ಕಾವ್ಯ ಸಂಗಾತಿ
ಶ್ರೀದೇವಿ ಗುಮ್ಮಗೋಳ
“ಜಗದ ಕವಿ”


ಓ ಕವಿ ನಾಯಕ ಕುವೆಂಪು
ನೀವ ಬರೆದ ಕವನಗಳ ಇಂಪು
ನೀಡಿದೆ ಕನ್ನಡ ಸಾಹಿತ್ಯಕ್ಕೆ ತಂಪು
ಪಸರಿಸಿದೆ ಹಾವ ಭಾವಗಳ ಕಂಪು|
ಹಸ್ತದ ಸಂಗೀತಕ್ಕೆ ನಾಟ್ಯವಾಡಿತು ‘ನವಿಲು’|
ಪದಪುಂಜ ನಾದದ ‘ಕೊಳಲು’ಗೆ
ಮೊಳಗಿತು ‘ಪಾಂಚಜನ್ಯ’|
ಕನ್ನಡವಾಯಿತು ಧನ್ಯ|
ಕನ್ನಡ ನಿಸರ್ಗದಲ್ಲಿ
ಮೂಡಿಬಂದ ‘ಪಕ್ಷಿ ಕಾಶಿ’|
ಕನ್ನಡ ಮಾತೆಯ ಮಡಿಲಲ್ಲಿ
ಬೆಳದ ‘ಷೋಡಶಿ’
ಕನ್ನಡ ಸಾಗರದ ಆಳದಿಂದ
ಹೊರಬಂದ ಮುತ್ತು|
ನೀಡಿದ್ದು ನಮ್ಮಗೆಲ್ಲ
ಶಾಶ್ವತ ಸಾಹಿತ್ಯ ಸೊತ್ತು|
ಅಮೋಘ ಸೇವೆಯ ಫಲ
ದೊರೆತ ಅಗ್ರ ಜ್ಞಾನ ಪೀಠ ಪ್ರಶಸ್ತಿ|
ತಾವು ಎಂದೆಂದು ಮರೆಯಾಲಗದ
ಕನ್ನಡ ಕುಲಕೋಟಿಯ ಆಸ್ತಿ |
ಶ್ರೀದೇವಿ ಗುಮ್ಮಗೋಳ



