ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು”ಡಾ. ಮಲ್ಲಿನಾಥ ಎಸ್. ತಳವಾರ

ಸ್ಥಳ ಸಂಗಾತಿ ಡಾ. ಮಲ್ಲಿನಾಥ ಎಸ್. ತಳವಾರ “ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು” ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು “If you don’t know where you are, you don’t know who you are.”— Wendell Berry        ‘ವೈಶಿಷ್ಟ್ಯ’ ಎಂಬ ಪದವು ಕೇವಲ ವಿಶೇಷತೆ ಎನ್ನುವ ಅರ್ಥವನ್ನಷ್ಟೇ ಹೊಂದಿಲ್ಲ; ಇದು ಒಂದು ಸ್ಥಳದ ಆತ್ಮ, ಅದರ ಇತಿಹಾಸದ ಧ್ವನಿ, ಸಂಸ್ಕೃತಿಯ ಸ್ಪಂದನೆ ಮತ್ತು ಜನಜೀವನದ ವೈವಿಧ್ಯಮಯ ರೂಪಗಳ ಒಕ್ಕೂಟವಾಗಿದೆ. ಒಂದು ಪ್ರದೇಶವನ್ನು ಇತರ ಪ್ರದೇಶಗಳಿಂದ ವಿಭಿನ್ನವಾಗಿ ಗುರುತಿಸುವ ಸ್ವಭಾವ, ಪರಂಪರೆ, ಸಾಧನೆಗಳು ಮತ್ತು ಜೀವನಪದ್ಧತಿಗಳ ಸಮಗ್ರ ರೂಪವೇ ಅದರ ವೈಶಿಷ್ಟ್ಯ. ಪ್ರತಿ ಭೂಭಾಗಕ್ಕೂ ತನ್ನದೇ ಆದ ಪ್ರಕೃತಿ ರಚನೆ, ಐತಿಹಾಸಿಕ ಪಾದಚಿಹ್ನೆಗಳು, ಧಾರ್ಮಿಕ ನಂಬಿಕೆಗಳು, ಭಾಷಾ-ಸಾಹಿತ್ಯ ಪರಂಪರೆ, ಜನಪದ ಆಚರಣೆಗಳು ಹಾಗೂ ಆರ್ಥಿಕ-ಸಾಮಾಜಿಕ ಜೀವನದ ರೂಪರೇಖೆಗಳಿವೆ. ಇವುಗಳ ಸಮನ್ವಯದಿಂದ ಆ ಪ್ರದೇಶದ ರೂಪುರೇಷೆ ನಿರ್ಮಾಣವಾಗುತ್ತದೆ. ಅದನ್ನು ಸ್ಪಷ್ಟವಾಗಿ ಗುರುತಿಸುವ ಲಕ್ಷಣಗಳೇ ವೈಶಿಷ್ಟ್ಯಗಳು. ವೈಶಿಷ್ಟ್ಯವು ಕೇವಲ ಭೌಗೋಳಿಕ ಅಥವಾ ಐತಿಹಾಸಿಕ ಅಂಶಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ; ಇದು ಮಾನವ ಸಂಬಂಧಗಳ ಉಷ್ಣತೆಯಲ್ಲಿ, ಆಚರಣೆಗಳ ಸರಳತೆಯಲ್ಲಿ, ನಂಬಿಕೆಗಳ ಆಳದಲ್ಲಿ ಮತ್ತು ಸೃಜನಶೀಲತೆಯ ಸ್ಪಂದನದಲ್ಲಿ ವ್ಯಕ್ತವಾಗುತ್ತದೆ. ಒಂದು ಸ್ಥಳದ ವೈಶಿಷ್ಟ್ಯವನ್ನು ಅರಿತುಕೊಳ್ಳುವುದು ಎಂದರೆ ಅದರ ಭೂತಕಾಲ, ವರ್ತಮಾನ ಮತ್ತು ಭವಿಷ್ಯದ ಸಂಧಿಬಿಂದುಗಳನ್ನು ಅರಿಯುವುದಾಗಿದೆ. ಈ ಹಿನ್ನೆಲೆಯಲ್ಲಿ “ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು” ಎಂಬುದನ್ನು ಪರಿಗಣಿಸಿದಾಗ, ಇದು ಕೇವಲ ಸ್ಥಳೀಯ ಮಾಹಿತಿ ಸಂಗ್ರಹವಲ್ಲ; ಬದಲಿಗೆ ಚಿತ್ತಾಪುರದ ಭೌಗೋಳಿಕ ರೂಪರೇಖೆ, ಐತಿಹಾಸಿಕ ಪರಂಪರೆ, ಧಾರ್ಮಿಕ ಸೌಹಾರ್ದತೆ, ಸಾಹಿತ್ಯಿಕ ಚೈತನ್ಯ ಮತ್ತು ಜನಪದ ಸಂಸ್ಕೃತಿಯ ಅನನ್ಯತೆಗಳನ್ನು ಪರಿಚಯಿಸುವ ಪ್ರಯತ್ನವಾಗಿದೆ.       ಒಂದು ಸ್ಥಳದ ಹೆಸರಿನಲ್ಲಿ ಅದರ ಇತಿಹಾಸ ಮಾತ್ರವಲ್ಲ, ಅಲ್ಲಿಯ ಜನರ ಮನೋಭಾವ, ಧಾರ್ಮಿಕ ನಂಬಿಕೆಗಳು, ಜೀವನ ವಿಧಾನ ಮತ್ತು ತಾತ್ವಿಕ ಚಿಂತನೆಗಳು ಅಡಗಿರುತ್ತವೆ. “ಚಿತ್ತಾಪುರ”ವು ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ತಾಲೂಕು. ಇದನ್ನು ‘ಚಿತ್ತಾಪೂರ’ ಎಂತಲೂ ಕರೆಯಲಾಗುತ್ತದೆ. ಆಡಳಿತಾತ್ಮಕ/ಅಧಿಕೃತ ಬಳಕೆ, ಸರ್ಕಾರದ ದಾಖಲೆಗಳು, ತಾಲೂಕು ಹೆಸರು, ನಕ್ಷೆಗಳು … ಎಲ್ಲೆಡೆಯೂ ‘ಚಿತ್ತಾಪುರ’ ಎಂಬ ರೂಪವನ್ನೇ ಬಳಸಲಾಗುತ್ತದೆ. ಇನ್ನೂ ‘ಪೂರ’ (ಪೂರ್) ರೂಪವು ಕೆಲವು ಸಂದರ್ಭಗಳಲ್ಲಿ ಧ್ವನಿಮಾಧುರ್ಯಕ್ಕಾಗಿ ಸಾಹಿತ್ಯದಲ್ಲಿ ಬಳಸಲಾಗುತ್ತದೆ. ಅಂದರೆ ಅಧಿಕೃತ ಮತ್ತು ವ್ಯಾಕರಣಬದ್ಧವಾಗಿ ‘ಚಿತ್ತಾಪುರ’, ಸಾಹಿತ್ಯಿಕ ಪ್ರಯೋಗವಾಗಿ ‘ಚಿತ್ತಾಪೂರ’ವೆಂದು!          ‘ಚಿತ್ತಾಪುರ’ವನ್ನು ಪದದ ನಿಷ್ಪತ್ತಿಯ ಹಿನ್ನೆಲೆ ಗಮನಿಸಿದರೆ ಅದು ಚಿತ್ತ + ಪುರ ಎಂಬ ಎರಡು ಪದಗಳಿಂದ ಕೂಡಿರುವುದು ಮನದಟ್ಟಾಗುತ್ತದೆ. ‘ಚಿತ್ತ’ ಎಂಬುದು ಸಂಸ್ಕೃತ, ಪ್ರಾಕೃತ ಮತ್ತು ಪಾಲಿ ಭಾಷೆಗಳಲ್ಲಿ ಬಳಕೆಯಲ್ಲಿರುವ ಪದ. ಇದು ಮನಸ್ಸು, ಚೇತನ, ಭಾವ, ಜ್ಞಾನ, ಸ್ಮೃತಿ ಎಂಬ ಹಲವು ಅರ್ಥಗಳನ್ನು ಹೊಂದಿದೆ. ಇನ್ನೂ ‘ಪುರ’ ಎಂದರೆ ನಗರ, ವಸತಿ ಕೇಂದ್ರ, ಸಂಘಟಿತ ವಾಸಸ್ಥಳ ಎಂದೆಲ್ಲಾ ಅರ್ಥವನ್ನು ಹೊಂದಿದೆ. ಈ ನೆಲೆಯಲ್ಲಿ ವಿವೇಚಿಸಿದಾಗ ಇದು ‘ಮನಸ್ಸಿನ ನಗರ’ ಅಥವಾ ‘ಧಾರ್ಮಿಕ ಕೇಂದ್ರ’ವನ್ನು ಸೂಚಿಸುತ್ತದೆ.‌ ಇದನ್ನು ‘ಸ್ಥಳೀಯ ದೇವಾಲಯ ಅಥವಾ ಚಿತ್ರಕಲೆಗಳಿಂದ (ಚಿತ್ತಾರ) ಪ್ರಸಿದ್ಧ ನೆಲೆಯಾಗಿರಬಹುದು’ ಎಂದೂ ಅರ್ಥೈಸಿಕೊಳ್ಳಬಹುದಾಗಿದೆ. ಸ್ಥಳನಾಮಗಳು ಭೌಗೋಳಿಕ ಗುರುತುಗಳಷ್ಟೇ ಅಲ್ಲ; ಇವು ಒಂದು ಪ್ರದೇಶದ ಸ್ಮೃತಿ, ಸಂಸ್ಕೃತಿ ಮತ್ತು ಚೇತನದ ಭಾಷ್ಯಗಳು. ಇಂಥ ಭಾರತೀಯ ಸ್ಥಳನಾಮ ಪರಂಪರೆಯಲ್ಲಿ ‘ಪುರ’ ಎಂಬ ಪ್ರತ್ಯಯವು ಸಾಮಾನ್ಯವಾಗಿ ಸಾಂಸ್ಕೃತಿಕ ಅಥವಾ ರಾಜಕೀಯ ಕೇಂದ್ರಗಳಿಗೆ ಬಳಕೆಯಾಗಿದೆ. ಇದರಿಂದ ಚಿತ್ತಾಪುರವೂ ಕೇವಲ ಗ್ರಾಮವಲ್ಲದೆ, ಒಂದು ಕಾಲದಲ್ಲಿ ಸಾಂಸ್ಕೃತಿಕ ಕೇಂದ್ರವಾಗಿದ್ದ ಸೂಚನೆಯೂ ದೊರಕುತ್ತದೆ.           