ ಹೊರತು ಖುದ್ದು ಆಕೆ ಯಾರೆಂದು ಅವರಿಗೆ ಗೊತ್ತಿರುವುದಿಲ್ಲ.ಆಕೆ ಯಾರ ಅಂಕೆಗೂ ನಿಲುಕುದ ಸೀಮಾತೀತಳು. ಯಾವ ಉಪಮೆಗೆ ನಿಲುಕದ ಉಪಮಾತೀತಳು.ಹೆಣ್ಣು ಮೌನದಲ್ಲೇ ಸಾವಿರ ಮಾತುಗಳನ್ನು ಹೊತ್ತು ನಡೆಯುವ ಛಾತಿಯುಳ್ಳವಳು.ತನ್ನ ಕರ್ತವ್ಯಕ್ಕೆ ಬದ್ಧಳಾಗಿ ತನ್ನನ್ನು ನಂಬಿದವರನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪೊರೆಯುವವಳು. ಯಾರಿಗೂ ಕೇಡನ್ನು ಬಯಸದ ಆಕೆ ಜನರು ತನ್ನನ್ನು ಕೈಬಿಟ್ಟರೂ ದೇವರು ತನ್ನೊಂದಿಗೆ ಇದ್ದಾನೆ ಎಂಬ ನಂಬಿಕೆಯ ಬಲದಿಂದಲೇ ಬದುಕನ್ನು ನಡೆಸುತ್ತಾಳೆ. ಆಕೆಯ ಪ್ರಕಾರ ಬದುಕು ಪ್ರದರ್ಶನವಲ್ಲ ಅದೊಂದು ಪ್ರಯಾಣ… ಈ ಪ್ರಯಾಣದಲ್ಲಿ ಹೆತ್ತವರು, ಶಿಕ್ಷಕರು ಸಂಗಾತಿ ಮಕ್ಕಳು ಎಲ್ಲವೂ ಆಯಾ ಸಮಯಕ್ಕೆ ಆಕೆಯ ಜೊತೆಗೆ ಸಾಗುತ್ತದೆ ಇದೊಂದು ರೀತಿಯಲ್ಲಿ ಬದುಕಿನ ಪ್ರತಿಯೊಂದು ಕ್ಷಣವನ್ನು ಉಸಿರಾಡುವ ಆನಂದಿಸುವ ಪ್ರಭುದ್ಧತೆಯ ಹಾದಿಯಲ್ಲಿ ಸಾಗಿ ಹೋಗುವ ಪಯಣ. ಇನ್ನೂ ಹೇಳಬೇಕೆಂದರೆ ಆಕೆ ಜೀವನದ ಅರ್ಥ ಏನು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದಿಲ್ಲ ಬದಲಾಗಿ ತನ್ನ ಮನದ ಆಳದ ಕತ್ತಲೆಯನ್ನು ಆಕೆ ತಳ್ಳಿ ಹಾಕದೆ ಮರೆ ಮಾಡದೆ ಆ ಕತ್ತಲೆಯ ಒಳಗಿರುವ ಬೆಳಕಿನತ್ತ ಮುಖ ಮಾಡುತ್ತಾಳೆ.ಆಕೆಗೆ ಗೊತ್ತು ಆಕೆ ನಡೆಯುತ್ತಿರುವ ಹಾದಿಯಲ್ಲಿ ಆತ್ಮ ವಿಶ್ವಾಸ ಹಾಗೂ ನಿಶಬ್ದ ಶಕ್ತಿ ಮಾತ್ರ ಆಕೆಯೊಂದಿಗೆ ಇರುತ್ತದೆ ಎಂದು. ಆಕೆ ಪ್ರತಿಭಟನೆಯನ್ನು ಒಂದು ಪಾಠವಾಗಿ ಸ್ವೀಕರಿಸುತ್ತಾಳೆ ಪ್ರತಿ ತಪ್ಪು ಹೆಜ್ಜೆಯನ್ನು ಅನುಭವದ ಬೆಳಕಾಗಿ ಮಾರ್ಪಡಿಸಿಕೊಳ್ಳುತ್ತಾಳೆ. ತನ್ನ ಅಂತರಾಳದಲ್ಲಿ ಮತ್ತಷ್ಟು ದೃಢವಾಗಿ ರೂಪುಗೊಳ್ಳುತ್ತಾಳೆ.ಮನೆಯ ಪ್ರತಿಯೊಬ್ಬರ ಆಗುಹೋಗುಗಳನ್ನು ಅನುಸರಿಸಿ ಅದಕ್ಕೆ ತಕ್ಕಂತೆ ತನ್ನ ಬದುಕನ್ನು ರೂಪಿಸಿಕೊಳ್ಳುವ ಆಕೆ ಒಂದೊಮ್ಮೆ ನಿಜವಾಗಿಯೂ ತನ್ನದೇ ಆದ ಬದುಕನ್ನು ನಡೆಸಬೇಕು ಎಂದು ಇಚ್ಛಿಸಿದರೆ ಖಂಡಿತವಾಗಿಯೂ ಈ ಜೀವ ಜಗತ್ತಿನ ಉಳಿದ ಜೀವಿಗಳು ತಲ್ಲಣಗೊಳ್ಳುತ್ತವೆ ಕಾರಣ ಎಲ್ಲರ ಜೀವನದ ದೈನಂದಿನ ಚಟುವಟಿಕೆಗಳ ಕೇಂದ್ರ ಬಿಂದು ಆಕೆಯೇ. ಇವರೆಲ್ಲರ ಚಟುವಟಿಕೆಗಳಿಗೆ ಪೂರಕವಾಗಿ ತನ್ನ ಇಡೀ ಬದುಕನ್ನು ಮುಡಿಪಾಗಿರುವ ಆಕೆಯ ಪಾಲಿಗೆ ಬದುಕು ಎಂದರೆ ಗಮ್ಯ ಸ್ಥಾನಕ್ಕೆ ಓಡುವ ಓಟವಲ್ಲ ಬದಲಾಗಿ ತಾನಿಡುವ ಪ್ರತಿ ಹೆಜ್ಜೆಯಲ್ಲೂ ಅರ್ಥವನ್ನು ಕಂಡುಕೊಳ್ಳುವ ಪಯಣ. ಆಕೆಯ ಅನುಭವಗಳೇ ಆಕೆಯನ್ನು ಇಂದಿನ ವ್ಯಕ್ತಿಯಾಗಿ ರೂಪಿಸುತ್ತದೆ.