ಹೆಚ್. ಎಸ್.ಪ್ರತಿಮಾ ಹಾಸನ್ ರವರ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪೂರ್ಣಿಮಾ ರಾಜೇಶ್(ಬಸು ಮಲ್ಕಿ)
ಪುಸ್ತಕ ಸಂಗಾತಿ ಪೂರ್ಣಿಮಾ ರಾಜೇಶ್(ಬಸು ಮಲ್ಕಿ) ಹೆಚ್. ಎಸ್.ಪ್ರತಿಮಾ ಹಾಸನ್ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪ್ರತಿ ಬೋಧಪುಸ್ತಕದ ಪ್ರಥಮ ಮುದ್ರಣ-2024ಪುಸ್ತಕದ ಮುಖಪುಟ ವಿನ್ಯಾಸ –ಪ್ರಕಾಶನ -ಅನ್ನಪೂರ್ಣ ಪಬ್ಲಿಷಿಂಗ್ ಹೌಸ್.ಪುಸ್ತಕದ ಬೆಲೆ-250 ರೂ.ಪುಟಗಳ ಸಂಖ್ಯೆ-224ಮುನ್ನುಡಿ -ಖ್ಯಾತ ಹಿರಿಯ ಸಾಹಿತಿಗಳಾದ ಶ್ರೀ.ಹರಿನರಸಿಂಹ ಉಪಾಧ್ಯಾಯ ಅವರು ಈ ಲೇಖನ ಸಂಕಲನ ಕೃತಿಗೆ ಸೊಗಸಾದ ಮುನ್ನುಡಿಯನ್ನು ಬರೆದು ಶುಭ ಕೋರಿರುವರು ಇತ್ತೀಚಿಗೆ ಎಲ್ಲೆಡೆಯೂ ರಾಜ್ಯದ್ಯಂತ ಹೆಸರು ಮಾಡುತ್ತಾ ಶತಕಕ್ಕಿಂತ ಹೆಚ್ಚಿನ ಪ್ರಶಸ್ತಿಯನ್ನು ಪಡೆದಂತಹ ಹೆಮ್ಮೆಯ ಹಾಸನದ ಮೂಲದವರಾದ ಹಾಸನದ ಹೆಮ್ಮೆಯ ಪುತ್ರಿ ಶ್ರೀಮತಿ ಹೆಚ್ ಎಸ್ ಪ್ರತಿಮಾ ಹಾಸನ್ ರವರುಮುಕ್ತಕ ಕವಯಿತ್ರಿ, ಶಿಕ್ಷಕಿ, ಸಮಾಜ ಸೇವಕಿ, ಸಂಘಟಕಿ, ಪತ್ರಕರ್ತೆ, ಅಂಕಣಗಾರ್ತಿ, ಸಾಮಾಜಿಕ ಚಿಂತಕಿ, ಗಾಯಕಿ, ಸಾಹಿತಿ, ಬರಹಗಾರ್ತಿ,ಯಾಗಿ ಅಷ್ಟೇ ಅಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಜಿಲ್ಲೆ ಹಾಗೂ ರಾಜ್ಯ ಘಟಕಗಳಲ್ಲಿ ಪದಾಧಿಕಾರವನ್ನು ಪಡೆದು ಕಾರ್ಯ ಕಾರ್ಯನಿರ್ವಹಿಸುತ್ತಾ ‘ ಬಹುಮುಖ ಪ್ರತಿಭೆ ‘ ಯಾಗಿ ಹೊರಹೊಮ್ಮಿದ್ದಾರೆ. ಇವರ ಬಹುಮುಖ ಪ್ರತಿಭೆಯನ್ನು ಕಂಡಾಗ ಉದಿಸಿ ಬಂದ ನುಡಿಗಳು ಹಲವಾರು.” ಆಗದು ಎಂಬ ಕಾರ್ಯವ ಆಗುವುದೆಂಬುದನ್ನು ತೋರಿದವಳು ಎಲ್ಲೆಡೆಯೂ ಪ್ರಸಿದ್ಧಿಯಾದವಳು