ಚಿತ್ತಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಸನ್ನತಿ (ಆಶೋಕ ಶಿಲಾಶಾಸನ), ಕನಗನಹಳ್ಳಿ (ಮಹಾಸ್ತುಪ) ಮತ್ತು ವಿಹಾರ ಸಂಸ್ಕೃತಿಯ ಅವಶೇಷಗಳ ಹಿನ್ನೆಲೆಯಲ್ಲಿ ‘ಚಿತ್ತ’ ಪದದ ಬೌದ್ಧ ತಾತ್ವಿಕ ಅರ್ಥವನ್ನು ಇನ್ನಷ್ಟು ದೃಢಪಡಿಸುತ್ತದೆ. ಬೌದ್ಧ ತತ್ವದಲ್ಲಿ ಚಿತ್ತ ಎಂದರೆ ‘ಎಲ್ಲದರ ಮೂಲ; ಶುದ್ಧವಾದರೆ ಮುಕ್ತಿ, ಅಶುದ್ಧವಾದರೆ ಬಂಧನ’ ಎಂದಾಗುತ್ತದೆ. ಇದರಿಂದ ‘ಚಿತ್ತಾಪುರ’ ಎಂಬ ಹೆಸರು ‘ಚಿತ್ತಶುದ್ಧಿಯ ಕೇಂದ್ರ’ ಎಂಬ ತಾತ್ವಿಕ ಸೂಚನೆಯಾಗಿ ಕಾಣುತ್ತದೆ. ಬೌದ್ಧ ಸಂಸ್ಕೃತಿಯ ಹಿನ್ನೆಲೆಯಲ್ಲಿ ‘ಚಿತ್ತಾಪುರ’ವು ಧ್ಯಾನಸ್ಥಳದ ರೂಪಕವಾಗಿಯೂ ಕಂಡುಬರುತ್ತದೆ. ಇಲ್ಲಿ ಶಬ್ದಕ್ಕಿಂತ ಮೌನ ಮುಖ್ಯವಾದ ನೆಲೆಯಾಗಿದ್ದು, ಇತಿಹಾಸವು ಮಾತಾಡುವುದಿಲ್ಲ; ಮೌನವಾಗಿ ಸೂಚಿಸುತ್ತದೆ. ಸಾಹಿತ್ಯದ ದೃಷ್ಟಿಯಲ್ಲಿ ಚಿತ್ತಾಪೂರ ಎಂದರೆ ‘ಮನಸ್ಸು ವಾಸಿಸುವ ಊರು’ ಎಂದಾಗುತ್ತದೆ. ಅಂತೆಯೇ ಊರುಗಳು ಕಲ್ಲಿನಿಂದ ಕಟ್ಟಲ್ಪಡುವುದಿಲ್ಲ; ಅವು ಚಿತ್ತದಿಂದ ನಿರ್ಮಾಣವಾಗುತ್ತವೆ. ಇಂತಹ ಚಿತ್ತದಿಂದ ಕಟ್ಟಲ್ಪಟ್ಟ ಊರೇ ‘ಚಿತ್ತಾಪೂರ’. ಇನ್ನೂ ‘ಚಿತ್ತಾಪುರ’ವನ್ನು ಒಂದು ಮಾನಸಿಕ, ಭೌಗೋಳಿಕ ರೂಪಕವಾಗಿ ನೋಡಿದರೆ, ‘ಚಿತ್ತಾಪುರ’ ಬರಿ ಒಂದು ತಾಲೂಕು ಅಲ್ಲ, ಒಂದು ಮನಸ್ಸಿನ ನಕ್ಷೆ. ಇಲ್ಲಿ ‘ಭೀಮಾ ನದಿ’ಯ ಚಿಂತನೆಯ ಪ್ರವಾಹ, ‘ಸನ್ನತಿ’ಯ ಶಾಂತಿಯ ತಟ ಹಾಗೂ ‘ಕನಗನಹಳ್ಳಿ’ಯ ಸ್ಮೃತಿಗಳ ಸ್ತೂಪ ಇವೆಲ್ಲವೂ ಸೇರಿ, ‘ಚಿತ್ತಾಪುರ’ವನ್ನು ಮಾನವ ಚಿತ್ತದ ಭೌಗೋಳಿಕ ರೂಪವಾಗಿಸಿವೆ.       ‘ಚಿತ್ತಾಪುರ’ವು ಕರ್ನಾಟಕದ ಕಲಬುರಗಿ ಜಿಲ್ಲೆಯ ದಕ್ಷಿಣ–ಪೂರ್ವ ಭಾಗದಲ್ಲಿರುವ ದಕ್ಕನ್ ಪೀಠಭೂಮಿಯ ಒಂದು ಪ್ರಮುಖ ಪ್ರದೇಶ. ಇದರ ಭೌಗೋಳಿಕ ಸ್ವರೂಪವು ಸಮತಟ್ಟು ಮತ್ತು ಸ್ವಲ್ಪ ಏರಿಳಿತಗಳಿರುವ ಭೂಪ್ರದೇಶದಿಂದ ಕೂಡಿದೆ. ಭೀಮಾ, ಕಾಗಿಣಾ, ಬೆಣ್ಣೆತೊರಾ, ಗಂಡೋರಿ ನಾಲಾ, ಮುಲ್ಲಾಮಾರಿ ನದಿಗಳು ತಾಲೂಕಿನ ಜೀವನಾಡಿಯಾಗಿವೆ. ಇಲ್ಲಿಯ ಆಲ್ಯೂವಿಯಲ್ ಮಣ್ಣು ಕೃಷಿಗೆ ಅನುಕೂಲಕರವಾಗಿದೆ. ಅಂದರೆ, ನದಿಗಳಿಂದ ತಂದು ಸೇರಿಸಲ್ಪಟ್ಟಿದ್ದು! ಈ ಪ್ರದೇಶದಲ್ಲಿ ಮುಖ್ಯವಾಗಿ ಕಪ್ಪು ಮಣ್ಣು ವ್ಯಾಪಕವಾಗಿದ್ದು ತೊಗರಿ, ಜೋಳ, ಗೋಧಿ, ಸಜ್ಜೆ, ಕುಸುಬೆ, ಕಡಲೆ ಮುಂತಾದ ಬೆಳೆಗಳಿಗೆ ಸೂಕ್ತವಾಗಿದೆ. ಇಲ್ಲಿಯ ಹವಾಮಾನ ಅರ್ಧಶುಷ್ಕ ಸ್ವಭಾವದ್ದು. ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ; ಮಳೆಗಾಲವಂತೂ ದಕ್ಷಿಣ–ಪಶ್ಚಿಮ ಮಾನ್ಸೂನ್‌ ಮೇಲೆ ಅವಲಂಬಿತವಾಗಿದೆ. ಸರಾಸರಿ ಮಳೆಯ ಪ್ರಮಾಣ ಮಧ್ಯಮ ಮಟ್ಟದಲ್ಲಿದೆ. ಭೂವೈಜ್ಞಾನಿಕವಾಗಿ ದಕ್ಕನ್ ಟ್ರಾಪ್ ಶಿಲಾಸಂರಚನೆ, ಸಾಲ್ಟ್ ಕಲ್ಲುಗಳು ಮತ್ತು ಚೂನಾಪತ್ರಿ ಪದರಗಳು ಕಂಡುಬರುತ್ತವೆ. ಸಸ್ಯಸಂಪತ್ತು ಮುಖ್ಯವಾಗಿ ಒಣಮೈದಾನ ಪ್ರಭೇದಕ್ಕೆ ಸೇರಿದೆ.        ಚಿತ್ತಾಪುರದ ಇತಿಹಾಸವು ಕೇವಲ ಆಡಳಿತ ಬದಲಾವಣೆಗಳ ಸರಣಿ ಅಲ್ಲ; ಧರ್ಮ, ಸಂಸ್ಕೃತಿ, ನದಿ ಮತ್ತು ಮಾನವ ವಸತಿಯ ನಿರಂತರ ಪ್ರವಾಹವಾಗಿದೆ. ಭೀಮಾ ನದಿ ತಟದಲ್ಲಿ ಆರಂಭವಾದ ಬೌದ್ಧ ಚೇತನದಿಂದ ಹಿಡಿದು ಆಧುನಿಕ ಕರ್ನಾಟಕದ ಭಾಗವಾಗುವವರೆಗೆ ಚಿತ್ತಾಪುರವು ದಕ್ಕನ್ ನೆಲದ ಐತಿಹಾಸಿಕ ಸ್ಮೃತಿ ಸಂಗ್ರಹವಾಗಿದೆ. ಇದು ಅನೇಕ ಮಹತ್ವದ ಸಾಮ್ರಾಜ್ಯಗಳ ಆಡಳಿತವನ್ನು ಅನುಭವಿಸಿದೆ. ಕ್ರಿ.ಪೂ. ೩ನೇ ಶತಮಾನ, ಅಶೋಕನ ಕಾಲದಲ್ಲಿ ಈ ಪ್ರದೇಶ ಮೌರ್ಯ ಸಾಮ್ರಾಜ್ಯಕ್ಕೆ ಸೇರಿತ್ತು; ಸನ್ನತಿಯ ಶಿಲಾಶಾಸನಗಳೇ ಇದಕ್ಕೆ ಸಾಕ್ಷಿ. ಮುಂದೆ ಬಂದ ಶಾತವಾಹನರು ಬೌದ್ಧ ಸಂಸ್ಕೃತಿ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ ನೀಡಿದರು. ಇನ್ನೂ ಚಾಲುಕ್ಯರು ಹಾಗೂ ರಾಷ್ಟ್ರಕೂಟರು ದಕ್ಕನ್ ಪ್ರದೇಶದ ರಾಜಕೀಯ–ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಂತರದ ಕಲ್ಯಾಣಿ ಚಾಲುಕ್ಯರು ಮತ್ತು ಯಾದವರು ದೇವಾಲಯ ಸಂಸ್ಕೃತಿ ಮತ್ತು ಕೃಷಿ ಆಧಾರಿತ ಆಡಳಿತ ವಿಸ್ತರಣೆ ಮಾಡಿದರು. ಬಹಮನಿ ಸುಲ್ತಾನರು ಮತ್ತು ಆದಿಲ್ ಶಾಹಿಗಳ ಕಾಲದಲ್ಲಿ ಇಸ್ಲಾಮೀಯ ವಾಸ್ತುಶೈಲಿ ಮತ್ತು ನಗರೀಕರಣದ ಪ್ರಭಾವವಿರುವುದು ಕಂಡುಬರುತ್ತದೆ. ಔರಂಗಜೇಬನ ಕಾಲದಲ್ಲಿ ಈ ದಕ್ಕನ್ ಪ್ರದೇಶವು ಮೊಘಲ್ ಆಳ್ವಿಕೆಗೆ ಸೇರಿತ್ತು. ಮುಂದೆ ಇದು ನಿಜಾಮ್ ರ ಆಳ್ವಿಕೆಯಿಂದಾಗಿ ಹೈದರಾಬಾದ್ ಸಂಸ್ಥಾನದ ಭಾಗವಾಗಿ, ೧೯೪೮ರಲ್ಲಿ ಹೈದರಾಬಾದ್ ವಿಮೋಚನೆಯೊಂದಿಗೆ ಭಾರತದ ಪ್ರಭುತ್ವಕ್ಕೆ ಸೇರಿತು. ೧೯೫೬ರ ಭಾಷಾವಾರು ಪ್ರಾಂತ್ಯಗಳ ನಂತರ ಕರ್ನಾಟಕ ರಾಜ್ಯದ ಭಾಗವಾಗಿ ತಾಲೂಕಾಗಿ ರೂಪುಗೊಂಡಿರುವುದು ನಮ್ಮ ಮುಂದಿನ ಇತಿಹಾಸವಾಗಿದೆ!         