ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂದು ನೀನು ನನಗೆ ಆಗಂತುಕ..
ಆದರಿಂದು ನೀನೇ ನನ್ನ ಸಖ..
ಮನ ಬಯಸಿತು ನಿನ್ನ ಸನಿಹ..
ಯಾರನ್ನೂ ನೋಡಿಲ್ಲ ನಿನ್ನ ವಿನಃ..

ಪ್ರೀತಿಯ ಜೇನು ಜಿನುಗುತಿದೆ ನನ್ನಲ್ಲಿ,.
ನಿನ್ನ ರೂಪವೇ ಅಚ್ಚತ್ತಿದೆ ಹೃದಯದಲ್ಲಿ..
ಸೋನೆ ಹನಿ ನಿನ್ನನ್ನು ನೆನಪಿಸಿದೆ..
ಮನದ ಅಂತಪುರ ನಿನಗಾಗಿ ಕಾದಿದೆ..

ಗರಿ ತೆರೆದ ನವಿಲಿನಂತೆ ನರ್ತಿಸುತ್ತಿರುವೆ..
ಒಂದಾಗಿ ಪ್ರೀತಿಯ ತಾಳವನ್ನು ಹಾಕಲು..
ನಾಲ್ಕು ಕೈಗಳು ಒಂದಾಗಿ ಶ್ರುತಿ ಮೀಟಿದರೆ..
ನಾದವಾಗಿ ಹೊಮ್ಮುತ್ತದೆ
ರಸಧಾರೆ ಹರಿಯುತ್ತಿರೆ..

ಒಲವಿನ ಬೆಳಕು ಅನುರಾಗವನ್ನು ಚೆಲ್ಲಿದೆ..
ಮನದಲಿ ಮೈನ ಹಾಡಿ ಬಾವವ ತುಂಬಿದೆ..
ಚೂಪಾದ ನಯನಗಳು ಸಲ್ಲಾಪಕ್ಕೆ ಕರೆದಿದೆ..
ಸದ್ದಿಲ್ಲದೆ ಬಂದು ನನ್ನನ್ನು ಆವರಿಸಿದೆ..


About The Author

Leave a Reply

You cannot copy content of this page

Scroll to Top