ಒಂದೊಮ್ಮೆ ಆಕೆಯನ್ನು ದುರ್ಬಲಗೊಳಿಸಿದ ಘಟನೆಗಳು ಇಂದು ಆಕೆಯನ್ನು ಗಟ್ಟಿಗೊಳಿಸಿರುತ್ತವೆ. ಪ್ರತಿ ಘಟನೆಗೂ ಒಂದು ಅರ್ಥವಿದೆ ಎಂಬ ನಂಬಿಕೆಯಿಂದ ಬದುಕುವ ಆಕೆ ಜೀವನದ ನಿಜವಾದ ಗೆಲುವು ಇತರರನ್ನು ಮೀರಿಸುವುದಲ್ಲ ಬದಲಾಗಿ ತನ್ನ ಅಂತರಂಗದ ಕತ್ತಲೆಯನ್ನು ಹೊಡೆದೋಡಿಸುವುದು ಎಂಬ ಅರಿವನ್ನುಹೊಂದಿರುತ್ತಾಳೆ ಅಂತೆಯೇ ಆಕೆ ಎಲ್ಲರನ್ನು ಕ್ಷಮಿಸಬಲ್ಲಳು ಕೂಡ. ಬದುಕಿನ ಪಯಣದಲ್ಲಿ ವಯೋ ಸಹಜವಾಗಿ ಕೆಲವೊಮ್ಮೆ ಆಕೆಯ ನಡಿಗೆ ನಿಧಾನವಾಗಬಹುದು… ಆದರೆ ನಂಬಿಕೆ ಆಕೆಯನ್ನು ಮುನ್ನಡೆಸುತ್ತದೆ.ಇಷ್ಟೆಲ್ಲ ಇದ್ದರೂ ಕೂಡ ಒಮ್ಮೊಮ್ಮೆ ಹೆಣ್ಣು ಮಕ್ಕಳು ಮಾನಸಿಕವಾಗಿ ನೊಂದು ಬೇಯುತ್ತಾರೆ. ಅಸ್ತಿತ್ವ ರಹಿತತೆಯನ್ನು ಅನುಭವಿಸುತ್ತಾರೆ. ಕಳೆದು ಹೋದವರಂತೆ ಭಾವಿಸುತ್ತಾರೆ. ಬದುಕಿನಲ್ಲಿ ಏನನ್ನು ಸಾಧಿಸಲು ಸಾಧ್ಯ ವಾಗಲಿಲ್ಲ ಎಂಬ ಭಾವದಿಂದ ಹತಾಶೆಯನ್ನು ಹೊಂದುತ್ತಾರೆ.ಅಂತಹ ಹೆಣ್ಣು ಮಕ್ಕಳಿಗೆ ಒಂದು ಕಿವಿಮಾತುಕನ್ನಡಿಯ ಮುಂದೆ ನಿಂತು ತನ್ನ ಬಿಂಬವನ್ನೇ ಪರಿಭಾವಿಸುವುದರಿಂದ ಆತ್ಮ ಸಾಕ್ಷಾತ್ಕಾರ ಇಲ್ಲವೇ ಸ್ವಂತಿಕೆ ಒದಗಿ ಬರುವುದಿಲ್ಲ. ನಾನು ಎಲ್ಲವನ್ನು ಪಡೆದುಕೊಂಡಿದ್ದೇನೆ ಎಂದು ಹೇಳುವ ಧೈರ್ಯ ಯಾರಿಗೂ ಇಲ್ಲ ಹಾಗೆ ಪಡೆದುಕೊಂಡವರು ಅದನ್ನು ವಿವರಿಸಲು ಕೂಡ ಸಾಧ್ಯವಿಲ್ಲ ಎಲ್ಲವೂ ಅವರವರ ದೃಷ್ಟಿಕೋನದ ಮೇಲೆ ನಿರ್ಧಾರವಾಗಿರುತ್ತದೆ ….ಆದರೆ ಶಿಕ್ಷಣ ಮತ್ತು ಸಮಾಜದ ಕೆಲಸಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.ಹೆಂಗಸರು ತಮ್ಮಲ್ಲಿರುವ ಸಾಮರ್ಥ್ಯವನ್ನು ಬಳಸಲು ಮುಂದಾಗದಿದ್ದರೆ ತಮ್ಮ ಮಾನವೀಯ ನೆಲೆಗಳನ್ನು ಕಳೆದುಕೊಳ್ಳುತ್ತಾರೆ.ಪ್ರಸ್ತುತ ಬದುಕಿನಲ್ಲಿ ಹೆಣ್ಣು ಮಕ್ಕಳಿಗೆ ಗೊತ್ತು ಗುರಿಗಳಿಲ್ಲ ಆಸೆ ಆಕಾಂಕ್ಷೆಗಳಿಲ್ಲ ನಾಳೆಗಾಗಿ ಹಂಬಲಿಸುವುದಿಲ್ಲ ತನ್ನ ದೇಹ ಸಮರ್ಥವಾಗಿರುವ ಹೊತ್ತಿನಲ್ಲಿಯೇ ಏನನ್ನಾದರೂ ಸಾಧಿಸಬೇಕು ಎಂಬ ಛಲವಿಲ್ಲ ಇದೊಂದು ರೀತಿಯ ಆತ್ಮಹತ್ಯೆಯೇ ಸರಿ. ಮಕ್ಕಳನ್ನು ಹೆತ್ತು, ಹೊತ್ತು ಅವರನ್ನು ಶಾಲೆಗೆ ಕಳುಹಿಸಿದ ಹೊತ್ತಿನಲ್ಲಿ ಸುಮ್ಮನೆ ಕುಳಿತುಕೊಂಡ ಹೆಣ್ಣು ಮಕ್ಕಳು ತಮಗೆ ತಾವೇ ಮಿತಿಗಳನ್ನು ಹಾಕಿಕೊಂಡು ತಮ್ಮ ಅನನ್ಯ ಸಾಮರ್ಥ್ಯಗಳ ಅರಿವನ್ನು ಕಳೆದುಕೊಂಡು ಬಿಡುತ್ತಾರೆ.ಕೇವಲ ಎರಡು ದಶಕಗಳ ಹಿಂದೆ ಗೃಹಿಣಿಯರನ್ನು ಸಂದರ್ಶಿಸಿದ ಮಾಧ್ಯಮ ಒಂದು ಹೆಂಗಸಾಗಿ ಕೆಲಸ ಮಾಡುವಾಗನೀವು ಏನೆಲ್ಲಾ ತಳಮಳವನ್ನು ಎದುರಿಸಿದಿರಿ? ನಿಮ್ಮ ಹಿಂದಿನ ಬದುಕಿನಲ್ಲಿ ಮುಖ್ಯ ಸಂತೃಪ್ತಿ ಮತ್ತು ಮುಖ್ಯ ತಳಮಳ ಯಾವುದು?ನಿಮ್ಮೊಳಗೆ ನೀವು ಹೇಗೆ ಬದಲಾಗಿದ್ದೀರಿ ವಯಸ್ಸಾಗುವುದನ್ನು ನೀವು ಹೀಗೆ ಗ್ರಹಿಸುತ್ತಿದ್ದೀರಿ ಹಾಗೂ ಇದಕ್ಕಿಂತ ಭಿನ್ನವಾಗಿ ಬೇರೇನು ಮಾಡಬೇಕೆಂಬ ಆಸೆ ನಿಮ್ಮಲ್ಲಿತ್ತು ಎಂಬ ಪ್ರಶ್ನೆಗಳನ್ನು ಕೇಳಿದಾಗ ಅವರ ನಿಜ ಸಮಸ್ಯೆಗಳಿಗೆ ಶಿಕ್ಷಣ ಕಾರಣವಲ್ಲ ಎಂಬುದು ಸ್ಪಷ್ಟವಾಯಿತು ಅವರೆಲ್ಲರೂ ಶಿಕ್ಷಣವನ್ನು ತಾವು ಗಂಭೀರವಾಗಿ ಪರಿಗಣಿಸಲಿಲ್ಲ ಹಾಗೂ ಅದನ್ನು ಬಳಸಲು ತಕ್ಕ ಯೋಜನೆ ಮಾಡಿಕೊಳ್ಳಲಿಲ್ಲ ಎಂದು ಬೇಸರದಿಂದ ನುಡಿದಿದ್ದರು.