ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಮನದ ಮಾತುಗಳು

ಅಂಕಣ ಸಂಗಾತಿ ಮನದ ಮಾತುಗಳು ಜ್ಯೋತಿ ಡಿ ಬೊಮ್ಮಾ ಸಾವಿಲ್ಲದ ಮನೆಯ ಸಾಸಿವೆ ಹುಡುಕುತ್ತ… ಒಂದೊಂದು ಸಲ ಬದುಕು ಅಂದ್ರ ಏನಂತ ತಿಳಿವಲ್ದು. ರಾತ್ರಿ ಮಲಕ್ಕೊಂಡು ಮರುದಿನದ ಬೆಳಕು ನೊಡಿದ್ರ ಅದೇ ಬದುಕು. ಮುಂದಿನ ಕ್ಷಣ ಏನು ಎತ್ತ ಅಂತ ಚಿಂತಿ ಮಾಡೊವಷ್ಟರಾಗ ಏನೇನೊ ಘಟಿಸಿ ಬಿಡಲತದ. ಚಿಕ್ಕವರಿದ್ದಾಗ ಸಾವು ವಯಸ್ಸಾದವ್ರಿಗಿ ಮಾತ್ರ ಬರತದ ಅಂತ ತಿಳಕೊಂಡ ಕಾಲ ಒಂದಿತ್ತು. ಹಾಗೆ ಘಟಿಸತಿತ್ತು.ಆತ್ಮಹತ್ಯೆ ಅಂದರ ಏನು ಅಂತ ಕೂಡ ತಿಳದಿರಲಿಲ್ಲ.ಈಗಿಗ ಚಿಕ್ಕ ಪ್ರಾಯದವರ ಸಾವು ಬಹಳ ಕಂಗೆಡಸತದ.ಬದುಕು ಕಾಣಬೇಕಾದವ್ರು ಅಕಾಲಿಕವಾಗಿ ತೀರಿ ಹೋದ್ರ ಮನಸ್ಸು ಒಂಥರಾ ವಿಷಾದ ಆಗತದ.ಅದರಲ್ಲೂ ಆತ್ಮಹತ್ಯೆ ಅಂತ ಸಾವುಗಳಿಗಿ ಮರುಗಬೇಕೋ ಸಿಟ್ಟು ಮಾಡ್ಕೋಬೇಕೋ ತಿಳಿವಲ್ದು. ಆತ್ಮಹತ್ಯೆಗಳಿಗಿ ಚಿಕ್ಕವಯಸ್ಸಿನವರೆ ಹೆಚ್ಚು ಬಲಿ ಆಗತಿದ್ದಾರ.ದುಡುಕಿನ ಮತ್ತು ಸಿಟ್ಟಿನಲ್ಲಿ ತಗೊಂಡ ನಿರ್ದಾರಗಳು ಅದೆಷ್ಟು ಬೇಗ ಜೀವ ತಗೊಂಡು ಬಿಡತಾವ. ಸಾಯಲಕ್ಕ ತೋರಿಸೋ ದೈರ್ಯ ಬದುಕಲಕ್ಕ ಯಾಕ ತೋರಿಸೋದಿಲ್ಲ..! ಸಾಯುವಷ್ಟು ದೈರ್ಯ ಬದುಕಲಿಕ್ಕ ಬೇಕಾಗಿಯೂ ಇಲ್ಲ. ಬದುಕು ಅದರ ಪಾಡಿಗದು ನಡಿತಿರತದ.ಆದ್ರ ಈಗಿನ ಯುವ ಜನ ಒಂದು ಸ್ವಲ್ಪ ಜೀವನದಾಗ ಏರು ಪೇರಾದ್ರೂ ಜೀವಕ್ಕ ಸಂಚಕಾರ ತಂದುಕೊಳ್ಳತಿದ್ದಾರ. ಚಿಕ್ಕ ವಯಸ್ಸಿನವವರದು ದುಡುಕಿನ ನಿರ್ದಾರ ಅನ್ನಬಹುದು. ಜೀವನದ ಅರ್ದ ಶತಮಾನದ ಏಳು ಬೀಳುಗಳನ್ನು ನೋಡಿದವ್ರು ಯಾವದೊ ಒಂದು ಕಾರಣಕ್ಕ ಜೀವನಾನೆ ಬಲಿ ತಗೊಂಡು ಬಿಡತಿದ್ದಾರಂದ್ರ ..