ಇಂದಿನ ಪೀಳಿಗೆಗೆ ಪ್ರೇರಣೆಯಾಗಿರುವಳು ಸದಾ ಕಾಲ ಸಮಾಜದ ಏಳಿಗೆಗಾಗಿ ತುಡಿಯುವಂತಹ ಹೃದಯವ ಹೊಂದಿರುವ ಮಹಿಳಾ ಸಾಧಕಿ ಇವಳು “ಇವರ ಸಾಹಿತ್ಯ ಲೋಕದಲ್ಲಿನ ಸೇವೆಯು ಇವರಿಂದ 11 ಕೃತಿಗಳು ಸಾಹಿತ್ಯ ಲೋಕಕ್ಕೆ ಲೋಕಾರ್ಪಣೆಗೊಂಡಿದೆ. ಅದರಲ್ಲಿ ಪ್ರತಿ ಬೋಧವೂ ಒಂದು 224 ಪುಟಗಳನ್ನು ಒಳಗೊಂಡಿದೆ. 250 ರೂಪಾಯಿಯಾಗಿದ್ದು. ಬೆನ್ನುಡಿಯನ್ನು ಪ್ರೋ. ಸಮತಾ ದೇಶ ಮಾನೆ ರವರು ಬರೆದಿದ್ದು ಪ್ರೋತ್ಸಾಹವನ್ನು ನೀಡುತ್ತಾ ಕಾರ್ಯವನ್ನು ಮಾಡಿದ್ದಾರೆ. ಇದು 2024ರ ಆವೃತ್ತಿಯಾಗಿದ್ದು. ಅರ್ಪಣೆಯನ್ನು ತನ್ನ ತಂದೆಯಾದಂತಹ ದಿವಂಗತ ಸುರೇಶ್ ರವರಿಗೂ ತಾಯಿ ನೀಲಮ್ಮ ಸುರೇಶ್ ರವರಿಗೆ ಹಾಗೂ ಅಚ್ಚುಮೆಚ್ಚಿನ ಪ್ರೋತ್ಸಾಹದಾಯಕರಾಗಿ ತನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಅಣ್ಣನಾದ ಶ್ರೀ ಹೆಚ್. ಎಸ್ ಮಂಜುನಾಥ್( ಆರೋಗ್ಯ ನಿರೀಕ್ಷಣಾಧಿಕಾರಿ ) ರವರಿಗೂ ಅರ್ಪಿಸಿದ್ದಾರೆ. ಈ ಕೃತಿಯಲ್ಲಿ ನವಳಗುಳಿದವರು ಆಶಯ ನುಡಿಯ ಮೂಲಕ ಆಶೀರ್ವದಿಸಿದ್ದಾರೆ. ಅತ್ಯಂತ ಮುಖ್ಯವಾಗಿ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದಂತಹ ಶ್ರೀ ಉದಯಕುಮಾರ್ ರವರು ಆಶಯ ನುಡಿಯನ್ನು ಬರೆದಿದ್ದಾರೆ. ಆನಂತರದಲ್ಲಿ ಮನದಾಳದ ಮಾತಿನಲ್ಲಿ ತನ್ನ ಸಾಧನೆಯ ದಾರಿಯಲ್ಲಿ ಅಡೆತಡೆಯನ್ನು ನೀಡಿದಂತಹ ಹಾಗೂ ಪ್ರೋತ್ಸಾಹಿಸಿದಂತಹ ಎಲ್ಲರಿಗೂ ಧನ್ಯವಾದಗಳನ್ನು ಲೇಖಕಿ ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್ ರವರು ತಿಳಿಸಿದ್ದಾರೆ. ನಂತರದಲ್ಲಿ ಮುನ್ನುಡಿಯನ್ನು ಹರಿ ನರಸಿಂಹ ಉಪಾಧ್ಯಾಯರು