ಕಾವ್ಯ ಸಂಗಾತಿ
ಜ್ಯೋತಿ ಮಾಳಿ
ಗಜಲ್


ಹೆಣ್ಣಾಗಿ ಹುಟ್ಟಿಸು ಅಂತ ನಿನ್ನಲ್ಲೇನು ನಾನು ಮನ್ನತ್ ಮಾಡಿರಲಿಲ್ಲ
ಎಲ್ಲರಂತೆ ಬದುಕಬಲ್ಲೆ, ಸುಖದಿಂದ ಬಾಳಲು ಜನ್ನತ್ ಬೇಡಿರಲಿಲ್ಲ
ನಾನೇನು ಗುನಾ ಮಾಡಿದಿನೋ ಈ ದುರಾದೃಷ್ಟ ಸ್ಥಾನ ನೀಡಿರುವೆ
ಪ್ರಾಣಿಯಾಗಿ ಹುಟ್ಟಿಸಬಹುದಿತ್ತು ಮನುಜನ ಶೌರತ್ ಅರಸಿರಲಿಲ್ಲ
ಹೆಣ್ಣಿನ ಘನತೆ ಗೌರವ ಕಾಪಾಡುವ ಸುಂದರ ಸಮಾಜವಿರಬೇಕು
ಸಮಬಾಳು ನೀಡೆಂದೆನೇ ಹೊರತು ಸುಖದ ಸೌಲತ್ ಬಯಸಿರಲಿಲ್ಲ
ಹೆಂಗರುಳಿನಲಿ ಪೋಣಿಸಿ ನಯ ನೆರಳಿನ ಸೂರಿನಡಿ ಇಡು ನನ್ನ
ಮಾ ಬೆಹೆನ್ ಬಹು ಬೇಟಿಯಾಗಿ ನೋವಿರದ ನೌಲತ್ ನಡೆಸಿರಲಿಲ್ಲ
ನೀ ಸೃಷ್ಟಿಸಿದ ಕರಾಮತ್ ನಲಿ ಜ್ಯೋತಿಗೆ ಔರತ್ ಸ್ಥಾನ ಸಿಕ್ಕಿದೆ
ಸಾರ್ಥಕ ಸಾವೊಂದು ಸಾಕು ಇದಕ್ಕಿಂತ ದೊಡ್ಡ ದೌಲತ್ ಕೇಳಿರಲಿಲ್ಲ
ಮನ್ನತ್ = ಹರಕೆ
ಜನ್ನತ್ = ಸ್ವರ್ಗ
ಶೌರತ್ = ಕೀರ್ತಿ
ಸೌಲತ್ = ಸೌಲಭ್ಯ
ನೌಲತ್ =ಶ್ರೇಷ್ಠ ಬದುಕು
ಔರತ್ = ಸ್ತ್ರೀ
ದೌಲತ್ = ಶ್ರೀಮಂತಿಕೆ
ಮಾ = ತಾಯಿ
ಬಹೆನ್ = ಸಹೋದರಿ
ಬೇಟಿ = ಮಗಳು
ಬಹು = ಸೊಸೆ
ಕರಾಮತ್ = ಕೈಚಳಕ
ಗಲತಿ = ತಪ್ಪು
ಗುನಾ= ಪಾಪ
ಜ್ಯೋತಿ ಮಾಳಿ ಬೆಳಗಾವಿ




Super madam