ಏನು ಕಾರಣ ಹುಡುಕಬೇಕು. ಆತ್ಮ ಹತ್ಯೆಗ ಮುಖ್ಯ ಕಾರಣ ಖಿನ್ನತೆ ಅಂತ ಮೇಲ್ನೋಟಕ್ಕೆ ತಿಳಿಬಹುದು.ಜೊತೆಗಿರುವವರು ಖಿನ್ನತೆಗೆ ಒಳಪಟ್ಟವರನ್ನು ಹೇಗೆ ಗುರುತಿಸಬೇಕು.ಎಲ್ಲರ ಜೋತೆ ಚಂದ ಉಂಡು ಓಡಾಡಿ ಮಾತಾಡಿ ಯಾವದೊ ಒಂದು ಕ್ಷಣದಲ್ಲಿ ತಂತಾನೆ ಲೋಕದಿಂದ ನಿರ್ಗಮಿಸಿ ಬಿಟ್ಟ ಸಂಬಂಧ ಪಟ್ಟವರು ತಡಕೊಳ್ಲೋದು ಎಷ್ಟು ಕಷ್ಟ.ಜೀವನ ಪರ್ಯಂತ ಅವರ ಸಾವಿಗಿ ಕಾರಣ ಹುಡುಕಾಡೊದು ಬಿಟ್ಟು ಮತ್ತೆನು ಮಾಡ್ಲಿಕ್ಕಾಗತದ. ನಾನು ನೋಡಿದ ಮಟ್ಟಿಗಿ ಖಿನ್ನತೆ ಕಾಡುವದು ಎಲ್ಲಾ ಉಳ್ಳವರಿಗಿ.ದಿನಾ ದುಡದು ತಿನ್ನೊವರ್ರಿಗಿ ಇದು ಹೆಚ್ಚಾಗಿ ಕಾಡಲ್ಕ ಅನಿಸ್ತದ. ಮೈ ಮುರಿದು ದುಡಿಯೋರಿಗಿ ಮನಸ್ಸು ಖುಷಿಯಾಗಿ ಇರಲು ಬೇಕಾದ  ಡೂಪ್ ಮೀನ್ ಎಂಬ ಹಾರ್ಮೊನ್ ತನ್ನ ತಾನೆ ಉತ್ಪತ್ತಿ ಆಗತದ. ಎಲ್ಲಾ ಸೌಲಭ್ಯ ಇರೋರು , ಸದಾ ಕಂಫರ್ಟ ಝೊನ್ ನಲ್ಲಿ ಇರೋರಿಗಿ , ಮೈಗಳ್ಳರಿಗಿ ,ದೇಹಕ್ಕ ವ್ಯಾಯಾಮ ಇಲ್ದವರಿಗಿ ಡೋಪ್ ಮೀನ್ ಹಾರ್ಮೊನ್ ಉತ್ಪತ್ತಿ ಆಗೋದೆ ಇಲ್ಲ. ಆಗ ಮನಸ್ಸು ಬೇಜಾರು , ನಿರಾಸೆಗೆ ಒಳಪಡತದ.ಎಲ್ಲದರ ಮ್ಯಾಲಿನ ಆಸಕ್ತಿ ಕಮ್ಮಿ ಆಗತದ.ಎಲ್ಲರೊಂದಿಗೆ ಛಲೋ ವರ್ತಿಸತಿದ್ರು ಅವ್ರು ಒಳಗ ಅಸಮಾಧಾನದಿಂದ ಇರತಾರ.ಸದಾ ಒಂಟಿ ಆಗಿ ಇರಲಕ್ಜ ಬಯಸ್ತಾರ. ಇಲ್ಲ ಬರೀ ಪೋನ್ ನೊಂದಿಗೆ ಇರತಾರ.ಪೋನ್ ನೊಡೊದ್ರಿಂದ ಮಿದುಳಿನಾಗ ಡೂಪ್ಮೀನ್ ಹಾರ್ಮೊನು ಉತ್ಪತ್ತಿ ಆಗಿ ಮನಸ್ಸು ಸಮಾಧಾನದಿಂದ ಇಡತದ.