ಚಿತ್ತಾಪುರ ತಾಲೂಕಿನ ಶೈಕ್ಷಣಿಕ ಇತಿಹಾಸವು ಕೇವಲ ಶಾಲಾ–ಕಾಲೇಜುಗಳ ಬೆಳವಣಿಗೆಯ ಕಥೆಯಲ್ಲ; ಪ್ರಾಚೀನ ಜ್ಞಾನ ಪರಂಪರೆಯಿಂದ ಆಧುನಿಕ ವಿಶ್ವವಿದ್ಯಾಲಯ ಮಟ್ಟದ ಶಿಕ್ಷಣದವರೆಗೆ ಹರಡಿರುವ ನಿರಂತರ ಪ್ರವಾಹವಾಗಿದೆ. ಇಲ್ಲಿಯ ಶೈಕ್ಷಣಿಕ ಪರಂಪರೆ ಎಂದರೆಬೌದ್ಧ ಧ್ಯಾನ-ನಾಗಾವಿಯ ಶಾಸ್ತ್ರಪೀಠ-ಮಠ-ಮದರಸಾ ಶಿಕ್ಷಣ ಹಾಗೂ ಆಧುನಿಕ ಶಾಲಾ ವ್ಯವಸ್ಥೆ ಎಂಬ ನಿರಂತರ ಜ್ಞಾನಧಾರೆಯಾಗಿದೆ. ಸನ್ನತಿ–ಕನಗನಹಳ್ಳಿ ಪ್ರದೇಶಗಳಲ್ಲಿ ಕಂಡುಬರುವ ಬೌದ್ಧ ವಿಹಾರಗಳು ಇಲ್ಲಿ ಧ್ಯಾನ, ತತ್ವಚಿಂತನೆ ಮತ್ತು ಶಾಸ್ತ್ರಾಧ್ಯಯನ ನಡೆದಿದ್ದುದನ್ನು ಸೂಚಿಸುತ್ತವೆ. ಜ್ಞಾನವು ಧರ್ಮದೊಂದಿಗೆ ಬೆಸೆದುಕೊಂಡಿದ್ದ ಕಾಲದ ಪ್ರತಿಧ್ವನಿಯೇ ಇದು. ಇದಕ್ಕೆ ಮುಂದುವರಿದ ರೂಪವೇ ಚಾಲುಕ್ಯರ ಕಾಲದ ನಾಗಾವಿ ವಿದ್ಯಾಕೇಂದ್ರ. ಶಾಸನಗಳಲ್ಲಿ ಉಲ್ಲೇಖವಾಗಿರುವ ನಾಗಾವಿ “ವಿದ್ಯಾನಗರಿ”ಯಾಗಿ ಪ್ರಸಿದ್ಧವಾಗಿದ್ದು, ವೇದ, ವ್ಯಾಕರಣ, ತರ್ಕ, ಮೀಮಾಂಸೆ ಮೊದಲಾದ ಶಾಸ್ತ್ರಗಳ ಅಧ್ಯಯನ ನಡೆಯುತ್ತಿದ್ದ ಕೇಂದ್ರವಾಗಿತ್ತು. ಇದು ದಕ್ಕನ್ ಪ್ರದೇಶದ ಪ್ರಾಚೀನ ವಿಶ್ವವಿದ್ಯಾಲಯ ಸಮಾನವಾದ ಜ್ಞಾನಪೀಠ. ಮಧ್ಯಯುಗದಲ್ಲಿ ಮಠ–ದೇವಾಲಯ ಪಾಠಶಾಲೆಗಳು ಹಾಗೂ ಮದರಸಾ ಶಿಕ್ಷಣ ಜ್ಞಾನ ಪರಂಪರೆಯನ್ನು ಮುಂದುವರಿಸಿತು. ನಿಜಾಂ ಕಾಲದಲ್ಲಿ ಮೂಲಭೂತ ಶಾಲಾ ವ್ಯವಸ್ಥೆ ರೂಪುಗೊಂಡಿತು. ಸ್ವಾತಂತ್ರ್ಯಾನಂತರ ಕನ್ನಡ ಮಾಧ್ಯಮ ಶಿಕ್ಷಣ ವಿಸ್ತಾರಗೊಂಡು, ಇಂದು ಶಾಲೆ–ಕಾಲೇಜುಗಳ ಮೂಲಕ ಶಿಕ್ಷಣವು ವ್ಯಾಪಕಗೊಂಡಿದೆ. ಇದು ಕೇವಲ ಶಿಕ್ಷಣ ಸಂಸ್ಥೆಗಳ ಇತಿಹಾಸವಲ್ಲ; ಜ್ಞಾನವನ್ನು ಜೀವಂತ ಪರಂಪರೆಯಾಗಿ ಉಳಿಸಿಕೊಂಡ ನೆಲದ ಚೇತನವಾಗಿದೆ. ಇಲ್ಲಿಯ ಸಮಕಾಲೀನ ಶಿಕ್ಷಣ ವ್ಯವಸ್ಥೆ ಗ್ರಾಮೀಣ ನೆಲೆಯಲ್ಲೇ ವಿಸ್ತಾರಗೊಂಡ ಸಮಗ್ರ ಶೈಕ್ಷಣಿಕ ಜಾಲವಾಗಿದೆ. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಹೆಚ್ಚಿನ ಗ್ರಾಮಗಳಿಗೆ ತಲುಪಿದ್ದು, ಮಧ್ಯಾಹ್ನ ಊಟ, ವಿದ್ಯಾರ್ಥಿವೇತನ ಹಾಗೂ ಉಚಿತ ಪಠ್ಯಪುಸ್ತಕಗಳಂತಹ ಯೋಜನೆಗಳು ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸಿವೆ. ಇವುಗಳೊಂದಿಗೆ ಹಲವಾರು ಶಿಕ್ಷಣ ಸಂಸ್ಥೆಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಪಟ್ಟಣ ಮಟ್ಟದಲ್ಲಿ ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ಮೂಲಕ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಶಿಕ್ಷಣದ ಜೊತೆಗೆ ಉನ್ನತ ಹಾಗೂ ವೃತ್ತಿಪರ ಶಿಕ್ಷಣವೂ ಲಭ್ಯವಿದೆ. ಕಲ್ಯಾಣ ಕರ್ನಾಟಕ (೩೭೧J) ಸೌಲಭ್ಯಗಳಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾತಿ ಮತ್ತು ಹಾಸ್ಟೆಲ್–ವಿದ್ಯಾರ್ಥಿವೇತನಗಳ ಮೂಲಕ ಶಿಕ್ಷಣ ಪ್ರವೇಶ ವಿಸ್ತರಿಸಿದೆ. ಜೊತೆಗೆ ಕೌಶಲ್ಯಾಭಿವೃದ್ಧಿ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳತ್ತ ಯುವಜನರ ಒಲವು ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.        ಚಿತ್ತಾಪುರವು ಕಲ್ಯಾಣ ಕರ್ನಾಟಕದ ಸಂಸ್ಕೃತಿ ಪ್ರವಾಹದಲ್ಲಿ ಬೆಳೆದ, ಬೆಳೆಯುತ್ತಿರುವ ತಾಲೂಕು. ಇಲ್ಲಿ ಜನಪದದ ಜೀವಂತಿಕೆ, ಭಕ್ತಿ ಸಾಹಿತ್ಯದ ಝರಿ, ಗ್ರಾಮೀಣ ಸಂಗೀತದ ಲಯ ಮತ್ತು ದೇವಾಲಯ–ದರ್ಗಾಗಳ ವಾಸ್ತುಸೌಂದರ್ಯ.. ಎಲ್ಲವೂ ಸೇರಿ ವಿಶಿಷ್ಟ ಸಾಂಸ್ಕೃತಿಕ ಸ್ವರೂಪವನ್ನು ನಿರ್ಮಿಸಿವೆ. ಡೊಳ್ಳು ಕುಣಿತ, ಕೋಲಾಟದಂತಹ ಜನಪದ ನೃತ್ಯಗಳು ಹಬ್ಬ–ಜಾತ್ರೆಗಳಲ್ಲಿ ಇನ್ನೂ ಜೀವಂತವಾಗಿವೆ. ಅಂತೆಯೇ ಜಾತ್ರೆಗಳು, ಊರಹಬ್ಬಗಳು ಜನಪದಕಲೆಯ ವೇದಿಕೆಗಳಾಗಿವೆ. ಡೊಳ್ಳು, ಚಂಡೆಮದ್ದಳೆ, ತಾಳಗಳ ಲಯ ಜನಪದ ಸಂಗೀತಕ್ಕೆ ಶಕ್ತಿ ನೀಡುತ್ತದೆ. ಭಜನಾ ಮಂಡಳಿಗಳು ಹಾಗೂ ದಾಸಪದಗಳ ಗಾಯನ ಭಕ್ತಿಭಾವವನ್ನು ಗಾಢಗೊಳಿಸಿದರೆ, ಸೂಫಿ ಪರಂಪರೆಯ ಕವ್ವಾಲಿ ಕಾರ್ಯಕ್ರಮಗಳು ಧರ್ಮಸೌಹಾರ್ದದ ಸಂಕೇತವಾಗಿವೆ. ಲಂಬಾಣಿ ಪರಂಪರೆ, ಕಸೂತಿ ಮತ್ತು ಗ್ರಾಮೀಣ ಕೈಗಾರಿಕೆಗಳು ಸ್ಥಳೀಯ ಸೌಂದರ್ಯವನ್ನು ಪ್ರತಿಬಿಂಬಿಸುತ್ತವೆ. ಇಲ್ಲಿಯ ಸಾಹಿತ್ಯದಲ್ಲಿ ವಚನ-ಭಕ್ತಿಧಾರೆಯ ಪ್ರಭಾವದಿಂದ ಶರಣ ಸಂವೇದನೆಗಳ ಛಾಯೆ ಎದ್ದು ಕಾಣುತ್ತದೆ. ಇನ್ನೂ ಜನಪದ ಗೀತೆಗಳು ಗ್ರಾಮಜೀವನದ ನೋವು, ನಲಿವುಗಳ ಪರಂಪರೆಗೆ ಕನ್ನಡಿ ಹಿಡಿಯುತ್ತಿವೆ. ಇತ್ತೀಚೆಗೆ ಸ್ಥಳೀಯ ಕವಿಗಳು, ಕಥೆಗಾರರು ಸಾಮಾಜಿಕ ಪ್ರಶ್ನೆಗಳನ್ನು ಕೇಂದ್ರವಾಗಿಟ್ಟುಕೊಂಡು ಬರವಣಿಗೆ ಮಾಡುತ್ತ, ಸಾಹಿತ್ಯಿಕ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರದೇಶದ ದೇವಾಲಯಗಳಲ್ಲಿ ಕಲ್ಯಾಣಿ ಚಾಲುಕ್ಯ–ದ್ರಾವಿಡ–ವಿಜಯನಗರ ಪ್ರಭಾವಗಳ ಮಿಶ್ರಣ ಕಾಣುತ್ತೇವೆ. ಈ ವಾಸ್ತುಶಿಲ್ಪದಲ್ಲಿ ಪ್ರದೇಶದ ಸಂಸ್ಕೃತಿ–ಸಾಮಾಜಿಕ ಸಂಧಿಯ ಜೀವಂತ ಚಿತ್ರಣ ಕಾಣುತ್ತದೆ. ಇವು ಗ್ರಾಮೀಣ ಭಕ್ತಿ, ಶಿಲ್ಪಸೌಂದರ್ಯ ಮತ್ತು ಇತಿಹಾಸದ ಗುರುತುಗಳನ್ನು ಒಟ್ಟುಗೂಡಿಸಿವೆ. ಇವುಗಳು ಕೇವಲ ಪೂಜಾಸ್ಥಳಗಳಲ್ಲ; ಇತಿಹಾಸದ ಕಲ್ಲುಬರಹ, ಭಕ್ತಿಯ ಸ್ಥಿರರೂಪ ಮತ್ತು ಶಿಲ್ಪಕಲೆಯ ಸಾಂದ್ರ ಸ್ಮೃತಿಯಾಗಿವೆ. ದರ್ಗಾ–ಮಸೀದಿಗಳಲ್ಲಿ ಇಸ್ಲಾಮಿಕ್ ಕಮಾನು–ಗುಂಭಜಗಳ ಸೌಂದರ್ಯ ನೋಡುಗರನ್ನು ಆಕರ್ಷಿಸುತ್ತವೆ.

“ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು”ಡಾ. ಮಲ್ಲಿನಾಥ ಎಸ್. ತಳವಾರ Read Post »

ಕಾವ್ಯಯಾನ

ಪ್ರೊ.ಶಕುಂತಲಾ.ಚನ್ನಪ್ಪ. ಸಿಂಧೂರ “ಸಾಂಸ್ಕೃತಿಕ ರಾಯಭಾರಿ”

ಕಾವ್ಯಸಂಗಾತಿ ಪ್ರೊ.ಶಕುಂತಲಾ.ಚನ್ನಪ್ಪ. ಸಿಂಧೂರ “ಸಾಂಸ್ಕೃತಿಕ ರಾಯಭಾರಿ” ಬಡವರ ಬಾಳಿನ ವಿದ್ಯಾದಾತರುಅನಾಥ ಮಕ್ಕಳ ಪಾಲಿನ ಕಲ್ಪವ್ರಕ್ಷರುಅನ್ನ ಅಕ್ಷರ ಜ್ಞಾನ ದಾಸೋಹ ನೇತಾರರುಸಾಂಸ್ಕೃತಿಕ ಕ್ಷೇತ್ರದ ರಾಯಭಾರಿಗಳವರು/೧/ ಮನುಕುಲೋದ್ಧಾರಕ ಹಿತಚಿಂತಕರುಶರಣರ ಸಂದೇಶ ಪರಿಪಾಲಕರುದಯೆ ಮಮತೆ ಕರುಣಾ ಸಾಗರರುಸುತ್ತೂರ ಶ್ರೀ ಮಹಾಶಿವಯೋಗಿಗಳವರು/೨/‘ಅರಿವೆ ಗುರು’ ತತ್ವಾದರ್ಶ ಆರಾಧಕರುಜ್ಞಾನ ದೀಕ್ಷೆ ಸಂಸ್ಕೃತಿ ಹರಿಕಾರರುಸರಳ ಸಾಮಾಜಿಕ ಅಪೂರ್ವ ಸಾಧಕರುಕಾಯಕದಲ್ಲಿ ಕೈಲಾಸ ಕಂಡುಂಡವರು/೩/ಬಡವರೇಳ್ಗೆಗಾಗಿ ಚಿನ್ನಾಭರಣ ತ್ಯಜಿಸಿಹರುನಿರಾಡಂಬರ ನಿಸ್ವಾರ್ಥಕೆ ದಾರಿದೀಪರುಮನುಕುಲದ ವೈರತ್ವ ನಿವಾರಿಸಿಹರುವಿದೇಶಗಳಲ್ಲಿ ಸಾಂಸ್ಕೃತಿಕ ಪರಂಪರೆ ಬಿತ್ತರಿಸಿಹರು/೪/ಬಡತನದ ಬವಣೆಯಲಿ ಬೆಂದವರುನಾಡಿನ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿಹರುಜನ್ಮಶತಮಾನೋತ್ಸವದ ಮಹಾನಾಯಕರುಶ್ರೀ ಶಿವರಾತ್ರಿ ರಾಜೇಂದ್ರ ಪರಮಪೂಜ್ಯರು/೫/ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪಕರುಅಂತಾರಾಷ್ಟ್ರೀಯ ಸಂಘಟನಾ ಚತುರರುಸ್ನೇಹ ವಾತ್ಸಲ್ಯ ಮಮತೆಯ ಸ್ವರೂಪರುಸೂರ್ಯ ಚಂದ್ರರಂತೆ ಆಚಂದ್ರಾರ್ಕರು/೬/ಬಹು ಕ್ಷೇತ್ರ ಅನುಪಮ ಸಾಧಕವರೇಣ್ಯರುಗೌರವ ಡಾಕ್ಟರೇಟ್ ಪದವಿ ಪುರಸ್ಕೃತರುಕನ್ನಡ ನಾಡುನುಡಿಯ ಸೌಭಾಗ್ಯ ದೇವರುವಿಶ್ವಕೆ ಆದರ್ಶಪ್ರಾಯ ಮಹಾನ್ ದಾರ್ಶನಿಕರು/೭/ ಪ್ರೊ.ಶಕುಂತಲಾ.ಚನ್ನಪ್ಪ. ಸಿಂಧೂರ

ಪ್ರೊ.ಶಕುಂತಲಾ.ಚನ್ನಪ್ಪ. ಸಿಂಧೂರ “ಸಾಂಸ್ಕೃತಿಕ ರಾಯಭಾರಿ” Read Post »

ಕಾವ್ಯಯಾನ, ಗಝಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಗಜಲ್ ಒಲವ ಪದಗಳ ಸಾಲಿನಲಿ ಇಳಿಸಿಕವಿತೆ ಆಗಿಸು ಗೆಳೆಯಾಚೆಲುವ ಕವನದ ಭಾವಗಳ ಒಳಗೆಮನವ ಬಾಗಿಸು ಗೆಳೆಯಾ ಬಾಳೆಂಬ ಪುಸ್ತಕದ ಪುಟದಲಿ ಬರೆದುಗೀಚಿದ ಹಾಳೆಗಳು ಅದೆಷ್ಟೋಹೇಳಲು ಮುಜುಗರ ಪಡದಂತೆ ಆತ್ಮವಿಶ್ವಾಸ ತೂಗಿಸು ಗೆಳೆಯಾ ಕಾಲದ ಮಿತಿಯಲಿ ಎಲ್ಲವೂ ಚೆಂದವೇತಿಳಿದಂತೆ ನಡೆಯಬೇಕು ಎಚ್ಚರಬೇಲಿಯ ದಾಟದಂತೆ ವರ್ತುಲವ ಕಟ್ಟಲುಭಯವ ನೀಗಿಸು ಗೆಳೆಯಾ ಹಲವು ವಿಷಯವು ಚರ್ಚೆಗೆ ಗ್ರಾಸವಾಗಿಪರಿಹಾರ ಸಿಗುವುದು ಕಷ್ಟಛಲವು ತುಂಬಿರಲು ಎದೆಯಲಿ ದೃಢನಿರ್ಧಾರ ಸಾಗಿಸು ಗೆಳೆಯಾ ನಿಲುವು ಸ್ಪಷ್ಟವಾಗಿ ಇರಲು ಬದುಕಅಲ್ಲಾಡಿಸಿ ಕಾಡಲು ಅಸಾಧ್ಯಗೆಲುವು ಸಿಗಲು ಮಾಲೆಯ ಹಾಕುತರಾಧೆಯ ಬೀಗಿಸು ಗೆಳೆಯಾ ಅನುರಾಧಾ ರಾಜೀವ್ ಸುರತ್ಕಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್ Read Post »

ಕಾವ್ಯಯಾನ

ಡಾ ಡೋ ನಾ ವೆಂಕಟೇಶ ಕವಿತೆ “ಚಂದ”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಚಂದ” ಮನಸಾರೆ ಕರೆದರೆ ಬರಬೇಕು ಪ್ರೀತಿರೀತಿಗಳ ಮರೆತರೆ ಅಂಜದಿರ ಬೇಕು ನೀನು ನಾನೇ ಆಗಿಮನಸು ನಿನ್ನದಾಗಿ ಒಲವುನಗುವ ಹೂ ಗುಚ್ಛವಾಗ ಬೇಕು ಬೆಳಗಿನ ರವಿಯಾಗ ಬೇಕುರಾತ್ರಿಯ ಹುಣ್ಣಿಮೆಯಬೆಳಕಾಗ ಬೇಕುಏ ಜೀವ, ನೀನಿರ ಬೇಕು.   ತುಡಿತವಾಗಿ ಮಿಡಿಯ ಬೇಕುಹೃದಯದ ಧಾರೆಯಾಗ ಬೇಕು    ಚೆಂದವಾಗಿ ಧುಮ್ಮಿಕ್ಕ ಬೇಕುಅನಂತ ಉಸಿರಾಗಿರ ಬೇಕು ಪ್ರೀತಿ  ನಲಿಯುತ್ತಿರ ಬೇಕು! ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ ಕವಿತೆ “ಚಂದ” Read Post »

ಕಾವ್ಯಯಾನ, ಗಝಲ್

ಜಯಂತಿ ಸುನಿಲ್ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್ ಗಜಲ್ ಕಾಲ ಎಲ್ಲವನ್ನೂ ಮರೆಸಿತು ನಿನ್ನ ನೆನಪೊಂದನು ಬಿಟ್ಟುಕಾಲ ಎಲ್ಲಾ ನೋವನ್ನು ಅಳಿಸಿತು ನೀ ಮಾಡಿದ ಗಾಯವೊಂದನು ಬಿಟ್ಟು..!! ಯುಗವುರಳಿ ಭಿನ್ನ ಮುಖ ಕಣ್ಣ ಮುಂದೆ ಚಲಿಸುತ್ತಿವೆ ಒಂದೊಂದೇಕಾಲ ಕಸದರಾಶಿಯಲೂ ಹೂ ಅರಳಿಸಿತು ನನ್ನ ಪಾಲಿನ ಹೂವೊಂದನು ಬಿಟ್ಟು!! ಮೊದಲಿಲ್ಲದ ಕೊನೆ,ಕೊನೆಯಿಲ್ಲದ ಮೊದಲು  ಒಂಟಿತನಕೆ ನಾಂದಿ ಬಯಸವುಕಾಲ ಎಲ್ಲಾ ಕಲಿಸಿತು ನನ್ನ ನೆರಳಿಗೆ ನಗಿಸುವುದೊಂದನು ಬಿಟ್ಟು!! ಈ ಶೋಕ ಒಂದು ಗಳಿಗೆಯದ್ದಲ್ಲಾ ಇಡೀ ಜೀವಮಾನದ್ದಾಯ್ತುಕಾಲ ಕಂಬನಿ ನಿಲ್ಲಿಸೆಂದಿತು ರಕ್ತ ಒಸರುವುದೊಂದನು ಬಿಟ್ಟು!! ಖಾಲಿತನದ ಹೆಜ್ಜೆ ಅನುಕಂಪದ ಪೆಟ್ಟಿಗೆಗೆ ಸರಿಯಬಹುದೆಂದುಕೊಂಡೆಕಾಲ ಛಿದ್ರ ಹಳಿಗಳನು ಒಂದುಗೂಡಿಸಿತು ಹಾದಿ ತಪ್ಪಿದ ಪ್ರೀತಿಯೊಂದನು ಬಿಟ್ಟು!! ಪ್ರೀತಿಯೆಂಬ ಪುಸ್ತಕದಿ ಉಳಿದಿದ್ದು ಹೆಸರೇ ಇಲ್ಲದ ನಾನು, ನೀನುಕಾಲ ಎಲ್ಲವನ್ನೂ ಉಳಿಸಿತು ನಿನ್ಹೆದೆಯಲಿ ನನ್ಹೆಸರೊಂದನು ಬಿಟ್ಟು!! ಕತ್ತಲು ಕನಸುಗಳ ನಡುವೆ ಮೌನ ಹೊದಿಕೆ ಹೊದ್ದು ಜಯವನ್ನು ಬೇಡಿದಾಗಕಾಲ ಕೊನೆಗೂ ಕನಿಕರಿಸಿತು ಸಾವೊಂದನು ಬಿಟ್ಟು!! ಜಯಂತಿ ಸುನಿಲ್