ಮದುವೆಯಾದವರಲ್ಲಿ ಬೆರಳೆಣಿಕೆಯ ಜನರು ವಿಚ್ಛೇದಿತರಾಗಿದ್ದರೂ ಮತ್ತೆ ಶೇಕಡ ೯0 ಜನ ಮಕ್ಕಳಿಗೆ ತಾಯಿಯಾಗಿದ್ದರು ಮತ್ತೆ ಕೆಲವರು ತಮಗೂ ಗೃಹಿಣಿ ಎಂದು ಹೇಳಿಕೊಳ್ಳಲು ಸಂತಸವೇನು ಇಲ್ಲ ಎಂಬ ಭಾವವನ್ನು ಹೊಂದಿದ್ದರು.ಇನ್ನೂ ಕೆಲವರಿಗೆ ತಾವು ಪಡೆದ ಶಿಕ್ಷಣ ತಮ್ಮೊಳಗಿನ ತಳಮಳಕ್ಕೆ ಕಾರಣ ಎಂದು ಅರಿವಾಗಿತ್ತು. ತಮಗೆ ಶಿಕ್ಷಣ ಒದಗಿಸಿದ್ದ ಸ್ವಾಯತ್ತತೆ, ಗುರಿ, ಮೌಲ್ಯ ಹಾಗೂ ಬದ್ಧತೆಗಳನ್ನು ತಾವು ಬಳಸಿಕೊಂಡಿಲ್ಲ ಎಂಬುದು ಅವರ ಬೇಸರಕ್ಕೆ ಕಾರಣವಾಗಿತ್ತು.ಮತ್ತೆ ಕೆಲವರು ಸಮುದಾಯದ ಮಿತಿಯಲ್ಲಿ ತಮ್ಮ ಶೈಕ್ಷಣಿಕ ಅರ್ಹತೆಯನ್ನು ಬಳಸುವ ಮೂಲಕ ತಮ್ಮ ಸ್ವಂತಿಕೆಯನ್ನು ಪುನರ್ನವೀಕರಿಸಿಕೊಂಡು ತಮ್ಮ ಬದುಕಿನಲ್ಲಿ ಹೊಸತನವನ್ನು ಕಂಡುಕೊಂಡರು.ಮುಂದೆ ಕೆಲವು ವರ್ಷಗಳ ನಂತರ ಅವರನ್ನು ಈ ಕುರಿತು ಮತ್ತೊಮ್ಮೆ ಪ್ರಶ್ನೆಸಿದಾಗ ಕೆಲವರ ಮನಸ್ಸಿನಲ್ಲಿ ಗೃಹಿಣಣಿಯರಾಗಿದ್ದ ಕಾರಣ ಕಹಿ ಭಾವನೆ ಇಲ್ಲವೇ ನಿರಾಸೆ ಮತ್ತು ಹತಾಶೆಗಳು ಮನೆ ಮಾಡಿದ್ದವು.ಮತ್ತೆ ಕೆಲವರು ಉದ್ಯೋಗ ಮತ್ತು ತಾಯ್ತನಗಳನ್ನು ಒಗ್ಗೂಡಿಸಿಕೊಂಡಿದ್ದರೆ ಚೆನ್ನಾಗಿತ್ತು ಎಂದು ಹೇಳಿದರು .ಇನ್ನೂ ಕೆಲವರು ನಾನ್ಯಾರು ಎಂಬುದೇ ನನಗೆ ಇನ್ನೂ ಅರ್ಥವಾಗಿಲ್ಲ ನನ್ನದೇ ಆದ ಸೃಜನಶೀಲ ಜೀವನವನ್ನು ಕಟ್ಟಲು ತಕ್ಕ ಯೋಚನೆ ಮಾಡಬೇಕಿತ್ತು ಎಂದು ಈಗ ಅನಿಸುತ್ತಿದೆ ಎಂದು ಬೇಸರ ಪಟ್ಟುಕೊಂಡರು.ಜೀವನಪೂರ್ತಿ ಅವರಿವರ ಕೆಲಸಗಳನ್ನು ಮಾಡುತ್ತಾ ತಮ್ಮನ್ನು ತಾವು ಕಡೆಗಣಿಸಿದ ಪರಿಣಾಮವಾಗಿ ಮಾನಸಿಕವಾಗಿ ಕುಸಿದು ಹೋಗುತ್ತಾ, ಕೀಳರಿಮೆಯಿಂದ ಬಳಲುತ್ತಾ ಹೆಣ್ಣುತನ ಎಂಬ ಕಣ್ಕಟ್ಟಿನಿಂದ ತಮ್ಮಂತಹ ಹೆಣ್ಣು ಮಕ್ಕಳು ಬದುಕಿನ ಕುರಿತು ನೂರೆಂಟು ತೊಂದರೆಗಳನ್ನು, ನೋವುಗಳನ್ನು, ನಕಾರಾತ್ಮಕ ಭಾವಗಳನ್ನು ವ್ಯಕ್ತ ಪಡಿಸುತ್ತಾರೆ. ಗಂಡ ಮನೆ ಮತ್ತು ಮಕ್ಕಳಿಗೆ ಮಾಡಿ ಮಾಡಿ ನಾನು ನನ್ನ ಬದುಕನ್ನೇ ಸವೆಸಿದೆ ಎಂದು ಹೇಳುತ್ತಾರೆ ಮಾಡಿದ ಮನೆ ಕೆಲಸಗಳನ್ನೇ ಮತ್ತೆ ಮತ್ತೆ ಮಾಡುತ್ತಾ ಇನ್ನಷ್ಟು ಮತ್ತಷ್ಟು ಉಜ್ಜುತ್ತಾ ಕಾಲ ಕಳೆದಿರುತ್ತಾಳೆ.ಅದರ ಬದಲಾಗಿ ಮನೆವಾರ್ತೆಯೇ ತಮ್ಮ ಉದ್ಯೋಗ ಎಂದು ನಂಬುವುದನ್ನು ನಿಲ್ಲಿಸಿ ತಮ್ಮ ಮನೆ ವಾರ್ತೆಯ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಬೇಕು.. ಮನೆ ಮಕ್ಕಳು ಕುಟುಂಬದ ಹೊರತಾಗಿಯೂ ತಮಗೆ ಒಂದು ಬದುಕಿದೆ ಎಂಬ ಅರಿವನ್ನು ಮೂಡಿಸಿಕೊಂಡು ಹಾಡು ಹೊಲಿಗೆ ಹಸೆ, ಕಂಪ್ಯೂಟರ್ ಕಲಿಕೆ ಚಿತ್ರಕಲೆ ಸಂಗೀತ ಸೌಂದರ್ಯವರ್ಧನ ಚಿಕಿತ್ಸೆಗಳು ಹೀಗೆ ಹತ್ತು ಹಲವು ಕಲಿಕೆಗಳನ್ನು ತಮ್ಮದಾಗಿಸಿಕೊಳ್ಳಬೇಕು. ತಮ್ಮ ಬದುಕಿನಲ್ಲಿ ತಮಗಾಗಿ ತಾವೇ ಒಂದು ಸ್ಥಾನವನ್ನು ಕಲ್ಪಿಸಿಕೊಂಡು ಆ ಸ್ಥಾನದಲ್ಲಿ ಪಟ್ಟಾಗಿ ಕುಳಿತುಕೊಳ್ಳುವ ರೀತಿನಲ್ಲಿ ಕಾರ್ಯ ನಿರ್ವಹಿಸಿದ ಹೆಣ್ಣು ಮಕ್ಕಳು ಬದುಕಿನಲ್ಲಿ ಸಾಕಷ್ಟು ವಿಷಯಗಳಲ್ಲಿ ಸಾಧನೆ ಮಾಡಬಹುದು.ಪ್ರತಿ ಹೆಣ್ಣು ಮಗಳು ಕೂಡ ತಾನು ಕೇವಲ ಮಗಳು ಪತ್ನಿ ತಾಯಿ ಮಾತ್ರವಲ್ಲ ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿರುವ ಓರ್ವ ಹೆಣ್ಣುಮಗಳು ಸಮಾಜ ರಚನೆಯ ಭಾಗ ತಾನು ಎಂದು ಅರಿತುಕೊಳ್ಳಬೇಕು.ಪ್ರಸ್ತುತ ವ್ಯವಸ್ಥೆಯು ಹೆಣ್ಣು ಮಕ್ಕಳಿಗೆ ಒಂದು ಹೊರೆ ಎಂಬಂತಾದರೆ ಅದರಿಂದ ಹೊರಬರಲು ಉದ್ಯೋಗವನ್ನು ಜೀವನ ಯೋಜನೆಯ ಭಾಗವಾಗಿಸಿಕೊಂಡು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಮತ್ತು ಮನೋರಂಜನೆಯ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಸ್ವಾತಂತ್ರ್ಯ, ಸಾಮರ್ಥ್ಯ ಮತ್ತು ಆತ್ಮಸ್ಥೈರ್ಯವನ್ನು ಪಡೆದುಕೊಳ್ಳಬಹುದು.ಕೆಲವು ಹೆಣ್ಣು ಮಕ್ಕಳು ಉದ್ಯೋಗಗಳನ್ನು ಪಡೆದುಕೊಂಡರೂ ಅದಕ್ಕೆ ತಕ್ಕ ಹೊಸ ಜೀವನಯೋಜನೆಯನ್ನು ರೂಪಿಸುವುದಿಲ್ಲ. ಉದ್ಯೋಗಗಳು ತಮ್ಮ ಭವಿಷ್ಯದ ಬಾಗಿಲನ್ನು ತೆರೆದು ತನ್ನ ಉದ್ಯೋಗದ ಗಳಿಗೆ ಕುಟುಂಬದ ವೆಚ್ಚಕ್ಕೆ ನೆರವಾದಾಗ ಮಾತ್ರ ತಾನು ದುಡಿದದ್ದು ಸಾರ್ಥಕ ಎಂಬುದು ಹೆಣ್ಣು ಮಕ್ಕಳ ಮನಸ್ಥಿತಿ. ಯಾವುದೇ ವೃತ್ತಿ ಬಯಸುವ ಬದ್ಧತೆಗೆ ಬೇಕಾದ ಶಿಸ್ತು ಮತ್ತು ಪ್ರಯತ್ನಗಳನ್ನು ನೀಡಬಯಸುವ ಹೆಣ್ಣು ಮಕ್ಕಳು ಹೆಣ್ಣುತನ ಎಂಬ ಕಣ್ಕಟ್ಟನ್ನು ದೂರವಿರಿಸಬೇಕು.. ಆ ಹೆಣ್ಣುತನ ಎಂಬ ಕಣ್ಕಟ್ಟು ಆಕೆಯಲ್ಲಿ ಭಯವನ್ನು ಬಿತ್ತಬಹುದು ಪೂರ್ವಾಗ್ರಹಗಳನ್ನು ಹೇರಬಹುದು ಆಕೆಯಲ್ಲಿ ಹಿಂಜರಿಕೆಯನ್ನು ಉಂಟುಮಾಡಬಹುದು ಧಾರ್ಮಿಕ ಸಾಂಪ್ರದಾಯಿಕತೆಯ ಮುಖವಾಡ ಧರಿಸಿ ಪ್ರತಿರೋಧಗಳನ್ನು ಒಡ್ಡಬಹುದು.ಸಂಪ್ರದಾಯಬದ್ಧರಲ್ಲದ ಹೆಣ್ಣು ಮಕ್ಕಳಿಗೂ ಕೂಡ ಮನೆ ಬಿಟ್ಟು ದುಡಿಯಲು ಹೋಗುವುದೆಂದರೆ, ಗಂಡ ಮಕ್ಕಳನ್ನು ಕಡೆಗಣಿಸಿದಂತೆ ಎಂಬ ಭಾವ ಇರುತ್ತದೆ. ಒಂದು ವೇಳೆ ಮಗುವಿಗೆ ಅನಾರೋಗ್ಯವಾದರೆ, ಗಂಡನಿಗೆ ಆತನದ್ದೆ ಆದ ಸಮಸ್ಯೆಗಳು ಎದುರಾದರೆ ಸಮುದಾಯದಲ್ಲಿ ಆಕೆ ಗಂಡನನ್ನು ಕಡೆಗಣಿಸಿದ್ದೇ ಇದಕ್ಕೆ ಕಾರಣ ಎಂಬ ಭಾವ ಮೂಡುವಂತೆ  ಮಾಡುವ ಈ ಕಣ್ಕಟ್ಟು ಆಕೆಯ ಬೆಳವಣಿಗೆಗೆ ಅಡ್ಡಿ ಆತಂಕವನ್ನು ಉಂಟುಮಾಡುತ್ತದೆ ಎಂಬ ಅರಿವನ್ನು ಹೊಂದಿದ್ದರು.