ಅದಕ್ಕ ಎಲ್ರೂ ಈಗ ಪೋನ್ ವ್ಯಸನಿಗಳಾಗಿರೋದು. ಪೋನ್ ಹಿಡಕ್ಕೊಂಡು ಕುಂತಷ್ಟು ಹೊತ್ತು ತಲೆಯೊಳಗ ಯಾವ್ದೆ ಆಲೋಚನೆ ಬರಲಾರದೆ ಈ ಹಾರ್ಮೊನ್ ತಡಿತದ. ಪೋನ್ ಬಿಟ್ಟ ತಕ್ಷಣ ಮತ್ತ ಮತ್ತ ಪೋನ್ ಕಡಿಗೆ ಮನಸ್ಸು ಏಳಿತದ. ಅಲ್ಕೋಹಾಲ್ ಕುಡಿದಾಗ , ಗುಟಕಾ ತಿನ್ನುವಾಗ , ದೂಮಪಾನ ಮಾಡುವಾಗ ಹೀಗೆ ಈ ಎಲ್ಲಾ ಚಟಗಳು ಆ ಸಮಯದಲ್ಲಿ ನಮ್ಮ ದೇಹದ ಖುಷಿಯ ಹಾರ್ಮೋನ್ ಬಿಡುಗಡೆಗೊಳಿಸಿ ನಮ್ಮನ್ನು ಪದೆ ಪದೆ ಅದನ್ನೆ ಮಾಡಲು ಪ್ರೇರೆಪಿಸ್ತದ. ಆದ್ರ ಈ ಎಲ್ಲಾ ಚಟಗಳು ನಮಗ ಯಾವಾಗ ವ್ಯಸನಗಳಾಗಿ ಬದಲಾಗತಾವ ನಮಗ ಅರಿವಿಗಿ ಬರೊದಿಲ್ಲ.ಅಷ್ಟರಲ್ಲಿ ತಡ ಆಗಿರತದ.ವ್ಯಸನ ಮನುಷ್ಯ ನನ್ನು ಖಿನ್ನತೆಗೆ ಒಳಪಡಸ್ತದ. ವ್ಯಸನಗಳಿಲದೆಯು ಮನುಷ್ಯ ಖಿನ್ನತೆಗೆ ಹೋಗಬಹುದು.ಚಿಕ್ಕವಯಸ್ಸಿನಲ್ಲಿ ಆಗಿರೋ ಅಹಿತಕರ ಘಟನೆಗಳು , ಅಥವಾ ಪೋಷಕರಿಂದ ಸಿಗಬೇಕಾದ ಪ್ರೀತಿ ಮಮತೆಗಳು ಸಿಗದೆ ಇದ್ದಾಗ , ಕೌಟುಂಬಿಕ ದೌರ್ಜನ್ಯ ಗಳು , ಪ್ರೀತಿ ಪಾತ್ರರನ್ನು ಕಳಕೊಂಡ ನೋವು ಇವುಗಳು ಖಿನ್ನತೆಗೆ ದೂಡತಾವ.ಆದ್ರ ಇದರ ಅರಿವು ಆಗೊವಷ್ಟರಲ್ಲಿ ಅವ್ರು ಪೂರ್ಣವಾಗಿ ಖಿನ್ನತೆಯೊಳಗ ಜಾರಿಬಿಟ್ಟಿರತಾರ. ಜೀವನದ ಬಗ್ಗೆ ಬ್ಯಾಸರ. ನಿರಾಸಕ್ತಿ , ಯಾವದರಲ್ಲೂ ಆಸಕ್ತಿ ಇಲ್ಲದಿರೋದು , ನಿದ್ಧೆ ಬರದೆ ಇರೋದು , ಅತೀ ಭಾವುಕರಾಗೋದು , ಸದಾ ನೆಗೆಟಿವ್ ಆಲೋಚನೆಗಳು , ನಾನು ಎಲ್ಲರಿಂದ ನಿರಾದರಕ್ಕ ಒಳಪಟ್ಟಿದ್ದೆನೆಂಬ ಭ್ರಮೆ , ಇವೆಲ್ಲವೂ ಖಿನ್ನತೆಯ ಲಕ್ಷಣಗಳು. ಅವರಿಗೆ ಗೊತ್ತಿಲ್ಲದಂತೆ ಮನಸ್ಸಿನಾಗ ಆತ್ಮಹತ್ಯೆ ವಿಚಾರಗಳು ಬರತಾವ.ಒಟ್ಟು ಜೀವನ ಕೊನೆಗಾಣಿಸಬೇಕು ಎಂಬ ತುಡಿತ ಸದಾ ಇರತದ.