ಜಯಂತಿ ಸುನಿಲ್ ಅವರ ಗಜಲ್ Read Post »

ಕಾವ್ಯಯಾನ

ಜಯಂತಿ ಕೆ ವೈ ಕವಿತೆ “ಜಗದ ವ್ಯಾಪಾರ”

ಕಾವ್ಯ ಸಂಗಾತಿ ಜಯಂತಿ ಕೆ ವೈ ಕವಿತೆ “ಜಗದ ವ್ಯಾಪಾರ” ಬದುಕಿನ ಯಾವುದೋಮೂಲೆಯಲ್ಲಿ ಅಡಗಿದ್ದ ಸಂತಸಕ್ಕೆಹಿಗ್ಗೋ ಹಿಗ್ಗು!ಯಾರ ಕೈಗೂ ಸಿಗದ ಹಾಗೆಕದ್ದು ಕುಳಿತು ಬೀಗುತಿತ್ತು!ದುಃಖವೊಂದು ಸುಖವನರಸಿಹಿಂಬಾಲಿಸುತ್ತಿತ್ತುನಗುವಿಗೆ ನೋವಿನ ಕಡಿವಾಣವಿತ್ತುನಗುವ ಕಿತ್ತುಕೊಂಡ ನೋವಿಗೆಹಬ್ಬದ ಸಂಭ್ರಮ!ನೋವಿಗೆ ನಗುವಿನ ಬಯಕೆದುಃಖಕೆ ಸುಖದ ಕನಸುಬಿಟ್ಟೂ ಬಿಡಲಾಗದ ಸಖ್ಯ!!ಅವ್ಯಕ್ತ ಭಾವವೊಂದು ಸದಾಕಾಡುವಾಗ ನೆಮ್ಮದಿಗೆಲ್ಲಿ ತಾಣ?ಅಂತರಂಗದ ವೇದಿಕೆಯಲಿನೊವು-ನಲಿವು, ಸುಖ-ದುಃಖಗಳಭೂತದ ಕೋಲಗಳ ಕುಣಿತನಡುವೆಯೇ ಸಜ್ಜಾಯಿತುಜಗದ ವ್ಯಾಪಾರಕೆನಗುವಿನ ಮುಖವಾಡ! ಜಯಂತಿ ಕೆ ವೈ

ಜಯಂತಿ ಕೆ ವೈ ಕವಿತೆ “ಜಗದ ವ್ಯಾಪಾರ” Read Post »

ಕಾವ್ಯಯಾನ

ಮಧುಮಾಲತಿರುದ್ರೇಶ್ ಬೇಲೂರು ಅವರ ಟಂಕಗಳು

ಕಾವ್ಯ ಸಂಗಾತಿ ಮಧುಮಾಲತಿರುದ್ರೇಶ್ ಟಂಕಗಳು ಬಣ್ಣ ಬಣ್ಣದಚಿಟ್ಟೆಯಂತೆ ಮನವುಹೊಸತನಕೆಸದಾ ಹಾತೊರೆವುದುಇರಲೆಮಗೆ ತಾಳ್ಮೆ 2)ಸಂಪತ್ತು ನಗುಮೊಗವೇವ್ಯಕ್ತಿತ್ವದ ಸಂಪತ್ತುನಗುನಗುತನೋವು ನಲಿವ ನುಂಗಿಬದುಕಬೇಕು ನಾವು 3)ಸುಪ್ರಭಾತ ಬಾನಂಚಿನಲ್ಲಿರವಿಯ ಹೊಂಗಿರಣಉಷೆ ಮೂಡಲುಹಕ್ಕಿಗಳ ನಿನಾದಸುಪ್ರಭಾತ ಕಿವಿಗೆ 4)ತುಂಗಭದ್ರ ಕನ್ನಡ ನಾಡುನದಿಗಳ ಬೀಡಿದುತುಂಗಭದ್ರೆಯುಜೀವ ಜೀವದುಸಿರುಹಸಿರಧಾತೆ ಈಕೆ 5)ಸಂತೋಷ ಸ್ವಾರ್ಥ ದುರಾಸೆತೊರೆದರೆ ಮನುಜನಿತ್ಯ ಸಂತೋಷಿಆತ್ಮ ತೃಪ್ತಿಯೇ ಸುಖಬದುಕು ಬಂಗಾರವು ಮಧುಮಾಲತಿರುದ್ರೇಶ್

ಮಧುಮಾಲತಿರುದ್ರೇಶ್ ಬೇಲೂರು ಅವರ ಟಂಕಗಳು Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ‌ ಅವರ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ‌ ಗಜಲ್ ಪ್ರೇಮ ನಶೆಯ ಮದಿರೆ ಏರಿದರಲ್ಲೆಯ ನಿದಿರೆಒಲವಿನುಯ್ಯಾಲೆಯಲಿ ತೂಗುತಲಿದ್ದರೆಲ್ಲಿಯ ನಿದಿರೆ ಕಳವಳದಲ್ಲಿ ಜೀವ ಕುಸುಮ ಮಂಪರಿಸುತ ಕಂಪನಪ್ರೀತಿಯ ಮಾಯೆಯಲಿ ಮೈಮರೆತರೆಲ್ಲಿಯ ನಿದಿರಿ ಹಗಲಿರುಳು ಹಂಬಲದ ಕೊಳದಿ ಅಲೆಗಳ ನಿಲ್ಲದ ಶಬ್ದಅಪ್ಪುಗೆಯಾಲಿಂಗನಕೆ ಕಾಯುತದಲಿದ್ದರೆಲ್ಲಿಯ ನಿದಿರೆ ಬಿಸಿಯುಸಿರು ಧಗೆಯಲಿ ದೇಹ ಧಗಧಗಿಸುವ ನೋವುಕನಸುಗಳ ಹಾಸಿ ಹೊತ್ತು ಮಲಗಿದರೆಲ್ಲಿಯ ನಿದಿರೆ ನೆನಪಿನಲೆಯ ಕೋಲಾಹಲ ತಾಳಲಾರದ ಸಿಹಿ ಸಂಕಟಕಣ್ಣ ಕೊಳದಲಿ ನೆಟ್ಟ ಚಿತ್ರ ಮಾಸದಿರೆಲ್ಲಿಯ ನಿದಿರೆ ಮನ ಮಂದಾರ ಬಿರಿಯುವ ಸಂಕಟ ಕಾತುರದ ಕೌತುಕಜೀವ ಕುಸುಮ ರವಿಗಾಗಿ ಕಾಯುತಲ್ಲಿದ್ದರೆಲ್ಲಿಯ ನಿದಿರೆ ಅನುರಾಗದಲೆಯಲಿ ಅನು ಕೊಚ್ಚಿ ಹೋಗುತಿಹಳು ತಾಳದೇರಾಗಕೆ ತಾಳ ಬೆರೆಸಲು ದುಂಬಿ ಬರದಿದ್ದರೆಲ್ಲಿಯ ನಿದಿರೆ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ‌ ಅವರ ಗಜಲ್ Read Post »

