ಕಾವ್ಯ ಸಂಗಾತಿ
ಕಲ್ಪನಾ ಎಸ್ ಪಾಟೀಲ
ಗಜಲ್


ಜಗಕೆಲ್ಲ ತಿಳಿಸಿ ಹೇಳಲೆಬೇಕಿಲ್ಲ ಸಖ
ಈ ಬದುಕು ನಮಗಾಗಿಯೇ ನಲ್ಲ
ಜಗದಗೊಡವೆ ಏತಕೆ ಹೇಳು ನಲ್ಲ
ಆಗದಿರಲಿ ನಿನ್ನಮನ ಗೊಂದಲದ ಗೂಡು
ಕೊರಳ ಬಳಸಿ ಕಿವಿಯಲುಸಿರಿಲು ನೀ
ನಾ ಎದೆಗೆ ಒರಗಿ ನಾಚಿದ ಆ ದಿನಗಳು
ಆಣೆಯನೊಂದು ನೀ ಮಾಡಿದೆ ನಲ್ಲ
ಹಕ್ಕಿಗೂಡು ಸಾಕ್ಷಿಯಾಗಿದೆ ಸಾಕಲ್ಲ
ಕಾವ್ಯಧರೆ ಪ್ರಮಾಣಗಳನೆಂದು ನಂಬಿಲ್ಲ
ನಿನ್ನನೇ ನಂಬಿಹಳು ನಿನಗೇಕೆ ತಿಳಿದಿಲ್ಲ
ಕಲ್ಪನಾ ಎಸ್ ಪಾಟೀಲ