ಇಂತಹ ವಿಚಾರಗಳು ಅವ್ರು ಯಾರ ಹತ್ರನೂ ಹಂಚಿಕೊಳ್ಳೊದಿಲ್ಲ.ಒಂದು ವ್ಯಾಳೆ ಹೇಳಿದ್ರು ಮನೆಯವರು ಮೊದಲು ಮಾಡೋದೆ ದೇವ್ರು ದೆವ್ವ ಎಂಬ ಪ್ರಯೋಗಗಳು.ಮಾನಸಿಕ ರೋಗ ತಜ್ಞ ರಲ್ಲಿ ಹೋಗಬೇಕೆಂಬ ಆಲೋಚನೆಯೂ ಮಾಡೊದಿಲ್ಲ. ಎಷ್ಟೋ ಜನ ನಾವು ಖಿನ್ನತೆಗೆ ಒಳಪಟ್ಟಿವಿ ಎಂದು ನಂಬಲಿಕ್ಕೂ ತಯ್ಯಾರಿರಲ್ಲ.ಖಿನ್ನತೆ ಅಂದ್ರ ಹುಚ್ಚು ಅಂತ ತಿಳಕೊಂಡಿರೋರು ಇದ್ದಾರ.ಅಂತವರು ಮಾನಸಿಕ ರೋಗ ತಜ್ಞ ರ ಹೆಸರು ಕೆಳಿದ್ರ ಅಂಜತಾರ. ಅಂತ ಡಾಕ್ಟರ ಹತ್ದ ಹೊದ್ರ ಜನ ಎಲ್ಲಿ ತಮಗ ಹುಚ್ಚರ ಪಟ್ಟ ಕಟ್ಟಾತಾರೋ ಅನ್ನೊ ಅಂಜಿಕಿ ಇರತದ. ತಮ್ಮ ಖಿನ್ನತೆ ನಿಭಾಯಿಸಲಕ್ಕ ಆಗ್ಧ ಕೊನೆಗೆ ಸಾವಿನಲ್ಲಿ ಪರಿಹಾರ ಕಾಣತಾರ. ಮಕ್ಕಳಲ್ಲಿ ಖಿನ್ನತೆ ಲಕ್ಷಣ ಹ್ಯಾಂಗ್ ಗುರುತಿಸಬೇಕು.ಅವ್ರು ದಿನಾ ಉಣ್ಣತಾರ ,ತಿಂತಾರ , ಸಾಲಿಗಿ ಹೋಗತಾರ ,ನಗತಾರ ,ಅಳತಾರ ,ಜಗಳ ಆಡತಾದ..ಒಟ್ಟಿನಾಗ ಎಲ್ರೂ ಇರೊ ಹಂಗ ಇರತಾರ . ಒಮ್ಮ ನೇಣಿಗಿ ಶರಣಾಗತಾದ.ಆಗ ಯಾವ ಕಾರಣ ಹುಡುಕಬೇಕು.ಹೆತ್ತವರು ಹ್ಯಂಗ್ ಬದುಕಬೇಕು.ಜೀವನ ಪರ್ಯಂತ ಈ ಪ್ರಶ್ನೆಗೆ ಉತ್ತರ ಹುಡುಕ್ಕೊಂತ ಬದುಕುವ ಅವರ ಪಾಡು ಹ್ಯಾಂಗ್ ವರ್ಣಿಸಬೇಕು..! ಕಾಲೇಜು , ಹಾಸ್ಟೆಲ್ ನಲ್ಲಿರುವ ಮಕ್ಕಳು ಈ ರೀತಿ ಮಾಡಿಕೊಳ್ಳುವದಕ್ಕ ಮುಖ್ಯ ಕಾರಣ ಖಿನ್ನತೆ.ಒತ್ತಡ. ಓದುವ ಅಥವಾ ಪ್ರೆಮ ವೈಫಲ್ಯ , ಮನೆಯವರು ಬೈದರೆಂದು , ಶಿಕ್ಷಕರು ಹೊಡೆದರೆಂದು , ಮೊಬೈಲ್ ಕಸಕೊಂಡರು ಎಂದು ಸಣ್ಣ ಸಣ್ಣ ಕಾರಣಗಳಿಗಿ ಆತ್ಮಹತ್ಯೆ ಮಾಡ್ಕೊಳ್ಳೊದು ಹೆಚ್ಚು ಆಗಲತದ. ಇದಕ್ಕ ಕಾರಣ ಹುಡುಕಿದ್ರ ಮೊಟ್ಟಮೊದಲು ಕಾಣೋದು ಮಕ್ಳು ಮತ್ತು ಹರೆದವರಿಗಿ ಒತ್ತಡ ನಿಭಾಯಿಸಲಿಕ್ಕ ಆಗ್ದೆ ಇರೋದು.