ಕಾವ್ಯ ಸಂಗಾತಿ
ಪ್ರಕಾಶ್ ಆರ್
ಸಾರ್ಥಕ ಬದುಕು


ವಿದ್ಯೆಯ ನೆರಳು ಕಾಣದ ಹೆಣ್ಣು ಜೀವವೊಂದು
ಕರುಳ ಕುಡಿಯ ವಿದ್ಯೆಯ
ಆಶ್ರಯ ಕೊಡಲೆಂದು
ಕರುಳನೇ ಬತ್ತಿಯಾಗಿಸಿ ಬೆಳಕನೀಡಿದ
ಜೀವಕೆ ನೆರಳಾದರೆ ಬದುಕು ಸಾರ್ಥಕವಲ್ಲವೇ?
ಹೆಗಲನೇ ನೊಗವಾಗಿಸಿ
ಬೆನ್ನು ಮೂಳೆಯ ಬಲವಾಗಿಸಿ
ಎತ್ತಾಡಿಸಿ ತುತ್ತನೊದಗಿಸಿದ ತಂದೆಗೆ
ಊರುಗೋಲಾಗಿ ನಿಂತರೆ
ಬದುಕು ಸಾರ್ಥಕವಲ್ಲವೇ?
ಕಣ್ಣನು ಮಣ್ಣಿಗಿಡುವ
ಮುನ್ನ
ಕಣ್ಣಿಲ್ಲದೆ ಕತ್ತಲಲಿರುವ ಜೀವಕೆ
ಕಣ್ಣಾಗಿ ಬೆಳಕಾದರೆ ಬದುಕು ಸಾರ್ಥಕವಲ್ಲವೇ
ಅಂಗವಿಕಲನಾದರೇನು
ಅಂಗಗಳ ಹಂಗಿನ ಗುಂಗಿಲ್ಲದೆ
ಸಕಲಾಂಗವಿರುವ ಮನವು ವಿಕಲವಾದ ಜನರ ನಡುವೆ
ಛಲದಿಂದ ಬಾಳಿದರೆ
ಬದುಕು ಸಾರ್ಥಕವಲ್ಲವೇ
ಪ್ರಕಾಶ್.ಆರ್
ತುಮಕೂರು ಡಿಸ್ಟ್ರಿಕ್ಟ್ ದಿವ್ಯಂಗ್ ಸ್ಪೋರ್ಟ್ಸ್ ಅಕಾಡೆಮಿ
ಸಂಸ್ಥಾಪಕರು