ನಿಜ ಹೆಣ್ಣು ಮಕ್ಕಳು ಹೋರಾಡಲು ಕಲಿಯಬೇಕು ಹೆಂಗಸಿನಂತೆ ಅಲ್ಲ ಬದಲಾಗಿ ಓರ್ವ ಮನುಷ್ಯಳಂತೆ. ಹೆಂಗಸರು ಅಂತಿಮವಾಗಿ ತಾವೇ ತಾವಾಗಿದ್ದಾಗ ಏನಾಗಿರುತ್ತಾರೆ ಎಂಬುದನ್ನು ಯಾರು ಬಲ್ಲರು? ಪ್ರೀತಿಯ ಒತ್ತಾಸೆಯನ್ನು ಕಳೆದುಕೊಳ್ಳದೆ ಅವರ ಬುದ್ಧಿವಂತಿಕೆಯು ಪೋಷಣೆ ಪಡೆದಾಗ ಅದು ಏನೆಲ್ಲಾ ಸಾಧನೆಗಳನ್ನು ಮಾಡುತ್ತದೆ ಎಂಬುದನ್ನು ಅರಿತವರಾರು? ಹೆಣ್ಣು ಮಕ್ಕಳ ಬದುಕು ಬದಲಾಗುತ್ತಿದೆ ಆಕೆ ತನ್ನನ್ನು ತಾನು ಅರಿತಂತೆ ಆಕೆಯಲ್ಲಿನ ಸಾಮರ್ಥ್ಯ ಒತ್ತಾಸೆ ಪ್ರೀತಿಗಳು ವೃದ್ಧಿಗೊಳ್ಳುತ್ತಿವೆ. ಆಕೆ ತನ್ನನ್ನು ಪ್ರೀತಿಸಿದಷ್ಟೇ ಇತರರನ್ನು ಪ್ರೀತಿಸಲು ಸಾಧ್ಯವಾಗುತ್ತಿದೆ. ತನ್ನ ಕೆಲಸವನ್ನು ಹೆಂಗಸಾಗಿ ಆಕೆ ಅನುಭವಿಸುತ್ತಿದ್ದಂತೆಯೇ ಅದರ ಅನುಭವದ ಆಧಾರದ ಮೇಲೆ ಇತರರಿಗೆ ಮಾದರಿಯಾಗುತ್ತಿದ್ದಾಳೆ.ಏನಂತೀರಾ ಸ್ನೇಹಿತರೇ ವೀಣಾ ಹೇಮಂತ್ ಗೌಡ ಪಾಟೀಲ್

“ಹೆಣ್ತನ ಎಂಬ ಚೌಕಟ್ಟು ಹಾಗೂ ಮಿತಿಯಾಚೆಗಿನ ಬದುಕು”ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ

“ಬಿಟ್ಟುಬಿಡಿ ಬದುಕಿಕೊಳ್ಳುತ್ತೇವೆ”ಮಹಿಳೆಯರ ಬಗ್ಗೆ ವಿಶೇಷ ಬರಹ, ಪ್ರೇಮಾ ಟಿ‌ ಎಂ ಆರ್

ಮಹಿಳಾ ಸಂಗಾತಿ ಪ್ರೇಮಾ ಟಿ ಎಂ ಆರ್ ಬಿಟ್ಟುಬಿಡಿ ಬದುಕಿಕೊಳ್ಳುತ್ತೇವೆ ಮಹಿಳಾ ದಿನಾಚರಣೆ ಹತ್ತಿರ ಬಂದಂತೆ ಎದೆ ಮಿಸುಗುತ್ತದೆ.. ಒಂದಷ್ಟು ಭಾಷಣ ಗಾಯನ ನರ್ತನ ಪಾರ್ಟಿಗಳಲ್ಲಿಯೇ  ಮುಗಿದು ಹೋಗುವ ದಿನವೇಕೋ ನೆಮ್ಮದಿ ಕೆಡಿಸುತ್ತದೆ. ಹೆಣ್ಣು ಸುಖವಾಗಿ ಬದುಕುತ್ತಿದ್ದಾಳೆ, ಯಂತ್ರಗಳ ಬಳಕೆಯಿಂದ ಅವಳ ಶ್ರಮ ಕಡಿಮೆಯಾಗಿದೆ, ಹಾಗೆ ಹೀಗೆ ಅಂತ ಉರುಹೊಡೆದ ಭಾಷಣ ಬಿಗಿವ ನಾವುಗಳು ನೋಡುವದು ನಮ್ಮ ಕಣ್ಣಳತೆಯಲ್ಲಿ ನಡೆವುದನ್ನಷ್ಟೇ .ನಿಜ ಅರ್ಬನ್  ಏರಿಯಾಗಳಲ್ಲಿ ಹೆಣ್ಣು ಆಜಾಶಕ್ಕೆ ಕೈಚಾಚಿ ಪೈಲಟ್ ಆಗಿ ಬಾಹ್ಯಾಕಾಶದಲ್ಲಿಯೂ ತನ್ನ ಕೌಶಲ್ಯ ಮೆರೆಯುವ ಮಟ್ಟಿಗೆ ಬೆಳೆದದ್ದು ಒಪ್ಪಿಕೊಳ್ಳಬೇಕಾದ ವಿಷಯವಾದರೂ, ಎಷ್ಟು ಪ್ರತಿಶತ ಎನ್ನುವದಿಲ್ಲಿ ಪ್ರಶ್ನೆ .ಇರಲಿಬಿಡಿ, ತೀರ ಹಿಂದುಳಿದ ಹಳ್ಳಿಗಳಲ್ಲಿ ಇಂದಿಗೂ ನೀ ಹೆಣ್ಣು ,ಇರುವಾಂಗೇ ಇರು, ಹೆಂಗಿರ್ಬೇಕೋ ಹಾಂಗೇ ಇರು ಎನ್ನುವ ಚೂಪು ಮೊನೆಯ ಮಾತುಗಳು ಅವಳೆದೆಯ ಚುಚ್ಚುವದು ಮಾಮೂಲು .ಹತ್ತು ದಾಟುವದೇ ತಡ ಎದೆಯ ಒಳ ಉಡುಪು ಬಿಗಿಗೊಳ್ಳತೊಡಗುತ್ತವೆ .ಬೆನ್ನು ಬಾಗಿಸಿ ಎದೆ ಹುದುಗಿಸಿ ನಡೆವಂತೆ ಮತ್ತೆ ಮತ್ತೆ ಕತ್ತಿ ಅಲುಗಿನ ಮಾತುಗಳನ್ನು ಎಳೆಕಂದಮ್ಮಗಳು ಸಹಿಸಬೇಕು .