ಸದಾ ಆರಾಮ ಮತ್ತು ಕಂಫರ್ಟ ನ್ನು ಹೆತ್ತವರು ಮಕ್ಳಿಗಿ ಕೊಡತಿದ್ದಾರ.ಅವ್ರು ಬೇಡಿದ್ಚು ಕೊಡ್ಸಿ ಅವ್ರು ಕೇಳಿದ್ದು ತಿನ್ಸಿ ಅವ್ರನ್ನ ಏನು ಮಾಡ್ಲಿಕ್ಕ ಬಿಡದಂಗ ಮಾಡಿ ಅವ್ರನ್ನ ಒಂದು ಕಂಫರ್ಟ ಎಂಬ ಒಂದು ವರ್ತುಲ ದೊಳಗ ಸಿಕ್ಕಿ ಹಾಕ್ತಿವಿ.ಹೊರಗ ಏನು ಚಂದಿಲ್ಲ ಎಂಬ ನಿಗರಾನಿಯೊಳಗ ಬೆಳೆಸ್ತಿವಿ .ಒಂದಿಷ್ಟು ಜೀವನದೊಂದಿಗೆ ಹೋರಾಡೋ ಶಕ್ತಿನೂ ಅವ್ರರಲ್ಲಿ ತುಂಬದೆ ಬೆಳೆಸಿತಿದ್ದಿವಿ.ಯಾವದೋ ಒಂದು ಹಂತದಲ್ಲಿ ಒತ್ತಡ ನಿಭಾಯಿಸ್ಲಿಕ್ಕ ಆಗ್ದೆ ಆತ್ಮಹತ್ಯೆ ಗೆ ಶರಣಾಗತಾರ. ಎಷ್ಟು ದುಡುಕಿನ ನಿರ್ಧಾರ. ಮಕ್ಕಳು ಮನಬಿಚ್ಚಿ ತಂದೆತಾಯಿಯೊಂದಿಗೆ ಮಾತಾಡಲಾರದಂಗ ಆಗತುದ್ದಾರ.ತಮ್ಮ ಆತಂಕಗಳನ್ನು ಅಲೆಕ್ಸಾ  ಅಥವಾ ಗೂಗಲ್ ಗೆ ಹೇಳತಾರ ಹೊರತಾಗಿ ಹೆತ್ತವ್ರಿಗಿ ಹೇಳಲ್ಲ.ಎಷ್ಟು ವಿಪರ್ಯಾಸ. ಸಾವು ಎಂಬುದು ಹುಟ್ಟುತ್ತಲೆ ಬದುಕಿಗೆ ಅಂಟಿಕೊಂಡೆ ಬಂದಿರತದ.ಅದು ಬರುವಾಗ ಬಂದೆ ಬರತದ.ಅಲ್ಲಿವರೆಗೆ ಬದುಕಬೇಕು.ಸುಖ ದುಃಖ ಗಳೆಲ್ಲ ಚಕ್ರದಂಗ ತಿರುಗತಾ ಇರತಾವ.ಒಂದರ ಬೆನ್ನಿಗಿ ಒಂದು. ಚಕ್ರ ನಿಲ್ಲಿಸಲಿಕ್ಕ ಆಗೊದಿಲ್ಲ.ಕೆಟ್ಟ ಸಂದರ್ಭಗಳಲ್ಲಿ ತಾಳ್ಮೆ ಒಂದೇ ಸಂಜೀವಿನಿ. ಹಣಕಾಸಿನ ಸಮಸ್ಯೆ ಮತ್ತು ಆರೋಗ್ಯ ಸಮಸ್ಯೆ ಎರಡು ಜೀವನದ ದೊಡ್ಡ ಶತ್ರುಗಳು.ಇದು ಜೀವನಾನೆ ಅಲ್ಲೊಲ ಕಲ್ಲೋಲ ಮಾಡ್ತದ.ಹಾಗಂತ ಜೀವ ಕಳಕೊಳ್ಳೊದು ಮೂರ್ಖತನ. ಹೌದು ,ಎಷ್ಟೊಂದು ಓದಿರತಿವಿ , ಕೇಳಿರತೀವಿ , ಉಪದೇಶನೂ ಮಾಡಿರತೀವಿ.