ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
“ಬಾಯಲ್ಲಿಯ ಅಕ್ಕಿ ಕಾಳು”


ತಥಾಕಥಿತ ದೊಡ್ಡಣ್ಣ ದೂರದೇಶದಿಂದಲೇ ಕಳುಹಿದ ತನ್ನೆಲ್ಲ ಅಷ್ಟೈಶ್ವರ್ಯದ ಶಸ್ತ್ರಾಸ್ತ ಸಾಮರ್ಥ್ಯ
ತನ್ನ ನೆಲ ತಣ್ಣಗಿರಲಿ
ಬೇರೆಯವನ ನೆಲ ಜಲ ವಾಯುಗಳು ವಿಷಾನಿಲಗಳಾಗಲಿ, ಉರಿಯುತಿರಲಿ ಸದಾ.
ತಾ ಮಾತ್ರ ಹೊಂದಬೇಕು ಮಾರಕಾಸ್ತ್ರ ಅಣ್ವಸ್ತ್ರ
ಅವನಿಗೇಕೆ ಬೇಕು ಈ ಅಶ್ವತ್ಥಾಮಾಸ್ತ್ರ
ದೊಡ್ಡಣ್ಣ ನಾನೇ ನಾನೇ
ದುರ್ಯೋಧನನೇ ಅಂದವನು.
ಇಬ್ಬರೂ ಮೂರ್ಖರು
ಇಬ್ಬರೂ ದುರ್ಬುದ್ಧಿಯವರು
ಇಬ್ಬರಿಗೂ ಹೇಳ ಬಹುದು
ವಿನಾಶ ಕಾಲೇ ವಿಪರೀತ ಬುದ್ಧಿಃ
ಅಡಕತ್ತರಿಯಲ್ಲಿರುವ ನಾವು
ಇಹ ಪರಗಳ ನೆನೆವವರು
ಡಾ ಡೋ ನಾ ವೆಂಕಟೇಶ



