ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನಿಂದಾಗುವುದಿಲ್ಲ
ಗೆಳೆಯಾ ಈಗೀಗ
ಬರೆಯಲಿಕ್ಕೆ ಕೊಟ್ಟ ಈ ಚಿತ್ರಕ್ಕೆ ಆ ವಿಚಿತ್ರಕ್ಕೆ!

ಹೂ ಹಣ್ಣು ಗಿರಿ ಪಂಕ್ತಿಗಳ ಜಾಡು
ಹಕ್ಕಿ ಪಿಕ್ಕಿಗಳ ನೃತ್ಯ
ಮನುಜರ ಕೃತ್ಯ
ರಕ್ಕಸರ ಕುಕೃತ್ಯ

ಕುರಿತೋದದ ಜೀವನ ಕಹಳೆಗಳು
ಕೇಳರಿಯದ ಸುಗಂಧದ ಚೆಂದ
ಹೂವಿನ ಪಕಳೆ
ಆಕಾಶದ ನಕ್ಷತ್ರ ರಾತ್ರಿ ಹಗಲುಗನಸು ಹಾಗೂ
ಮತ್ತಷ್ಟು ಬ್ರಹ್ಮಾಂಡಗಳು!

ಹೇಗೆ ಬರೆಯಲಿ ಗೆಳೆಯ ಉದ್ದುದ್ದ ಸಾಲುಗಳು
ನಿರ್ಮೋಹಿ ಮನಸುಗಳು
ನಿರ್ದಯ ಕನಸುಗಳು
ಅಗಮ್ಯ ಅನೂಚನ ಕಾಯಗಳು
ಬಾಡಿದ ಮೊಗ್ಗುಗಳು.

ಹೇಗೆ ಬರೆಯಲಿ ಕಥೆ
ಶಾಯಿ ಮುಗಿಯುವ ಮುನ್ನ
ಬರೆದ ಲೆಕ್ಕಣಿಕೆ ಮುರಿದು ಹೋಗುವ ಮುನ್ನ?

ಮತ್ತಷ್ಟುಕವನ ಕಗ್ಗಂಟು ಮುಗ್ಗಂಟು
ಧಾರಾವಾಹಿಯಾಗಿ ಹೊಸತೊಂದು ಅಧ್ಯಾಯ
ಹೊಸೆಯುವ ಮುನ್ನ-
ಹೇಗೆ ಹಾಡಲಿ ಹೊಸ ರಾಗ!

ಹೇಗೆ ಬರೆಯಲಿ ಚಿನ್ನ
ಮತ್ತೊಂದು ಶ್ರೀಕಾರಕ್ಕೆ
ಚೆನ್ನುಡಿ ಹಾಕುವ ಮುನ್ನಕ್ಕೆ!


About The Author

1 thought on “ಡಾ. ಡೋ. ನಾ. ವೆಂಕಟೇಶ ಕವಿತೆ,”ಮತ್ತೊಂದು ಶ್ರೀಕಾರ””

Leave a Reply

You cannot copy content of this page

Scroll to Top