ಆದ್ರ ಖಿನ್ನತೆ ಅದಾವ ಮಾಯದಾಗ ಆವರಿಸಿಕೊಂಡು ಬಿಡತದ ಅರಿವುಗೂ ಬರಲ್ಲ.ಇದಕ್ಕ ಪರಿಹಾರ ಅಂದ್ರ ಮನಸ್ಸು ಬಿಚ್ಚಿ ಮಾತಾಡೋದು.ತಂದೆತಾಯಿ ಗೆಳೆಯರು ಬಳಗದವ್ರು ಯಾರೊಂದಿಗಾದ್ರೂ ಮನಸ್ಸು ಬಿಚ್ಚಿ ಮಾತಾಡೋದು.ಯಾರಿಗೂ ಹೇಳಬೇಕು ಅನಿಸದಿದ್ರ ಬರೆದು ಬಿಸಾಕೋದು. ಖಿನ್ನತೆಯನ್ನು ಬೆರೆಯವರು ಗುರುತಿಸೊದಕ್ಕಿಂತ ಮೊದಲು ನಾವೆ ಅದನ್ನ ಪತ್ತೆ ಹಚ್ಚಕೊಳ್ಳಬೇಕು.ಎಲ್ಲರೊಂದಿಗೆ ಇದ್ರು ಒಂಟಿತನ ಭಾದಿಸ್ತಾ ಇದ್ರೆ.ರಾತ್ರಿ ನಿದ್ರೆ ಬರದಿದ್ರೆ ನಿರುತ್ಸಾಹ ನಿರಾಸಕ್ತಿಇವೆಲ್ಲ ಬಾಳ ದಿನಗಳಿಂದ ನಮಗ ಕಾಡತಿದ್ರ ಮಾನಸಿಕ ತಜ್ಞ ರಲ್ಲಿ ಹೋಗೊದಕ್ಕ ಹಿಂದಮುಂದ ನೋಡ್ಲೆಬಾರ್ದು.ನಮ್ಮ ಜೊತೆಗಿರುವವರಿಗೆ ಈ ಸಮಸ್ಯೆ ಗಳು ಕಾಡತಿದ್ರೆ ಅವ್ರನ್ನ ಡಾಕ್ಟರ್ ಹತ್ರ ಕರಕೊಂಡು ಹೋಗಲು ಒಪ್ಪಿಸಬೇಕು. ಎಷ್ಟೋ ತಿಳವಳಿಕೆ ಉಳ್ಳವ್ರು ಸಾಯುವಂತ ದುಡುಕಿನ ನಿರ್ಧಾರ ತಗೊಳ್ತಿರೋದು ಆತಂಕದ ಸಂಗತಿ. ಬುಧ್ದಿಯಿಂದ ಅತಿ ಶಕ್ತಿಶಾಲಿಯಾದ ಮನುಷ್ಯ ಆತ್ಮಹತ್ಯೆ ಯಂತ ನಿರ್ಣಯಗಳಲ್ಲಿ ಎಷ್ಟು ದುರ್ಬಲನಾಗತಾನ. ಅತೀ ವಿದ್ಯಾವಂತರೆ ಇಂತಹ ಘಟನೆಗಳಿಗೆ ಬಲಿಯಾಗ್ತಿರೋದು ಯಾಕೆ ಎಂದು ತಿಳಿತಿಲ್ಲ.ಸದಾ ಎಲ್ಲರ ಮುಂದೆ ಒಳ್ಳೆಯವರಾಗಿರಬೇಕು , ಶ್ರೇಷ್ಟರಾಗಿರಬೇಕು , ಜಾಣ ಎನಿಸಿಕೊಳ್ಳಬೇಕು ಎಂಬ ಇಂತಹ ಹಂಬಲಗಳು ಕೂಡ ಮನುಷ್ಯ ಗ ದುರ್ಬಲ ಮಾಡಿಬಿಡತಾವ.ಅತೀ ಮಹತ್ವಾಕಾಂಕ್ಷೆಯು ಮನುಷ್ಯ ನನ್ನು ದುಃಖಿತ ನನ್ನಾಗಿಸ್ತದ.ಭಾವನೆಗಳನ್ನು ನಿಯಂತ್ರಿಸಿಕೊಳ್ಳೊದು ಕಲಿತರೆ ಜೀವನ ಅರ್ಧ ಗೆದ್ದಂಗೆ.