ಬರೆದಿದ್ದಾರೆ. ಆನಂತರದಲ್ಲಿ ಪರಿವಿಡಿಯಲ್ಲಿ 45 ಲೇಖನಗಳನ್ನು ಒಳಗೊಂಡಂತಹ ಅ ಲೇಖನಗಳಲ್ಲಿ ಕಥೆ, ಪ್ರಸ್ತುತ ದಿನಮಾನಕ್ಕೆ ಹೋಲಿಕೆ ಮಾಡುವಂತಹ ಲೇಖನಗಳು, ಮಂಗಳಮುಖಿಯರ ಬಗ್ಗೆ ಹೀಗೆ ಹಲವಾರು ವಿಚಾರಗಳನ್ನು ಒಳಗೊಂಡಂತಹ ಲೇಖನಗಳು ಇವೆ. ಇದರಲ್ಲಿ ಇರುವಂತಹ ಪ್ರತಿಯೊಂದು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಕನ್ನಡ ಸಾಹಿತ್ಯವು ಇಂದು ಸೊರಗುತ್ತಿದೆ ಎಂಬ ಕೂಗು ಕೇಳಿ ಬರುವ ಹೊತ್ತಿನಲ್ಲಿ ಅದೆಷ್ಟೋ ಕವಿಗಳು, ಕವಯಿತ್ರಿಯರು, ಲೇಖಕ ಲೇಖಕಿಯರು ಕನ್ನಡದಲ್ಲಿ ಬರೆಯುತ್ತಿರುವುದು ಕಂಡು ಬರುತ್ತಿದೆ. ಇದನ್ನು ನೋಡಿದಾಗ ಕನ್ನಡದ ಜನರು ಕನ್ನಡವನ್ನು ಎಂದಿಗೂ ಹಿಂದೆ ಉಳಿಯಲು ಬಿಡುವ ಮಾತೇ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಅದರಂತೆ ಇಂದು ಅನೇಕ ಯುವ ಪ್ರತಿಭೆಗಳು ಬೆಳಕಿಗೆ ಬಂದು ತಮ್ಮ ಸಾಹಿತ್ಯ ಅಭಿರುಚಿಯನ್ನು ತೋರಿಸುತ್ತಿರುವುದು ಹೆಮ್ಮೆಯ ವಿಚಾರ. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಕೃಷಿ ಮಾಡುವಲ್ಲಿ ಹೆಜ್ಜೆ ಹಾಕುವ ಅನೇಕರಲ್ಲಿ ಒಬ್ಬರು ಹಾಸನದ ಶ್ರೀಮತಿ ಪ್ರತಿಮಾ.ಹೆಚ್.ಎಸ್ ರವರು. ಈಗಾಗಲೇ ಹಲವು ಕೃತಿಗಳನ್ನು ಹೊರ ತಂದಿರುವ ಇವರು ಈಗ ಮುಕ್ತಕ ಸಂಕಲನ ಕೃತಿಯನ್ನು ತರುವಲ್ಲಿ ಆಸಕ್ತಿ ತೋರಿರುವುದು ಆ ಸಾಹಿತ್ಯ ಪ್ರಕಾರಕ್ಕೊಂದು ಹೆಚ್ಛಿನ ಗರಿಯಿಟ್ಟಂತಾಗುವುದು. ಶ್ರೀಮತಿ ಹೆಚ್ ಎಸ್ ಪ್ರತಿಮಾ ಹಾಸನ್ ರವರು ಈ ಮುಕ್ತಕ ಕೃತಿ *ಅಂತರಂಗ ಪ್ರತಿರವ* ದಲ್ಲಿ ಸುಮಾರು ನೂರು ಮುಕ್ತಕಗಳಿದ್ದು ಜೊತೆಗೆ ಓದಿ ಆರ್ಥೈಸಿಕೊಳ್ಳಲು ಸುಲಭವಾಗುವಂತೆ ಭಾವಾರ್ಥವನ್ನೂ ಬರೆದಿರುವುದನ್ನು ಕಾಣುತ್ತೇವೆ. ಕವಿಭಾವವನ್ನು ಅರ್ಥ ಮಾಡಿಕೊಳ್ಳುವುದು ಕೆಲವೊಮ್ಮೆ ಸುಲಭವಲ್ಲದ ಕಾರಣ ಓದುಗರು ಗೊಂದಲಕ್ಕೆ ಈಡಾಗಬಾರದು, ಓದಿದ ಪ್ರತಿಯೊಂದು ವಿಷಯಗಳೂ ಬೇಗ ಮನನವಾಗಲಿ ಎಂಬ ಉದ್ದೇಶದಿಂದ ಸರಳವಾಗಿ ಕೆಲವು ಸಾಲುಗಳಲ್ಲಿ ಅರ್ಥವನ್ನೂ ಇಲ್ಲಿ ನೀಡಿರುವುದು ಕೃತಿಯ ವಿಶೇಷತೆ.ಇಲ್ಲಿರುವ ಮುಕ್ತಕಗಳಲ್ಲಿ ಕೆಲವನ್ನು ನೋಡುವುದಾದರೆ…ಹೆಚ್. ಎಸ್.ಪ್ರತಿಮಾ ಹಾಸನ್ ರವರ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪೂರ್ಣಿಮಾ ರಾಜೇಶ್(ಬಸು ಮಲ್ಕಿ) ಸದ್ದಿರದೆ ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ ಕಪಿಲನಗರದರಸು ಗೌತಮಬುದ್ಧ ಮನೆಯನು ಬಿಟ್ಟು ಬೋಧಿವೃಕ್ಷದ ಕೆಳಗೆಸಿದ್ಧಿಗಳಿಸಲು ಕುಳಿತ ಲಕ್ಷ್ಮಿದೇವಿ ಭಾವಾರ್ಥ: ಪ್ರಪಂಚದಲ್ಲಿ ಎಲ್ಲರೂ ಯಾವುದೇ ಶಬ್ದ ಮಾಡದೆ ರಾತ್ರಿ ವೇಳೆ ಶಾಂತಿಯಿಂದ ನಿದ್ದೆ ಮಾಡುತ್ತಿರುತ್ತಾರೆ. ಆದರೆ ಗೌತಮ ಕಪಿಲ ನಗರದ ಅರಸ ಬೋಧಿವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡುತ್ತ ಶಾಂತಿಯನ್ನು ಗಳಿಸುತ್ತಾನೆ . ಅದರಿಂದ ಸಿದ್ಧಿ ಪಡೆಯಬೇಕೆಂದು ಆಶಿಸುತ್ತಾನೆ. ಲೋಕದ ಸಾವು ನೋವುಗಳಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ನಡು ರಾತ್ರಿ ಮನೆ ಬಿಟ್ಟು ಹೋಗುತ್ತಾನೆ. ಬೋಧಿವೃಕ್ಷದ ಕೆಳಗೆ ಸಿದ್ದಿಗಳಿಸಲು ತಪಸ್ಸಿಗೆ ಕುಳಿತುಬಿಡುತ್ತಾನೆ.