gaade
ನಿಮ್ಮೊಂದಿಗೆ

ಗಾದೆ ಸಂಗಾತಿ ಗಾದೆಗಳ ವಿಶ್ಲೇಷಣೆ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ನಾಯಿ ಮೊಲೇಲಿ ಖಂಡುಗ ಹಾಲಿದ್ರೇನು? ನಾಯಿ ಮೊಲೇಲಿ ಖಂಡುಗ ಹಾಲಿದ್ರೇನು? ಈ ಮಾತು ಅತ್ಯಂತ ಹರಿತವಾದ ಮತ್ತು ಅರ್ಥಗರ್ಭಿತವಾದ ಜಾನಪದ ಗಾದೆ ಮಾತು. ಮೇಲ್ನೋಟಕ್ಕೆ ಇದು ಸ್ವಲ್ಪ ಕಠಿಣವಾಗಿ ಕಂಡರೂ, ಇದು ಸಮಾಜದ ಒಂದು ಕಹಿ ಸತ್ಯವನ್ನು ಮತ್ತು “ಅನರ್ಹತೆ”ಯನ್ನು ಕುರಿತು ಮಾತನಾಡುತ್ತದೆ.​ಗಾದೆಗಳು ಅನುಭವದ ಹೂರಣಗಳು. ಖಂಡುಗ ಎನ್ನುವುದು ಹಳೆಯ ಕಾಲದ ಒಂದು ಅಳತೆಗೋಲು. (ಸುಮಾರು ೮೦ ಸೇರು ಅಥವಾ ಹೆಚ್ಚಿನ ಪ್ರಮಾಣ) ನಾಯಿಯ ಹಾಲಿನಲ್ಲಿ ಎಷ್ಟೇ ಪೌಷ್ಟಿಕಾಂಶವಿದ್ದರೂ ಅಥವಾ ಅದು ಎಷ್ಟೇ ಹೇರಳವಾಗಿದ್ದರೂ (ಖಂಡುಗದಷ್ಟು), ಅದನ್ನು ಮನುಷ್ಯರು ಬಳಸಲು ಸಾಧ್ಯವಿಲ್ಲ. ಈ ಲೋಕಾನುಭವದ ಹಿನ್ನೆಲೆಯಲ್ಲಿ ಹುಟ್ಟಿದ್ದೇ ಈ ಗಾದೆ.​ಯಾವುದೇ ಒಂದು ವಸ್ತು ಅಥವಾ ಸಂಪತ್ತು ಎಷ್ಟು ದೊಡ್ಡದಾಗಿದೆ ಎನ್ನುವುದಕ್ಕಿಂತ, ಅದು ಯಾರ ಕೈಯಲ್ಲಿದೆ ಮತ್ತು ಯಾರಿಗೆ ಉಪಯುಕ್ತವಾಗಿದೆ ಎನ್ನುವುದು ಮುಖ್ಯ.​ನಾಯಿಯ ಹಾಲು ಅದರ ಮರಿಗಳಿಗೆ ಮಾತ್ರ ಸೀಮಿತ. ಅದು ಮನುಷ್ಯನ ಬಳಕೆಗೆ ಬರುವುದಿಲ್ಲ.​ಹಾಗೆಯೇ, ಅಯೋಗ್ಯನ ಬಳಿ ಇರುವ ಅಗಾಧವಾದ ಸಂಪತ್ತು ಅಥವಾ ಜ್ಞಾನ ಸಮಾಜಕ್ಕೆ ಯಾವುದೇ ಪ್ರಯೋಜನ ನೀಡುವುದಿಲ್ಲ. ಅದು ಇದ್ದೂ ಇಲ್ಲದಂತೆ.​ಲೋಭಿ ಅಥವಾ ಅಯೋಗ್ಯನ ಬಳಿಯಿರುವ ಸಂಪತ್ತು​ಈ ಗಾದೆಯನ್ನು ಮುಖ್ಯವಾಗಿ ಎರಡು ಸಂದರ್ಭಗಳಲ್ಲಿ ಬಳಸಲಾಗುತ್ತದೆ.​ಲೋಭಿಯ ಸಂಪತ್ತುಒಬ್ಬ ವ್ಯಕ್ತಿಯ ಬಳಿ ಕೋಟ್ಯಂತರ ರೂಪಾಯಿ ಹಣವಿರಬಹುದು. ಆದರೆ ಆತ ಅದನ್ನು ತಾನೂ ಅನುಭವಿಸದೆ, ಇತರರಿಗೂ ದಾನ ಮಾಡದೆ ಬಚ್ಚಿಟ್ಟರೆ, ಆ ಸಂಪತ್ತು “ನಾಯಿ ಮೊಲೆಯ ಹಾಲಿನಂತೆ”. ಅದು ಯಾರಿಗೂ ಹಸಿವು ನೀಗಿಸದು.​ಅವಿದ್ಯಾವಂತನ ಅಥವಾ ದುಷ್ಟನ ಕೈಯ ಅಧಿಕಾರಒಬ್ಬ ಕೆಟ್ಟ ವ್ಯಕ್ತಿಯ ಕೈಗೆ ದೊಡ್ಡ ಅಧಿಕಾರ ಸಿಕ್ಕಾಗ, ಆ ಅಧಿಕಾರದಿಂದ ಜನಸಾಮಾನ್ಯರಿಗೆ ಯಾವುದೇ ಒಳ್ಳೆಯದಾಗುವುದಿಲ್ಲ. ಆ ಅಧಿಕಾರ ಆತನ ಸ್ವಾರ್ಥಕ್ಕೆ ಬಳಕೆಯಾಗುತ್ತದೆಯೇ ಹೊರತು ಸಮಾಜದ ಹಿತಕ್ಕಲ್ಲ.​ದಾನವನ್ನು ನೀಡುವಾಗ “ಪಾತ್ರ ನೋಡಿ ದಾನ ಮಾಡು” ಎನ್ನುತ್ತಾರೆ. ಹಾಗೆಯೇ ಫಲವನ್ನು ನಿರೀಕ್ಷಿಸುವಾಗ ಅದು ಎಲ್ಲಿಂದ ಬರುತ್ತಿದೆ ಎಂದು ನೋಡಬೇಕು. ನಾಯಿಯ ಹಾಲಿನಿಂದ ಮೊಸರು, ಬೆಣ್ಣೆ ಅಥವಾ ತುಪ್ಪವನ್ನು ಮಾಡಲು ಸಾಧ್ಯವಿಲ್ಲ. ಅಂದರೆ, ಮೂಲವೇ ಅಶುದ್ಧ ಅಥವಾ ಅಯೋಗ್ಯವಾಗಿದ್ದಾಗ ಅದರಿಂದ ಬರುವ ಉಪಫಲಗಳು ಕೂಡ ನಿಷ್ಪ್ರಯೋಜಕವಾಗುತ್ತವೆ. ಒಬ್ಬ ವ್ಯಕ್ತಿ ತುಂಬಾ ಓದಿ ದೊಡ್ಡ ವಿದ್ವಾಂಸನಾಗಿರಬಹುದು. ಆದರೆ ಆತನಲ್ಲಿ ಸಂಸ್ಕಾರವಿಲ್ಲದಿದ್ದರೆ, ಆತ ತನ್ನ ಜ್ಞಾನವನ್ನು ಇತರರಿಗೆ ಹಂಚದಿದ್ದರೆ ಆ ವಿದ್ಯೆ ವ್ಯರ್ಥ. ಅದು “ನಾಯಿ ಮೊಲೆಯ ಖಂಡುಗ ಹಾಲಿನಂತೆ”. “ನಾಯಿ ಮೊಲೇಲಿ ಖಂಡುಗ ಹಾಲಿದ್ರೇನು?” ಎಂಬ ಗಾದೆಯ ಆಳಕ್ಕೆ ಹೋದಂತೆ ನಮಗೆ ಇನ್ನೂ ಹತ್ತಾರು ಸಾಮಾಜಿಕ ಮತ್ತು ತಾತ್ವಿಕ ಸತ್ಯಗಳು ದರ್ಶನವಾಗುತ್ತವೆ.​ಒಂದು ವಸ್ತುವು ಅಮೂಲ್ಯವಾಗಿದ್ದರೂ ಅದು ಇರುವ ಸ್ಥಾನವು ಮೇಲ್ತರದಲ್ಲಿರುತ್ತದೆ. ಅಯೋಗ್ಯವಾಗಿದ್ದರೆ ಅದರ ಬೆಲೆ ಶೂನ್ಯವಾಗಿರುತ್ತದೆ.​ಹಸುವಿನ ಹಾಲು ಪಾತ್ರೆಯಲ್ಲಿ ಮೊಸರಾಗಿ, ಮಂಥನಗೊಂಡರೆ ಬೆಣ್ಣೆಯಾಗಿ, ಕಾಯಿಸಿದರೆ ತುಪ್ಪವಾಗಿ ದೇವರಿಗೆ ನೈವೇದ್ಯವಾಗುತ್ತದೆ.