ಅದರಲ್ಲೂ ಸಿಟ್ಟಿನ ಕೈಗೆ ಬುದ್ದಿ ಎಂದೂ ಕೋಡ್ಲೆಬಾರದು. ಈಗೀಗ ನಾವು ಎಷ್ಟು ಒಂಟಿ ಆಗತಿದ್ದೆವೆ ಅಂದ್ರ ನಮ್ಮ ಸಮಸ್ಯೆ ಹೆತ್ತವ್ರಿಗೆ ಗೆಳೆಯರಿಗೆ ತಿಳಿಸಲಿಕ್ಕೆ ಆಗದಿರುವಷ್ಟು.ಆಪ್ತ ಸಮಾಲೋಚರಿಗೆ ನಮ್ಮ ಸಮಸ್ಯೆ ಮುಕ್ತ ವಾಗಿ ಹೇಳಿಕೊಂಡಷ್ಟು ನಮ್ಮ ಜೊತೆಗಿರುವರಿಗೆ ಹೇಳಕೊಳ್ಳಕ್ಕ ಆಗ್ತಿಲ್ಲ ಅಂದ್ರ ಸಂಭಂಧಗಳು ಎಷ್ಟು ಅರ್ಥಹೀನ ಆಗ್ತಿವೆ ಎಂದು ಚಿಂತಿಸಬೇಕಾಗ್ತದ. ಆತ್ಮಹತ್ಯೆ ಒಂದು ಸಾಮಾಜಿಕ ಪಿಡುಗು.ಇದನ್ನು ತಡೆಯಲು ನಾವು ಪ್ರಯತ್ನಿಸಬೆಕಂದ್ರೆ ನಮ್ಮ ಸುತ್ತಲಿರುವವರೊಂದಿಗೆ ಮನಸ್ಸು ಬಿಚ್ಚಿ ಮಾತಾಡೋದು.ಆತಂಕವನ್ನು ಮತ್ತೊಬ್ಬ ರೊಂದಿಗೆ ಹಂಚಕೊಳ್ಳೊದು.ಪ್ರೀತಿ ಕೊಟ್ಟು ಪಡಕೊಳ್ಳೊದು.ಖಿನ್ನತೆ ಬಗ್ಗೆ ತಿಳಿದುಕೊಂಡು ಮತ್ತೊಬ್ಬರಿಗೆ ಅದರ ಬಗ್ಗೆ ತಿಳಿಸೊದು.ಪ್ರಯತ್ನ ನಿರಂತರ ಜಾರಿಯಲ್ಲಿರಲಿ. ಜ್ಯೋತಿ ಡಿ ಬೊಮ್ಮಾ ಜ್ಯೋತಿ ಡಿ , ಬೊಮ್ಮಾ ಅವರು ಕಲಬುರಗಿ ಜಿಲ್ಲೆಯವರು. ನಾಲ್ಕು ಕವನ ಸಂಕಲನಗಳು , ಎರಡು ಪ್ರಭಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಪ್ರತಿ ತಿಂಗಳು ಸಂಗಾತಿ ಪತ್ರಿಕೆಗಾಗಿ ಅವರ ದೇಸಿ ನುಡಿಗಟ್ಟಿನಲ್ಲಿ ಅಂಕಣ ಬರಹವನ್ನು ಪ್ರಕಟಿಸುತ್ತಾರೆ

Read Post »

ಕಾವ್ಯಯಾನ

“ಬೇಂದ್ರೆ ಅಜ್ಜನ ನೆನಪು”ಶಿವಕುಮಾರ ಕೋಡಿಹಾಳ ಮೂಡಲಗಿ

