ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಜನೇವರಿ ತಿಂಗಳ ಬಂತಂದ್ರ ನೆನಪಾಗೋ ಜೀವ ಅಂದ್ರ ಬೇಂದ್ರೆ ಅಜ್ಜಾ§ನ
ನಕ್ಕು ಸಾಯ್ರೋ ನಕ್ಕು ಸಾಯ್ರಿ ಅಂತಾ ನಮಗೆಲ್ಲಾ ಹೇಳಿ ನಕ್ಕೋತ ಹೋದ ದತ್ತು ಮುತ್ಯಾ
ಬಡತನಕ ಹೇಸಿದಾವಲ್ಲ  ಮೆಟ್ಟಿ ನಿಂತಾವ
ಬೆಂದು ಬೇಂದ್ರೆಯಾದಾವ

ರಾಮಚಂದ್ರ ಅಂಬೂತಾಯಿಯ ಮಗನಾಗಿ
ಗೋದೂಬಾಯಿ ನೆರಳಿನಾಗ ಕನ್ನಡ ನಾಡಿನ ಆಲದ ಮರಾ ಆಗಿದ್ದಾ§ವ
ಮಾತು ಆಡಿದರ ಹಸಿ ಗೋಡ್ಯಾಗ ಹಳ್ಳ ಒಗದಂಗ ಮಾತಾಡಾವ
ಕನ್ನಡದವ್ವ ಅಂದ್ರ ನಿನಗ ಪಂಚಪ್ರಾಣ
ತಾಯಿ ಋಣ ತೀರಸಾಕ ಅಕ್ಷರದ ಮಹಲು ಕಟ್ಟಿದಾವ

ತನ್ನ ಹಾಡಿನಾಗ
ಮಲ್ಲಿಗಿ ಹೂವಿನ
ಗಮಗಮ
ಕುರುಡು ಕಾಂಚಾಣದ ಜಣಜಣ
ಕರಡಿ ಕುಣಿತದ
ತಕತಕ  
ಮೂಡಲ ಮನೆಯ
ಚುಮು ಚುಮು
ಕಾಣಿಸಿದಾವ

ಇನ್ನೂ ಯಾಕ ಬರಲಿಲ್ಲಾವ ಹುಬ್ಬಳ್ಳಿಯಾವ ಅಂತ ಹೇಳಿ
ಕನಸಿನೊಳಗೆ ಬಂದು ಕನಸು ಬಿತ್ತಿದಾವ
ನಮಗೆಲ್ಲಾ ಹುಸಿನಗುತ ಬಂದೀರಿ
ನಸುನಗುತ ತೆರಳಿ
ಅಂತಾ ನೀತಿ ಪಾಠ ಹೇಳಿದಾವ

ಕನ್ನಡದವರು ಮನಸು ಮಾಡಿದರ ಚರಿತ್ರೆ ಸೃಷ್ಟಿಸ್ಯಾರ ಆ ಕಡೆ ಲಕ್ಷ್ಯ ಕೊಡ್ರಿ ಎಂದು ಹೇಳಿ
ನಮಗೆಲ್ಲಾ ತಾಯಿ ಸೇವೆ ಮಾಡಾಕ ಹಚ್ಚಿದಾಂವ
ಕನ್ನಡ ನಮ್ಮ ಮೈಯಾಗ ಕಣಕಣದಾಗ ಬೆರತೈತಿ ಅನ್ನೋ ಸತ್ಯ ತಿಳಿಸಿದಾವ

ಗುಂಗುರು ಕೂದಲಿನ ಮುತ್ಯಾ
ಮಾತಿನ ಮಲ್ಲ ಶಬ್ದ ಗಾರುಡಿಗ
ನಮ್ಮ ನಾಡಿನ ಮಾಣಿಕ್ಯ
ನಮಗ
ಅರಳು ಮರಳು ಆದ್ರೂ
ನಿನ್ನ ನೆನಪು ಎಂದೂ ಸಾಯುವುದಿಲ್ಲ
ನೀನು ನಮ್ಮ ನಾಡಿನಾಗ ಹುಟ್ಟಿದ್ದೇ ಒಂದು ಪವಾಡ
ನಿನ್ನ ಜನುಮದಿನ ನಮಗೆಲ್ಲಾ ಹಬ್ಬ
ನಮಗೆಲ್ಲಾ ಹಬ್ಬ
ಆಶೀರ್ವಾದ ಮಾಡು ಮುತ್ಯಾ 


About The Author

Leave a Reply

You cannot copy content of this page

Scroll to Top