ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಗ್ಧ ಜೀವಿಗಳ ರಕ್ತಪಾತಕೆ  ಬೆಚ್ಚಿದ  *ರಾತ್ರಿಗಾಗಿ* ಹಣತೆ ಬೆಳಗುವೆ
ದ್ವೇಷ ಕಲಹ ಕ್ರಾಂತಿಗಳಿಂದ  ನರಳಿದ  *ಧಾತ್ರಿಗಾಗಿ* ಹಣತೆ  ಬೆಳಗುವೆ

ತಲ್ಲಣ ಗೊಂಡಿದೆ  ಮನುಕುಲ ಭೀಕರ ಯುದ್ಧಗಳ  ಸಿಡಿಲಿನಿಂದ
ಕವಿದ ಕರಾಳ  ಮುಖವಾಡಗಳ ಕಳಚುವ  *ಖಾತ್ರಿಗಾಗಿ* ಹಣತೆ  ಬೆಳಗುವೆ

ನಾನೆಂಬ ಅಹಂಕಾರದ ಕ್ರೂರ ವರ್ತುಲಗಳು   ಸುತ್ತಿವೆ  ಜಗದಗಲ
ಕ್ಷುದ್ರರಲಿ ಅವಿತ  ದುರುಳತನಗಳ ಮೆಟ್ಟುವ  *ಕ್ಷಾತ್ರಿಗಾಗಿ* ಹಣತೆ ಬೆಳಗುವೆ

ಭಯದ ನೆರಳುಗಳು ಆವರಿಸಿ  ಹೆದರಿಸುತಿವೆ  ಹೆಜ್ಜೆ  ಹೆಜ್ಜೆಗೆ ಅಲ್ಲವೇ
ಭ್ರಾತೃತ್ವದ ಸ್ನೇಹ ವಿಶ್ವಾಸಗಳು  ಮೆರೆಯುವ  *ಜಾತ್ರಿಗಾಗಿ* ಹಣತೆ  ಬೆಳಗುವೆ

ಒಳಗೊಳಗೆ ಉಸಿರುಗಳು ಮೌನವಾಗಿ  ಬಿಕ್ಕುತ್ತಿವೆ ಪ್ರತಿಷ್ಠೆಯ ಜಾಲಗಳಲಿ  ಸಿಲುಕಿ ಬೇಗಂ
ಶಾಂತಿ ಪ್ರೇಮಗಳನು ನೀಡುವ  ದೂತನಾಗಿ  ಬರುವ  *ಯಾತ್ರಿಗಾಗಿ* ಹಣತೆ  ಬೆಳಗುವೆ


About The Author

Leave a Reply

You cannot copy content of this page

Scroll to Top