ಹೆಣ್ಣು ಬೆಳೆದಂತೆ ಅವಳು ಮನೆಯ ಮರ್ಯಾದೆಯಾಗಿ ಬದಲಾಗುವದು ವಿಪರ್ಯಾಸ . ಹೆಣ್ಣು ಕಂದಮ್ಮಗಳು ಲೈಂಗಿಕ ದೌರ್ಜನ್ಯಕ್ಕೆ, ಅತ್ಯಾಚಾರಕ್ಕೆ ಒಳಗಾದರೂ ಕೂಡ ಅದು ಸುದ್ದಿಯಾಗದಂತೆ ಹೆತ್ತವರೇ ಮುಖ ಮೈಮನಸ್ಸುಗಳ ಮೊಟಕಿ ಬಾಯಿ ಮುಚ್ಚಿಸುವ ಕೆಲಸವನ್ನು ಮಾಡುತ್ತಾರೆ. “ಮನೆ ಮರ್ಯಾದೆ ಕಳೆದೆಯಲ್ಲೇ ಯಾಕೆ ಹುಟ್ಟಿದೆ ನಮ್ಮ ಹೊಟ್ಟೆಯಲ್ಲಿ ” ಎಂದು ಯಾರದೋ ತಪ್ಪಿಗೆ ಅವಳ ಹುಟ್ಟನ್ನು ಹಳಿಯಲಾಗುತ್ತದೆ. ಒಳಗೊಳಗೇ ಹುದುಗಿ ಹೋಗುವ ಅಂಥ ಹೆಣ್ಣುಗಳ ಅಂತರಾತ್ಮದ ಗಾಯದ  ನೋವು  ಆಗದ ವೈರಿಗೂ ಬೇಡ. ಹತ್ತು ಕಳೆಯಿತೋ ಬಾಲ್ಯದ ಚೇಷ್ಟೆಗಳೆಲ್ಲ ಕಳೆದು ಹೆಣ್ಣು ಕಂದಮ್ಮಗಳು ಕಿರಿಕಿರಿ ಸಂಕೋಚ ವಿಸ್ಮಯ  ಆತಂಕದ ಜೊತೆಗೆ  ಒಳಹೊರಗೂ ವಿಲಕ್ಷಣ ಅನುಭವಗಳೊಂದಿಗೆ ತಮಗೆ ತಾವೇ ಅಪರಿಚಿತ ಲೋಕಕ್ಕೆ ಜಿಗಿದು ನಿಂತಂತೇ ಗಲಿಬಿಲಿಗೊಳ್ಳುವ ಹೊತ್ತು. ಎದೆ ಚಿಗುರತೊಡಗುತ್ತದೆ. ಮೊದಲಮುಟ್ಟು ಕಾಡಿದಷ್ಟು ಬೇರಾವುದೂ ಅವಳನ್ನು ಕಾಡಲಿಕ್ಕಿಲ್ಲ . ಇಂಥ ಹೊತ್ತಲ್ಲಿ ಹೆತ್ತವರ ಹಿತವಾದ ಆರೈಕೆ ಒಂದಷ್ಟು ಸಾಂತ್ವನ ತಿಳುವಳಿಕೆ ವಿಶ್ವಾಸವನ್ನು ತುಂಬುವದು ಅತ್ಯವಶ್ಯ . ಇಲ್ಲದಿದ್ದರೆ ತನ್ನದೇ ಮನೆಯಲ್ಲಿ ಅವಳು ಪರಿತ್ಯಕ್ತೆಯಾಗಿ ನಿಲ್ಲುತ್ತಾಳೆ.     ಜಗತ್ತಿನ ಬಹುತೇಕ ರಾಷ್ಟ್ರಗಳ ಹಳ್ಳಿಗಾಡುಗಳಲ್ಲಿ ಬದುಕುವ ಜನಾಂಗಗಳಲ್ಲಿ, ಕಾಮುಕರೆಂಬ ಕೆಟ್ಟ ಕ್ರಿಮಿಗಳು ಹುಟ್ಟಿಕೊಳ್ಳುವದಕ್ಕೆ, ಹೆಣ್ಣಿನ ಋತುಮತಿಯಾಗುವ ಕ್ರಿಯೆ ಹಾಗೂ ಬೆಳೆಯುವ ಎದೆಯೇ ಕಾರಣವೆಂದು ನಂಬಲಾಗುತ್ತದೆ . ದಕ್ಷಿಣ ಆಫ್ರಿಕಾದ ಕೆಮರೂನ್ ನಲ್ಲಿ, ಕಿಶೋರಿಯರ ಮುಟ್ಟು ಮುಚ್ಚಿಡುವದಕ್ಕಾಗಿಯೇ ಹೆಣ್ಣುಗಳು ಮೈನೆರೆವ ಮೊದಲು, ಅಥವಾ ಮೈನೆರೆದ ತಕ್ಷಣ ಬ್ರೀಸ್ಟ್ ಫ್ಲಾಟನಿಂಗ್ ಅಥವಾ ಬ್ರೀಸ್ಟ್ ಐರನಿಂಗ್ ಎನ್ನುವ ಅಸಾಧ್ಯ ನೋವು ಕೊಡುವ ಅಮಾನುಷ ಪದ್ಧತಿಯಿಂದ, ಅವರ ಚಿಗುರುವ ಎದೆಯನ್ನ ವಿರೂಪಗೊಳಿಸುವ ಪದ್ಧತಿಯೊಂದು ಇಂದಿಗೂ ಜಾರಿಯಲ್ಲಿದೆ ಅಂದರೆ ನೀವು ನಂಬಲೇಬೇಕು. ಯುನೈಟೆಡ್ ನೇಶನ್ಸ್ ಯಾವುದನ್ನು ಫೈವ್ ಫೊರಗೊಟನ್ ಕ್ರೈಮ್ಸ ಎಂದು ಕರೆಯುತ್ತದೆಯೋ ಅದರಲ್ಲಿಯೇ ಒಂದಾದ ಈ ಬ್ರೀಸ್ಟ ಐರನಿಂಗ್ ಗೆ ಪ್ರತಿ ನಾಲ್ಕರಲ್ಲಿ ಒಬ್ಬರಂತೆ ಅಲ್ಲಿ ಶಿಖಾರಿಗಳಾಗುತ್ತಿದ್ದಾರೆ. ಈ ಪದ್ಧತಿ ನಶಿಸುವದರ ಬದಲು ವೃದ್ಧಿಯಾಗುತ್ತಲೇ ಇದೆ. ಪುಟ್ಟಹೆಣ್ಣುಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದಮೇಲೆ ಈ ಕ್ರಿಯೆ ಅತ್ಯಂತ ಗಂಬೀರ ಪರಿಣಾಮವನ್ನು ಉಂಟುಮಾಡುತ್ತದೆ. ಒಬಿಯಾಮಾ ಮರ್ಸಿ ಎಂಬ ನೈಜೀರಿಯಾದ ಯುವ ವೈದೈ ಹೇಳುತ್ತಾಳೆ, “ಕೆಮರೂನ್ ನಲ್ಲಿ ಅದೆಷ್ಟೋ ಹುಡುಗಿಯರು ಈ ಎದೆ ಸಪಾಟು ಮಾಡುವ ಕ್ರಿಯೆಯ ಅಡ್ಡ ಪರಿಣಾಮಗಳಿಂದ ಬಳಲುತ್ತಿರುತ್ತಾರೆ . ಬರೀ ತಾತ್ಕಾಲಿಕವಾಗಲ್ಲ, ಕೆಲವೊಂದು ಪ್ರಕರಣಗಳಲ್ಲಿ  ಇದು ಶಾಶ್ವತವಾದ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ಎಷ್ಟೋ ಹುಡುಗಿಯರ ಸ್ಥನಗಳು ಸಂಪೂರ್ಣ ನಾಶವಾಗಿ ಮುಂದೆ ಅವರು ಹುಟ್ಟುವ ಮಕ್ಕಳಿಗೆ ಎದೆಯೂಡಲಾಗದೇ ಹಳಹಳಿಸುತ್ತಾರೆ .