ಮಹಿಳಾ ದಿನದ ವಿಶೇಷ
ವನಜ ಮಹಾಲಿಂಗಯ್ಯ
ಹೆಣ್ಣೆಂದರೆ


ಹೆಣ್ಣೆಂದರೆ ಏನೆಂದು ತಿಳಿಯಬೇಕಾ?
ಅವಳೇ ಮಮತೆಯ ಮಡಿಲು,
ತಾಯಿಯೇ ಪ್ರೀತಿಯ ಗಣಿ,
ಆಕೆಯೇ ತಾಳ್ಮೆಯ ಮೂರುತಿ.
ಹೃದಯಾಂತರಾಳದ್ದು ಅವಳ ಪ್ರೀತಿ,
ಅವಳ ತಾಳ್ಮೆ ಬೇರಾರಿಗೂ ಬಾರದು,
ಅವಳೇ ತನ್ನ ಗಂಡನಿಗೆ ಸರ್ವಸ್ವ,
ತನ್ನ ಮುದ್ದು ಮಕ್ಕಳಿಗೆ ಮಹಾತಾಯಿ.
ತಾಯಿಯೇ ಮಕ್ಕಳಿಗೆ ಮೊದಲ ಗುರು,
ಅಕೆಯಿಂದ ಪಾಠ ಕಲಿತ ಮಕ್ಕಳೇ ಧನ್ಯರು,
ಅಕೆ ಕಲಿಸುವ ಪಾಠ ಬದುಕಿಗೆ ದಾರಿದೀಪ,
ಆ ಮಕ್ಕಳು ಸದಾ ತಾಯಿಯನ್ನು ಸ್ಮರಿಸಬೇಕು.
ಆಕೆಯಿಂದ ಪಾಠಕಲಿತವರು ಜಗವ ನೋಡಬೇಕು,
ಆಕೆಯ ಪ್ರೀತಿ ಮಕ್ಕಳ ಯಶಸ್ಸಿಗೆ ಕಾರಣವಾಗಬೇಕು,
ಅವಳ ಸ್ಪರ್ಶ ಮಕ್ಕಳಿಗೆ ಶಕ್ತಿ ತುಂಬಬೇಕು,
ಅವಳ ಸಹನೆ ಮಕ್ಕಳ ಹೃದಯದಲ್ಲಿ ನೆಲೆಸಬೇಕು.
ತಾಯಿ ಆಶೀರ್ವಾದ ಮಕ್ಕಳ ಅಭಿವೃದ್ಧಿಯಾಗಬೇಕು,
ಅವಳ ವಾತ್ಸಲ್ಯದಿಂದ ಮಕ್ಕಳು ಗುರಿ ಮುಟ್ಟಬೇಕು,
ಅವಳ ತಾಳ್ಮೆ ಅಪ್ರತಿಮವಾದುದಾಗಿರಬೇಕು,
ತಾಯಿ ಮಮತೆ ದೀರ್ಘ ತಮ್ಮ ಬದುಕಾಗಬೇಕು.

ವನಜ ಮಹಾಲಿಂಗಯ್ಯ




ಚೆಂದದ ಬರಹ.