ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಸಿರು ಗರಿಕೆ ಮೇದು
ಬಿಳಿ ಹಾಲನೀವ ನನ್ನ ಶಿವ

ರಟ್ಟೆ ಮುರಿದು ಬಂದ
ಬೆವರ ಹನಿಯಲಿರುವ ನನ್ನ ಶಿವ

ಮಂದಿರದಿ ನಡೆದು ಮಸೀದಿಯ ಮುಂದಿಂದ
ಇಗರ್ಜಿಯತ್ತ ನಡೆದು ನಗುವ ನನ್ನ ಶಿವ

ಕರಿ ಕಲ್ಲಿನ ಬಿಳಿ ನಗು
ಎಲ್ಲಾ ಬಣ್ಣದ ಕಾಮನಬಿಲ್ಲು ನನ್ನ ಶಿವ

ಗುಡಿಸಲಿಗೂ, ಮಹಡಿಗೂ
ಒಂದೇ ಬಿಸಲನೀವ ಸೂರ್ಯ ನನ್ನ ಶಿವ

ಟಾಕೀಸು, ಶೌಚಾಲಯ, ಪಯಣಗಳಲಿ
ಮಾತ್ರ ಎಲ್ಲರೊಂದಾಗೋ ಜನರಿಂದ ದೂರ ಈ ಶಿವ

ಕಲ್ಲ ಕಪ್ಪೆ, ಬಾನ ಹದ್ದು, ಮಣ್ಣ ಹುಳ
ಮತ್ತು ಮನುಜನ ಹೊಟ್ಟೆಗೆ ತಪ್ಪದೇ ಹಿಟ್ಟಿಡುವ ನನ್ನ ಶಿವ

ಯೇಸುವ ಆಲಂಗಿಸಿ ಮಹಮದನ
ಕೈ ಹಿಡಿದು ಪಳ್ಳಾರ ಹಂಚಿ ತಿನ್ನುವ ನನ್ನ ಶಿವ

ಎದೆ ವಿಷವ ಕರಗಿಸಿ ಹೂ ಮಾತಲಿ
ಮನುಜ ಮತವ ಜಗಕೆ ಸಾರುವ ಈ ನನ್ನ ಶಿವ….


About The Author

Leave a Reply

You cannot copy content of this page

Scroll to Top