ಮತ್ತು ಉಣ್ಣಲು ಅಮೃತವಾಗಿರುತ್ತದೆ.​ಆದರೆ ನಾಯಿಯ ಹಾಲು ಎಷ್ಟೇ ಇದ್ದರೂ ಅದು ಸಂಸ್ಕರಣೆಗೆ ಒಳಗಾಗುವುದಿಲ್ಲ.ಸಮಾಜದಲ್ಲಿ ಕೆಟ್ಟ ಗುಣವುಳ್ಳ ವ್ಯಕ್ತಿ ಎಷ್ಟೇ ದೊಡ್ಡ ಪದವಿ ಅಥವಾ ಸಂಪತ್ತನ್ನು ಹೊಂದಿದ್ದರೂ, ಆತನಿಂದ ಸಾತ್ವಿಕ ಅಥವಾ ಮೌಲ್ಯಯುತವಾದ ಕೆಲಸಗಳು ಸಾಧ್ಯವಿಲ್ಲ. ಮೂಲದ ‘ಗುಣ’ವು ಫಲದ ‘ಉಪಯುಕ್ತತೆ’ಯನ್ನು ನಿರ್ಧರಿಸುತ್ತದೆ.​ಸಮಾಜಮುಖಿ​ಸಂಪತ್ತು ಮತ್ತು ಜ್ಞಾನ ಇರುವುದು ಹಂಚುವುದಕ್ಕಾಗಿ. ಹಂಚದ ಜ್ಞಾನ ಮತ್ತು ದಾನ ಮಾಡದ ಹಣ ಹೊರೆಯಷ್ಟೇ.​ನಾಯಿಯ ಹಾಲು ಒಂದು ಹಾಂಡೆದಷ್ಟು (ಅಪಾರ ಪ್ರಮಾಣ) ಇದ್ದರೂ ಅದರಿಂದ ಪಾಯಸ ಮಾಡಲು ಸಾಧ್ಯವಿಲ್ಲ, ಅತಿಥಿಗಳಿಗೆ ನೀಡಲು ಸಾಧ್ಯವಿಲ್ಲ.​ನಮ್ಮ ಸಮಾಜದಲ್ಲಿ ಕೆಲವರು ಅಪಾರ ಜ್ಞಾನದ ಭಂಡಾರವನ್ನು ಹೊಂದಿದ್ದರೂ ಅದನ್ನು ಇತರರಿಗೆ ಕಲಿಸುವುದಿಲ್ಲ ಅಥವಾ ಸಮಾಜದ ಹಿತಕ್ಕೆ ಬಳಸುವುದಿಲ್ಲ. ಅಂತಹ ‘ಸ್ವಾರ್ಥಿ ಜ್ಞಾನ’ವು ನಾಯಿ ಮೊಲೆಯ ಹಾಲಿನಷ್ಟೇ ನಿಷ್ಪ್ರಯೋಜಕ. ಶ್ರೇಷ್ಠತೆಯು ಇರುವುದು ‘ವ್ಯಾಪ್ತಿ’ಯಲ್ಲಲ್ಲ, ಅದರ ‘ಹಂಚಿಕೆ’ಯಲ್ಲಿ.​ಶ್ರೀಮಂತಿಕೆ ಎಂಬುದು ಕೇವಲ ಹಣವಲ್ಲ, ಅದು ಮನಸ್ಸಿನ ಗುಣ.​ಒಬ್ಬ ದುಷ್ಟ ವ್ಯಕ್ತಿ ಅನ್ಯಾಯ ಮಾರ್ಗ ಹಿಡಿದು ಅಥವಾ ಅಡ್ಡದಾರಿಯಲ್ಲಿ ಕೋಟ್ಯಂತರ ರೂಪಾಯಿ ಗಳಿಸಬಹುದು. ಆದರೆ ಆತನಲ್ಲಿ ಸಂಸ್ಕಾರವಿಲ್ಲದಿದ್ದರೆ ಆ ಹಣ ವ್ಯಭಿಚಾರಕ್ಕೋ, ಮೋಜು-ಮಸ್ತಿಗೋ ವ್ಯಯವಾಗುತ್ತದೆಯೇ ಹೊರತು ಧರ್ಮಕಾರ್ಯಕ್ಕಲ್ಲ.​ಇದನ್ನು ನಮ್ಮ ಜನಪದರು “ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ” ಎನ್ನುವ ಅರ್ಥದಲ್ಲೂ ನೋಡುತ್ತಾರೆ.ಅಯೋಗ್ಯನ ಕೈಲಿರುವ ಅಮೂಲ್ಯ ವಸ್ತು ಆ ವಸ್ತುವಿನ ಗೌರವವನ್ನೇ ಕುಂದಿಸುತ್ತದೆ. ​ಕೆಲವರಲ್ಲಿ ಅದ್ಭುತವಾದ ಪ್ರತಿಭೆ ಇರುತ್ತದೆ (ಉದಾಹರಣೆಗೆ: ಉತ್ತಮ ಕಂಠಸಿರಿ ಅಥವಾ ಕಲಾ ಕೌಶಲ), ಆದರೆ ಅವರು ಅದನ್ನು ಲೋಕಕ್ಕೆ ತೋರಿಸದೆ ಅಥವಾ ಸದುಪಯೋಗ ಪಡಿಸಿಕೊಳ್ಳದೆ ಸೋಮಾರಿತನದಿಂದ ಮನೆಯಲ್ಲೇ ಕುಳಿತಿದ್ದರೆ, ಆ ಪ್ರತಿಭೆಯು ಖಂಡುಗ ಹಾಲಿದ್ದರೂ ಬಳಕೆಯಾಗದ ಸ್ಥಿತಿಯನ್ನೇ ಸೂಚಿಸುತ್ತದೆ.​ಅಂತರಂಗ ಶುದ್ಧವಿಲ್ಲದವನು ಮಾಡುವ ಜಪ-ತಪಗಳು ಕೂಡ ಇದೇ ಸಾಲಿಗೆ ಸೇರುತ್ತವೆ.​ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ಇಟ್ಟುಕೊಂಡು, ಹೊರಗೆ ಸಾವಿರ ಬಾರಿ ದೇವರ ನಾಮ ಸ್ಮರಿಸಿದರೂ ಅದು ಭಕ್ತಿಯಾಗದು.​ಭಕ್ತಿಯು ‘ಹಸುವಿನ ಹಾಲಿನಂತೆ’ ನಿರ್ಮಲವಾಗಿರಬೇಕು. ಕಪಟ ಭಕ್ತಿಯು ,ನಾಯಿ ಮೊಲೆಯ ಹಾಲಿನಂತೆ ಅಶುದ್ಧ ಎಂಬುದು ಶರಣರ ನಿಲುವೂ ಹೌದು.​ಅಯೋಗ್ಯನಿಗೆ ನೀಡಿದ ಅಧಿಕಾರವು ದೇಶದ ಪಾಲಿಗೆ ಶಾಪ. ​ಸಂಪತ್ತು ಮನುಷ್ಯನ ಅಹಂಕಾರವನ್ನು ಬೆಳೆಸಬಾರದು ಸಮಾಜದ ಹಸಿವನ್ನು ನೀಗಿಸಬೇಕು ಗುಣವಿಲ್ಲದವನ ಜ್ಞಾನವು ಕತ್ತಲೆಯಲ್ಲಿ ಹಿಡಿದ ದೀವಟಿಗೆಯಂತೆ ತನಗೂ ಬೆಳಕಿಲ್ಲ ಇತರರಿಗೂ ದಾರಿಯಿಲ್ಲ ​ಒಟ್ಟಾರೆಯಾಗಿ ಹೇಳುವುದಾದರೆ, ಒಂದು ವಸ್ತುವಿನ ಬೆಲೆ ಅದರ ಪ್ರಮಾಣದಲ್ಲಿಲ್ಲ, ಅದರ “ಬಳಕೆ” ಮತ್ತು “ಯೋಗ್ಯತೆ”ಯಲ್ಲಿದೆ. ಸಮಾಜಕ್ಕೆ ಉಪಕಾರವಾಗದ ಸಂಪತ್ತು, ಜನರಿಗೆ ಸ್ಪಂದಿಸದ ಅಧಿಕಾರ ಮತ್ತು ಹಂಚದ ಜ್ಞಾನ ಎಲ್ಲವೂ ವ್ಯರ್ಥ ಎಂದು ಈ ಗಾದೆ ನಮಗೆ ಎಚ್ಚರಿಸುತ್ತದೆ. ನಾವು ಗಳಿಸುವ ಸಂಪತ್ತು ಅಥವಾ ಜ್ಞಾನವು ಹಸುವಿನ ಹಾಲಿನಂತೆ ಎಲ್ಲರಿಗೂ ಲಭ್ಯವಾಗಿ, ಎಲ್ಲರಿಗೂ ಶಕ್ತಿಯನ್ನು ನೀಡುವಂತಿರಬೇಕು. ಶರಣಪ್ಪ ತಳ್ಳಿ ಕುಪ್ಪಿಗುಡ್ಡ

