ಕಾವ್ಯ ಸಂಗಾತಿ
ಕಲ್ಪನಾ ಎಸ್ ಪಾಟೀಲ
“ಒಲವಿನ ಗೆಳೆಯ”


ದತ್ತ ಪದ :- ಪ್ರಿಯಾ ನೀನಾರಿಗೂ ಆಗದಿರು ಇನಿಯ!
ಒಲವಿನಿನಿಯಾ ನಿನ್ನ ಹೆಸರೆ ಮಧುರ ಗಾನ
ಹೃದಯದೊಳಗೆ ಮೂಡುವ ಸುವಾಸನ
ಬೆಳಗಿನ ಹೊನಲು ಕಿರಣದಂತೆ ನೀನು
ಕಂಡೆನೊಂದು ನಿನ್ನದೆ ಹೊಸ ಕನಸನು.
ನಗುತ ಆಡುವ ಮೃದುವಾದ ಮಾತು
ಕೇಳಿದರೆ ಮರೆತೆನೆಲ್ಲ ಕಷ್ಟವನಂತು
ಮಳೆಯ ತಂಪಿನ ಹನಿಯಂತೆ
ಬಿಸಿಲಿನಲಿ ಸಿಗುವ ನೆರಳಂತೆ.
ಸ್ನೇಹದ ಸಾಗರದ ಮುತ್ತಿನಂತೆ
ಪ್ರೀತಿಯ ಪಥಕೆ ನೀ ದೀಪದಂತೆ
ಇನಿಯಾ ಎಂದರೆ ಮಧುರತೆಯ ಸಾರ
ಜೀವನದಲಿ ತುಂಬುವೆ ಹರ್ಷಧಾರ.
ಅವನ ಹೆಜ್ಜೆ ಚಿಗುರಿನ ಸವಿ
ಅವನ ದೃಷ್ಟಿಯೆ ನನ್ನ ಕನಸಿನ ಕವಿ
ಪ್ರಿಯಾ ನೀನಾರಿಗೂ ಆಗದಿರು ಇನಿಯ
ಮನದೊಳಗೆ ಸದಾ ಉಳಿಯುವೆಯ.
ಕಲ್ಪನಾ ಎಸ್ ಪಾಟೀಲ