ಕನ್ನಡಕೆ ಕೈಯೆತ್ತು ಗೌರಿ ಶಿಖರದ ಹಾಗೆಕನ್ನಡಕೆ ಕೊರಳೆತ್ತು ಪಾಂಚಜನ್ಯಕನ್ನಡವ ನೆನೆಯುತ್ತ ಕನ್ನಡಾಂಬೆಗೆ ನಮಿಸುಕನ್ನಡವೆ ಚೆನ್ನುಡಿಯು ಲಕ್ಷ್ಮಿ ದೇವಿಭಾವಾರ್ಥ: ನಮ್ಮ ಕನ್ನಡ ನಮ್ಮ ಆಸ್ತಿ. ಅದನ್ನು ಉಳಿಸಿಕೊಳ್ಳುವ ಕೆಲಸ ನಮ್ಮಿಂದಲೇ ಆಗಬೇಕೇ ಹೊರತು ಬೇರೆಯವರು ಅದನ್ನು ಉಳಿಸಲು ಬರುವುದಿಲ್ಲ. ಕನ್ನಡಕ್ಕೆ ಕೈ ಎತ್ತು ಗೌರಿ ಶಿಖರದ ಹಾಗೆ ಕನ್ನಡಕ್ಕೆ ಕೊರಳೆತ್ತು ಪಾಂಚಜನ್ಯದ ರೀತಿಯಲ್ಲಿ ಎಂಬಂತೆ ಕನ್ನಡವನ್ನೇ ಉಸಿರಾಗಿಸಿಕೊಂಡು ಕನ್ನಡವನ್ನೇ ಬೆಳೆಸಲು ಹೋರಾಟವನ್ನು ಮಾಡಬೇಕಾಗುತ್ತದೆ. ಕನ್ನಡವ ನೆನೆಸುತಲಿ ಕನ್ನಡಾಂಬೆಗೆ ನಮಿಸುತ್ತಲಿ ತಾಯಿಯ ಋಣ ತೀರಿಸಲಾಗದೆಂದು ನನ್ನ ಕನ್ನಡ ನನಗೆ ಹೆಮ್ಮೆ ಎಂದು ಹೇಳುತ್ತಾ ಸಾಗುವ ದಾರಿಯಲ್ಲಿ ಕನ್ನಡಾಂಬೆಯನ್ನು ನಮಿಸುತ್ತಾ ಕನ್ನಡವೇ ಚೆನ್ನುಡಿಯು ಎಂದು ಹೇಳುತ್ತಾ ಎಲ್ಲೆಡೆಯೂ ಪ್ರೀತಿ ವಿಶ್ವಾಸದಲ್ಲಿ ಬಾಳಬೇಕಾಗಿದೆ. ಪ್ರತಿ ಮನೆ ಮನೆಗಳಲ್ಲೂ ಕನ್ನಡದ ಕಹಳೆಯನ್ನು ಕೂಗ ಬೇಕಾಗಿದೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕನ್ನಡವೇ ನಮ್ಮಮ್ಮ, ಅವಳೇ ನಮ್ಮ ಉಸಿರಮ್ಮ ಎಂದು ಜೀವನದಲ್ಲಿ ಸಾಗ ಬೇಕಾಗುತ್ತದೆ.ಕೂಲಿನಾಲಿಯ ಮಾಡಿ ಮಕ್ಕಳಿಗೆ ಮುದನೀಡಿಪಾಲಿಸಿದ ತಾಯ್ತಂದೆ ನಿಜದೇವರುಹಾಲುಣಿಸಿ ತುತ್ತುಣಿಸಿ ಗೌರವವ ಹೆಚ್ಚಿಸಿದನೀಲಮ್ಮನಿಗೆ ಶರಣು ಲಕ್ಷ್ಮಿದೇವಿಭಾವಾರ್ಥ: ಯಾರೇ ಆಗಲಿ ಜನಿಸಿದ ಮಕ್ಕಳನ್ನು ಸಾಕುವಾಗ ತಮ್ಮ ಕುಡಿಗಳೆಂದು ಪ್ರೀತಿಯಿಂದ ಸಾಕುತ್ತಾರೆ. ಯಾವುದೇ ಕಷ್ಟಗಳನ್ನು ತೋರಿಸಿಕೊಳ್ಳದಂತೆ ಕೂಲಿ ನಾಲಿ ಮಾಡಿ ಮಕ್ಕಳನ್ನು ಸಾಕುತ್ತಾರೆ. ಅವರೇ ನಿಜವಾದ ದೇವರು. ಅವರ ಕಷ್ಟಗಳು ಎಷ್ಟೇ ಇದ್ದರೂ ನಗುನಗುತ ಪ್ರೀತಿಯಿಂದ ಊಟ ಮಾಡಿಸುತ್ತಾರೆ. ಅಂತಹ ದೇವರುಗಳನ್ನು ಚೆನ್ನಾಗಿ ನೋಡಿಕೊಳ್ಳುವ ರೀತಿಯಲ್ಲಿ ಕೃತಜ್ಞತೆಯನ್ನು ತೋರಬೇಕು. ಅಂತಹ ನನ್ನ ತಾಯಿಯು ಸಹ ಎದೆ ಹಾಲು ನೀಡುತ್ತಾ ಗೌರವ ನೀಡುತ್ತ ಪ್ರೀತಿ ಪ್ರೇಮದಲಿ ಸಾಕು ಹೂವಂತೆ ಸಂರಕ್ಷಿಸುತ ನನ್ನ ಎಲ್ಲಾ ಕಾರ್ಯಗಳಲ್ಲಿ ಜೊತೆಯಾಗಿ ನಿಲ್ಲುತ್ತಾ ನನಗೆ ಯಶಸ್ಸನ್ನು ನೀಡುತ್ತಿರುವ ನನ್ನ ತಾಯಿ ನೀಲಮ್ಮಗೆ ಶರಣು. ಕೃತಿಯೊಳಗಿನ ಎಲ್ಲಾ ಮುಕ್ತಕಗಳಿಂದ ಆಯ್ದು ಬೆರಳೆಣಿಕೆಯಷ್ಟನ್ನು ಮಾತ್ರ ಇಲ್ಲಿ ಉದಾಹರಿಸಿದ್ದೇನೆ. ಈ ಎಲ್ಲ ರಚನೆಗಳನ್ನು ಕಂಡಾಗ ಕವಯಿತ್ರಿಯು ಎಷ್ಟು ವಿಶಾಲ ಚಿಂತನೆಯುಳ್ಳವರಾಗಿದ್ದಾರೆ ಎಂದು ಅರ್ಥವಾಗುತ್ತದೆ. ಪ್ರತಿಯೊಂದು ಮುಕ್ತಕಗಳಲ್ಲಿಯೂ ವಿವಿದ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಸಾಹಿತ್ಯದ ವಿಸ್ತಾರವನ್ನು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಪ್ರೀತಿ, ಒಳಿತು ಕೆಡುಕು, ಬುದ್ಧಿವಾದ, ಅಮ್ಮ, ಸ್ನೇಹ ಮೊದಲಾದ ಸಾಕಷ್ಟು ವಿಷಯಗಳು ಹಾಸುಹೊಕ್ಕಾಗಿವೆ. ಬದುಕಿನ ಆಗು ಹೋಗುಗಳಿಗೆ ಸ್ಪಂದಿಸುತ್ತವೆ. ಸಂಬಂಧ, ಪರಿಸರ ಕಾಳಜಿ, ಕನ್ನಡದ ಹಿರಿಮೆ, ದುಃಖ, ಭಕ್ತಿ, ಕಲಿಕೆ, ತಾಳ್ಮೆಯ ಕುರಿತು ಬೆಳಕು ಚೆಲ್ಲುವ ಹಲವು ಮುಕ್ತಕಗಳು ಮನಸ್ಸಿಗೆ ನಾಟುತ್ತವೆ. ಆಧುನಿಕ ವಚನದಂತೆ ಕಂಗೊಳಿಸುವ ನಾಲ್ಕು ಸಾಲಿನ ಮುಕ್ತಕಗಳು ಲಕ್ಷ್ಮಿದೇವಿ ಅಂಕಿತದಿಂದ ಕೊನೆಗೊಳ್ಳುತ್ತವೆ. ಈಗಾಗಲೇ ನೀಲ ಪ್ರತಿಮಾನ ಮಂಜು ಕವನ ಸಂಕಲನ, ಪಂಚ ಮುಕ್ತಕ ಮಾಲೆ, ಹಾಗೂ ಮನದಾಳದ ಪ್ರತಿಬಿಂಬ ಲೇಖನ ಸಂಕಲನ, ಪ್ರತಿಮಾವಲೋಕನ (ಕೃತಿ ವಿಮರ್ಶನ ಸಂಕಲನ), ಭಾವನೆಗಳ ಪ್ರತಿಬಿಂಬ, ಬಣ್ಣದ ಪ್ರತಿ ಡಬ್ಬಿ (ಶಿಶು ಗೀತೆ), ಪ್ರತಿಮಾನತರಂಗ (ಸಮಗ್ರಲೇಖನ ಸಂಗ್ರಹ ), ಪ್ರತಿ ಮುಕ್ತ ಸಿರಿ, ಕೃತಿಗಳನ್ನು ಹೊರತಂದಿರುವ ಇವರು ಪ್ರತಿಮಾ ಸಾಮಾಜಿಕ, ಸಾಂಸ್ಕ್ರತಿಕ ಟ್ರಸ್ಟ್ (ರಿ)ರಾಜ್ಯ ಘಟಕ. ಹಾಸನ ಜಿಲ್ಲೆ. ಯ ಸಂಸ್ಥಾಪಕಿಯೂ ಹೌದು. ಈ ಪ್ರತಿಷ್ಠಾನದ ಮೂಲಕ ಅನೇಕ ಸಮಾಜ ಸೇವೆಯನ್ನು ಮಾಡಿ ಗೌರವಕ್ಕೆ ಪಾತ್ರರಾಗಿರುವುದು ಇವರ ಬಹುಮುಖ ಪ್ರತಿಭೆಗೆ ಸಾಕ್ಷಿ. ಸಮಾಜ ಸೇವೆ ಹಾಗೂ ಸಾಹಿತ್ಯ ಸೇವೆಗೆ ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ವಿಚಾರ. ಈಗ ಈ ಮತ್ತೊಂದು ಕೃತಿಯೂ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿ ಕೀರ್ತಿ, ಸಮ್ಮಾನಗಳು ಅರಸಿ ಬರಲಿ ಎಂದು ಆಶಿಸುತ್ತಾ ಈ ಕೃತಿಯಲ್ಲಿನ ಉತ್ತಮ ಜೀವನ ಮೌಲ್ಯಗಳನ್ನು ಸಂದೇಶಗಳು ಜನತೆಗೆ ದಾರಿ ದೀಪವಾಗಲಿ. ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ ರವರು ಇನ್ನಷ್ಟು ಹೆಚ್ಚು ವೈವಿಧ್ಯಮಯ ಸಾಹಿತ್ಯ ರಚನೆಯಾಗಲಿ, ತಾಯಿ ಭುವನೇಶ್ವರಿಯ ಆಶೀರ್ವಾದ ಸದಾ ಇವರಿಗೆ ಪ್ರಾಪ್ತವಾಗಲಿ ಎಂದು ಹೃನ್ಮನದಿಂದ ಹಾರೈಸುತ್ತೇನೆ. ಸಿರಿಗನ್ನಡಂ ಗೆಲ್ಗೆಸಿರಿಗನ್ನಡಂ ಬಾಳ್ಗೆ ಸಹೃದಯ ಓದುಗರು ಸಾಹಿತ್ಯಾಸಕ್ತರು ಪ್ರತಿಭೋದ ಲೇಖನ ಸಂಕಲನ ಕೃತಿಯ ಕೊಂಡು ಓದುವ ಮೂಲಕ ಸೃಜನಶೀಲ ಬರಹಗಾರ್ತಿಯಾದ ಬಹುಮುಖ ಪ್ರತಿಭೆಯ ಪ್ರತಿಭಾನ್ವಿತೆಯಾದ ಶ್ರೀಮತಿ ಪ್ರತಿಮಾ ಹಾಸನ ಇವರನ್ನು ಹರಸಿ ಹಾರೈಸಿ ಶುಭ ಕೋರಿ ಈ ಲೇಖನ ಸಂಕಲನ ಕೃತಿಯ ಕೊಂಡು ಕೊಳ್ಳಲು ಸಂಪರ್ಕಿಸಬೇಕಾದ ಲೇಖಕಿಯ ಮೊಬೈಲ್ ಸಂಪರ್ಕ ಸಂಖ್ಯೆ- +91 96115 34526 ಪೂರ್ಣಿಮಾ ರಾಜೇಶ್

