ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಈ ನೆಲದ ಭಾಷೆಯಿದು
ಬುದ್ಧ ಬಸವರ ವಚನಗಳು
ಸತ್ಯ ಸಮತೆ ಶಾಂತಿ ಪ್ರೀತಿ
ಮನುಜ ಪಥದ ಮಂತ್ರವು

ನಾನು ಹುಟ್ಟಿ ನಾವು ಬೆಳೆದು
ನಾಡ ಗೋಡೆ ಕಟ್ಟ ಬೇಕು
ವರ್ಗ ವರ್ಣ ಬೇಧ ಅಳೆದು
ದೇಶ ಒಂದೇ ಎನ್ನ ಬೇಕು

ನೇಯ್ಗೆ ಕೃಷಿ ಗ್ರಾಮ ರಾಜ್ಯ
ಬಾಪು ಕನಸಿನ ಭಾರತ
ಭಗತ ಸಿಂಗರ ತ್ಯಾಗ ನೆಲದ
ಬಾಬಾಸಾಹೇಬರ ಭಾರತ

ದ್ವೇಷ ಮತ್ಸರ ಕರಗಿ ಹೋಗಲಿ
ಮಮತೆ ಪ್ರೀತಿ ಅರಳಲಿ
ಕೊಲೆ ಹಿಂಸೆ ಮಾಯವಾಗಿ
ಸಮರಸವು ಮೂಡಲಿ


About The Author

2 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಸಮರಸವು ಮೂಡಲಿ””

  1. ಸಮರಸವ ಮೂಡಲಿ “ಎಂಬ ಕವನ
    ದೇಶದ ಐಕ್ಯತೆ ಕುರಿತು ಬುದ್ಧ ಬಸವನ ವಚನಗಳು, ವರ್ಣಬೇಧ ಮರೆತು , ಬಾಪು ಕನಸಿನ ಭಾರತ , ಮಮತೆ ಪ್ರೀತಿ ಅರಳಲಿ ಎಂಬ ಸಾಲುಗಳು ಅದ್ಭುತವಾಗಿ ಮೂಡಿಬಂದಿದೆ.

Leave a Reply

You cannot copy content of this page

Scroll to Top