Read Post »

ಕಾವ್ಯಯಾನ

ಡಾ. ದಾನಮ್ಮ ಝಳಕಿ “ಹೊಳೆಸಾಲು ಬಳ್ಳಿ”

ಕಾವ್ಯ ಸಂಗಾತಿ ಡಾ. ದಾನಮ್ಮ ಝಳಕಿ “ಹೊಳೆಸಾಲು ಬಳ್ಳಿ” ಹೊಳೆಸಾಲ ಬಳ್ಳಿ ಚೆಂದಹಳ್ಳಿಯ ನೆಲ ಅಂದಮಣ್ಣಿನ ವಾಸನೆಯ ಕಂಪುಬಲು ಚೆಂದ ಕೇಳವ್ವ ಹಸಿರು‌ ಬೊಟ್ಟಿನ ಸೀರೆಅಚ್ಚ ಕೆಂಪಿನ ಬಳೆತೊಟ್ಟಾಳ ನನ್ನವ್ವನಿಂತಾಳ ಬಳ್ಳಿಯಲಿ ಪುಂಡಿಯ ಪಲ್ಲೆಯಲಿಬಳ್ಳೊಳ್ಳಿ ಕಾರದಲಿಎಣ್ಣೆ  ಉಳ್ಳಾಗಡ್ಡಿ ರುಚಿ ಚೆಂದಹೊಳೆಸಾಲ ಬಳ್ಳಿಯಲಿ ಹೊಳೆಸಾಲ ಬಳ್ಳಿಯಲಿ ಬಣ್ಣಬಣ್ಣದ ಹೂಗಳುನಮ್ಮವ್ವ ಮುಡಿದ ಮಲ್ಲಿಗೆ ಹೂ ಚೆಂದಹಣಿಯಲಿ ವಿಭೂತಿ ಕೆಂಪುಬೊಟ್ಟಿನ ಗಂದಹೊಳೆಸಾಲದಬಳ್ಳಿಯಲಿ ನಮ್ಮವ್ವನ ಕಳೆ ಚೆಂದ ಡಾ. ದಾನಮ್ಮ ಝಳಕಿ

ಡಾ. ದಾನಮ್ಮ ಝಳಕಿ “ಹೊಳೆಸಾಲು ಬಳ್ಳಿ” Read Post »

You cannot copy content of this page

Scroll to Top