ಎದೆಯ ಜೀವಕೋಶಗಳು ಸುಟ್ಟು ವಿಕಲತೆಯನ್ನುಂಟುಮಾಡುತ್ತದೆ. ಕೆಲವರು ಖಿನ್ನತೆಗೆ ಒಳಗಾದರೆ ಇನ್ನು ಕೆಲವರು ಶಾಶ್ವತವಾಗಿ ಮಾನಸಿಕ ರೋಗಿಗಳಾಗಿಯೇ ಇದ್ದುಹೋಗುತ್ತಾರೆ .ಇನ್ನು ಕೆಲವು ಸಂದರ್ಭಗಲ್ಲಿ ಎದೆ ಬಾತು ಕೊಳೆತುಹೋದ ಉದಾಹರಣೆಗಳಿಗೂ ಕೊರತೆಯಿಲ್ಲ.  ಎದೆ ಸಪಾಟುಮಾಡುವಾಗ ಪೈಪಿನಂಥ ಉದ್ದದ ಕಲ್ಲುಗಳನ್ನು ಕಾಯಿಸಿ ಹೆಣ್ಣುಗಳ ಸ್ಥನಗಳನ್ನು ಜಜ್ಜಲಾಗುತ್ತದೆ ಅಥವಾ ಮೆರೆಯಲಾಗುತ್ತದೆ. ಕೆಲವೊಮ್ಮೆ ಕಟ್ಟಿಗೆ ಅಥವಾ ಕಬ್ಬಿಣದ ತುಂಡುಗಳನ್ನು ಬೆಂಕಿಗಿಟ್ಟು ಅದರಿಂದ ಸುಡಲಾಗುತ್ತದೆ. ಕೆಲವೊಮ್ಮೆ ಬಿಸಿ ಕೆಂಡಗಳು ಸುಟ್ಟತೆಂಗಿನ ಚಿಪ್ಪು ಸುಟ್ಟ ಸಾಣೆಕಲ್ಲುಗಳನ್ನು ಬಳಸಲಾಗುತ್ತದೆ.” ಎಂದು   “ಅದರಿಂದ ಅನುಭವಿಸುವ ನೋವು ಅಸಾಧ್ಯ. ಮಾತಿಗೆ  ನಿಲುಕುವದಿಲ್ಲ ಆ ನೋವು. ಅದರ ಜೊತೆಗೆ ನಮ್ಮನ್ನು ನಾವು ನೋಡಿಕೊಂಡರೆ ನಮಗೇ ಹೇಸಿಗೆ ಹುಟ್ಟುವಂತಿರುತ್ತವೆ ನಮ್ಮೆದೆಗಳು” ಎಂದು ಕೆಮರೂನಿನ ಎದೆ ಸಪಾಟು ಮಾಡಿಸಿಕೊಂಡ ಎಳೆಯ ಹೆಣ್ಣುಮಕ್ಕಳು ಅತೀವ ಸಂಕಟದಿಂದ ನುಡಿಯುತ್ತಾರೆ .ಒಂದು ದು:ಖ್ಖದಾಯಕ ವಿಷಯವೆಂದರೆ ಸ್ವತಹ ಹೆತ್ತ ತಾಯಂದಿರೇ ತಮ್ಮ ಮಕ್ಕಳ ಎದೆ ಸಪಾಟು ಮಾಡುವ ಕ್ರಿಯೆಗೆ ಸಂಪೂರ್ಣ ಸಹಮತ ತೋರಿ, ಅವರೇ ಮುಂದೆನಿಂತು ಮಕ್ಕಳ ಎದೆಯನ್ನು ಸುಡಿಸಿ ಮೆರೆಯಿಸಿ ಜಜ್ಜಿಸಿ ಆವರೆದೆಗಳನ್ನು ನಾಶಪಡಿಸುತ್ತಾರೆ. ನ್ಯೂಲೆ ಬ್ಲೆಸ್ಸಿಂಗ್ ಎಂಬ ಕೆಮರೂನಿನ ತಾಯಿಯೊಬ್ಬಳು ಹೇಳುವದೇನು ಗೊತ್ತಾ? “ಹೌದು, ನಾನು ನನ್ನ ಮಗಳಿಗೆ ಅದನ್ನು ಮಾಡಿದೆ .ನನಗೆ ನನ್ನದೇ ಕಾರಣಗಳಿದ್ದವು. ನನ್ನ ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಹಸಿಮಾಂಸದ ಥರ ನೋಡುತ್ತಾರೆ .ಅವಳೆದೆ ಒಂಚೂರು ಆಕಾರಗೊಳ್ಳುವದೇ ತಡ ಗಂಡಸರು ,ಪುಂಡ ಹುಡುಗರು ಹಸಿದ ತೋಳಗಳಂತೆ ಅವರ ಸುತ್ತ ಸುತ್ತುತ್ತಾರೆ. ಅವರನ್ನು ಹೊರಗೆ ಕಳಿಸುವದಕ್ಕೇ ಭಯವಾಗುತ್ತದೆ. ನನ್ನ ಮಗಳಿಗೆ ತಾನು ಓದಬೇಕು ವಿದ್ಯಾವಂತಳಾಗಬೇಕೆಂಬ ಆಸೆ. ಈಗವಳು ಭಯವಿಲ್ಲದೇ  ಅವಳ ಗುರಿ ಮುಟ್ಟಬಹುದು” ಎನ್ನುತ್ತ ತನ್ನ ಮಗಳ ಸಪಾಟಾದ ಎದೆಯನ್ನು ತೋರುತ್ತಾಳೆ. ಮತ್ತವಳು ಕಣ್ಣಲ್ಲಿ ನೀರು ತುಂಬಿಕೊಂಡು ನುಡಿಯುತ್ತಾಳೆ, “ಆದರೆ ಅದಕ್ಕಾಗಿ ನಾನು ನನ್ನ ಮಗಳ ದೈಹಿಕ ಆರೋಗ್ಯ ಹಾಗೂ ಸೌಂದರ್ಯವನ್ನು ಹಾಳುಗೆಡಹುವ ಒಪ್ಪಂದವನ್ನು ಮಾಡಿಕೊಂಡೆ. ಈಗ ನೋಡಿ ಅವಳು ಅಂದಗೆಟ್ಟಿದ್ದಾಳೆ .ಅದರರ್ಥ ಅವಳೀಗ ಸುರಕ್ಷಿತ .ಹೆಣ್ಣುಮಕ್ಕಳು ಅಸಾಧ್ಯ ನೋವಿಗೆ ವಿಲಗುಡುತ್ತ ತಮ್ಮೆದೆಯ ಅಸಹ್ಯ ಬದಲಾವಣೆಗೆ ಬೇಯುತ್ತ ತಮ್ಮ ತಾಯಂದಿರನ್ನು ಪ್ರಶ್ನಿಸಿದರೆ ಬರುವ ಉತ್ತರವೇನು ಗೊತ್ತಾ?”