ಕಾವ್ಯ ಸಂಗಾತಿ ಶಿವಕುಮಾರ ಕೋಡಿಹಾಳ ಮೂಡಲಗಿ “ಬೇಂದ್ರೆ ಅಜ್ಜನ ನೆನಪು” ಜನೇವರಿ ತಿಂಗಳ ಬಂತಂದ್ರ ನೆನಪಾಗೋ ಜೀವ ಅಂದ್ರ ಬೇಂದ್ರೆ ಅಜ್ಜಾ§ನನಕ್ಕು ಸಾಯ್ರೋ ನಕ್ಕು ಸಾಯ್ರಿ ಅಂತಾ ನಮಗೆಲ್ಲಾ ಹೇಳಿ ನಕ್ಕೋತ ಹೋದ ದತ್ತು ಮುತ್ಯಾಬಡತನಕ ಹೇಸಿದಾವಲ್ಲ  ಮೆಟ್ಟಿ ನಿಂತಾವಬೆಂದು ಬೇಂದ್ರೆಯಾದಾವ ರಾಮಚಂದ್ರ ಅಂಬೂತಾಯಿಯ ಮಗನಾಗಿಗೋದೂಬಾಯಿ ನೆರಳಿನಾಗ ಕನ್ನಡ ನಾಡಿನ ಆಲದ ಮರಾ ಆಗಿದ್ದಾ§ವಮಾತು ಆಡಿದರ ಹಸಿ ಗೋಡ್ಯಾಗ ಹಳ್ಳ ಒಗದಂಗ ಮಾತಾಡಾವಕನ್ನಡದವ್ವ ಅಂದ್ರ ನಿನಗ ಪಂಚಪ್ರಾಣತಾಯಿ ಋಣ ತೀರಸಾಕ ಅಕ್ಷರದ ಮಹಲು ಕಟ್ಟಿದಾವ ತನ್ನ ಹಾಡಿನಾಗಮಲ್ಲಿಗಿ ಹೂವಿನಗಮಗಮಕುರುಡು ಕಾಂಚಾಣದ ಜಣಜಣಕರಡಿ ಕುಣಿತದತಕತಕ  ಮೂಡಲ ಮನೆಯಚುಮು ಚುಮುಕಾಣಿಸಿದಾವ ಇನ್ನೂ ಯಾಕ ಬರಲಿಲ್ಲಾವ ಹುಬ್ಬಳ್ಳಿಯಾವ ಅಂತ ಹೇಳಿಕನಸಿನೊಳಗೆ ಬಂದು ಕನಸು ಬಿತ್ತಿದಾವನಮಗೆಲ್ಲಾ ಹುಸಿನಗುತ ಬಂದೀರಿನಸುನಗುತ ತೆರಳಿಅಂತಾ ನೀತಿ ಪಾಠ ಹೇಳಿದಾವ ಕನ್ನಡದವರು ಮನಸು ಮಾಡಿದರ ಚರಿತ್ರೆ ಸೃಷ್ಟಿಸ್ಯಾರ ಆ ಕಡೆ ಲಕ್ಷ್ಯ ಕೊಡ್ರಿ ಎಂದು ಹೇಳಿನಮಗೆಲ್ಲಾ ತಾಯಿ ಸೇವೆ ಮಾಡಾಕ ಹಚ್ಚಿದಾಂವಕನ್ನಡ ನಮ್ಮ ಮೈಯಾಗ ಕಣಕಣದಾಗ ಬೆರತೈತಿ ಅನ್ನೋ ಸತ್ಯ ತಿಳಿಸಿದಾವ ಗುಂಗುರು ಕೂದಲಿನ ಮುತ್ಯಾಮಾತಿನ ಮಲ್ಲ ಶಬ್ದ ಗಾರುಡಿಗನಮ್ಮ ನಾಡಿನ ಮಾಣಿಕ್ಯನಮಗಅರಳು ಮರಳು ಆದ್ರೂನಿನ್ನ ನೆನಪು ಎಂದೂ ಸಾಯುವುದಿಲ್ಲನೀನು ನಮ್ಮ ನಾಡಿನಾಗ ಹುಟ್ಟಿದ್ದೇ ಒಂದು ಪವಾಡನಿನ್ನ ಜನುಮದಿನ ನಮಗೆಲ್ಲಾ ಹಬ್ಬನಮಗೆಲ್ಲಾ ಹಬ್ಬಆಶೀರ್ವಾದ ಮಾಡು ಮುತ್ಯಾ  ಶಿವಕುಮಾರ ಕೋಡಿಹಾಳ ಮೂಡಲಗಿ

“ಬೇಂದ್ರೆ ಅಜ್ಜನ ನೆನಪು”ಶಿವಕುಮಾರ ಕೋಡಿಹಾಳ ಮೂಡಲಗಿ Read Post »

You cannot copy content of this page

Scroll to Top