ನೀವು ಲೈಂಗಿಕ ದೌರ್ಜನ್ಯಕ್ಕೆ ಅತ್ಯಾಚಾರಕ್ಕೆ ಒಳಗಾಗದಿರಲೆಂದು ನಾವು ಇದನ್ನು ಮಾಡಬೇಕಾಗಿದೆ .ಹಾಗೇನಾದರೂ ನೀನು ಬಸುರಿಯಾದರೆ ಇಡೀ ಕುಟುಂಬದ ಘನತೆ ಕೀರ್ತಿ ಮಣ್ಣುಪಾಲಾಗಿ ಹೋಗುತ್ತದೆ”.  ಓ ದೇವ್ರೇ ಇದಕ್ಕಿಂತಲೂ ಎಚ್ಚಿನ ನರಕದರ್ಶನ ಬೇರೊಂದಿರಬಹುದೇ…    ಒಂದು ನೆನಪಿರಲಿ, ಈ ಎದೆ ಸಪಾಟು ಮಾಡುವ ಪದ್ಧತಿಯಲ್ಲಿ ಬಳಕೆಯಾಗುವದು ನುರಿತ ಸರ್ಜನ್ ಗಳ ವೈದ್ಯಕೀಯ ಕಿಟ್ ಗಳಲ್ಲ, ನೋವು ನಿವಾರಕ ಇಂಜಕ್ಷನ್ ಗಳಿಲ್ಲ , ಎಲ್ಲವೂ ಹಸಿಹಸಿ ಜೀವ ಸುಡುವ ಗಾಂವ್ಟಿ ಪದ್ಧತಿಗಳು. ಸಹಿಸುವ ಪುಟ್ಟ ಹೆಣ್ಣುಗಳ ಮನಸ್ಥಿತಿ ದೇಹಸ್ಥಿತಿಗಳನ್ನು ಊಹಿಸಬಲ್ಲಿರಾ?     ಭೂಮಿಯಮೇಲೆ ಹೆಣ್ಣುಗಳು ಕುಟುಂಬದ ಗೌರವ ಘನತೆ ಮರ್ಯಾದೆಗಳನ್ನು ಗುತ್ತಿಗೆ ಪಡೆದೇ ಹುಟ್ಟುತ್ತಾರೆ. ಅದನ್ನು ಹೊತ್ತುಕೊಂಡೇ ಬದುಕುತ್ತಾರೆ. ನಮ್ಮಲ್ಲೇನು ಕಡಿಮೆಯಿಲ್ಲ….‌ ಆಯುಧಗಳನ್ನು ಬಳಸೋದಿಲ್ಲ ಅಷ್ಟೇ… ಅದೆಂತ ಹಾಗೆ ಎದೆ ಮೀರಿಸ್ಕೊಂಡು ನಡ್ದಾಡ್ತೆ, ಅದೆಂತಕೆ ಹಾಂಗೆ ಗಲಗಲ ಅಲುಗಸ್ತಾ ತಿರ್ಗಾಡ್ತೆ ಎಡ್ನಾಡಿ, ಅದ್ನ ಸರಿ ಬಿಗ್ದು ಕಟ್ಕೊಂಬುಕೆ ಏನ್ ಧಾಡಿ,  ಆಯುಧಗಳಿಗಿಂತ ಹರಿತ ಮಾತುಗಳು ಚಿಗುರುವ ಎದೆಯನ್ನು ಜಜ್ಜಿ ಬಿಡುತ್ತವೆ. “ದೇವ್ರೆ ನನ್ನನ್ನು ಈ ನೆಲ ನುಂಗಬಾರದೇ..?” ಎಂದು ಅಮಾಯಕ ಜೀವಗಳು ನರಳುತ್ತವೆ.. ಹೊರುವ ಹೆರುವ ಮೈಯೊಳಗೆರಡು ಊಡುವ ಅಪ್ಪಿ ಎದೆಗೊತ್ತಿಕೊಳ್ಳುವ ವಾತ್ಸಲ್ಯದ ವೇದಗಳು.. ಆದರೆ ಅದನ್ನೋದುವ  ನೋಟ ಕೊಳಕು ಕೆಡುಕು ಕೊಂಕು ಕೆಣಕು ಕೀಸು ಅಣುಕು ಹುಳುಕು. ಅಯ್ಯೋ ಎಲ್ಲವೂ ಸೂಜಿ ಚುಚ್ಚಿದ ನೋವುಗಳು. ಎದೆ ಭಾವದಲ್ಲಿ ಸಾವಿರ ಸುಟ್ಟ ಬೊಬ್ಬೆಗಳು.. ಬೆಂದ ಹುಣ್ಣುಗಳು.. ಒಂದು ಹನಿ ಕಣ್ಣೀರು ಸಾಕೇ? ಒಂದು ದಿನದ ಆಚರಣೆ ತಂಪು ತಂದೀತೇ..? ಹಾಂ, ಲೋಕದ ಕಣ್ಣಿಗೆ ಹೆಣ್ಣು ಮಾಧುರ್ಯವೇ  ಇರಬಹುದು, ನಿಜದ ಕಣ್ಣಿಗೆ ಅವಳು ನೋವು ತುಂಬಿಕೊಳ್ಳಲೆಂದೇ ಹುಟ್ಟುವ ಪಾತ್ರೆಗಳು  ಅಥವಾ ಪಾತ್ರಗಳೇ… ? ಬಿಟ್ಟುಬಿಡು ದೇವರೇ….. ಮತ್ತೆ ಹುಟ್ಟಿಸಬೇಡ ಎನಬೇಡಿ. ನಮ್ಮ ಮೊರೆ ಮುಟ್ಟುವದಿಲ್ಲ ಅಲ್ಲಿಗೆ… ಮುಟ್ಟಿದರೆ ಈ ನೆಲ  ಸುಟ್ಟು ಬೂದಿಯಾಗಿಬಿಡಬಹುದು..‌ ಪಟವಾಗಿ ಪೂಜೆಗೊಳ್ಳುವ ಹೆಣ್ಣು ನಿತ್ಯ ಉಸಿರಿಗೆ ಮಿಸುಗುತ್ತಲೇ ಇದ್ದಾಳೆ. ಊದಿನಕಡ್ಡಿ ಕರ್ಪೂರದ ಆರತಿ ಬೇಡ. ನಮಗೂ ನೋವಾಗುತ್ತದೆ.. ಬದುಕಲು ಬಿಟ್ಟುಬಿಡಿ, ಅಷ್ಟು ಸಾಕು ಎಂಬ ಆಶಯಗಳೊಂದಿಗೆ……… ನಿಮ್ಮ ಪ್ರೇಮಾ ಟಿ ಎಂ ಆರ್                         ಪ್ರೇಮಾ ಟಿ ಎಮ್ ಆರ್

“ಬಿಟ್ಟುಬಿಡಿ ಬದುಕಿಕೊಳ್ಳುತ್ತೇವೆ”ಮಹಿಳೆಯರ ಬಗ್ಗೆ ವಿಶೇಷ ಬರಹ, ಪ್ರೇಮಾ ಟಿ‌ ಎಂ ಆರ್ Read Post »

You cannot copy content of this page

Scroll to Top